ಸಂತರು ಮತ್ತು ಗುರುಗಳ ಸಾಧನೆ, ಅವರ ತಪೋಬಲ ಅವರ ಸಂಕಲ್ಪ, ಮುಂತಾದರ ಬಗ್ಗೆ ನಾನು ಕೇವಲ ಗ್ರಂಥಗಳಲ್ಲಿ ಓದಿದ್ದೆ. ನಾನು ಚಿಕ್ಕವನಿರುವಾಗ ನನಗೆ ಇಂತಹ ವ್ಯಕ್ತಿಗಳ ಜೊತೆಗಿರಬೇಕು ಎಂದೆನಿಸುತ್ತಿತ್ತು. ಇದೆಲ್ಲದರ ಹಿಂದೆ ನಡೆದಿರುವುದರಿಂದ ಈಗ ಹಾಗೆ ಅನುಭವಿಸಲು ಸಾಧ್ಯವಿಲ್ಲ, ಎಂದು ವಿಚಾರ ಬರುತ್ತಿತ್ತು, ಆದರೆ ಈಗಲೂ ಅಂತಹ ಘಟನೆ ನನಗೆ ಅನುಭವಿಸಲು ಸಾಧ್ಯವಾಯಿತು. ಇದು ಸನಾತನ ಸಂಸ್ಥೆಗೆ ಬಂದ ನಂತರ ನನಗೆ ಚಿಕ್ಕ ಚಿಕ್ಕ ಪ್ರಸಂಗಗಳಿಂದ ಗಮನಕ್ಕೆ ಬಂದಿತು. ಇಂತಹ ಸಂತರಲ್ಲಿ ಒಬ್ಬರು ಎಂದರೆ ಕರ್ನಾಟಕ ರಾಜ್ಯದ ಸಾಧಕರ ಸಾಧನೆಯ ಚುಕ್ಕಾಣಿ ಹಿಡಿದಿರುವ ಪೂ. ರಮಾನಂದ ಅಣ್ಣ ಗೌಡ ! ಇತ್ತೀಚಿನ ೩- ೪ ತಿಂಗಳಿಂದ ನನಗೆ ಅವರ ದಿವ್ಯತ್ವ ಮತ್ತು ವ್ಯಾಪಕತೆಯನ್ನು ಹತ್ತಿರದಿಂದ ಅನುಭವಿಸಲು ಸಿಕ್ಕಿತು. ಸಂತರು ಅಥವಾ ಗುರುಗಳ ವರ್ಣನೆ ಮಾಡುವುದು ಆಸಾಧ್ಯವಿದೆ. ಆದರೂ ನನ್ನ ಅಲ್ಪಬುದ್ಧಿಗೆ ಅರಿವಾಗಿರುವ ಕೆಲವು ಪ್ರಸಂಗಗಳು ಮುಂದೆ ನೀಡುತ್ತಿದ್ದೇನೆ.
೧. ಸಾಧಕರಿಗೆ ಅವರ ಕೌಟುಂಬಿಕ ಕರ್ತವ್ಯಗಳನ್ನು ಯೋಗ್ಯ ರೀತಿಯಲ್ಲಿ ನಿಭಾಯಿಸಬೇಕು, ಅದಕ್ಕಾಗಿ ಅವರಿಗೆ ದೃಷ್ಟಿಕೋನ ನೀಡಿ ಕರ್ತವ್ಯದ ಅರಿವು ಮಾಡಿಕೊಡುವ ಪೂ. ರಮಾನಂದ ಅಣ್ಣ !
ಒಮ್ಮೆ ಸತ್ಸಂಗದಲ್ಲಿ ಒಬ್ಬ ಸಾಧಕನ ಸಾಧನೆಯ ವಿಷಯ ನಡೆಯುತ್ತಿತ್ತು. ಆ ಸಾಧಕನು ಮನೆಯಲ್ಲಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿರಲಿಲ್ಲ ಮತ್ತು ಅದನ್ನು ಬಿಟ್ಟು ಬಿಡುತ್ತಿದ್ದ. ಇದು ಪೂ. ರಮಾನಂದ ಅಣ್ಣ ಅವರ ಗಮನಕ್ಕೆ ಬಂದಿತು. ಆ ಸಮಯದಲ್ಲಿ ಸಾಧಕನಿಗೆ ದೃಷ್ಟಿಕೋನ ನೀಡುವಾಗ ಅವರು ಹೇಳಿದರು, “ನೀವು ಮನೆಯ ಯಜಮಾನರಿದ್ದೀರಿ. ನೀವು ಮನೆ ನೋಡಿಕೊಳ್ಳಬೇಕು. ನಿಮಗೆ ನೇತೃತ್ವ ತೆಗೆದುಕೊಳ್ಳಲು ಬರಬೇಕು. ನೀವು ನಿಮ್ಮ ತಾಯಿ ಮತ್ತು ಪತ್ನಿ ಇವರಿಬ್ಬರಲ್ಲಿ ಹೊಂದಾಣಿಕೆ ತರಬೇಕು. ಪೂ. ಅಣ್ಣನವರ ಈ ಮಾತು ಕೇಳಿ ಅವರಲ್ಲಿನ ಪ್ರೇಮಭಾವ ಅವರ ಮಾತಿನಲ್ಲಿನ ದೃಢತೆ ಮತ್ತು ಮನೆಯಲ್ಲಿನ ಹಿರಿಯರ ಹಾಗೆ ಅವರು ಅವರಿಗೆ ನೀಡಿರುವ ಮಾರ್ಗದರ್ಶನ ಇವುಗಳನ್ನು ನೋಡಿ ನನಗೆ ಆಶ್ಚರ್ಯವಾಯಿತು. ಆ ಸಮಯದಲ್ಲಿ ಇದೇ ನಮ್ಮ ಸನಾತನ ಪರಿವಾರ ! ಇವರೇ ನಮ್ಮ ತಾಯಿ ತಂದೆ ಮತ್ತು ಇವರೇ ನಮಗೆ ಆಧಾರಸ್ತಂಭ ! ಎಂದು ನನಗೆ ಅನಿಸಿತು.
೨. ಸಹ ಸಾಧಕರಿಂದ ಸೇವೆಯಲ್ಲಿ ಪುನಃ ಪುನಃ ತಪ್ಪುಗಳಾಗುತ್ತಿದ್ದರೆ ಆ ಸೇವೆಯನ್ನು ನಾನೇ ಮಾಡಬೇಕು, ಎಂದು ಸಾಧಕನಿಗೆ ಅನಿಸುವುದು ಮತ್ತು ಪೂ. ರಮಾನಂದ ಅಣ್ಣ ಇವರ ದೃಷ್ಟಿಕೋನದಿಂದ ಸಾಧಕರ ಸಾಧನೆಯ ಬಗ್ಗೆ ಅವರಿಗೆ ಇರುವ ತಳಮಳ ಗಮನಕ್ಕೆ ಬಂದಿತು
ಒಬ್ಬ ಸಾಧಕನಿಂದ ಸೇವೆಯಲ್ಲಿ ಅದೇ ತಪ್ಪು, ಪುನಃ ಪುನಃ ಆಗುತ್ತಿತ್ತು. ಆದ್ದರಿಂದ ಆ ಸಾಧಕನಿಂದ ಸೇವೆ ಮಾಡಿಸಿಕೊಳ್ಳುವ ಬದಲು ಆ ಸೇವೆ ನಾನೇ ಮಾಡಬೇಕು, ಎಂಬ ವಿಚಾರ ನನ್ನ ಮನಸ್ಸಿಗೆ ಬಂದಿತು. ಅದರ ಬಗ್ಗೆ ನಾನು ಪೂ. ಅಣ್ಣನವರಿಗೆ ಹೇಳಿದೆ. ಆಗ ಅವರು, ‘ನೀವು ಆ ಸೇವೆ ಮಾಡುವುದು ಯೋಗ್ಯವಾಗಿರಬಹುದು. ಆದರೂ ಆ ಸಾಧಕನಿಗೆ ಅವನ ಸ್ವಭಾವದೋಷ ಮತ್ತು ತಪ್ಪಿನ ಅರಿವು ಮಾಡಿಕೊಟ್ಟರೆ ಮತ್ತು ಅವನು ಸೇವೆಯಲ್ಲಿ ತಿದ್ದಿಕೊಂಡರೆ ಅವನಲ್ಲಿ ಗುಣವೃದ್ದಿಯಾಗುವುದು ! ಅವನು ಆ ಸೇವೆ ಮಾಡಲು ಕಲಿಯಬೇಕು. ಆಗ ಅವನಿಗೆ ಸಾಧನೆಯ ಲಾಭವಾಗುವುದು, ಎಂದರು. ಆ ಸಮಯದಲ್ಲಿ ನನಗೆ ನನ್ನ ತಪ್ಪು ದೃಷ್ಟಿಕೋನ ಮತ್ತು ನನ್ನಲ್ಲಿನ ಸಂಕುಚಿತ ವಿಚಾರ ಇದರ ಬಗ್ಗೆ ನಾಚಿಕೆಯಾಯಿತು.
೩. ಪೂ. ಅಣ್ಣನವರು ಮಲಗುವ ಮೊದಲು ಸಾಧಕರ ರಕ್ಷಣೆಗಾಗಿ ಸಾಧಕರ ನಿವಾಸ ಸ್ಥಳದ ಸುತ್ತಲೂ ಸೂಕ್ಷ್ಮದಲ್ಲಿ ಮಂಡಲ ಹಾಕುವುದು ಮತ್ತು ಅದನ್ನು ನೋಡಿ ಸಾಧಕನಿಗೆ ಅವರ ಬಗ್ಗೆ ಕೃತಜ್ಞತೆ ಅನಿಸುವುದು
ಒಮ್ಮೆ ಆಧ್ಯಾತ್ಮಿಕ ಸ್ತರದ ಉಪಾಯದ ಬಗ್ಗೆ ಹೇಳುವಾಗ ಪೂ. ಅಣ್ಣ ಅವರು ಆಕಸ್ಮಿಕವಾಗಿ ಮುಂದಿನ ವಿಷಯ ಹೇಳಿದರು, ಮಲಗುವ ಮೊದಲು ಅವರು ಸಾಧಕರ ನಿವಾಸ ಸ್ಥಳದ ಸುತ್ತಲೂ ಸೂಕ್ಷ್ಮದಲ್ಲಿ ಒಂದು ಮಂಡಲ ಹಾಕುತ್ತಾರೆ. – ಶ್ರೀ. ಪ್ರಶಾಂತ ಹರಿಹರ, ಮಂಗಳೂರು
ಅದರ ನಂತರ ಅವರ ಕೋಣೆಯ ಸುತ್ತಲೂ ಮತ್ತು ನಂತರ ಅವರ ಮಲಗುವ ಜಾಗದಲ್ಲಿ ದೇವತೆಯ ನಾಮಜಪದ ಮಂಡಲ ಹಾಕುತ್ತಾರೆ. ಇದನ್ನು ಕೇಳಿ ನನಗೆ ಬಹಳ ಆಶ್ಚರ್ಯವಾಯಿತು ಮತ್ತು ಪೂ. ಅಣ್ಣ ಅವರ ವಿಚಾರದಲ್ಲಿ ಎಷ್ಟು ವ್ಯಾಪಕತೆ ಇದೆ. ಆದ್ದರಿಂದಲೇ ನಾವು ಎಲ್ಲರೂ ಸುರಕ್ಷಿತವಾಗಿದ್ದೇವೆ, ಎಂದು ಅನಿಸಿ ಅವರ ಬಗ್ಗೆ ಕೃತಜ್ಞತೆ ಅನಿಸಿತು.
೪. ಪೂ. ರಮಾನಂದ ಅಣ್ಣ ಅವರಿಗೆ ಎಲ್ಲ ಸಾಧಕರ ಸ್ಥಿತಿಯ ಬಗ್ಗೆ ಒಳಗಿನಿಂದ ತಿಳಿಯುವುದು
ಪೂ. ರಮಾನಂದ ಅಣ್ಣ ಸತತವಾಗಿ ಸೇವೆಯಲ್ಲಿ ನಿರತರಾಗಿರುತ್ತಾರೆ. ಮಂಗಳೂರಿನಲ್ಲಿನ ಸಾಧಕರ ಬಗ್ಗೆ ಅವರಿಗೆ ಏನೂ ಹೇಳದಿದ್ದರೂ ಅವರಿಗೆ ಸಾಧಕರ ಸ್ಥಿತಿಯ ಬಗ್ಗೆ ಎಲ್ಲವೂ ತಿಳಿದಿರುತ್ತದೆ. ನನಗೆ ಅನೇಕ ಬಾರಿ ಈ ಅನುಭವ ಬಂದಿದೆ.
೫. ಪೂ. ಅಣ್ಣ ಅವರ ಕೋಣೆಯಲ್ಲಿ ಮಲಗಿದ ನಂತರ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಶೇ. ೫೦ ರಷ್ಟು ಕಡಿಮೆ ಆಗುವುದು
ನನಗೆ ಪೂ. ಅಣ್ಣ ಅವರ ಕೋಣೆಯಲ್ಲಿ ಮಲಗುವ ಅವಕಾಶ ಸಿಕ್ಕಿತು. ಕೆಲವು ದಿನಗಳಿಂದ ಆಧ್ಯಾತ್ಮಿಕ ಸ್ತರದ ಉಪಾಯ ಮಾಡುವಾಗ ನನ್ನ ಮನಸ್ಸಿನಲ್ಲಿ ಅನಾವಶ್ಯಕ ವಿಚಾರದ ಸರಮಾಲೆ ಇರುತ್ತಿತ್ತು ಮತ್ತು ನನ್ನ ಮನಸ್ಸು ಆ ವಿಚಾರದಲ್ಲಿಯೇ ಸಿಲುಕಿಕೊಳ್ಳುತ್ತಿತ್ತು. ಪೂ. ಅಣ್ಣ ಅವರ ಕೋಣೆಯಲ್ಲಿ ಮಲಗಿದ ನಂತರ ಮೊದಲು ದಿನವೇ ನನ್ನ ತೊಂದರೆ ಶೇ. ೫೦ ರಷ್ಟು ಕಡಿಮೆ ಆಯಿತು. ಅಲ್ಲಿ ನನಗೆ ಶಾಂತಿಯ ಅನುಭೂತಿ ಬಂದಿತು.
೬. ಸಾಧನೆಯ ಗಾಂಭೀರ್ಯ ಮೂಡಿಸುವ ಪೂ. ಅಣ್ಣನವರ ಸ್ಪೂರ್ತಿದಾಯಕ ವಿಚಾರಗಳು !
ಕೆಲವು ಸಲ ಪೂ. ಅಣ್ಣ ಕಥೆಯ ಮೂಲಕ ಅಥವಾ ಬೇರೆ ಉದಾಹರಣೆ ನೀಡಿ ಸಾಧಕರ ಮನಸ್ಸಿನಲ್ಲಿ ಸಾಧನೆಯ ಗಾಂಭೀರ್ಯ ಮೂಡಿಸುತ್ತಾರೆ ಮತ್ತು ಸಾಧನೆಗಾಗಿ ಸ್ಫೂರ್ತಿ ನೀಡುತ್ತಾರೆ. ಇದರ ಕೆಲವು ಉದಾಹರಣೆ ಮುಂದಿನಂತಿದೆ.
೬ ಅ. ಮಾಯೆಯ ಸಮುದ್ರದಲ್ಲಿ ಸಿಲುಕಿರುವ ಸಾಧಕ ಜೀವಗಳಿಗೆ ಗುರುರೂಪದ ಹಡಗೇ ಆಧಾರ ! : ಸಾಧಕರು ಗೊಂದಲದ ಸ್ಥಿತಿಯಲ್ಲಿರುವಾಗ ಅಂದರೆ ಮಾಯೆಯಲ್ಲಿ ಸಿಲುಕಿರುವಾಗ ಮಾಯೆಯ ಸಮುದ್ರದಲ್ಲಿ ಸಿಲುಕಿರುವ ಸಾಧಕನಿಗೆ ಗುರುರೂಪದ ಹಡಗೇ ಆಧಾರವಿರುತ್ತದೆ !
೬ ಆ. ಸಾಧಕರಿಗೆ ಶಿಸ್ತು ಕಲಿಸಿ ಮತ್ತು ಪ್ರಾಯಶ್ಚಿತ್ತ ತೆಗೆದುಕೊಳ್ಳಲು ಹೇಳಿ ಅವರಿಂದ ಸಾಧನೆ ಮಾಡಿಸಿಕೊಳ್ಳುವುದು ಅವಶ್ಯಕ ! : ಕೆಲವು ಸಲ ಈಜಲು ಬರುವುದಿಲ್ಲವೆಂದು ನದಿ ತೀರದಲ್ಲಿ ನಿಂತಿರುವವನ್ನು ನದಿಗೆ ನೂಕಬೇಕಾಗುತ್ತದೆ. ನೀರಿನಲ್ಲಿ ಬಿದ್ದ ನಂತರ ಅವನು ತನ್ನಿಂದ ತಾನೆ ಈಜಲು ಕಲಿಯುತ್ತಾನೆ. ಅದರಂತೆಯೇ ಸಾಧಕರಿಗೆ ಸಾಧನೆ ವ್ಯವಸ್ಥಿತವಾಗಿ ಮಾಡಿರಿ ಹೀಗೆ ಎಷ್ಟು ಸಲ ಹೇಳಿದರೂ ಅವರು ಸಾಧನೆ ಮಾಡದಿದ್ದರೆ ಅವರಿಗೆ ಶಿಸ್ತು ಕಲಿಸಿ ಮತ್ತು ಪ್ರಾಯಶ್ಚಿತ್ತ ತೆಗೆದುಕೊಳ್ಳಲು ಹೇಳಿ ಅವರಿಂದ ಸಾಧನೆ ಮಾಡಿಸಿಕೊಳ್ಳಬೇಕು.
ಪೂ. ರಮಾನಂದ ಅಣ್ಣ ಇವರಂತಹ ಸಂತರ ಸಾನಿಧ್ಯ ನೀಡುವ ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
– ಶ್ರೀ. ಪ್ರಶಾಂತ ಹರಿಹರ, ಮಂಗಳೂರು (೧೨.೧೧.೨೦೨೦)