೧. ಮನುಷ್ಯನ ಜೀವನದಲ್ಲಿ ಶೇ. ೮೦ ರಷ್ಟು ಸಮಸ್ಯೆಗಳು ಆಧ್ಯಾತ್ಮಿಕ ಕಾರಣಗಳಿಂದ ಬರುವುದು
‘ಮನುಷ್ಯನ ಜೀವನದಲ್ಲಿ ಉದ್ಭವಿಸುವ ಶೇ. ೮೦ ರಷ್ಟು ಸಮಸ್ಯೆಗಳಿಗೆ ಪ್ರಾರಬ್ಧ, ಅತೃಪ್ತ ಪೂರ್ವಜರ ಲೀಂಗದೇಹಗಳ ತೊಂದರೆ, ಕೆಟ್ಟ ಶಕ್ತಿಗಳ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಕಾರಣಗಳಿರುತ್ತವೆ.
೨. ಕಾಲಮಹಾತ್ಮೆಗನುಸಾರ ಪ್ರಸ್ತುತ ಕೆಟ್ಟ ಶಕ್ತಿಗಳ ಪ್ರಕೋಪ ಹೆಚ್ಚಾಗಿರುವುದು
ಸದ್ಯದ ಕಲಿಯುಗದಲ್ಲಿ ಹೆಚ್ಚಿನ ಸಮಾಜವು ಧರ್ಮಾಚರಣೆಯಿಂದ ವಿಮುಖವಾಗಿದೆ. ಆದ್ದರಿಂದ ಸಮಾಜ ಮತ್ತು ವಾತಾವರಣದಲ್ಲಿ ರಜ-ತಮ ಈ ತೊಂದರೆದಾಯಕ ಗುಣಗಳ ಪ್ರಾಬಲ್ಯ ಹೆಚ್ಚಾಗಿದೆ. ಇದು ಕೆಟ್ಟ ಶಕ್ತಿಗಳಿಗೆ ಪೂರಕವಾಗಿದ್ದರಿಂದ ಅವುಗಳ ಪ್ರಾಬಲ್ಯವು ಹೆಚ್ಚಾಗಿದೆ ಮತ್ತು ಇದರಿಂದ ಮನುಷ್ಯರಿಗೆ ತೊಂದರೆ ನೀಡುವ ಪ್ರಮಾಣವೂ ಬಹಳಷ್ಟು ಹೆಚ್ಚಾಗಿದೆ. ಇಂದು ಪ್ರತಿಯೊಬ್ಬರಿಗೂ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ಇದೆ ಅಥವಾ ಯಾರಿಗಾದರೂ ಈಗ ತೊಂದರೆಯಾಗದಿದ್ದರೂ, ಭವಿಷ್ಯದಲ್ಲಿ ಆಗಬಹುದು.
೩. ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳ ಉದಾಹರಣೆಗಳು ಮತ್ತು ಅದನ್ನು ದೂರಗೊಳಿಸಲು ಆಧ್ಯಾತ್ಮಿಕ ಸ್ತರದ ಉಪಾಯ ಮಾಡುವುದು ಅತ್ಯಾವಶ್ಯಕ
ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳ ಕೆಲವು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ.
ಅ. ಹೆಚ್ಚು ಔಷಧೋಪಚಾರ ಸೇವಿಸಿದರೂ ಅನಾರೋಗ್ಯ ಕಡಿಮೆಯಾಗದಿರುವುದು
ಆ. ಕಾರಣವಿಲ್ಲದೇ ಆಗಾಗ ನಕಾರಾತ್ಮಕತೆ ಅಥವಾ ನಿರಾಶೆ ಬರುವುದು ಮತ್ತು ಅತೀ ನಿರಾಶೆಯಿಂದಾಗಿ ಕೆಲವರ ಮನಸ್ಸಿನಲ್ಲಿ ‘ಇನ್ನು ಜೀವನವನ್ನು ಮುಗಿಸೋಣ, ಎಂಬ ತೀವ್ರ ವಿಚಾರ ಬರುವುದು
ಇ. ಕಾರಣವಿಲ್ಲದೇ ಗೊಂದಲವಾಗುವುದು
ಈ. ಕೌಟುಂಬಿಕ ಅಡಚಣೆಯಿಂದ ವಿಪರೀತ ತೊಂದರೆಯಾಗುವುದು
ಉ. ಸಾಧನೆಗಾಗಿ ತುಂಬಾ ಪ್ರಯತ್ನಿಸಿದರೂ ಸಾಧಕರ ಸಾಧನೆ ಚೆನ್ನಾಗಿ ಆಗದಿರುವುದು
ಕೆಟ್ಟ ಶಕ್ತಿಗಳಿಂದಾಗುವ ಮೇಲಿನ ರೀತಿಯ ತೊಂದರೆಗಳನ್ನು ದೂರಗೊಳಿಸಲು ಆಧ್ಯಾತ್ಮಿಕ ಸ್ತರದಲ್ಲಿ ಉಪಾಯ ಮಾಡುವುದು ಅಗತ್ಯವಾಗಿರುತ್ತದೆ. ಅದಕ್ಕಾಗಿ ‘ಪ್ರಾಣಶಕ್ತಿವಹನ ಉಪಾಯಪದ್ದತಿಗನುಸಾರ ನಾಮಜಪ ಇತ್ಯಾದಿ ಉಪಾಯಗಳನ್ನು ಹುಡುಕಿ ಮಾಡಬೇಕಾಗುತ್ತದೆ. ಈ ಉಪಾಯಪದ್ದತಿಯ ಸಂದರ್ಭದಲ್ಲಿ ಸನಾತನವು ೨ ಗ್ರಂಥಗಳನ್ನು ಪ್ರಕಾಶಿಸಿದೆ. ಈ ಗ್ರಂಥಗಳ ಅಧ್ಯಯನ ಮಾಡಿ, ಅದೇ ರೀತಿ ಅಗತ್ಯಕ್ಕನುಸಾರ ಈ ಪದ್ದತಿಯನ್ನು ತಿಳಿದವರಿಂದ ಕಲಿತುಕೊಳ್ಳಿರಿ !
೪. ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ದಿಕ್ಕು ಮತ್ತು ವೇಗ ನೀಡುವ ಕಾರ್ಯಕ್ರಮಗಳಲ್ಲಿ ಕೆಟ್ಟ ಶಕ್ತಿಗಳು ನಿರ್ಮಾಣ ಮಾಡುವ ತೊಂದರೆಗಳನ್ನು ದೂರ ಮಾಡಲು ಆಧ್ಯಾತ್ಮಿಕ ಸ್ತರದ ಉಪಾಯ ಮಾಡುವುದು ಅಗತ್ಯವಾಗಿದೆ
ಈಗಿನ ಕಲಿಯುಗದಲ್ಲಿ ಕೆಟ್ಟ ಶಕ್ತಿಗಳು ಭೂಮಿಯ ಮೇಲೆ ‘ಅಸುರಿ (ಅಧರ್ಮದ) ರಾಜ್ಯ ಸ್ಥಾಪಿಸಲು ಪ್ರಯತ್ನಿಸುತ್ತಿವೆ. ಆದ್ದರಿಂದ ಅವು ಹಿಂದೂ ರಾಷ್ಟ್ರದ (ಧರ್ಮರಾಜ್ಯದ, ಈಶ್ವರಿ ರಾಜ್ಯದ) ಸ್ಥಾಪನೆಯ ಕಾರ್ಯಕ್ಕೆ ದಿಕ್ಕು ಮತ್ತು ವೇಗ ನೀಡುವ ಕಾರ್ಯಕ್ರಮಗಳಲ್ಲಿ ಅಡಚಣೆಗಳನ್ನು ತರುತ್ತಿವೆ. ಈ ಅಡಚಣೆಗಳ ಕೆಲವು ಉದಾಹರಣೆಗಳು ಈ ಮುಂದಿನಂತಿವೆ.
ಅ. ಆಡಳಿತವರ್ಗದವರಿಂದ ಕಾರ್ಯಕ್ರಮಕ್ಕೆ ಅನುಮತಿ ಸಿಗದಿರುವುದು ಅಥವಾ ಅನುಮತಿಗಾಗಿ ತುಂಬಾ ಅಲೆದಾಟ ಮಾಡಬೇಕಾಗುವುದು
ಆ. ಕೋಮುವಾದಿ ಸಂಘಟನೆಗಳು ಕಾರ್ಯಕ್ರಮಕ್ಕಾಗಿ ಅನುಮತಿ ನೀಡಲು ವಿರೋಧಿಸುವುದು
ಇ. ಇಚ್ಛೆ ಇರುವವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಡಚಣೆ ಬರುವುದು
ಈ. ಕಾರ್ಯಕ್ರಮದ ಸಮಯದಲ್ಲಿ ಮಳೆ ಅಥವಾ ಚಂಡಮಾರುತ ಬರುವುದು
ಉ. ಕಾರ್ಯಕ್ರಮದಲ್ಲಿ ಮಾರ್ಗದರ್ಶನ ಅಥವಾ ಭಾಷಣ ಮಾಡುವ ಕೆಲವೇ ಕ್ಷಣದ ಮೊದಲು ಯಾವುದೇ ಕಾರಣವಿಲ್ಲದೇ ವಕ್ತಾರರಿಗೆ ಧ್ವನಿ ಬಾರದೇ ಇರುವುದು, ‘ಏನು ಮಾತನಾಡಬೇಕು ಎಂಬುದು ಹೊಳೆಯದಿರುವುದು, ಅವರ ಪ್ರಾಣಶಕ್ತಿ ಕಡಿಮೆಯಾಗುವುದು, ಇದ್ದಕ್ಕಿದ್ದಂತೆ ಅವರ ಮನೆಯಲ್ಲಿ ಕೌಟುಂಬಿಕ ಅಡಚಣೆಗಳು ಬರುವುದು.
ಊ. ಕಾರ್ಯಕ್ರಮದ ಸಮಯದಲ್ಲಿ ಯಾವುದೇ ಕಾರಣವಿಲ್ಲದೇ ಗಣಕಯಂತ್ರ-ವ್ಯವಸ್ಥೆ ಅಥವಾ ಧ್ವನಿವರ್ಧಕ-ವ್ಯವಸ್ಥೆ ಮಧ್ಯದಲ್ಲೇ ನಿಂತು ಹೋಗುವುದು.
ಸಮಷ್ಟಿ ಕಾರ್ಯದಲ್ಲಿ ಬರುವ ಈ ರೀತಿಯ ಅಡಚಣೆಗಳನ್ನು ದೂರಗೊಳಿಸಲು ಸೂಕ್ಷ್ಮ ಸ್ತರದಲ್ಲಿ ಆಧ್ಯಾತ್ಮಿಕ ಉಪಾಯವನ್ನು ಹುಡುಕಿ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೇ ‘ಕೆಟ್ಟ ಶಕ್ತಿಗಳು ಕಾರ್ಯದಲ್ಲಿ ಅಡಚಣೆಯನ್ನು ತಂದ ನಂತರವಲ್ಲ ಕಾರ್ಯದಲ್ಲಿ ಅಡಚಣೆಗಳು ಬರಬಾರದೆಂದು, ಮೊದಲೇ ಆಧ್ಯಾತ್ಮಿಕ ಸ್ತರದ ಉಪಾಯ ಮಾಡುವುದು ಅಗತ್ಯವಾಗಿರುತ್ತದೆ. ಏಕೆಂದರೆ ಕೆಟ್ಟ ಶಕ್ತಿಗಳು ಸಮಷ್ಟಿ ಕಾರ್ಯದಲ್ಲಿ ಅಡಚಣೆಗಳನ್ನು ತರುವ ಪ್ರಮಾಣ ಹೆಚ್ಚಾಗಿದ್ದರಿಂದ ‘ಈ ಕಾರ್ಯವು ನಿರ್ವಿಘ್ನವಾಗಿ ನಡೆಯಲಿದೆ, ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ.
೫. ಸಮಷ್ಟಿ ಸ್ತರದ ತೊಂದರೆಗಳಿಗೆ ಆಧ್ಯಾತ್ಮಿಕ ಉಪಾಯ ಹುಡುಕುವುದು ಮತ್ತು ಅದನ್ನು ಮಾಡುವುದು, ಇವುಗಳಿಗಾಗಿ ಅಗತ್ಯವಿರುವ ಅರ್ಹತೆ ಹಾಗೂ ಅದರ ಹಿನ್ನೆಲೆಯ ಅಧ್ಯಾತ್ಮಶಾಸ್ತ್ರ
ವ್ಯಷ್ಟಿ ಸ್ತರದ ತೊಂದರೆಯ ತುಲನೆಯಲ್ಲಿ ಸಮಷ್ಟಿ ಸ್ತರದ ತೊಂದರೆಗಳಿಗೆ ಆಧ್ಯಾತ್ಮಿಕ ಉಪಾಯ ಹುಡುಕಿ ಅದನ್ನು ಮಾಡುವುದು ಕಠಿಣವಾಗಿರುತ್ತದೆ.
ಅ. ಸಮಷ್ಟಿ ಸ್ತರದಲ್ಲಿ ಉಪಾಯ ಹುಡುಕಲು ಹಾಗೂ ಅದನ್ನು ಪರಿಣಾಮಕಾರಿಯಾಗಿ ಮಾಡಲು ಸೂಕ್ಷ್ಮವನ್ನು ಅರಿತುಕೊಳ್ಳುವ ಕ್ಷಮತೆ ಹೆಚ್ಚಿರಬೇಕಾಗುತ್ತದೆ, ಅದೇ ರೀತಿ ಸಾಧನೆಯ ಬಲವೂ ಇರಬೇಕಾಗುತ್ತದೆ, ಅಂದರೆ ಸಾಧನೆ ಉತ್ತಮವಾಗಿರಬೇಕಾಗುತ್ತದೆ. ಈ ರೀತಿಯ ಸಾಧನೆ ಇರುವವರಿಗೆ (ಉದಾ. ಸಂತರಿಗೆ) ಸೂಕ್ಷ್ಮ ಜ್ಞಾನೇಂದ್ರಿಯಗಳು ಸಕ್ಷಮವಾಗಿರುವುದರಿಂದ ಅವರಿಗೆ ಮಾತ್ರ ಕಾರ್ಯದಲ್ಲಿ ಬರುತ್ತಿರುವ ಸೂಕ್ಷ್ಮದ ಅಡಚಣೆಗಳು ಮತ್ತು ಮುಂದೆ ಬರಬಹುದಾದ ಸೂಕ್ಷ್ಮದ ಅಡಚಣೆಗಳು ಅರಿವಾಗಿ ಅದಕ್ಕೆ ಆಧ್ಯಾತ್ಮಿಕ ಉಪಾಯ ಹುಡುಕಲು ಸಾಧ್ಯವಾಗುತ್ತದೆ. ಉಪಾಯ ಹುಡುಕುವಾಗ ‘ಬ್ರಹ್ಮಾಂಡದಿಂದ ಪಿಂಡ ಈ ಅಧ್ಯಾತ್ಮದ ತತ್ತ್ವವು ಅನ್ವಯವಾಗುವುದರಿಂದ ಬ್ರಹ್ಮಾಂಡದಲ್ಲಿನ, ಅಂದರೆ ಸಮಷ್ಟಿ ಕಾರ್ಯದ ಅಡಚಣೆಗಳು ‘ಪ್ರಾಣಶಕ್ತಿವಹನ ಉಪಾಯಪದ್ದತಿಗನುಸಾರ ನಮ್ಮ ದೇಹದ ಮೇಲೆಯೇ ಹುಡುಕಲು ಸಾಧ್ಯವಿದೆ, ಅದೇ ರೀತಿ ಹುಡುಕಿದ ಉಪಾಯ ‘ಪಿಂಡದಿಂದ ಬ್ರಹ್ಮಾಂಡ ಈ ತತ್ತ್ವಕ್ಕನುಸಾರ ಪಿಂಡದ ಮೇಲೆ ಅಂದರೆ ನಮ್ಮ ದೇಹದ ಮೇಲೆ ಮಾಡಿದರೆ ಬ್ರಹ್ಮಾಂಡ ಅಂದರೆ ಸಮಷ್ಟಿಯ ಮೇಲೆ ತನ್ನಷ್ಟಕ್ಕೆ ಉಪಾಯವಾಗುತ್ತದೆ.
ಆ. ಸಮಷ್ಟಿ ಸ್ತರದ ತೊಂದರೆಗಳಿಗೆ ಉಪಾಯ ಹುಡುಕಲು ಮತ್ತು ಅದನ್ನು ಮಾಡಲು ಸ್ವತಃ ಅವರಿಗೆ ಆಧ್ಯಾತ್ಮಿಕ ತೊಂದರೆ ಇರಬಾರದು; ಇಲ್ಲದಿದ್ದರೆ ಸ್ವತಃ ಅವರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
‘ಸಮಷ್ಟಿ ಉಪಾಯ ಹುಡುಕುವ ಹಾಗೂ ಅದನ್ನು ಮಾಡುವ ಬಗ್ಗೆ ತಮ್ಮ ಕ್ಷಮತೆ ಇದೆಯೇ ಅಥವಾ ಇಲ್ಲವೇ, ಎಂಬುದನ್ನು ಸಮಷ್ಟಿ ಉಪಾಯ ಮಾಡುವ ಸಂತರಿಗೆ ಅಥವಾ ತಿಳಿದವರಿಗೆ ವಿಚಾರಿಸಬೇಕು.
೬. ಮುಂಬರುವ ಭೀಕರ ಆಪತ್ಕಾಲದ ವಿಚಾರ ಮಾಡಿ ಈಗಿನಿಂದಲೇ ಆಧ್ಯಾತ್ಮಿಕ ಉಪಾಯವನ್ನು ಸರಿಯಾಗಿ ಹುಡುಕಿ ಅದನ್ನು ಮಾಡುವ ಕ್ಷಮತೆಯನ್ನು ಹೆಚ್ಚಿಸಿ ಹಾಗೂ ಸಾಧನೆಯನ್ನೂ ಹೆಚ್ಚಿಸಿ !
ಮುಂಬರುವ ೩ ನೇ ಮಹಾಯುದ್ಧ ಅದೇ ರೀತಿ ಭೂಕಂಪ ದಂತಹ ನೈಸರ್ಗಿಕ ವಿಪತ್ತಿನ ಸಮಯದಲ್ಲಿ ನಾಮಜಪದಂತಹ ಸೂಕ್ಷ್ಮ ಸ್ತರದ ಉಪಾಯ ಹುಡುಕಲು ಹಾಗೂ ಅದನ್ನು ಮಾಡಲು ಯಾರಾದರೂ ಸಕ್ಷಮ ಸಾಧಕ ಅಥವಾ ಸಂತರು ಆ ಸ್ಥಳದಲ್ಲಿ ಲಭ್ಯ ಇದ್ದೇ ಇರುತ್ತಾರೆಂದು ಹೇಳಲು ಆಗುವುದಿಲ್ಲ. ಅದಕ್ಕಾಗಿ ಆ ಆಪತ್ಕಾಲದಲ್ಲಿಯೂ ದಿನನಿತ್ಯದ ಜೀವನದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯಿಂದ ರಕ್ಷಣೆಯಾಗಲು ಹಾಗೂ ಕೈಗೆತ್ತಿಕೊಂಡಿರುವ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವು ನಿರ್ವಿಘ್ನವಾಗಿ ನೆರವೇರಲು ಪ್ರತಿಯೊಬ್ಬರು ಈಗಿನಿಂದಲೇ ಆಧ್ಯಾತ್ಮಿಕ ಉಪಾಯವನ್ನು ಸರಿಯಾಗಿ ಹುಡುಕಿ ಮಾಡುವ ಕ್ಷಮತೆಯನ್ನೂ ಹೆಚ್ಚಿಸಬೇಕು. ಜೊತೆಗೆ ಉತ್ತಮ ಸಾಧನೆ ಮಾಡಿ ತಮ್ಮ ಆಧ್ಯಾತ್ಮಿಕ ಬಲವನ್ನೂ ಹೆಚ್ಚಿಸಬೇಕು.
– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ (೮.೧.೨೦೨೩)
ಕೆಟ್ಟ ಶಕ್ತಿ : ವಾತಾವರಣದಲ್ಲಿ ಒಳ್ಳೆಯ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದ ಅನೇಕ ಕಥೆಗಳು ವೇದ-ಪುರಾಣಗಳಲ್ಲಿವೆ. ‘ಅಥರ್ವವೇದದಲ್ಲಿ ಹಲವೆಡೆ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ.ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ಆಧ್ಯಾತ್ಮಿಕ ಉಪಾಯಗಳನ್ನು ವೇದ, ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |