‘ನಾನು ಕೆಲವು ವರ್ಷಗಳ ಹಿಂದೆ ಗೋವಾದ ರಾಮನಾಥಿಯ ಸನಾತನದ ಆಶ್ರಮಕ್ಕೆ ಹೋಗಿದ್ದೆನು.ಅಲ್ಲಿ ವಾಸ್ತವ್ಯದಲ್ಲಿರುವಾಗ ಒಮ್ಮೆ ನಾನು ಪ್ರಾತಃಕಾಲ ೫ ಗಂಟೆಗೆ ವಾಯುವಿಹಾರಕ್ಕಾಗಿ (ವಾಕಿಂಗ್ ವ್ಯಾಯಾಮ) ಆಶ್ರಮದಿಂದ ಹೊರಟಿದ್ದೆನು ಮತ್ತು ಮುಕ್ಕಾಲು ಗಂಟೆಯಲ್ಲಿ ಆಶ್ರಮಕ್ಕೆ ಹಿಂದಿರುಗಿದೆನು. ಮಧ್ಯಾಹ್ನದ ನಂತರ ನನಗೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಸತ್ಸಂಗ ಲಭಿಸಿತು. ಆಗ ನಮ್ಮ ನಡುವೆ ನಡೆದ ಸಂಭಾಷಣೆಯನ್ನು ಮುಂದೆ ನೀಡಿದ್ದೇನೆ.
೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ವ್ಯಾಯಾಮ ಮಾಡದಿದ್ದರೆ ಶರೀರವನ್ನು ಆರೋಗ್ಯವಾಗಿ ಇಡಲು ಸಾಧನೆ ಖರ್ಚಾಗುತ್ತದೆ’, ಎಂದು ಹೇಳುವುದು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಇಂದು ಬೆಳಗ್ಗೆ ನಿಮ್ಮನ್ನು ಆಶ್ರಮದ ಹೊರಗೆ ವಾಯುವಿಹಾರಕ್ಕೆ ಹೋಗುವುದನ್ನು ನೋಡಿದೆನು.
ನಾನು : ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಒಂದು ಸಂದೇಹವಿದೆ. ‘ಬೆಳಗ್ಗೆ ಈ ರೀತಿ ವಾಯುವಿಹಾರ ಮಾಡುವುದು ಅಥವಾ ನಂತರ ವ್ಯಾಯಾಮ ಮಾಡುವುದು’, ಇದು ದೇಹಬುದ್ಧಿಯನ್ನು ಕಾಪಾಡಿದಂತಾಗುತ್ತದೆಯೇ ?
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನೀವು ವ್ಯಾಯಾಮ ಮಾಡದಿದ್ದರೆ ಶರೀರವನ್ನು ಆರೋಗ್ಯದಿಂದಿಡಲು ನಿಮ್ಮ ಸಾಧನೆ ಖರ್ಚಾಗುತ್ತದೆ. ನಾವು ‘ಸಾಧನೆಯು ಖರ್ಚಾಗದೇ ಶರೀರವು ಚೆನ್ನಾಗಿರಬೇಕು ಮತ್ತು ಪರಿಣಾಮಕಾರಿ ಸಾಧನೆಯನ್ನು ಮಾಡಲು ಸಾಧ್ಯವಾಗಬೇಕೆಂದು ಇಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ; ಆದರೆ ‘೧ ಗಂಟೆ ವ್ಯಾಯಾಮ ಮಾಡುವುದು ಅವಶ್ಯವಿದ್ದಾಗ ೪ ಗಂಟೆ ವಾಯು ವಿಹಾರಕ್ಕೆ ಹೋಗುವುದು’, ಅಪೇಕ್ಷಿತವಿಲ್ಲ. ಸಾಧನೆಯ ದೃಷ್ಟಿಯಿಂದ ಶರೀರವು ಆರೋಗ್ಯವಾಗಿರಲು ನಿಯಮಿತ ವ್ಯಾಯಾಮ ಮಾಡುವುದು ಆವಶ್ಯಕವಾಗಿದೆ.
ಗುರುದೇವರು ಹೇಳಿದ ಅಂಶಗಳನ್ನು ಗಮನದಲ್ಲಿಟ್ಟು ನಾನು ನಿಯಮಿತವಾಗಿ ಅವಶ್ಯವಿದ್ದಷ್ಟು ಸಮಯ ವ್ಯಾಯಾಮ ಮಾಡುತ್ತೇನೆ. ಈಗ ದೇವದ ಆಶ್ರಮದಲ್ಲಿ ನಾವು ಕೆಲವು ಸಾಧಕರು ಬೆಳಗ್ಗೆ ನಿಶ್ಚಯಿಸಿದ ಸಮಯದಲ್ಲಿ ಒಟ್ಟು ಸೇರಿ ಸೂರ್ಯ ನಮಸ್ಕಾರಗಳನ್ನು ಹಾಕುತ್ತೇವೆ ಮತ್ತು ಪ್ರಾಣಾಯಾಮ ಮತ್ತು ಆಸನಗಳನ್ನು ಮಾಡುತ್ತೇವೆ.’ – ಶ್ರೀ. ಅರುಣ ಡೊಂಗರೆ (ವಯಸ್ಸು ೭೦ ವರ್ಷಗಳು) ಸನಾತನ ಆಶ್ರಮ, ದೇವದ, ಪನವೇಲ. (೧೦.೧೦.೨೦೨೨)