ಹಿಂದೂ ದ್ವೇಷದಿಂದಾಗಿ ಕೆನಡಾದಲ್ಲಿ ಹಿಂದೂಗಳ ಮೇಲೆ ಹಲ್ಲೆ !

ಕೆನಡಾದ ಸಂಸತ್ತಿನಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಯ ಅಂಶವನ್ನು ಮಂಡಿಸಿದ ಭಾರತೀಯ ಮೂಲದ ಸಂಸದ !

ಭಾರತೀಯ ಮೂಲದ ಸಂಸದ ಚಂದ್ರಾ ಆರ್ಯ

ಒಟಾವಾ (ಕೆನಡಾ) – ಕೆನಡಾದ ಮಿಸಿಸೊಗಾದಲ್ಲಿ ಶ್ರೀರಾಮ ಮಂದಿರವನ್ನು ಧ್ವಂಸಗೊಳಿಸಿ ಅಲ್ಲಿ ಭಾರತವಿರೋಧಿ ಘೋಷಣೆ ಬರೆದ ಪ್ರಕರಣವನ್ನು ಕೆನಡಾದ ಸಂಸತ್ತಿನಲ್ಲಿ ಪ್ರಸ್ತಾಪಿಸಲಾಯಿತು. ಭಾರತೀಯ ಮೂಲದ ಸಂಸದ ಚಂದ್ರಾ ಆರ್ಯ ಇವರು ಸಂಸತ್ತಿನಲ್ಲಿ ಘಟನೆಯನ್ನು ಖಂಡಿಸುತ್ತಾ ‘ಹಿಂದೂದ್ವೇಷದಿಂದಲೇ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ’, ಎಂದು ಹೇಳುತ್ತಾ ಹಿಂದೂವಿರೋಧಿ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚಂದ್ರಾ ಆರ್ಯ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಭಾರತ ಮತ್ತು ಹಿಂದೂ ವಿರೋಧಿ ಸಂಘಟನೆಗಳು ಕೆನಡಾದಲ್ಲಿರುವ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಈ ಸಂಘಟನೆಗಳು ಸಾಮಾಜಿಕ ಮಾಧ್ಯಮದಿಂದ ಕೆನಡಾದ ಹಿಂದೂ ನಾಗರಿಕರ ಮೇಲೆ ಈಗಾಗಲೇ ಗುರಿ ಮಾಡಿವೆ. ಹಿಂದೂದ್ವೇಷವನ್ನು ಹರಡಲಾಗುತ್ತಿದೆ. ಈ ದ್ವೇಷದಿಂದಲೇ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಮಿಸಿಸೊಗಾದ ಶ್ರೀರಾಮ ಮಂದಿರದ ಘಟನೆ ಖೇದಕರವಾಗಿದೆ. ಇದನ್ನು ಗಂಭೀರವಾಗಿ ನೋಡಬೇಕಾಗಿದೆ. ಕೆನಡಾದ ನಾಗರಿಕರಾಗಿ, ನಾವು ಎಲ್ಲಾ ಧಾರ್ಮಿಕ ಸಂಬಂಧಗಳು ಮತ್ತು ಶ್ರದ್ಧೆಗಳೊಂದಿಗೆ ಒಟ್ಟಿಗೆ ವಾಸಿಸುತ್ತೇವೆ. ಮುಂದೆಯೂ ಈ ವಿಷಯವನ್ನು ಮತ್ತಷ್ಟು ಕಾಪಾಡಿಕೊಳ್ಳಲು ಪ್ರಯತ್ನಿಸುವುದು ಅವಶ್ಯಕ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದ ಸಂಸತ್ತಿನಲ್ಲಿ ಯಾರಾದರೂ ಜನ್ಮಹಿಂದೂ ಸಂಸದರು ವಿದೇಶದ ಹಿಂದೂಗಳ ಮತ್ತು ಹಿಂದೂ ದೇವಾಲಯಗಳ ಮೇಲಿನ ದಾಳಿಯ ವಿಷಯವನ್ನು ಪ್ರಸ್ತಾಪಿಸಿ ಹಿಂದೂಗಳ ರಕ್ಷಣೆಗಾಗಿ ಸರಕಾರವು ಕಠಿಣ ಕ್ರಮಕೈಗೊಳ್ಳುವಂತೆ ಕೇಳುತ್ತಾರೆಯೇ ?