ನ್ಯೂಝಿಲ್ಯಾಂಡ್ ನಲ್ಲಿ ೬.೧ ತೀವ್ರತೆಯ ಭೂಕಂಪ

ವೆಲಿಂಗ್ಟನ – ನಗರದ ಬಳಿ ಇರುವ ಲೋವರ ಹಟನಲ್ಲಿ ಭೂಕಂಪದ ತೀವೃ ಹೊಡೆತದ ಅರಿವಾಗಿದ್ದು ರಿಕ್ಟರ್‌ ಮಾಪನದಲ್ಲಿ ಇದರ ತೀವೃತೆಯು ೬.೧ರಷ್ಟು ನೋಂದಣಿಯಾಗಿದೆ. ಭೂಕಂಪದ ನಂತರ ಯಾವುದೇ ಆರ್ಥಿಕ ಅಥವಾ ಜೀವಹಾನಿಯಾಗಿರುವ ಮಾಹಿತಿ ಕಂಡುಬಂದಿಲ್ಲ. ಸದ್ಯ ನ್ಯೂಝಿಲ್ಯಾಂಡಿನಲ್ಲಿ ‘ಗೆಬ್ರಿಎಲ’ ಎಂಬ ಚಂಡಮಾರುತದಿಂದಾಗಿ ಜನಜೀವನವು ಹದಗೆಟ್ಟಿದೆ. ಚಂಡಮಾರುತದಿಂದಾಗಿ ಅನೇಕ ನಗರಗಳ ಸಂಪರ್ಕವು ಕಡಿತಗೊಂಡಿದೆ. ಇದರಿಂದಾಗಿ ಜನರಿಗೆ ಜೀವನಾವಶ್ಯಕ ವಸ್ತುಗಳನ್ನು ಪೂರೈಸುವಲ್ಲಿ ಅಡಚಣೆ ನಿರ್ಮಾಣವಾಗಿದೆ. ಚಂಡಮಾರುತಗಳಂತಹ ನೈಸರ್ಗಿಕ ವಿಪತ್ತುಗಳಿಂದ ದೇಶವು ಸಂಭಾಳಿಸಿಕೊಳ್ಳುತ್ತಿರುವಾಗಲೇ ಭೂಕಂಪದ ರೂಪದಲ್ಲಿ ಇನ್ನೊಂದು ನೈಸರ್ಗಿಕ ವಿಪತ್ತು ಉದ್ಭವಿಸಿರುವುದಾಗಿ ಹೇಳಲಾಗುತ್ತಿದೆ.