ಆರೋಪಿಗಳಾಗಿರುವ 100 ಕ್ಕಿಂತ ಹೆಚ್ಚು ಪಾದ್ರಿಗಳು ಇಂದಿಗೂ ಹುದ್ದೆಯಲ್ಲಿ ಮುಂದುವರಿಕೆ
ಲಿಸ್ಬನ್ (ಪೋರ್ಚುಗಲ್) – ಪೋರ್ಚುಗಲ್ ನಲ್ಲಿ 4 ಸಾವಿರ 815 ಮಕ್ಕಳ ಲೈಂಗಿಕ ಶೋಷಣೆಯ ಪ್ರಕರಣದಲ್ಲಿ 100 ಕ್ಕಿಂತ ಹೆಚ್ಚು ಆರೋಪಿಗಳಾಗಿರುವ ಪಾದ್ರಿಗಳು ಚರ್ಚನಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ. ಈ ಪ್ರಕರಣಗಳ ವಿಚಾರಣೆ ಮಾಡುವ ಆಯೋಗವು ಈ ಮಾಹಿತಿಯನ್ನು ನೀಡಿದೆ.
1. `ರಾಯಟರ್ಸ’ ಈ ವಾರ್ತಾ ಸಂಸ್ಥೆಯು ನೀಡಿರುವ ಮಾಹಿತಿಯನುಸಾರ ಈ ಆಯೋಗದ ಅಂತಿಮ ವರದಿಯಲ್ಲಿ, ಪೋರ್ಚುಗಲ್ ನ ರೋಮನ ಕೆಥೊಲಿಕ ಚರ್ಚನ ಸದಸ್ಯರು (ಇದರಲ್ಲಿ 70 ಕ್ಕಿಂತಲೂ ಹೆಚ್ಚು ಪಾದ್ರಿಗಳು ಇದ್ದಾರೆ) ಕಡಿಮೆ ಪಕ್ಷ 4 ಸಾವಿರ 815 ಮಕ್ಕಳ ಲೈಂಗಿಕ ಶೋಷಣೆ ಮಾಡಿದ್ದಾರೆ. ಆಯೋಗವು ಇದನ್ನು `ಪ್ರಾರ್ಥಮಿಕ ಸಂಖ್ಯೆ’ ಎಂದು ಹೇಳಿದೆ. ಇದರಿಂದ ಈ ಸಂಖ್ಯೆ ಹೆಚ್ಚಿರಬಹುದು ಎಂದು ಗಮನಕ್ಕೆ ಬರುತ್ತದೆ.
#UPDATE Catholic clergy in Portugal have sexually abused at least 4,815 minors since 1950, according to results of a year-long independent inquiry announced on Monday following accounts from hundreds of victims. pic.twitter.com/Lhr7zKQ56x
— AFP News Agency (@AFP) February 13, 2023
2. ಆಯೋಗದ ನೇತೃತ್ವ ವಹಿಸುವ ಮಕ್ಕಳ ಮನೋವಿಜ್ಞಾನಿ ಪೆಡ್ರೊ ಸ್ಟ್ರೆಚ್ ಇವರು, ಇದು ಲೈಂಗಿಕ ಶೋಷಣೆ ಮಾಡಿರುವ ಪಾದ್ರಿಗಳ ಅಂದಾಜು ಸಂಖ್ಯೆಯಾಗಿದೆ. ಇದು 100 ಕ್ಕಿಂತಲೂ ಹೆಚ್ಚಿರಬಹುದು. ಈ ಪಾದ್ರಿಗಳ ಪಟ್ಟಿಯನ್ನು ತಯಾರಿಸಿ ಆ ಚರ್ಚ ಮತ್ತು ಮೊಕದ್ದಮೆಯ ದೂರುದಾರರನ್ನು ಕಳುಹಿಸುವ ಕಾರ್ಯ ನಡೆದಿದೆ. ಇಂತಹ ಆರೋಪಿಗಳನ್ನು ಅವರ ಕೆಲಸದಿಂದ ತೆಗೆದು ಹಾಕುವ ಆವಶ್ಯಕತೆಯಿದೆ. ಹಾಗೆಯೇ ಕಡಿಮೆ ಪಕ್ಷ ಮಕ್ಕಳೊಂದಿಗೆ ಅವರ ಸಂಪರ್ಕವನ್ನು ಕಡಿತಗೊಳಿಸಬೇಕು. ಈ ಪ್ರಕರಣದಲ್ಲಿ ವಿಚಾರಣೆ ಮಾಡುವ ಅಧಿಕಾರಿಗಳಿಗೆ ಸಹಾಯ ಮಾಡುವುದು ಚರ್ಚಿನ ನೈತಿಕ ಕರ್ತವ್ಯವಾಗಿದೆ ಎಂದು ಹೇಳಿದರು.
Abuse Documentary : The Shame of the Catholic Church | Retro Report | The New York Times
(Source : The New York Times)
3. ಬಿಶಪ್ ಪರಿಷತ್ತಿನ ಮುಖಂಡ ಜೋಸ್ ಓರನೆಲ್ಸ ಅವರು, ಆಯೋಗದಿಂದ ನಮಗೆ ಇಂದಿಗೂ ಪಟ್ಟಿ ಸಿಕ್ಕಿಲ್ಲ. ಚರ್ಚ ತಾನಾಗಿಯೇ ನಮ್ಮ ಸದಸ್ಯರ ವಿಚಾರಣೆ ನಡೆಸುವುದಿಲ್ಲ. (ಒಂದು ವೇಳೆ ಚರ್ಚ್ ಈ ರೀತಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರೆ, ಆರೋಪಿಗೆ ಎಂದಾದರೂ ಶಿಕ್ಷೆಯಾಗಬಹುದೇ ? ಇಂತಹ ಕರ್ತವ್ಯವೆಂದರೆ ವಾಸನಾಂಧ ಪಾದ್ರಿಗಳನ್ನು ಬೆಂಬಲಿಸುವ ಪ್ರಯತ್ನವೇ ಆಗಿದೆ ಎನ್ನುವುದು ಸ್ಪಷ್ಟವಾಗುತ್ತದೆ – ಸಂಪಾದಕರು)
4. `ಸರ್ವ್ಹಾಯವರ್ಸ ನೆಟವರ್ಕ ಆಫ್ ದ ಅಬ್ಯೂಸ್ಡ ಬಾಯ್ ಪ್ರೀಸ್ಟ್ಸ’ ಈ ಸಂಘಟನೆಯು `ಪೋರ್ಚುಗಲ್ ನಲ್ಲಿರುವ ಚರ್ಚನ ಅಧಿಕಾರಿಗಳು ಆರೋಪಿ ಪಾದ್ರಿಗಳ ಹೆಸರು, ಛಾಯಾಚಿತ್ರಗಳು, ವಿಳಾಸ ಮುಂತಾದವುಗಳನ್ನು ಸಾರ್ವಜನಿಕ ಗೊಳಿಸಬೇಕು. ಹಾಗೆಯೇ ಅವರಿಗೆ ಪಾದ್ರಿ ಹುದ್ದೆಯಿಂದ ಕಿತ್ತು ಹಾಕಬೇಕು. ಇದಕ್ಕಾಗಿ ಪ್ರಮುಖರನ್ನು ಬದಲಾಯಿಸುವ ಆವಶ್ಯಕತೆಯಿದೆ. ಹೀಗಾದರೇ ಮಾತ್ರ ಇಂತಹ ವಿಷಯಗಳು ನಡೆಯುವುದೇ ಇಲ್ಲ’ ಎಂದು ಹೇಳಿದೆ.
Child abuse found in Portugal Catholic Church is ‘tip of iceberg’, commission says https://t.co/bS4cwVhHWv pic.twitter.com/mtjaSI20Hh
— Reuters (@Reuters) February 13, 2023
ಪೋರ್ಚುಗಲ್ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಯವರ ಟೀಕೆ !
ಪೋರ್ಚುಗಲ ಪ್ರಧಾನಮಂತ್ರಿ ಆಂಟೋನಿಯೋ ಕೋಸ್ಟಾ ಇವರು, ಈ ಘಟನೆ ಸಂಪೂರ್ಣ ಸಮಾಜವನ್ನು ಆಶ್ಚರ್ಯಗೊಳಿಸಿದೆ. ಈ ಪ್ರಕರಣದಲ್ಲಿ ಕಾನೂನು ಮಂತ್ರಿ ಮತ್ತು ಇತರೆ ಸರಕಾರಿ ಅಧಿಕಾರಿಗಳು ವಿಚಾರಣಾ ಆಯೋಗವನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಪೋರ್ಚುಗಲ್ ರಾಷ್ಟ್ರಪತಿ ಮಾರ್ಸಲೊ ರೆಬೆಲೊ ಡಿ ಸೂಸಾ ಇವರು, ಈ ಪ್ರಕರಣದಲ್ಲಿ ಚರ್ಚಗಳನ್ನು ಕೂಡ ಜವಾಬ್ದಾರ ಮಾಡಬೇಕು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಚರ್ಚಗಳಿಂದ ಇಂತಹ ಪಾದ್ರಿಗಳನ್ನು ರಕ್ಷಿಸಲಾಗುತ್ತಿರುವುದರಿಂದ ಇಂತಹ ಘಟನೆಗಳನ್ನು ನಿಲ್ಲಿಸುವ ಬದಲಾಗಿ ಅಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದೆ; ಆದರೆ ಅವುಗಳನ್ನು ನಿಲ್ಲಿಸಲು ಯಾರೂ ಪ್ರಯತ್ನಿಸುವುದಿಲ್ಲ ಎನ್ನುವುದನ್ನು ಗಮನಿಸಬೇಕು ! ಜಗತ್ತಿನಾದ್ಯಂತ ಕಳೆದ ಅನೇಕ ದಶಕಗಳಿಂದ ಇದೇ ಪರಿಸ್ಥಿತಿಯಿದೆ; ಆದರೆ ಈ ವಿಷಯದಲ್ಲಿ ಭಾರತದ ಪ್ರಸಾರ ಮಾಧ್ಯಮಗಳು, ದೈನಂದಿನ ಪತ್ರಿಕೆಗಳು, ಮಾನವ ಹಕ್ಕುಗಳ ಸಂಘಟನೆ, ಜಾತ್ಯತೀತವಾದಿಗಳು ಮುಂತಾದ ಜನರು ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕು ! ‘ಪಾದ್ರಿಯೆಂದರೆ ವಾಸನಾಂಧ ವ್ಯಕ್ತಿ’, ಎಂದೇ ಜಗತ್ತಿನಾದ್ಯಂತ ಅವರ ಗುರುತು ನಿರ್ಮಾಣವಾದರೆ ಆಶ್ಚರ್ಯ ಪಡಬಾರದು ! |