ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ಭಕ್ತಿಯೋಗ, ಕರ್ಮಯೋಗ ಮತ್ತು ಜ್ಞಾನಯೋಗದ ಕೆಲವು ತತ್ತ್ವಗಳು ಇರುವುದರಿಂದ ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ‘ಸ್ವಭಾವದೋಷ ನಿರ್ಮೂಲನೆ, ಅಹಂ-ನಿರ್ಮೂಲನೆ, ನಾಮಜಪ, ಸತ್ಸಂಗ, ಸತ್ಸೇವೆ, ಭಕ್ತಿಭಾವ, ಸತ್‌ಗಾಗಿ ತ್ಯಾಗ ಮತ್ತು ಇತರರ ಬಗ್ಗೆ ಪ್ರೀತಿ (ನಿರಪೇಕ್ಷ ಪ್ರೀತಿ) ಈ ಅಷ್ಟಾಂಗ ಸಾಧನೆಗನುಸಾರ ಸಾಧನೆಯನ್ನು ಮಾಡುವಾಗ ಸಾಧಕರ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗುತ್ತದೆ. ಗುರುಕೃಪಾಯೋಗಾನುಸಾರ ಒಟ್ಟು ೧೨೨ ಸಾಧಕರು ಸಂತರಾಗಿದ್ದಾರೆ ಮತ್ತು ೧ ಸಾವಿರದ ೮೭ ಸಾಧಕರ ಪ್ರವಾಸ ಆ ದಿಕ್ಕಿನಲ್ಲಿ ನಡೆದಿದೆ. ಗುರುಕೃಪಾಯೋಗದಲ್ಲಿ ಭಕ್ತಿಯೋಗ, ಕರ್ಮಯೋಗ ಮತ್ತು ಜ್ಞಾನಯೋಗಗಳೆಂಬ ಮೂರು ಪ್ರಮುಖ ಸಾಧನಾಮಾರ್ಗಗಳ ಕೆಲವು ಸಾಧನಗಳನ್ನು ಒಳಗೊಂಡಿರುವುದೇ, ಸಾಧಕರ ಶೀಘ್ರ ಉನ್ನತಿಗೆ ಕಾರಣವಾಗಿದೆ. ಇದರ ವಿವರಣೆಯನ್ನು ಮುಂದೆ ಕೊಡಲಾಗಿದೆ.

೧. ಇಲ್ಲಿ ಕೊಟ್ಟಿರುವ ಕೋಷ್ಟಕದ ಕೆಲವು ಭಾಗಗಳ ವಿಶ್ಲೇಷಣೆ

೧ ಅ. ಸ್ವಭಾವದೋಷ-ನಿರ್ಮೂಲನೆ ಮತ್ತು ಗುಣ-ಸಂವರ್ಧನೆ, ಹಾಗೆಯೇ ಅಹಂ-ನಿರ್ಮೂಲನೆ : ಜ್ಞಾನಯೋಗದಲ್ಲಿ ಮುಖ್ಯವಾಗಿ ‘ನಾನು ಎಂಬುದನ್ನು ಮರೆಯುವುದಿರುತ್ತದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಯತ್ನಿಸುವುದರಿಂದ ‘ನಾನುವನ್ನು ಮರೆಯುವ ಸಾಧನೆಯಾಗುತ್ತದೆ. ಗುಣಗಳ ಸಂವರ್ಧನೆ ಮಾಡುವಾಗಲೂ ನಮ್ಮಲ್ಲಿನ ಸ್ವಭಾವದೋಷಗಳು ಮತ್ತು ಅಹಂ ತಾವಾಗಿಯೂ ನಿರ್ಮೂಲನೆಯಾಗುತ್ತಿರುತ್ತವೆ, ಉದಾ. ‘ಪ್ರೇಮಭಾವ ಈ ಗುಣವನ್ನು ಅಳವಡಿಸಿಕೊಳ್ಳುವಾಗ ನಮ್ಮಲ್ಲಿರುವ ‘ಸಿಟ್ಟು ತಾನಾಗಿಯೇ ಕಡಿಮೆಯಾಗತೊಡಗುತ್ತದೆ. ಆದುದರಿಂದ ಇದು ಜ್ಞಾನಯೋಗವಾಗಿದೆ.

೧ ಆ. ಸತ್ಸಂಗ : ಇದರಿಂದಾಗಿ ಅಧ್ಯಾತ್ಮದ ಜ್ಞಾನವು ಸಿಗುತ್ತದೆ, ಹಾಗೆಯೇ ‘ನನಗೆ ಇತರರಿಂದ ಕಲಿಯಬೇಕು, ಎಂಬ ಅರಿವು ಇರುವುದರಿಂದ ‘ನನ್ನತನವು ನಾಶವಾಗಲು ಸಹಾಯವಾಗುತ್ತದೆ. ಆದುದರಿಂದ ಇದು ಜ್ಞಾನಯೋಗವಾಗಿದೆ.

೧ ಇ. ಸತ್‌ಗಾಗಿ ತ್ಯಾಗ : ಇದರಲ್ಲಿ ಸಮರ್ಪಣೆಯ ವೃತ್ತಿಯು ಇರುವುದರಿಂದ ಈ ಮೂಲಕ ‘ನಾನು ಎಂಬುದನ್ನು ಮರೆಯಲು ಇಲ್ಲಿ ಸಾಧ್ಯವಾಗುತ್ತದೆ. ಆದುದರಿಂದ ಇದು ಜ್ಞಾನಯೋಗವಾಗಿದೆ.

೧ ಈ. ಸತ್ಸೇವೆ : ‘ಸತ್ಸೇವೆಯು ಗುರುಗಳ ಸೇವೆ ಅಥವಾ ಧರ್ಮಸೇವೆಯಾಗಿದೆ ಮತ್ತು ಗುರುಗಳು ಅಥವಾ ದೇವರು ಅದನ್ನು ನನ್ನಿಂದ ಮಾಡಿಸಿಕೊಳ್ಳುತ್ತಿದ್ದಾರೆ, ಎಂಬ ಭಾವ ಇರುವುದರಿಂದ ನಾವು ಮಾಡುವ ಸತ್ಸೇವೆಯ ಕರ್ಮವು ‘ನಿಷ್ಕಾಮ ಕರ್ಮವಾಗುತ್ತದೆ; ಆದುದರಿಂದ ಇದು ಕರ್ಮಯೋಗವಾಗಿದೆ.

-ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೨.೪.೨೦೨೨)