ಅಮೇರಿಕಾದಲ್ಲಿ ಗಾಳಿಯಲ್ಲಿ ಹಾರಾಡುವ ವಸ್ತು ಪತ್ತೆ !

ವಾಶಿಂಗ್ಟನ್ – ಅಮೇರಿಕಾದಲ್ಲಿ ಕೆಲವು ದಿನಗಳ ಹಿಂದೆ ಬೇಹುಗಾರಿಕೆ ನಡೆಸುವ ಬಲೂನ್ ಕಂಡು ಬಂದ ಬಳಿಕ, ಈಗ ಅಲಾಸ್ಕದಲ್ಲಿ ಪುನಃ ಗಾಳಿಯಲ್ಲಿ ಹಾರಾಡುವ ಒಂದು ವಸ್ತು ಕಂಡು ಬಂದಿದೆ. ಈ ವಸ್ತು ಗಾಳಿಯಲ್ಲಿ 40 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿತ್ತು. ತದನಂತರ ಅಮೇರಿಕಾದ ಯುದ್ಧ ವಿಮಾನ ಈ ವಸ್ತುವನ್ನು ಕೆಡವಿತು. ಈ ವಸ್ತುವನ್ನು ಯಾರು ಕಳುಹಿಸಿದರು ? ಎಲ್ಲಿಂದ ಬಂದಿತು ? ಮತ್ತು ಅದನ್ನು ಕಳುಹಿಸುವುದರ ಹಿಂದಿನ ಉದ್ದೇಶ ಏನು ? ಈ ವಿಷಯದ ಮಾಹಿತಿ ಇಂದಿಗೂ ಅಮೆರಿಕಾಗೆ ಗೊತ್ತಾಗುತ್ತಿಲ್ಲ. ಅಮೇರಿಕಾದ ಇದೇ ಯುದ್ಧ ವಿಮಾನ ಇದೇ ರೀತಿ ಬೇಹುಗಾರಿಕೆ ನಡೆಸುವ ಬಲೂನ್ ನನ್ನು ಇತ್ತೀಚೆಗೆ ನಷ್ಟ ಗೊಳಿಸಿತ್ತು.

ಅಮೇರಿಕಾದ ಗುಪ್ತಚರ ಇಲಾಖೆ ತಿಳಿಸಿದಂತೆ, ಚೀನಾ ಬೇಹುಗಾರಿಕೆಯ ಬಲೂನ್ ಮೂಲಕ ಜಗತ್ತಿನ ಎಲ್ಲ ದೇಶಗಳ ಸೈನ್ಯ ನೆಲೆಗಳ ಮೇಲೆ ಗಮನವಿಡುತ್ತಿದೆ. ಚೀನಾ ಈ ರೀತಿ ಬೇಹುಗಾರಿಕೆ ನಡೆಸಿರುವ ದೇಶಗಳಲ್ಲಿ ಭಾರತವೂ ಸೇರಿದೆ.