‘ಬಿಬಿಸಿ’ಯಿಂದ ಮಹಿಳಾ ಭಯೋತ್ಪಾದಕೀಯ ಬಗ್ಗೆ ಸಹಾನುಭೂತಿ ತೋರಿಸುವ ಸಾಕ್ಷ್ಯಚಿತ್ರ ಪ್ರಸಾರ !

 ವಿವಾದಿತ ‘ಬಿಬಿಸಿ’ಗೆ ಈಗ ಭಯೋತ್ಪಾದಕಿ ಶಮಿಮಾ ಬೇಗಮ್ ಇವರ ಬಗ್ಗೆ ಅನುಕಂಪ !

ಬ್ರಿಟನ್ನಿನ ನಾಗರೀಕರಿಂದ ವಿರೋಧ : ಬಿಬಿಸಿಯ ಮೇಲೆ ನಿಷೇಧ ಹೇರುವ ಸಿದ್ಧತೆಯಲ್ಲಿ !

ಶಮಿಮಾ ಬೇಗಂ

ಲಂಡನ (ಬ್ರಿಟನ) – ವಿವಾದಿತ ‘ಬಿಬಿಸಿ’ಯಿಂದ ಗುಜರಾತ ಗಲಭೆಯ ಆಧಾರಿತ ‘ಇಂಡಿಯಾ-ದಿ ಮೋದಿ ಕ್ವೆಶ್ಚನ್’, ಎಂಬ ಭಾರತ ದ್ವೇಷಿ ಸಾಕ್ಷ್ಯಚಿತ್ರ ಪ್ರಸಾರ ಮಾಡಿದ ನಂತರ ಈಗ ಅದೇ ಬಿಬಿಸಿಗೆ ಇಸ್ಲಾಮಿಕ್ ಸ್ಟೇಟ್ ಈ ಜಿಹಾದಿ ಭಯೋತ್ಪಾದಕ ಸಂಘಟನೆಯಲ್ಲಿ ಸೇರಲು ಬ್ರಿಟನ್ನಿನಿಂದ ಸೀರಿಯಾಗೆ ಓಡಿಹೋಗಿದ್ದ ಶಮಿಮಾ ಬೇಗಂ ಬಗ್ಗೆ ಅನುಕಂಪ ಹುಟ್ಟಿದೆ. ಬಿಬಿಸಿಯು ಆಕೆಯ ಜೀವನಾಧಾರಿತ ‘ದ ಶಮಿಮಾ ಬೇಗಂ ಸ್ಟೋರಿ’ ಈ ಸಾಕ್ಷ್ಯಚಿತ್ರ ಪ್ರಸಾರ ಮಾಡಿದೆ.

ಶಮಿಮಾ ಈಕೆಯು ೨೦೧೫ ರಲ್ಲಿ ಅಂದರೆ ೧೫ ನೇ ವಯಸ್ಸಿನಲ್ಲಿ ಆಕೆಯ ಇಬ್ಬರು ಗೆಳತಿಯರ ಜೊತೆ ಬ್ರಿಟನ್ನಿನಿಂದ ಓಡಿ ಹೋಗಿ ಸಿರಿಯಾದಲ್ಲಿನ ಇಸ್ಲಾಮಿಕ್ ಸ್ಟೇಟ್ ಈ ಭಯೋತ್ಪಾದಕ ಸಂಘಟನೆಯಲ್ಲಿ ಸಹಭಾಗಿಯಾಗಿದ್ದಳು. ಸಿರಿಯಾದಲ್ಲಿರುವಾಗ ಆಕೆಯನ್ನು ‘ಜಿಹಾದಿ ಬ್ರೈಡ್’ (ಜಿಹಾದಿ ವಧು) ಈ ಹೆಸರಿನಿಂದ ಗುರುತಿಸುತ್ತಿದ್ದರು. ಈ ಸಾಕ್ಷ್ಯಚಿತ್ರದಲ್ಲಿ ಆಕೆಯ ‘ಸಂಘರ್ಷ’ ಹೇಳುವ ಪ್ರಯತ್ನ ಮಾಡಿದ್ದಾರೆ. ೯೦ ನಿಮಿಷದ ಈ ಸಾಕ್ಷ್ಯಚಿತ್ರದಲ್ಲಿ ಆಕೆಯ ಸಿರಿಯಾದವರೆಗಿನ ಪ್ರವಾಸ ಹೇಗಿತ್ತು ? ಅದರಿಂದ ಹೊರಬರಲು ಆಕೆ ಹೇಗೆ ಸಂಘರ್ಷ ಮಾಡಿದಳು ? ಮುಂತಾದ ವಿಷಯದ ಮಾಹಿತಿ ನೀಡಿ ‘ಸಿರಿಯಾಗೆ ಹೋಗುವ ನಿರ್ಣಯದ ಬಗ್ಗೆ ಶಮಿಮಾಗೆ ದುಃಖವಾಗುತ್ತಿದ್ದು ಅದರ ಬಗ್ಗೆ ಈಗ ಪಶ್ಚಾತಾಪವಾಗುತ್ತಿದೆ’, ಹೀಗೆ ಕೂಡ ಈ ಸಾಕ್ಷ್ಯಚಿತ್ರದಲ್ಲಿ ಚಿತ್ರಿಸಲಾಗಿದೆ.

ಇಸ್ಲಾಮಿಕ್ ಸ್ಟೇಟ್ ಸಂಘಟನೆಯಲ್ಲಿ ಸಕ್ರಿಯವಾದ ನಂತರ ಬ್ರಿಟನ್ ನಿಂದ ಶಮಿಮಾದ ನಾಗರಿಕತ್ವ ರದ್ದುಪಡಿಸಿದ್ದರು. ಶಮಿಮಾದ ಕುಟುಂಬ ಮೂಲತಃ ಬಾಂಗ್ಲಾದೇಶಿಯಾಗಿದ್ದು ಅವರು ಬ್ರಿಟನ್ ನಾಗರೀಕರಾಗಿದ್ದರು.

ಬ್ರಿಟನ್ನಿನಲ್ಲಿನ ನಾಗರಿಕರು ಬಿಬಿಸಿಯ ಮೇಲೆ ನಿಷೇಧ ಹೇರುವ ಸಿದ್ಧತೆಯಲ್ಲಿ !

ಈ ಸಾಕ್ಷ್ಯಚಿತ್ರಕ್ಕೆ ತೀವ್ರ ವಿರೋಧವಾಗುತ್ತಿದೆ. ‘ಬಬಿಸಿಯ ಈ ಸಾಕ್ಷ್ಯಚಿತ್ರ ಎಂದರೆ ಶಮಿಮಾ ಬಗ್ಗೆ ಸಹಾನುಭೂತಿ ನಿರ್ಮಾಣ ಮಾಡುವ ಪ್ರಯತ್ನವಾಗಿದೆ’, ಎಂದು ಬ್ರಿಟನ್ನಿನ ನಾಗರಿಕರು ಆರೋಪಿಸಿದ್ದಾರೆ. ‘ಬಿಬಿಸಿ’ ಈ ಮಾಧ್ಯಮದ ಕಂಪನಿ ಮೂಲತಃ ಬ್ರಿಟನ್ನಿನದಾಗಿದೆ. ಆದ್ದರಿಂದ ಈಗ ತನ್ನ ದೇಶದಲ್ಲಿಯೇ ಬಿಬಿಸಿಗೆ ತೀವ್ರ ವಿರೋಧ ಆಗುತ್ತಿದೆ. ಬ್ರಿಟನಿನಲ್ಲಿನ ಅನೇಕ ನಾಗರೀಕರು ಬಿಬಿಸಿಯ ಮೇಲೆ ನಿಷೇಧ ಹೇರುವುದಕ್ಕಾಗಿ ಕೈ ಚಾಚಿ ಕುಳಿತಿವೆ. ‘ಶಮಿಮಾ ಬೇಗಂಗೆ ಆಕೆಯ ಕೃತ್ಯದ ಬಗ್ಗೆ ಸ್ವಲ್ಪ ಕೂಡ ಪಶ್ಚಾತಾಪ ಆಗಿರುವುದು ನಮಗೆ ಕಾಣುವುದಿಲ್ಲ. ಹಾಗಾದರೆ ‘ಬಿಬಿಸಿ’ಯಿಂದ ಆಕೆಯ ಬಗ್ಗೆ ಸಹಾನುಭೂತಿ ಏಕೆ ನಿರ್ಮಾಣ ಮಾಡುತ್ತಿದ್ದಾರೆ ?’, ಎಂದು ಇಲ್ಲಿಯ ನಾಗರೀಕರು ಪ್ರಶ್ನೆ ಉಪಸ್ಥಿತಗೊಳಿಸಿದ್ದಾರೆ.

‘ಭಯೋತ್ಪಾದಕ ಸಂಘಟನೆಯಲ್ಲಿ ಸಹಭಾಗಿ ಆಗಿರುವುದು ನನಗೆ ಪಶ್ಚಾತಾಪವಿದೆ !’ (ಅಂತೆ) – ಶಮಿಮಾ

ಈ ಬಗ್ಗೆ ಬಿಬಿಸಿಯ ಜೊತೆ ಮಾತನಾಡುವಾಗ ಶಮಿಮಾ ಬೇಗಂ, ”ಭಯೋತ್ಪಾದಕ ಸಂಘಟನೆಯಲ್ಲಿ ಸಹಭಾಗಿಯಾದ ನಂತರ ನನಗೆ ಪಶ್ಚಾತಾಪ ಆಗುತ್ತಿದೆ. (ಇದರ ಮೇಲೆ ಯಾರು ವಿಶ್ವಾಸ ಇಡುವರು ? – ಸಂಪಾದಕರು) ನಾನು ಭಯೋತ್ಪಾದಕರ ವಿರುದ್ಧ ಬ್ರಿಟನ್ ಗೆ ಸಹಾಯ ಮಾಡಲು ಇಚ್ಚಿಸುತ್ತೇನೆ. ನನ್ನ ಉದಾಹರಣೆ ಸಮಾಜಕ್ಕಾಗಿ ಉಪಯೋಗವಾಗಬಹುದು.” ಎಂದು ಹೇಳಿದ್ದಾಳೆ.

ಸಂಪಾದಕರ ನಿಲುವು

* ಇಂತಹ ಬಿಬಿಸಿಯ ಮೇಲೆ ಜಗತ್ತಿನಾದ್ಯಂತ ನಿಷೇಧ ಹೇರಲು ಭಾರತ ನೇತೃತ್ವ ವಹಿಸುವುದು ಅವಶ್ಯಕವಾಗಿದೆ !

* ಭಾರತ ಮತ್ತು ಹಿಂದೂ ಇವರ ಬಗ್ಗೆ ಸತತವಾಗಿ ಅವಮಾನಿಸುವ ಬಿಬಿಸಿಯನ್ನು ಭಾರತದ ನಾಗರಿಕರು ಕೂಡ ಬ್ರಿಟನ್ನಿನಲ್ಲಿನ ನಾಗರೀಕರಂತೆ ನಿಷೇಧ ಹೇರಲು ದೃಢ ನಿರ್ಧಾರ ಕೈಗೊಳ್ಳುವುದು ಅಪೇಕ್ಷಿತವಾಗಿದೆ !