ಭೂಕಂಪದ ನಂತರ ಜನರಿಗೆ ನಮ್ಮಿಂದ ಹೇಳಿಕೊಳ್ಳುವಷ್ಟು ಸಹಾಯ ಸಿಗಲಿಲ್ಲ ! – ರಾಷ್ಟ್ರಾಧ್ಯಕ್ಷ ಏರ್ದೊಗನ್ ಇವರ ಸ್ವೀಕೃತಿ

ಮೃತರ ಸಂಖ್ಯೆ ೧೫ ಸಾವಿರಕ್ಕಿಂತಲೂ ಹೆಚ್ಚು

ಅಂಕಾರ (ಟರ್ಕಿ) – ಟರ್ಕಿ ಮತ್ತು ಸಿರಿಯಾದಲ್ಲಿ ಇಲ್ಲಿಯವರೆಗೆ ಭೂಕಂಪದಲ್ಲಿ ೧೫ ಸಾವಿರಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ, ಹಾಗೂ ೪೦ ಸಾವಿರಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಸಿರಿಯಾದಲ್ಲಿ ೩ ಲಕ್ಷಕ್ಕಿಂತಲೂ ಹೆಚ್ಚಿನ ಜನರು ಮನೆ ಕಳೆದುಕೊಂಡಿದ್ದಾರೆ. ಜಗತ್ತಿನಾದ್ಯಂತ ೭೦ ಕ್ಕಿಂತಲೂ ಹೆಚ್ಚಿನ ದೇಶಗಳು ಸಹಾಯಕ್ಕಾಗಿ ಮುಂದೆ ಬಂದಿರುವಾಗ ಟರ್ಕಿ ರಾಷ್ಟ್ರಾಧ್ಯಕ್ಷ ರೆಸೇಪ ತಯ್ಯಪ ಏದೋರ್ಗನ್ ಇವರು, ‘ಭೂಕಂಪದ ನಂತರ ನಮ್ಮಿಂದ ಹೇಳಿಕೊಳ್ಳುವ ಹಾಗೆ ಸಹಾಯ ಆಗಲಿಲ್ಲ’ ಎಂದು ಒಪ್ಪಿಕೊಂಡಿದ್ದಾರೆ. ಭೂಕಂಪದ ನಂತರ ಅನೇಕ ಪ್ರದೇಶದಲ್ಲಿನ ಜನರಿಗೆ ಸಹಾಯಕ್ಕಾಗಿ ತಡವಾಯಿತು ಹಾಗೂ ಸಹಾಯ ಸಾಹಿತ್ಯ ಸಮಯಕ್ಕೆ ಸರಿಯಾಗಿ ಸಿಗದೇ ಇರುವ ದೂರುಗಳು ಬಂದಿವೆ. ಸರಕಾರ ನಿರ್ಲಕ್ಷಿಸಿದೆ ಎಂದೂ ಸಹ ಆರೋಪ ಮಾಡಲಾಗುತ್ತಿದೆ. ಅದರ ನಂತರ ಏದೊರ್ಗನ್ ಇವರು, ಸರಕಾರ ಎಲ್ಲಾ ಜನರಿಗೆ ಸಹಾಯ ಮಾಡುವುದಕ್ಕಾಗಿ ಸಾಧ್ಯವಾದಷ್ಟು ಎಲ್ಲಾ ಪ್ರಯತ್ನ ಮಾಡುತ್ತಿದೆ. ದೇಶದಲ್ಲಿ ಯಾರು ನೀರಾಶ್ರಿತರಾಗಿ ಉಳಿಯುವುದಿಲ್ಲ ಎಂದು ಹೇಳಿದರು.

ಭಾರತದ ೧೦ ನಾಗರೀಕರು ಟರ್ಕಿಯಲ್ಲಿ ಸಿಲುಕಿದ್ದಾರೆ !

ಭಾರತದ ವಿದೇಶಾಂಗ ಸಚಿವಾಲಯವು, ಟರ್ಕಿಯಲ್ಲಿನ ಭೂಕಂಪದ ನಂತರ ಒಬ್ಬ ಭಾರತೀಯ ನಾಗರಿಕ ನಾಪತ್ತೆಯಾಗಿದ್ದಾರೆ ಹಾಗೂ ೧೦ ಭಾರತೀಯರು ಟರ್ಕಿಯ ದುರ್ಗಮ ಪ್ರದೇಶದಲ್ಲಿ ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದೆ.

ಟರ್ಕಿಯಲ್ಲಿ ಟ್ವಿಟರ್ ಬಂದ !

ಟರ್ಕಿಯಲ್ಲಿ ಟ್ವೀಟರ್ ನಿಲ್ಲಿಸಲಾಗಿದೆ. ಟರ್ಕಿ ಸರಕಾರದಿಂದ ಕಳೆದ ವರ್ಷ ಅಕ್ಟೋಬರ್ ನಲ್ಲಿ ಸಾಮಾಜಿಕ ಮಾಧ್ಯಮಗಳಿಂದ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ವಿಧೇಯಕ ಅಂಗೀಕರಿಸಿತ್ತು.

ಭೂಕಂಪದಿಂದ ಟರ್ಕಿ ೧೦ ಅಡಿ ಮುಂದೆ ಸರಿದಿದೆ !

ಟರ್ಕಿ ಭೂಗರ್ಭದಲ್ಲಿನ ೩ ಟೆಕ್ಟೋನಿಕ ಪ್ಲೇಟ್ಸ್ ನಲ್ಲಿದೆ. ಈ ಪ್ಲೇಟ್ಸ್ ಎಂದರೆ ಅನಾಟೋಲಿಯನ್ ಟೆಕ್ಟೋನಿಕ, ಯುರೇಶಿಯನ್ ಮತ್ತು ಅರೇಬಿಯನ್ ಪ್ಲೇಟ್ ಆಗಿದೆ. ತಜ್ಷರ ಅಭಿಪ್ರಾಯದಲ್ಲಿ, ಅನಾಟೋಲಿಯನ್ ಟೆಕ್ಟೋನಿಕ ಪ್ಲೆಟ್ ಮತ್ತು ಅರೇಬಿಯನ್ ಪ್ಲೇಟ್ ಪರಸ್ಪರ ೨೨೫ ಕಿಲೋಮೀಟರ್ ದೂರ ಸರಿದಿದೆ. ಆದ್ದರಿಂದ ಟರ್ಕಿಯು ಅದರ ಭೌಗೋಳಿಕ ಸ್ಥಾನದಿಂದ ೧೦ ಅಡಿ ಮುಂದೆ ಸರಿದಿದೆ.

ಇಟಲಿಯ ಭೂಕಂಪ ವಿಜ್ಞಾನಿ ಡಾ. ಕಾರ್ಲೋ ಡೊಗ್ಲಿಓನಿ ಇವರು, ಟೆಕ್ಟೋನಿಕ ಪ್ಲೇಟ್ಸ್ ನಲ್ಲಿನ ಈ ಬದಲಾವಣೆಯಿಂದ ಟರ್ಕಿ ಸೀರಿಯಾಗಿಂತ ಸುಮಾರು ೨೦ ಅಡಿಗಿಂತಲೂ ಹೆಚ್ಚು ಮುಳುಗಿರಬಹುದು ಎಂದು ಹೇಳಿದ್ದಾರೆ.