ಕಾರವಾರದ ಪಂಚಶಿಲ್ಪಕಾರ ಪೂ. ನಂದಾ ಆಚಾರಿ (ಗುರುಜಿ)ಇವರ ಸಂತಪದವಿಯಲ್ಲಿ ವಿರಾಜಮಾನರಾಗುವ ಸಮಾರಂಭದಲ್ಲಿ ಶ್ರೀ. ನಿಷಾದ ದೇಶಮುಖ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ಪೂ. ನಂದಾ ಆಚಾರಿ (ಗುರೂಜಿ)

ಕಾರವಾರದ ಪಂಚಶಿಲ್ಪಕಾರರಾದ ಪೂ. ನಂದಾ ಆಚಾರಿ (ಗುರುಜಿ)  ೩.೧೧.೨೦೨೨ ರಂದು ಸಂತಪದವಿಯಲ್ಲಿ ವಿರಾಜಮಾನರಾದರು. ಸನಾತನದ ಸೂಕ್ಷ್ಮ ಜ್ಞಾನಪ್ರಾಪ್ತವನ್ನು ಮಾಡಿಕೊಳ್ಳುವ ಸಾಧಕ ಶ್ರೀ. ನಿಷಾದ ದೇಶಮುಖ (ಆಧ್ಯಾತ್ಮಿಕ ಮಟ್ಟ ಶೇ. ೬೨ ) ಇವರು ಈ ಸಮಾರಂಭದಲ್ಲಿ ಮಾಡಿದ ಸೂಕ್ಷ್ಮ ಪರೀಕ್ಷಣೆ ಮತ್ತು ಪೂ. ನಂದಾ ಆಚಾರಿ ಇವರ ಆಧ್ಯಾತ್ಮಿಕ ವೈಶಿಷ್ಟ್ಯಗಳ ಕುರಿತು ಶ್ರೀ. ನಿಷಾದ ಇವರಿಗೆ ಲಭಿಸಿದ ಈಶ್ವರೀ ಜ್ಞಾನದ ಅಂಶಗಳನ್ನು ಕಳೆದ ಸಂಚಿಕೆಯಲ್ಲಿ ಕೊಡಲಾಗಿತ್ತು. ಇಂದು ಅದರ ಮುಂದಿನ ಭಾಗ ನೋಡೋಣ

ಶ್ರೀ. ನಿಷಾದ ದೇಶಮುಖ

ಸಾಧನೆಯಲ್ಲಿನ ಹಂತಗಳು

ಚೈತನ್ಯದ ಸ್ತರ, ಎಂದರೆ ಸಗುಣ-ನಿರ್ಗುಣ ಸ್ಥಿತಿ : ಮೂರ್ತಿ ಕಲೆಯ ಮಾಧ್ಯಮದಿಂದ ತಪಸಾಧನೆಯನ್ನು ಮಾಡಿ ಪೂ. ಆಚಾರಿಯವರು ಶಕ್ತಿಯಿಂದ ಚೈತನ್ಯದ ಹಂತದವರೆಗೆ ಬಂದಿದ್ದರು.ಚೈತನ್ಯದ ಸ್ತರವೆಂದರೆ, ಸಗುಣ-ನಿರ್ಗುಣ ಸ್ಥಿತಿಯಲ್ಲಿರುವುದು.

೧ ಉ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್‌ ಆಠವಲೆಯವರ ಸಂದೇಶದಿಂದ ಪೂ. ಆಚಾರಿಯವರು ಸಂತಪದವಿಯಲ್ಲಿ ವಿರಾಜಮಾನರಾದ ಬಗ್ಗೆ ಘೋಷಣೆಯಾದ ತಕ್ಷಣ ಸೂಕ್ಷ್ಮನಾದ ಕೇಳುವುದು ಮತ್ತು ಪೂ. ಆಚಾರಿಯವರ ಮೇಲೆ ಬಿಳಿ (ಪ್ರಕಾಶ) ಕಿರಣಗಳು ಪ್ರಕ್ಷೇಪಿತವಾಗುವುದು : ಪೂ. ಆಚಾರಿಯವರ ಸಂದರ್ಶನವನ್ನು ತೆಗೆದುಕೊಳ್ಳುತ್ತಿರುವಾಗಲೇ ಸೌ. ವಿದ್ಯಾ ಶಾನಭಾಗ ಇವರು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ ಆಠವಲೆಯವರ ಸಂದೇಶವನ್ನು ಓದಿದರು. ಈ ಸಂದೇಶದಲ್ಲಿ ಪೂ. ಆಚಾರಿಯವರು ಸಂತಪದವಿಯಲ್ಲಿ ವಿರಾಜಮಾನರಾದ ಬಗ್ಗೆ ಘೋಷಿಸಲಾಯಿತು. ಸೌ. ವಿದ್ಯಾ ಶಾನಭಾಗ ಇವರು ಸಂದೇಶವನ್ನು ಓದುತ್ತಿರುವಾಗ ನನಗೆ ಸೂಕ್ಷ್ಮದಿಂದ ನಾದ ಕೇಳುತ್ತಿತ್ತು ಮತ್ತು ಬ್ರಹ್ಮಾಂಡದಿಂದ ಬಿಳಿ (ಪ್ರಕಾಶ) ಕಿರಣಗಳು ಪೂ. ಆಚಾರಿಯವರ ಮೇಲೆ ಪ್ರಕ್ಷೇಪಿತವಾಗತೊಡಗಿತು. ಸಂತಪದವಿಯಲ್ಲಿ ತಲುಪಿದ ಘೋಷಣೆಯಾದ ತಕ್ಷಣ ಸೂಕ್ಷ್ಮದಿಂದ ಕೇಳಿಸುವ ನಾದದಲ್ಲಿ ಮತ್ತು ಸೂಕ್ಷ್ಮ ಪ್ರಕಾಶದಲ್ಲಿ ಒಮ್ಮಿಂದೊಮ್ಮೆಲೆ ಹೆಚ್ಚಳವಾಯಿತು.

೧ ಉ ೧. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ ಆಠವಲೆಯವರು ಪೂ. ಆಚಾರಿಯವರ ಸಂತಪದವಿಯನ್ನು ಘೋಷಿಸಿ ಅವರನ್ನು ಚೈತನ್ಯದ ಸ್ತರದಿಂದ ಆನಂದದ ಸ್ಥಿತಿಯ ಕಡೆಗೆ ಒಯ್ಯುವುದು : ಮೂರ್ತಿಕಲೆಯ ಮಾಧ್ಯಮದಿಂದ ತಪಸಾಧನೆಯನ್ನು ಮಾಡಿ ಪೂ. ಆಚಾರಿಯವರು ಶಕ್ತಿಯಿಂದ ಚೈತನ್ಯದ ಹಂತದವರೆಗೆ ಬಂದಿದ್ದರು.ಚೈತನ್ಯದ ಸ್ತರವೆಂದರೆ, ಸಗುಣ-ನಿರ್ಗುಣ ಸ್ಥಿತಿಯಲ್ಲಿರುವುದು. ಸಾಧಕರು ಕಠಿಣ ವ್ಯಷ್ಟಿ ಸಾಧನೆಯನ್ನು ಮಾಡಿ ಹೆಚ್ಚೆಚ್ಚು ಸಗುಣ-ನಿರ್ಗುಣ ಸ್ಥಿತಿಯವರೆಗೆ ತಲುಪಬಹುದು. ಅದರ ಮುಂದಿನ ಹಂತದಲ್ಲಿ ಹೋಗಲು ಗುರುಕೃಪೆಯೇ ಆವಶ್ಯಕವಾಗಿರುತ್ತದೆ. ಪೂ. ಆಚಾರಿಯವರಿಗೆ ಸಗುಣ-ನಿರ್ಗುಣ ಸ್ಥಿತಿಯಲ್ಲಿ ಮುಂದೆ ನಿರ್ಗುಣ-ಸಗುಣ ಸ್ಥಿತಿಯ ಕಡೆಗೆ, ಎಂದರೆ ಆನಂದದ ಸ್ಥಿತಿಯ ಕಡೆಗೆ ಒಯ್ಯಲು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ ಆಠವಲೆಯವರು ಅವರಿಗೆ ಸಂತಪದವಿಯನ್ನು ಘೋಷಿಸಿದರು. ಆಕಾಶತತ್ತ್ವದ (ಸಂದೇಶವನ್ನು ಓದುವ) ಮಾಧ್ಯಮದಿಂದ ನಿರ್ಮಾಣವಾಗುತ್ತಿರುವ ಸೂಕ್ಷ್ಮ ನಾದವು ಕೇಳಿಸಿತು. ಮೂರ್ತಿಕಲೆಯು ತೇಜತತ್ತ್ವಕ್ಕೆ ಸಂಬಂಧಪಟ್ಟಿದೆ. ಆದ್ದರಿಂದ ಗುರುತತ್ತ್ವದ ಆಶೀರ್ವಾದವು ಪೂ. ಆಚಾರಿಯವರ ಮೇಲೆ ತೇಜತತ್ತ್ವದ ಮಾಧ್ಯಮ ದಿಂದ ಕಾರ್ಯನಿರತವಾಗಿರುವುದರಿಂದ ಈ ಪ್ರಕ್ರಿಯೆಯು ಬಿಳಿ ಪ್ರಕಾಶದ ಜ್ಯೋತಿಯ ಮಾಧ್ಯಮದಿಂದ ಕಾಣಿಸಿತು.

೨. ಗುರುಕೃಪೆ : ಕಠಿಣ ವ್ಯಷ್ಟಿ ಸಾಧನೆಯನ್ನು ಮಾಡಿ ಸಾಧಕರು ಹೆಚ್ಚೆಚ್ಚು ಸಗುಣ-ನಿರ್ಗುಣ ಸ್ಥಿತಿಯ ವರೆಗೆ ತಲುಪಬಹುದು. ಅದರ ಮುಂದಿನ ಹಂತಕ್ಕೆ ಹೋಗಲು ಗುರುಕೃಪೆಯ ಆವಶ್ಯಕತೆ ಇರುತ್ತದೆ. ಪೂ. ಆಚಾರಿ ಇವರಿಗೆ ಸಗುಣ-ನಿರ್ಗುಣ ಸ್ಥಿತಿಯಿಂದ ಮುಂದೆ ನಿರ್ಗುಣ-ಸಗುಣ ಸ್ಥಿತಿಯ ಕಡೆಗೆ ಅಂದರೆ ಆನಂದದ ಸ್ಥಿತಿಯ ಕಡೆಗೆ ಕರೆದೊಯ್ಯಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವರ ಸಂತಪದವಿಯನ್ನು ಘೋಷಿಸಿದರು.

– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ, ಆಧ್ಯಾತ್ಮಿಕ ಮಟ್ಟ ಶೇ. ೬೨), ಸನಾತನ ಆಶ್ರಮ, ರಾಮನಾಥಿ, ಗೋವಾ. (೫.೧೧.೨೦೨೨, ಸಾಯಂಕಾಲ ೬.೩೦)

೧ ಊ. ಪೂ. ಪೃಥ್ವಿರಾಜ ಹಜಾರೆ ಇವರು ಪೂ. ಆಚಾರಿ ಇವರನ್ನು ಸನ್ಮಾನಿಸಿದಾಗ ‘ಅನೇಕ ದೇವತೆಗಳು ಹಾಗೆಯೇ ಅವರ ಗುರು ಶ್ರೀ ಬಾಬಾ ಮಹಾರಾಜರು ಆಶೀರ್ವಾದ ನೀಡಿದರು’, ಎಂದು ಸೂಕ್ಷ್ಮದಲ್ಲಿ ಕಾಣಿಸುವುದು : ಸಂತಪದವಿಯನ್ನು ಪ್ರಾಪ್ತಮಾಡಿಕೊಂಡ ಬಗ್ಗೆ ಘೋಷಣೆಯಾದ ನಂತರ ಸನಾತನದ ಸಂತರಾದ ಪೂ. ಪೃಥ್ವಿರಾಜ ಹಜಾರೆ ಇವರು ಹಾರವನ್ನು ಹಾಕಿ, ಶ್ರೀಫಲ ಮತ್ತು ಉಡುಗೊರೆಯನ್ನು ನೀಡಿ ಪೂ. ಆಚಾರಿ ಇವರನ್ನು ಸನ್ಮಾನಿಸಿದರು. ಸ್ಥೂಲದಿಂದ ಈ ಸನ್ಮಾನ ನಡೆದಿರುವಾಗ ‘ಸೂಕ್ಷ್ಮದಿಂದ ಅಸಂಖ್ಯ ದೇವತೆಗಳು ಪೂ. ಆಚಾರಿ ಇವರಿಗೆ ಆಶೀರ್ವಾದ ನೀಡುತ್ತಿದ್ದಾರೆ ಮತ್ತು ಪೂ. ಆಚಾರಿ ಇವರ ಗುರು ಶ್ರೀ ಬಾಬಾ ಮಹಾರಾಜರು ತಲೆಯ ಮೇಲೆ ಕೈಯಿಟ್ಟು ಅವರಿಗೆ ಆಶೀರ್ವಾದ ನೀಡುತ್ತಿದ್ದಾರೆ’, ಎಂಬ ದೃಶ್ಯವು ನನಗೆ ಕಾಣಿಸಿತು.

೧ ಊ ೧. ಸಂತಪದವಿಯು ಘೋಷಿತವಾದುದರಿಂದ ಪೂ. ಆಚಾರಿ ಇವರ ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯಿಂದ ವ್ಯಾಪಕ ಸಮಷ್ಟಿ ಸಂತಪದವಿಯ ಕಡೆಗೆ ಮಾರ್ಗಕ್ರಮಣ ಆರಂಭವಾದುದರಿಂದ ಅನೇಕ ದೇವತೆಗಳು ಮತ್ತು ಅವರ ಗುರುಗಳು ಆಶೀರ್ವಾದ ನೀಡುವುದು : ಸಂತಪದವಿಯು ಘೋಷಿತವಾಗುವ ಮುನ್ನ ಪೂ. ಆಚಾರಿಯವರ ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯು ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿತ್ತು. ಸಂತಪದವಿಯು ಘೋಷಿತ ವಾದುದರಿಂದ ಅವರ ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯಿಂದ ವ್ಯಾಪಕ ಸಮಷ್ಟಿಯ ಕಡೆಗೆ ಮಾರ್ಗಕ್ರಮಣ ಆರಂಭವಾಗಿದೆ. ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯೆಂದರೆ ‘ಶಿಷ್ಯತ್ವ’ ! ಇದರಲ್ಲಿ ಶಿಷ್ಯನು ಗುರುಪದವಿಯಲ್ಲಿದ್ದರೂ ಅವನು ಗುರುಗಳು ಕಲಿಸಿದ ಸಾಧನೆಯನ್ನು ಇತರರಿಗೆ ಕಲಿಸುತ್ತಾನೆ. ತದ್ವಿರುದ್ಧ ವ್ಯಾಪಕ ಸಮಷ್ಟಿ ಸಾಧನೆಯೆಂದರೆ ಸಮಷ್ಟಿ ಗುರುಗಳಾಗುವುದು. ಇದರಲ್ಲಿ ಜೀವವು ಸಮಷ್ಟಿ ಗುರುವಾಗಿ ಪ್ರಕೃತಿ ಮತ್ತು ಕಾಲಗಳಿಗನುಸಾರ ಸಮಷ್ಟಿಗಾಗಿ ಆವಶ್ಯಕವಾದ ಬೋಧನೆಯನ್ನು ನೀಡುತ್ತದೆ.

ಇಲ್ಲಿಯವರೆಗೆ ಪೂ. ಆಚಾರಿ ಇವರು ವ್ಯಷ್ಟಿಯೊಂದಿಗೆ ಸಮಷ್ಟಿ ಸಾಧನೆಯೆಂದು ಅನೇಕ ದೇವತೆಗಳ ಭಾವಪೂರ್ಣ ಮತ್ತು ಸಮಷ್ಟಿಗೆ ಉಪಯುಕ್ತವಾಗಿರುವಂತಹ ಸಾತ್ತ್ವಿಕ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಇದರಿಂದ ಆ ದೇವತೆಗಳು ಪ್ರಸನ್ನಗೊಂಡು ಸಮಷ್ಟಿ ಸಾಧನೆಗಾಗಿ ಅವರಿಗೆ ಆಶೀರ್ವಾದ ನೀಡಿದರು. ಈಗ ಪೂ. ಆಚಾರಿ ಇವರು ಸಮಷ್ಟಿ ಗುರುವಾಗಿ ‘ಆಧ್ಯಾತ್ಮಿಕ ಅನುಭೂತಿಯನ್ನು ನೀಡಬಹುದಾದಂತಹ’, ಮೂರ್ತಿಗಳನ್ನು ನಿರ್ಮಿಸುವ ಶಿಷ್ಯರನ್ನು ಸಿದ್ಧ ಮಾಡಲಿದ್ದಾರೆ. ಪೂ. ಆಚಾರಿ ಇವರು ಸ್ವತಃ ಗುರುಗಳಾದುದರಿಂದ ಅವರ ಗುರು ಶ್ರೀ ಗುರು ಶ್ರೀ ಬಾಬಾ ಮಹಾರಾಜರೂ ಅವರ ತಲೆಯ ಮೇಲೆ ಕೈ ಇಟ್ಟು ಅವರಿಗೆ ಆಶೀರ್ವಾದ ನೀಡಿದರು.

೧. ಎ. ಪೂ. ಆಚಾರಿ ಇವರ ಸಂತಪದವಿಯ ಬಗ್ಗೆ ಘೋಷಣೆ ಆಗುತ್ತಿರುವಾಗ ‘ಮಹಾವಿಷ್ಣು, ಶೇಷಶಯನ ಶ್ರೀವಿಷ್ಣು ಮತ್ತು ಚತುರ್ಭುಜ ಶ್ರೀವಿಷ್ಣು’, ಹೀಗೆ ಭಗವಾನ ವಿಷ್ಣುವಿನ ಅನೇಕ ರೂಪಗಳು ಕಾಣಿಸುವುದು ಮತ್ತು ಪೂರ್ಣ ವಾಯುಮಂಡಲವು ವೈಕುಂಠವಾಗಿರುವುದು ಅರಿವಾಗುವುದು : ಪೂ. ಆಚಾರಿ ಇವರು ಸಂತಪದವಿಯಲ್ಲಿ ವಿರಾಜಮಾನರಾಗುವ ಸಮಾರಂಭವು ನಡೆಯುವಾಗ ನನಗೆ ಭಗವಾನ ವಿಷ್ಣುವಿನ ‘ಮಹಾವಿಷ್ಣು’ (ನಿರ್ಗುಣಕ್ಕೆ ಮತ್ತು ಗುರುತತ್ತ್ವಕ್ಕೆ ಸಂಬಂಧಿಸಿದ ರೂಪ), ‘ಶೇಷಶಯನ ಶ್ರೀವಿಷ್ಣು’ (ನಿರ್ಗುಣ-ಸಗುಣ ರೂಪ) ಮತ್ತು ‘ಚತುರ್ಭುಜ ಶ್ರೀವಿಷ್ಣು’ (ಭಗವಾನ ವಿಷ್ಣುವಿನ ಸಮಷ್ಟಿ ರೂಪ) ಹೀಗೆ ಅನೇಕ ರೂಪಗಳು ಕಾಣಿಸಿದವು. ಈ ಸಮಯದಲ್ಲಿ ಪೂರ್ಣ ವಾಯುಮಂಡಲವು ವೈಕುಂಠವಿದ್ದಂತೆ ಅರಿವಾಗುತ್ತಿತ್ತು.

೧ ಎ ೧. ಪೂ. ಆಚಾರಿ ಇವರು ಅಂತರಂಗದಿಂದ ವಿಷ್ಣುಭಕ್ತ ರಾಗಿರುವುದರಿಂದ ಭೂವೈಕುಂಠದಲ್ಲಿನ ಶ್ರೀಮನ್ನಾರಾಯಣರ ಶುಭಾಶೀರ್ವಾದದಿಂದ ಅವರ ಸಂತಪದವು ಘೋಷಿತವಾಗುವುದು : ಚಿತ್ರಕಲೆ ಮತ್ತು ಮೂರ್ತಿಕಲೆಗಳು ಭಗವಾನ ವಿಷ್ಣುವಿನ ಮಾಧ್ಯಮ ದಿಂದ ಪ್ರಕಟಗೊಂಡ ಕಲೆಗಳಾಗಿವೆ. ಇದರಿಂದ ಈ ಕಲೆಗಳ ಉಪಾಸಕರಲ್ಲಿ ವಿಷ್ಣುತತ್ತ್ವವಿರುತ್ತದೆ. ಇಂತಹ ಉಪಾಸಕರು ಭಗವಾನ ಶ್ರೀವಿಷ್ಣುವಿನೊಂದಿಗೆ ಏಕರೂಪರಾಗಿ ಮುಕ್ತಿಯನ್ನು ಪ್ರಾಪ್ತಮಾಡಿಕೊಳ್ಳುತ್ತಾರೆ. ಮೂರ್ತಿಕಲೆಯ ಮಾಧ್ಯಮದಿಂದ ಸಾಧನೆಯನ್ನು ಮಾಡಿದುದರಿಂದ ಪೂ. ಆಚಾರಿಯವರು ಅಂತರಂಗದಿಂದ ವಿಷ್ಣುಭಕ್ತರಾಗಿದ್ದಾರೆ.

೧ ಎ ೧ ಅ. ‘ಭೂವೈಕುಂಠ’ವೆಂದರೆ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮ ಮತ್ತು ಮಹರ್ಷಿಗಳು ಯಾರಿಗೆ ‘ಶ್ರೀಮನ್ನಾರಾಯಣ’, ಎಂದು ಹೇಳುತ್ತಾರೆಯೋ, ಆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು : ಪೂ. ಆಚಾರಿಯವರ ಮುಂದಿನ ಆಧ್ಯಾತ್ಮಿಕ ಪ್ರಗತಿಗಾಗಿ ವಿಷ್ಣುತತ್ತ್ವವೇ ಆವಶ್ಯಕವಾಗಿತ್ತು. ಇದರಿಂದ ‘ಮಹರ್ಷಿಗಳು ‘ಭೂವೈಕುಂಠ’ವೆಂದು ಯಾವುದನ್ನು ಗೌರವಿಸುತ್ತಾರೆಯೋ, ಅಂತಹ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಈ ಅಂತರಂಗದ ವಿಷ್ಣುಭಕ್ತನ ಸಮಾರಂಭ ವಾಗುವುದು ಮತ್ತು ಮಹರ್ಷಿ ಯಾರನ್ನು ‘ಶ್ರೀಮನ್ನಾರಾಯಣ’, ರೆಂದು ಹೇಳುವರೋ, ಅಂತಹ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ಸಂದೇಶದಿಂದ, ಅಂದರೆ ಶುಭಾಶೀರ್ವಾದ ದಿಂದ ಅವರ ಸಂತಪದವಿಯ ಬಗ್ಗೆ ಘೋಷಿಸುವುದು’, ಇದು ಈಶ್ವರೇಚ್ಛೆಯೇ ಆಗಿತ್ತು.

ಪೂ. ಆಚಾರಿ ಇವರಿಗೆ ವಿಷ್ಣುತತ್ತ್ವವೇ ಗುರುಸ್ವರೂಪವಾಗಿ ಮಾರ್ಗದರ್ಶನ ಮಾಡುತ್ತಿರುವುದರಿಂದ ನಿರ್ಗುಣಕ್ಕೆ ಮತ್ತು ಗುರುತತ್ತ್ವಕ್ಕೆ ಸಂಬಂಧಿಸಿದ ಮಹಾವಿಷ್ಣುರೂಪವು ಕಾಣಿಸಿತು.

೨. ಸಂತಪದವಿಯು ಘೋಷಿತವಾದುದರಿಂದ ಪೂ. ಆಚಾರಿ ಇವರ ನಿರ್ಗುಣ-ಸಗುಣ ಸ್ಥಿತಿ ನಿರ್ಮಾಣವಾದುದರಿಂದ ಅದರ ಪ್ರತೀಕವೆಂದು ನನಗೆ ಶೇಷಶಯನ ಶ್ರೀವಿಷ್ಣುವಿನ ದರ್ಶನವಾಯಿತು.

೩. ಇನ್ನು ಮುಂದೆ ಪೂ. ಆಚಾರಿ ಇವರು ‘ಸಮಷ್ಟಿ ಸಂತ’ ರೆಂದು ಕಾರ್ಯ ಮಾಡುವವರಾಗಿರುವುದರಿಂದ ಭಗವಾನ ವಿಷ್ಣುವಿನಸಮಷ್ಟಿ ರೂಪವೆಂದರೆ ಚತುರ್ಭುಜ ಶ್ರೀವಿಷ್ಣುವಿನ ದರ್ಶನವಾಯಿತು.

೪. ಇದೇ ರೀತಿಯಲ್ಲಿ ವಾತಾವರಣದಲ್ಲಿ ವಿಷ್ಣುತತ್ತ್ವವು ಹೆಚ್ಚಾದುದರಿಂದ ಪೂರ್ಣ ವಾಯುಮಂಡಲವು ವೈಕುಂಠವಾಗಿರುವುದು ಅರಿವಾಯಿತು.

೧. ಏ. ಪೂ. ಆಚಾರಿ ಇವರ ಸಂತಪದದ ಘೋಷಣೆಯಾದಾಗ ವಿಶುದ್ಧ ಚಕ್ರದವರೆಗೆ ಜಾಗೃತವಿದ್ದ ಅವರ ಕುಂಡಲಿನಿ ಆಜ್ಞಾಚಕ್ರದ ವರೆಗೆ ಜಾಗೃತವಾಗುವುದು : ಪೂ. ಆಚಾರಿ ಇವರ ಸಂತಪದದ ಬಗ್ಗೆ ಘೋಷಣೆಯಾಗುವ ಮೊದಲು ಅವರ ಕುಂಡಲಿನಿ ವಿಶುದ್ಧ ಚಕ್ರದ ವರೆಗೆ ಜಾಗೃತವಿತ್ತು. ಸಂತಪದವು ಘೋಷಿತವಾಗುವ ಸಮಾರಂಭದಿಂದ ಅವರ ಕುಂಡಲಿನಿ ಆಜ್ಞಾಚಕ್ರದ ವರೆಗೆ ಜಾಗೃತವಾಯಿತು.

೧ ಏ ೧. ಮೂರ್ತಿಕಲೆಯ ತಪಸಾಧನೆಯಿಂದ ಪೂ. ಆಚಾರಿ ಇವರು ಆಕಾಶತತ್ತ್ವಕ್ಕೆ ಸಂಬಂಧಿಸಿದ ನಿರ್ಗುಣ ಸ್ತರದಲ್ಲಿರುವುದು ಮತ್ತು ಸಂತಪದದ ಘೋಷಣೆಯಾದುದರಿಂದ ಅªರು ನಿರ್ಗುಣತತ್ತ್ವದ ಕಡೆಗೆ ಮಾರ್ಗಕ್ರಮಣ ಮಾಡುವುದು : ಮೂರ್ತಿಕಲೆಯ ಸಾಧನೆಯು ತೇಜತತ್ತ್ವಕ್ಕೆ ಸಂಬಂಧಿಸಿದೆ. ತೇಜತತ್ತ್ವದ ಹೆಚ್ಚೆಂದರೆ ನಿರ್ಗುಣ-ಸಗುಣ ಈ ಸ್ತರದ ವರೆಗೆ ಪ್ರಕಟೀಕರಣವಾಗುತ್ತದೆ, ಅದರಿಂದ ಪೂರ್ಣ ನಿರ್ಗುಣತ್ವದ ಕಡೆಗೆ ಹೋಗಲು ಸಾಧ್ಯವಾಗುವುದಿಲ್ಲ. ಗುರುತತ್ತ್ವದಿಂದಾಗುವ ಆಂತರಿಕ ಮಾರ್ಗದರ್ಶನದಿಂದ ಪೂ. ಆಚಾರಿ ಇವರು ಮೂರ್ತಿಕಲೆಯ ಸಾಧನೆಯ ಮಾಧ್ಯಮದಿಂದ ಆಕಾಶತತ್ತ್ವಕ್ಕೆ ಸಂಬಂಧಿಸಿದ ನಿರ್ಗುಣ ಸ್ಥಿತಿಯವರೆಗೆ ತಲುಪಿದ್ದರು. ಯೋಗಮಾರ್ಗಕ್ಕನುಸಾರ  ವಿಶುದ್ಧಚಕ್ರವು ಆಕಾಶತತ್ತ್ವದ ಸ್ಥಾನವಾಗಿದೆ. ಇದರಿಂದ ಸಂತಪದವಿಯನ್ನು ಘೋಷಿಸುವ ಮೊದಲು ಪೂ. ಆಚಾರಿ ಇವರ ಕುಂಡಲಿನಿ ವಿಶುದ್ಧ ಚಕ್ರದವರೆಗೆ ಜಾಗೃತವಾಗಿರುವುದು ಕಾಣಿಸುತ್ತಿತ್ತು.

‘ಸಂತ’ ರೆಂದು ಮಟ್ಟವನ್ನು ಘೋಷಿಸುವ ಮಾಧ್ಯಮದಿಂದ ಪೂ. ಆಚಾರಿ ಇವರ ಮೇಲೆ ಗುರುಕೃಪೆಯಾಗಿ ಅವರ ಆಕಾಶತತ್ತ್ವದ ಆಚೆಗಿನ ನಿರ್ಗುಣ ತತ್ತ್ವದ ಕಡೆಗೆ ಮಾರ್ಗಕ್ರಮಣ ಆರಂಭವಾಯಿತು. ಇದರಿಂದ ಸಂತಪದವಿಯ ಘೋಷಣೆಯಾದ ನಂತರ ಅವರ ಕುಂಡಲಿನಿ ಆಜ್ಞಾಚಕ್ರದ ವರೆಗೆ ಜಾಗೃತವಾದುದು ಕಾಣಿಸುತ್ತಿತ್ತು.

೧ ಐ. ಸಂತಪದವು ಘೋಷಣೆಯಾದ ನಂತರ ಪೂ. ಆಚಾರಿ ಇವರಿಗೆ ‘ನಾನು ಸ್ವರ್ಗಲೋಕದಲ್ಲಿದ್ದೇನೆ’, ಎಂದು ಅನಿಸುವುದು : ಸಂತಪದವಿಯ ಘೋಷಣೆಯ ಸಮಾರಂಭದ ನಂತರ ಮನೋಗತವನ್ನು ವ್ಯಕ್ತ ಮಾಡುವಾಗ ಪೂ. ಆಚಾರಿ ಇವರ ಕಣ್ಣುಗಳಲ್ಲಿ ಆನಂದಾಶ್ರುಗಳು ಬಂದವು ಮತ್ತು ಅವರು, ”ನಾನು ಸ್ವರ್ಗಲೋಕದಲ್ಲಿಯೇ ಇದ್ದೇನೆ ಎಂದು ನನಗೆ ಅನಿಸುತ್ತದೆ’’, ಎಂದು ಹೇಳಿದರು.

೧ ಐ ೧. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್‌ ಆಠವಲೆಯವರು ಪೂ. ಆಚಾರಿ ಇವರ ಸಂತಪದವಿಯನ್ನು ಘೋಷಿಸಿದುದರಿಂದ ಅವರ ಆನಂದಾವಸ್ಥೆಯಲ್ಲಿ ಹೆಚ್ಚಳವಾಗುವುದು : ಸಂತಪದವು ಘೋಷಿತವಾಗುವ ಮೊದಲು ಪೂ. ಆಚಾರಿ ಇವರಲ್ಲಿನ ಆನಂದದ ಪ್ರಮಾಣ ಶೇ. ೧೫ ರಷ್ಟಿತ್ತು. ಸಂತಪದವಿಯು ಘೋಷಣೆಯಾದ ನಂತರ ಈ ಪ್ರಮಾಣದಲ್ಲಿ ಹೆಚ್ಚಳವಾಗಿ ಅದು ಶೇ. ೨೫ ರಷ್ಟಾಯಿತು. ಆನಂದಾವಸ್ಥೆಯಲ್ಲಾದ ಹೆಚ್ಚಳದಿಂದ ಪೂ. ಆಚಾರಿ ಇವರಿಗೆ ತಮ್ಮ ಶೂನ್ಯಾವಸ್ಥೆಯನ್ನು ಬಿಟ್ಟು ಶಿಷ್ಯಾವಸ್ಥೆ ಮತ್ತು ಆನಂದಾವಸ್ಥೆಯನ್ನು ಅನುಭವಿಸಲು ಸಾಧ್ಯವಾಯಿತು. ಈ ಎರಡೂ ಅವಸ್ಥೆಗಳ ಮಿಲನದಿಂದ ಅವರ ಕಣ್ಣುಗಳಲ್ಲಿ ಕ್ರಮವಾಗಿ ಭಕ್ತಿ ಮತ್ತು ಆನಂದದಿಂದ ಕೂಡಿದ ಕಣ್ಣೀರು ಬಂದವು ಮತ್ತು ಅವರಿಗೆ ‘ನಾನು ಸ್ವರ್ಗಾನಂದವನ್ನು ಅನುಭವಿಸುತ್ತಿದ್ದೇನೆ’, ಎಂಬ ಅರಿವು ನಿರ್ಮಾಣವಾಯಿತು. ಇದರಿಂದ ಸಂತಪದವಿಯನ್ನು ಘೋಷಣೆ ಮಾಡುವ ಹಿಂದಿನ ಅನನ್ಯ ಸಾಧಾರಣ ಮಹತ್ವವು ಗಮನಕ್ಕೆ ಬರುತ್ತದೆ.

೧ ಒ. ಸಮಾರಂಭದಲ್ಲಿ ತ್ರೇತಾಯುಗದ ವಾಯುಮಂಡಲವು ನಿರ್ಮಾಣವಾಗುವುದು : ಪೂ. ಆಚಾರಿ ಇವರ ಸಂತಪದವಿಯನ್ನು ಘೋಷಿಸುವ ಸಮಾರಂಭದಲ್ಲಿ ಪೂರ್ತಿ ಸಮಯ ನಾನು ತ್ರೇತಾಯುಗದ ವಾಯುಮಂಡಲ, ಅಂದರೆ ತ್ರೇತಾಯುಗದಲ್ಲಿರುವ ಸಾತ್ತ್ವಿಕತೆಯಿಂದ ಯುಕ್ತವಾದ ವಾಯುಮಂಡಲವನ್ನು ಅನುಭವಿಸುತ್ತಿದ್ದೆನು.

೧ ಒ ೧. ಪೂ. ಆಚಾರಿ ಇವರ ಸಾಧನಾಯಾತ್ರೆ ತ್ರೇತಾಯುಗದ ಜೀವಗಳಂತೆ ಮೊದಲು ವ್ಯಷ್ಟಿ ಮತ್ತು ನಂತರ ಸಮಷ್ಟಿ ಈ ಕ್ರಮದಿಂದ ಆದುದರಿಂದ ಸೂಕ್ಷ್ಮದಿಂದ ತ್ರೇತಾಯುಗದ ವಾಯುಮಂಡಲವು ನಿರ್ಮಾಣವಾಗುವುದು : ತ್ರೇತಾಯುಗದಲ್ಲಿ ಜೀವಗಳ ಸಾಧನೆ ಮೊದಲು ವ್ಯಷ್ಟಿ ಮತ್ತು ನಂತರ ಸಮಷ್ಟಿ ಈ ವಿಧದ್ದಾಗಿತ್ತು. ಆದುದರಿಂದ ಜೀವವು ಜೀವನದಾದ್ಯಂತ ವ್ಯಷ್ಟಿ ಸಾಧನೆಯನ್ನು ಮಾಡುತ್ತಿತ್ತು ಮತ್ತು ಅವತಾರಿ ಕಾರ್ಯದ ಸಮಯ ಬಂದಾಕ್ಷಣ, ಆ ಕಾರ್ಯದಲ್ಲಿ ಪಾಲ್ಗೊಂಡು ಸಮಷ್ಟಿ ಸಾಧನೆಯನ್ನು ಮಾಡುತ್ತಿತ್ತು. ಪೂ. ಆಚಾರಿ ಇವರ ಸಾಧನಾಯಾತ್ರೆಯೂ ಇದೇ ರೀತಿ, ಅಂದರೆ ಮೊದಲು ವ್ಯಷ್ಟಿ ಮತ್ತು ನಂತರ ಸಮಷ್ಟಿ ಈ ಪ್ರಕಾರ ಆಗುತ್ತಿದೆ. ಸಂತಪದವು ಘೋಷಣೆಯಾದ ನಂತರ ಅವರು ಈಶ್ವರೇಚ್ಛೆಯಿಂದ ವ್ಯಾಪಕ ಸಮಷ್ಟಿ ಸಾಧನೆಯನ್ನು ಮಾಡುವವರಾಗಿರುವುದರಿಂದ ಈ ಸಮಾರಂಭದಲ್ಲಿ ತ್ರೇತಾಯುಗದ ವಾಯುಮಂಡಲವನ್ನು ಪೂರ್ಣ ಸಮಯ ಅನುಭವಿಸಲು ಸಾಧ್ಯವಾಗುತ್ತಿತ್ತು.’

– ಶ್ರೀ. ನಿಷಾದ ದೇಶಮುಖ      

 (ಮುಂದುವರಿಯುವುದು)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.