ಜನಗಣನೆಯಲ್ಲಿ ಎಲ್ಲಾ ಸಮುದಾಯದ ಜನಸಂಖ್ಯೆಯು ಸ್ಪಷ್ಟವಾಗುವುದು ಆದರೆ ಇಂದು ದೇಶದಲ್ಲಿ ‘ಜನಸಂಖ್ಯಾ ನಿಯತ್ರಣ ಕಾನೂನಿನ’ ಅವಶ್ಯಕತೆಯಿದೆ. ಇತ್ತೀಚೆಗಾದ ಬಂಗಾಳದ ಚುನಾವಣೆ ಹಾಗೂ ಅನಂತರ ನಡೆದ ಹಿಂಸಾಚಾರ ಇವುಗಳಿಂದ ಹಿಂದೂಗಳು ಜೀವಭಯದಿಂದ ಪಲಾಯನಗೈದರು. ‘ಬಂಗಾಳದಲ್ಲಿಯ ಕೆಲವು ಪ್ರದೇಶಗಳು ಮಾವೋವಾದಿಗಳಿಗಿಂತಲೂ ಅಪಾಯಕರವಾಗಿದೆ’, ಎಂದು ಘೋಷಿಸಿ ಸುರಕ್ಷೆಯನ್ನು ಹೆಚ್ಚಿಸುವುದು, ನಿರ್ಬಂಧವನ್ನು ಹಾಕುವುದು ಇಂತಹ ಪರಿಹಾರಗಳನ್ನು ಮಾಡಬೇಕಾಗಿದೆ. ಯೋಗ್ಯ ಪದ್ಧತಿಯಿಂದ ದಂಗೆಯ ಕಾರಣವನ್ನು ಹುಡುಕಿ ದೋಷಿಗಳಿಗೆ ಸರಕಾರಿ ಅಧಿಕಾರಿಗಳಿಂದ ಹಿಡಿದು ಎಲ್ಲರ ಮೇಲೂ ಮೊಕದ್ದಮೆಯಾಗಬೇಕು. ಹಿಂದುಗಳ ಪಲಾಯನ ಯಾಕೆ ಆಗುತ್ತಿದೆ ? ಇದಕ್ಕೆ ಕೇಂದ್ರ ಸರಕಾರವು ಕಾರಣವನ್ನು ಹುಡುಕಿ ಯೋಗ್ಯ ಕ್ರಮ ಕೈಗೊಳ್ಳಬೇಕು ಭಾರತವು ಇತರ ದೇಶಗಳಿಂದ ಕಲಿತು ಹಿಂದೂಗಳ ಸ್ಥಳಾಂತರದ ಸಮಸ್ಯೆಯನ್ನು ಪರಿಹರಿಸುವ ಕಾಯಿದೆಯನ್ನು ಮಾಡಬೇಕು.