ರಾಮನಾಥಿ (ಗೋವಾ) – ಸನಾತನ ಸಂಸ್ಥೆಯ ವತಿಯಿಂದ ಜನವರಿ ೨೦ ರಂದು ಕನ್ನಡ ಭಾಷೆಯಲ್ಲಿ ಉದ್ಯಮಿ ಸಾಧನಾ ಶಿಬಿರವು ಚೈತನ್ಯಮಯ ವಾತಾವರಣದಲ್ಲಿ ನೆರವೇರಿತು. ಶಿಬಿರವನ್ನು ಶಂಖನಾದದಿಂದ ಆರಂಭಿಸಲಾಯಿತು. ಅನಂತರ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲನ ಉದ್ಯಮಿ ಶ್ರೀ. ಎಂ.ಜೆ. ಶೆಟ್ಟಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೫) ಇವರು ದೀಪಪ್ರಜ್ವಲನೆ ಮಾಡಿದರು. ಈ ಶಿಬಿರದಲ್ಲಿ ಕರ್ನಾಟಕ ರಾಜ್ಯದ ಬಾಗಲಕೋಟೆ, ಉಡುಪಿ, ಮೈಸೂರು, ದಕ್ಷಿಣ ಕನ್ನಡ, ಬೆಂಗಳೂರು ಹೀಗೆ ವಿವಿಧ ಜಿಲ್ಲೆಗಳ ಉದ್ಯಮಿಗಳು ಪಾಲ್ಗೊಂಡಿದ್ದರು.
ಶ್ರೀ. ಶರತ ಕುಮಾರ ಮತ್ತು ಶ್ರೀ. ಚಂದ್ರ ಮೊಗೇರ (ಆಧ್ಯಾತ್ಮಿಕ ಮಟ್ಟ ಶೇ. ೬೦) ಇವರು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕಾರ್ಯದ ಪರಿಚಯವನ್ನು ಮಾಡಿಕೊಟ್ಟರು. ‘ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ’ ಮತ್ತು ‘ಗುರುಕೃಪಾಯೋಗಾನುಸಾರ ಸಾಧನೆಯ ಮಹತ್ವ’ ಈ ವಿಷಯವನ್ನು ಶ್ರೀ. ಗುರುಪ್ರಸಾದ ಗೌಡ ಮತ್ತು ಸಮಿತಿಯ ಶ್ರೀ. ಅರುಣ ಕುಲಕರ್ಣಿಯವರು ಮಂಡಿಸಿದರು.