ಯುಕ್ರೇನ್‌ನ ಮೇಲಿನ ದಾಳಿಯ ಮೊದಲು ಪುತಿನ್ ನನಗೆ ಬೆದರಿಸಿದ್ದರು !

ಬ್ರಿಟನ್ನಿನ ಮಾಜಿ ಪ್ರಧಾನಿ ಬೋರಿಕ್ ಜಾನ್ಸನ್ ಇವರ ದಾವೆ !

(ಎಡದಿಂದ ) ಬ್ರಿಟನ್ನಿನ ಮಾಜಿ ಪ್ರಧಾನಿ ಬೋರೀಸ್ ಜಾನ್ಸನ್  ಮತ್ತು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್

ಲಂಡನ್ (ಬ್ರಿಟನ್) – ‘ಬಿ.ಬಿ.ಸಿ’ಯು ಪ್ರಸಾರ ಮಾಡಿದ ಹೊಸ ಸಾಕ್ಷಚಿತ್ರದಲ್ಲಿ ಬ್ರಿಟನ್ನಿನ ಮಾಜಿ ಪ್ರಧಾನಿ ಬೋರೀಸ್ ಜಾನ್ಸನ್ ಇವರು ಪ್ರಧಾನಿ ಹುದ್ದೆಯಲ್ಲಿರುವಾಗ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ಅವರಿಗೆ ಬೆದರಿಸಿದ್ದರು ಎಂದು ಹೇಳಿದ್ದಾರೆ. ‘ಫೆಬ್ರವರಿ ೨೪, ೨೦೨೨ ರಂದು ಯುಕ್ರೇನ್‌ನ ಮೇಲೆ ದಾಳಿಯಾಗುವ ಮೊದಲು ನಾನು ಪುತಿನ್ ಇವರೊಂದಿಗೆ ದೂರವಾಣಿಯಲ್ಲಿ ಚರ್ಚೆ ಮಾಡಿದ್ದೆನು. ಆಗ ಪುತಿನ್ ನನಗೆ ಬೆದರಿಸುತ್ತಾ “ಬೋರಿಸ್, ನಿನಗೆ ತೊಂದರೆ ಕೊಡುವ ಉದ್ದೇಶ ಇಲ್ಲ; ಆದರೆ ಕ್ಷಿಪಣಿ ಹಾರಿಸಿ ಹಾಗೆ ಮಾಡಲು ಕೇವಲ ಒಂದು ನಿಮಿಷ ಸಾಕಾಗುವುದು”, ಎಂದು ಹೇಳಿದ್ದರು”, ಎಂದು ಜಾನ್ಸನ್ ಇವರು ದಾವೆ ಮಾಡಿದ್ದಾರೆ. ಬೋರಿಸ್ ಜಾನ್ಸನ್ ೨೦೧೯ ರಿಂದ ಅಕ್ಟೋಬರ ೨೦೨೨ ರ ವರೆಗೆ ಬ್ರಿಟನ್ನಿನ ಪ್ರಧಾನಮಂತ್ರಿಯಾಗಿದ್ದರು. ಹುದ್ದೆಯಲ್ಲಿರುವಾಗ ಅವರಿಗೆ ಈ ಬೆದರಿಕೆ ಬಂದಿತ್ತು. ಬೋರಿಸ್ ಜಾನ್ಸನ್ ಇವರು ಮಾತು ಮುಂದುವರಿಸುತ್ತಾ, ಯುಕ್ರೇನ್‌ನ ಮೇಲಿನ ದಾಳಿಯ ಮೊದಲು ಪುತಿನ್ ಇವರ ಮನವೊಲಿಸಲು ಪ್ರಯತ್ನ ಮಾಡಿದ್ದೆನು. ‘ಯುಕ್ರೇನ್ ‘ನಾಟೋ’ದಲ್ಲಿ (‘ನಾರ್ಥ್ ಅಟ್ಲಾಂಟಿಕ್ ಟ್ರೀಟೀ ಆರ್ಗನಾಯಝೇಶನ್’ನಲ್ಲಿ) ಸಮಾವೇಶಗೊಳ್ಳುವ ಸಾಧ್ಯತೆಯಿಲ್ಲ ಎಂಬುದು ನಿಮಗೆ ತಿಳಿದಿದೆ’, ಎಂದು ಪುತಿನ್ ಇವರಿಗೆ ಹೇಳಿದ್ದೆನು. ನಾನು ಪುತಿನ್ ಇವರಿಗೆ ಬುದ್ಧಿವಾದ ಹೇಳುವಾಗ, ಯುಕ್ರೇನ್‌ನ ಮೇಲೆ ದಾಳಿ ಮಾಡಿದರೆ ನೀವು ನೇರವಾಗಿ ನಾಟೋವನ್ನು ಎದುರಿಸಿದ ಹಾಗಾಗುತ್ತದೆ. ನೀವು ತಮ್ಮನ್ನು ನಾಟೋದಿಂದ ದೂರವಿಡಲು ಸಾಧ್ಯವಿಲ್ಲ ಎಂದು ಹೇಳಿದ್ದೆನು, ಪುತಿನ್ ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ ಎಂದು ಹೇಳಿದರು.