ಬಾಲಿವುಡ್ನ ಪಾಕಿಸ್ತಾನ ಪ್ರೇಮ – ಪಠಾಣ ? ಈ ವಿಷಯದ ಬಗ್ಗೆ ಆನ್ಲೈನ್ ವಿಶೇಷ ಸಂವಾದ !
ಭಾರತದ ಸಂಶೋಧನೆ ಮತ್ತು ವಿಶ್ಲೇಷಣೆ ಶಾಖೆಯ ಅಂದರೆ ‘ರಾದ ಅಧಿಕಾರಿಗಳು ಪಾಕಿಸ್ತಾನದ ಐ.ಎಸ್.ಐ. ಅಧಿಕಾರಿಗಳ ಸಹಾಯ ಪಡೆದರು, ಇಲ್ಲಿಯವರೆಗೆ ಇಂತಹ ಉದಾಹರಣೆ ನಾವು ಕೇಳಿರಲಿಲ್ಲ. ವ್ಯವಹಾರಿಕ ದೃಷ್ಟಿಯಿಂದಲೂ ಇದು ಒಪ್ಪಲು ಸಾಧ್ಯವಿಲ್ಲ. ಪಠಾಣ ಚಲನಚಿತ್ರದಲ್ಲಿ ‘ರಾ ದ ಅಧಿಕಾರಿಗಳ ಬಗ್ಗೆ ದ್ವೇಷ ನಿರ್ಮಾಣ ಮಾಡಿ ಐ.ಎಸ್.ಐ ಅಧಿಕಾರಿ ಮತ್ತು ಪಠಾಣ ಬಗ್ಗೆ ಸಹಾನುಭೂತಿ ನಿರ್ಮಾಣ ಮಾಡಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಭಾರತೀಯ ಸೈನ್ಯಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಚೀನಾದ ಗಡಿಯಲ್ಲಿ ಹೋರಾಡಬೇಕಾಗುತ್ತದೆ, ಹಾಗೂ ದೇಶದಲ್ಲಿನ ಆಂತರಿಕ ಶತ್ರುಗಳ ವಿರುದ್ಧ ಕೂಡ ಹೋರಾಡಬೇಕಾಗುತ್ತದೆ. ಇದರಡಿ ಶತ್ರುಗಳಲ್ಲಿ ಬಾಲಿವುಡ್‌ನಲ್ಲಿನ ಜನರು ಭಾರತದ ವಿರುದ್ಧ ಕೆಲಸ ಮಾಡುತ್ತಾರೆ. ಬಾಲಿವುಡ್ ಹಿಂದಿನಿಂದಲೂ ಹಿಂದೂ ಅರ್ಚಕರು, ಸಾಧು ಸಂತರು ಹಾಗೂ ಹಿಂದೂ ಎಂದು ಗುರತಿಸುವ ಜನರಿಗೆ ಖಳನಾಯಕನ ಪಾತ್ರ ನೀಡುತ್ತಿದೆ. ಇದು ಒಂದು ಷಡ್ಯಂತ್ರದ ಭಾಗವಾಗಿದ್ದು ಬಾಲಿವುಡ್ ‘ಡಿ ಕಂಪನಿಯ ಆದೇಶದ ಮೇರೆಗೆ ಕೆಲಸ ಮಾಡುತ್ತದೆ. ನಮಗೆ ನಮ್ಮ ಸಂಸ್ಕೃತಿ ಉಳಿಸಬೇಕಿದ್ದರೆ ಈ ಹಿಂದೂ ವಿರೋಧಿ ಷಡ್ಯಂತ್ರ ವಿಫಲಗೊಳಿಸಬೇಕು, ಎಂದು ದೆಹಲಿಯ ಸೇವಾ ನಿವೃತ್ತ ಮೇಜರ್, ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ. ಸರಸ್ ತ್ರಿಪಾಠಿ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಬಾಲಿವುಡ್ನ ಪಾಕಿಸ್ತಾನ ಪ್ರೇಮ – ಪಠಾಣ ಈ ಆನ್ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕ ಇವರು, ಪಠಾಣ ಚಲನಚಿತ್ರ ಪ್ರದರ್ಶಿಸುವ ಭಾರತದಲ್ಲಿನ ವಿವಿಧ ನಗರಗಳಲ್ಲಿನ ಸಿನಿಮಾ ಗೃಹಗಳು ಖಾಲಿ ಬಿದ್ದಿವೆ, ಎಂದು ಸೋಶಿಯಲ್ ಮೀಡಿಯಾ ಹಾಗೂ ಅನೇಕ ಮಾಧ್ಯಮಗಳಿಂದ ಸ್ಪಷ್ಟವಾಗಿದೆ, ಎಂದು ಹೇಳಿದರು. ಆದರೂ ಕೂಡ ಶಾಹರುಖ ಖಾನ್ ನ ಪಿ. ಆರ್ ಏಜೆನ್ಸಿ ಮೂಲಕ ಪಠಾಣ ಚಲನಚಿತ್ರ ಎಲ್ಲಾ ಕಡೆ ಹೌಸ್ ಫುಲ್ ಇದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ‘ಪಠಾಣ ಚಲನಚಿತ್ರ ಯಶಸ್ವಿಯಾಗಿದೆ ಎಂದು ಪ್ರಚಾರ ಮಾಡಿ ಛತ್ರಪತಿ ಶಿವಾಜಿ ಮಹಾರಾಜ, ಮೋದಿ, ಅಮಿತ ಶಾಹ ಮುಂತಾದರನ್ನು ಬೆಂಬಲಿಸುವವರು ಸೋತಿದ್ದಾರೆ ಎಂಬ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಕಾಶ್ಮೀರಿ ಫೈಲ್ಸ್ ರೀತಿ ಕೆಲವು ಅಪವಾದ ಬಿಟ್ಟರೆ ಅನೇಕ ಚಲನಚಿತ್ರಗಳಲ್ಲಿ ಇಲ್ಲಿಯವರೆಗೆ ಪಾಕಿಸ್ತಾನದ ಬಗ್ಗೆ ಒಳ್ಳೆಯ ಭಾವನೆ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ, ಇದು ಬಾಲಿವುಡ್ ನ ಈ ‘ಬೇಶರಮ ರಂಗ’ (ನಾಚಿಕೆಯ ಬಣ್ಣ) ಗುರಿತಿಸುವ ಅವಶ್ಯಕತೆ ಇದೆ.