‘ಓರ್ವ ಸಾಧಕನ ಅಂತ್ಯ ಸಂಸ್ಕಾರ ವಿಧಿಯ ಸಮಯದಲ್ಲಿ ಅವನ ಸಂಬಂಧಿಕರು, ”ನಾವು ಸಮಾಜದ ಒಬ್ಬ ವ್ಯಕ್ತಿಯ ಅಂತ್ಯವಿಧಿಗೆ ಹೋದಾಗ ಅಲ್ಲಿ ದುರ್ಗಂಧ ಬರುತ್ತಿರುತ್ತದೆ. ಅದೂ ಎಷ್ಟಿರುತ್ತದೆ ಎಂದರೆ ನಮಗೆ ‘ಅಲ್ಲಿಂದ ಹೋಗಿಬಿಡಬೇಕು’, ಎಂದೆನಿಸುತ್ತದೆ; ಆದರೆ ಇವರ (ಸಾಧಕನ) ಅಂತ್ಯವಿಧಿಯ ಸಮಯದಲ್ಲಿ ನಮಗೆ ಇಂತಹದ್ದೇನು ಅರಿವಾಗಲಿಲ್ಲ’’, ಎಂದು ಹೇಳಿದರು.
೧. ಸಾಮಾನ್ಯ ವ್ಯಕ್ತಿಯು ಸಾಧನೆ ಮಾಡುವುದಿಲ್ಲ ಹಾಗಾಗಿ ಮೃತ್ಯುವಿನ ನಂತರ ಅವನ ಲಿಂಗದೇಹದ ಮೇಲಿರುವ ಸ್ವಭಾವ ದೋಷ-ಅಹಂರೂಪಿ ಜಡತ್ವ ಮತ್ತು ಅವನ ಮೇಲಾದ ಅನಿಷ್ಟ ಶಕ್ತಿಗಳ ಆಕ್ರಮಣ, ಇವುಗಳಿಂದಾಗಿ ಆ ಲಿಂಗದೇಹಕ್ಕೆ ಗತಿ ಪ್ರಾಪ್ತವಾಗಲು ಅಡೆತಡೆಯುಂಟಾಗುತ್ತದೆ : ಸಾಮಾನ್ಯ ವ್ಯಕ್ತಿಯು ಸಾಧನೆ ಮಾಡುವುದಿಲ್ಲ ಹಾಗಾಗಿ ಅವನ ದೇಹವು ರಜ-ತಮಯುಕ್ತವಾಗಿರುತ್ತದೆ. ಇದಕ್ಕೆ ಕಾರಣವೆಂದರೆ ಅವನಲ್ಲಿರುವ ಸ್ವಭಾವದೋಷ, ಅಹಂನ ಅಂಶಗಳು, ಮಾಯೆಯ ಆಸಕ್ತಿ ಇತ್ಯಾದಿ ಘಟಕಗಳು. ರಜ-ತಮಯುಕ್ತ ವ್ಯಕ್ತಿಯ ಮೃತ್ಯುವಿನ ನಂತರ ಅವನಲ್ಲಿರುವ ರಜ-ತಮ ಹೊರಗೆ ಬೀಳುತ್ತದೆ, ಅದು ಕೆಲವೊಮ್ಮೆ ದುರ್ಗಂಧದ ರೂಪದಲ್ಲಿ ಇತರರಿಗೆ ಅರಿವಾಗುತ್ತದೆ. ಅನಿಷ್ಟ ಶಕ್ತಿಗಳು ಈ ದುರ್ಗಂಧದ ಕಡೆಗೆ ಆಕರ್ಷಿತವಾಗುತ್ತವೆ. ಇಂತಹ ವ್ಯಕ್ತಿಯ ಲಿಂಗದೇಹದ ಮೇಲಿರುವ ಸ್ವಭಾವದೋಷ-ಅಹಂರೂಪಿ ಜಡತ್ವ ಮತ್ತು ಅವನ ಮೇಲಾಗಿರುವ ಅನಿಷ್ಟ ಶಕ್ತಿಗಳ ಆಕ್ರಮಣ, ಇವುಗಳಿಂದಾಗಿ ಆ ಲಿಂಗದೇಹಕ್ಕೆ ಗತಿ ಪ್ರಾಪ್ತವಾಗಲು ಅಡೆತಡೆಯಾಗುತ್ತವೆ.
೨. ಸಾಧಕನು ‘ಗುರುಕೃಪಾಯೋಗಾ’ನುಸಾರ ಅಷ್ಟಾಂಗ ಸಾಧನೆಯನ್ನು ಮಾಡುತ್ತಿರುವುದರಿಂದ ಮೃತ್ಯುವಿನ ನಂತರ ಅವನ ಲಿಂಗದೇಹದ ಮುಂದಿನ ಪ್ರವಾಸವು ಉಚ್ಚ ಲೋಕಗಳ ವರೆಗೆ ಸಹಜವಾಗಿ ಆಗುವುದು : ತದ್ವಿರುದ್ಧ ಸನಾತನದ ಸಾಧಕರು ‘ಗುರು ಕೃಪಾಯೋಗಾನು’ಸಾರ ಅಷ್ಟಾಂಗ ಸಾಧನೆಯನ್ನು (ಟಿಪ್ಪಣಿ) ಮಾಡುತ್ತಾರೆ. ಅವರು ತಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಗಾಗಿ ಪ್ರಯತ್ನಿಸುತ್ತಾರೆ. ಅವರು ಮಾಯೆಯಲ್ಲಿರದೇ ಸತತವಾಗಿ ಸತ್ಸೇವೆ ಮತ್ತು ಸತ್ಸಂಗಗಳಲ್ಲಿ, ಅಂದರೆ ಸತ್‌ನಲ್ಲಿರಲು ಪ್ರಯತ್ನಿಸುತ್ತಾರೆ, ಹಾಗೆಯೇ ಈಶ್ವರನ ಭಕ್ತಿಯನ್ನು ಮಾಡುತ್ತಾರೆ. ಈ ಸಾಧನೆಯಿಂದ ಅವರಲ್ಲಿನ ರಜ-ತಮಗಳು ಕಡಿಮೆಯಾಗಿ ಸತ್ವಗುಣ ಹೆಚ್ಚಾಗುತ್ತದೆ. ಸತ್ವಗುಣಿ ವ್ಯಕ್ತಿಯಲ್ಲಿ ಚೈತನ್ಯವಿರುತ್ತದೆ. ಇಂತಹ ವ್ಯಕ್ತಿಯ ಮೃತ್ಯುವಿನ ನಂತರ ಅವನ ದೇಹದಿಂದ ಸುಗಂಧ, ಚೈತನ್ಯ ಮತ್ತು ಆನಂದದ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ಈ ಚೈತನ್ಯಮಯ ಸಾಧಕನ ದೇಹದ ಮೇಲೆ ಅನಿಷ್ಟ ಶಕ್ತಿಗಳು ಆಕ್ರಮಣ ಮಾಡಲು ಆಗುವುದಿಲ್ಲ, ಹಾಗೆಯೇ ಆ ಸಾಧಕನ ಸುತ್ತಲೂ ಗುರುಕೃಪೆಯ ರಕ್ಷಣಾಕವಚವೂ ಇರುತ್ತದೆ. ಆದ್ದರಿಂದ ಚೈತನ್ಯದಿಂದ ಹಗುರವಾಗಿರುವ ಅವನ ಲಿಂಗದೇಹದ ಮುಂದಿನ ಪ್ರವಾಸವು ಉಚ್ಚ ಲೋಕಗಳ ವರೆಗೆ ಸಹಜವಾಗಿ ಆಗುತ್ತದೆ.
ಟಿಪ್ಪಣಿ : ಅಷ್ಟಾಂಗ ಸಾಧನೆಯ ಹಂತಗಳು : ೧. ಸ್ವಭಾವದೋಷ-ನಿರ್ಮೂಲನೆ ಮತ್ತು ಗುಣ-ಸಂವರ್ಧನೆ, ೨. ಅಹಂ-ನಿರ್ಮೂಲನೆ, ೩. ನಾಮಜಪ, ೪. ಭಾವಜಾಗೃತಿಗಾಗಿ ಮಾಡುವ ಪ್ರಯತ್ನ, ೫. ಸತ್ಸಂಗ, ೬. ಸತ್ಸೇವೆ, ೭. ಸತ್‌ಗಾಗಿ ತ್ಯಾಗ ಮತ್ತು ೮. ಪ್ರೀತಿ (ಇತರರ ಬಗ್ಗೆ ನಿರಪೇಕ್ಷ ಪ್ರೇಮ)
೩. ಸಾಧಕನು ಜೀವನವಿಡಿ ಸಾಧನೆಯನ್ನು ಮಾಡಿರುವುದರಿಂದ ಮೃತ್ಯುವಿನ ನಂತರವೂ ಸಾಧಕ ಜೀವದಿಂದ ವಾತಾವರಣದಲ್ಲಿ ಚೈತನ್ಯ ಪ್ರಕ್ಷೇಪಿಸುವ ಸತ್ಕಾರ್ಯವು ಘಟಿಸುತ್ತದೆ, ಹಾಗೆಯೇ ಅವನ ರಕ್ಷಣೆಯಾಗಿ ಅವನಿಗೆ ಉತ್ತಮ ಗತಿ ಪ್ರಾಪ್ತವಾಗುತ್ತದೆ. ಇಷ್ಟೇ ಅಲ್ಲದೇ, ಅವನು ಗುರುಕೃಪೆಯಿಂದ ಜನ್ಮ-ಮರಣದ ಚಕ್ರಗಳಿಂದ ಮುಕ್ತನಾಗುತ್ತಾನೆ.’
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೦.೧೧.೨೦೨೨)