ಜನವರಿ ೨೬ ರಂದು ಇರುವ ಗಣರಾಜ್ಯೋತ್ಸವ ದಿನದ ನಿಮಿತ್ತ ಲೇಖನ
ಪ್ರಾಚೀನ ಕಾಲದಲ್ಲಿ ಹಿಂದುಸ್ಥಾನದ ದೊಡ್ಡ ದೊಡ್ಡ ರಾಜ ಮಹಾರಾಜರು ಪರಸ್ಪರರಿಗೆ ಸಹಾಯ ಮಾಡದ ಕಾರಣ ಇಸ್ಲಾಮೀ ರಾಜರು ಅದನ್ನು ದುರುಪಯೋಗಿಸಿಕೊಂಡು ಆಡಳಿತ ನಡೆಸಿದರು. ನಮ್ಮಲ್ಲಿ ಕೆಲವರು ಅವರಿಗೆ ಸಹಕರಿಸಿರುವುದರಿಂದ ಹಿಂದೂ ರಾಜರ ಪರಾಭವವಾಯಿತು. ಇಂದಿಗೂ ಅನೇಕ ಜನರು ವಿವಿಧ ಮಾಧ್ಯಮಗಳಿಂದ ದೇಶದೊಂದಿಗೆ ಮೋಸ ಮಾಡುತ್ತಿದ್ದಾರೆ.
೧. ಸ್ವಧರ್ಮಿ (ಹಿಂದೂ) ರಾಜನನ್ನು ಸೋಲಿಸಲು ಇತರ ಧರ್ಮೀಯನ (ಇಸ್ಲಾಮೀ) ಸಹಾಯ ಪಡೆಯುವ ರಾಜರು
ಮೊಗಲರು ಈ ದೇಶಕ್ಕೆ ಬರುವ ಮೊದಲು ಭಾರತದಲ್ಲಿ ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರ ಸಣ್ಣ-ಸಣ್ಣ ಭೂಪ್ರದೇಶಗಳ ಮೇಲೆ ನೂರಾರು ರಾಜರ ಪ್ರಭಾವವಿತ್ತು. ಇವರೆಲ್ಲರ ಮಾತೃಭೂಮಿ, ಧರ್ಮ, ಧರ್ಮಗ್ರಂಥ, ದೇವತೆ, ಶ್ರದ್ಧಾಸ್ಥಾನಗಳು ಇತ್ಯಾದಿಗಳು ಸಮಾನ ಹಾಗೂ ಒಂದೇ ಆಗಿತ್ತು, ಆದರೂ ಅವರಲ್ಲಿ ಐಕ್ಯತೆ ಇರಲಿಲ್ಲ. ಅವರ ಈ ಶತ್ರುತ್ವದಿಂದಾಗಿ ರಾಜನು ಪರಕೀಯ ಹಾಗೂ ಇತರ ಧರ್ಮೀಯ ರಾಜನನ್ನು ಆಮಂತ್ರಿಸಿ ಅವನ ಸಹಾಯದಿಂದ ತಮ್ಮ ಸ್ವಕೀಯ ಹಾಗೂ ಸ್ವಧರ್ಮೀಯ ರಾಜನನ್ನು ನಾಶ ಮಾಡಲು ಹಿಂದೆ-ಮುಂದೆ ನೋಡುತ್ತಿರಲಿಲ್ಲ.
ಅ. ಕ್ರಿ.ಪೂ. ೩೨೬ ರಲ್ಲಿ ಪಂಜಾಬ್‌ನ ರಾಜ ಪೋರಸ್‌ನನ್ನು ಸೋಲಿಸಲು ಗಾಂಧಾರದ (ಇಂದಿನ ಅಫ್ಘಾನಿಸ್ತಾನ) ರಾಜ ಅಂಭಿಯು ಗ್ರೀಕ್ ರಾಜ ಅಲೆಕ್ಸಾಂಡರನಿಗೆ ಎಲ್ಲ ರೀತಿಯಿಂದ ಸಹಕರಿಸಿದ್ದನು.
ಆ. ಕನ್ನೋಜಾದ ರಾಜ ಜಯಚಂದ ರಾಠೋಡನು ಅಜಯ ಮೇರೂವಿನ (ಇಂದಿನ ಅಜಮೇರ) ರಾಜ ಪೃಥ್ವಿರಾಜ ಚೌಹಾನನನ್ನು ಸೋಲಿಸಲು ಮಹಮ್ಮದ ಘೋರಿಯನ್ನು ಆಮಂತ್ರಿಸಿ ಪೃಥ್ವಿರಾಜ ಸಹಿತ ತನ್ನದೇ ನಾಶ ಮಾಡಿಕೊಂಡಿದ್ದನು.
೨. ಇತರ ಧರ್ಮೀಯ ಶತ್ರುಗಳು ದಾಳಿ ಮಾಡಿದಾಗ ಸ್ವಧರ್ಮೀಯ ಹಿಂದೂ ರಾಜನಿಗೆ ಸಹಾಯ ಮಾಡದ ರಾಜರು
ವಿಶೇಷವೆಂದರೆ, ಪರಕೀಯ ಹಾಗೂ ಇತರ ಧರ್ಮೀಯ ಆಕ್ರಮಕರು ಭಾರತಕ್ಕೆ ಬಂದು ನಮ್ಮ ಸ್ವಧರ್ಮೀಯ ರಾಜನ ಮೇಲೆ ದಾಳಿ ಮಾಡಿದಾಗ ಭಾರತದ ಇತರ ರಾಜರು ಸ್ವಧರ್ಮೀಯ ರಾಜನ ಸಹಾಯಕ್ಕೆ ಬರಲೇ ಇಲ್ಲ.
ಅ. ಮಹಮೂದ ಗಝನಿಯು ಗುಜರಾತದ ಸೋರಟೀ ಸೋಮನಾಥ ಮಂದಿರದ ಮೇಲೆ ದಾಳಿ ಮಾಡಿದನು. ಮಂದಿರವನ್ನು ಧ್ವಂಸ ಮಾಡಿ ಅಲ್ಲಿದ್ದ ಎಲ್ಲ ಸಂಪತ್ತನ್ನು ಲೂಟಿ ಮಾಡಿ ಒಯ್ದನು. ಆಗ ಅವನೊಂದಿಗೆ ಕೇವಲ ಭೀಮ ಎಂಬ ರಾಜ ಮಾತ್ರ ಹೋರಾಡಿದನು. ಭಾರತದ ಇತರ ರಾಜರು ಆಗ ಸುಮ್ಮನಿದ್ದರು.
ಆ. ಅಲ್ಲಾವುದ್ದೀನ ಖಿಲ್ಜೀಯೊಂದಿಗೆ ಚಿತೋಡಾದ ರಾಣಾ ರತ್ನಸಿಂಹ ಇವರೊಬ್ಬರೇ ಹೋರಾಡುತ್ತಿರುವಾಗ ಇತರ ರಜಪೂತರು ಅವರ ಸಹಾಯಕ್ಕೆ ಬರಲಿಲ್ಲ.
ಇ. ಆ ಅಲ್ಲಾವುದ್ದೀನ ಖಿಲ್ಜಿಯು ಮಹಾರಾಷ್ಟ್ರದ ದೇವಗಿರಿಯ (ಇಂದಿನ ದೌಲತಾಬಾದ) ರಾಜ ರಾಮಚಂದ್ರ ಯಾದವ ಇವರ ಮೇಲೆ ದಾಳಿ ಮಾಡಿ ಹಿಂದೂ ಸಾಮ್ರಾಜ್ಯವನ್ನು ಸರ್ವನಾಶಗೊಳಿಸಿದಾಗಲೂ ಇತರ ಹಿಂದೂ ರಾಜರು ಅವರ ಸಹಾಯಕ್ಕೆ ಬಂದಿರಲಿಲ್ಲ.
ಈ. ಛತ್ರಪತಿ ಶಿವಾಜಿ ಮಹಾರಾಜರಿಗೂ ಹಿಂದವೀ ಸ್ವರಾಜ್ಯ ಸ್ಥಾಪಿಸುವಾಗ ೫ ಮಂದಿ ಬಾದಶಾಹರ ಜೊತೆಗೆ ಸ್ವಕೀಯ ಸರದಾರರು, ಜಮೀನುದಾರರೊಂದಿಗೂ ಹೋರಾಡಬೇಕಾಯಿತು. ಅವರಿಗೆ ಇಡೀ ಭಾರತವನ್ನು ಇಸ್ಲಾಮ್‌ಮುಕ್ತಗೊಳಿಸುವ ಮಹತ್ವಾಕಾಂಕ್ಷೆಯಿತ್ತು. ಆದರೆ ರಜಪೂತ ರಾಜರು ಅವರಿಗೆ ಸಹಾಯ ಮಾಡಲಿಲ್ಲ. ತದ್ವಿರುದ್ಧ ಇಸ್ಲಾಮೀ ರಾಜರ ಚಾಕರಿ ಮಾಡಿ ಶಿವಾಜಿ ಮಹಾರಾಜರನ್ನು ಸೋಲಿಸಲು ನಿರಂತರ ಪ್ರಯತ್ನಿಸಿದರು.
ಉ. ಇಂದು ಕೂಡ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಷಯದಲ್ಲಿಯೂ ಅದೇ ನಡೆಯುತ್ತಿದೆ. ಅವರು ಸ್ವಧರ್ಮ, ಸ್ವದೇಶಕ್ಕಾಗಿ ಜೀವದ ಹಂಗು ತೊರೆದು ನಿಃಸ್ವಾರ್ಥವಾಗಿ ಹೋರಾಡುತ್ತಿದ್ದಾರೆ; ಆದರೆ ತಮ್ಮ ಕ್ಷುದ್ರ ಸ್ವಾರ್ಥಕ್ಕಾಗಿ ಹಿಂದೂಗಳೇ ಅವರನ್ನು ನಿರುತ್ಸಾಹಗೊಳಿಸುತ್ತಿದ್ದಾರೆ.
೩. ಮುಸಲ್ಮಾನರು ಕಾಫೀರರಲ್ಲಿ ಭೇದಭಾವವನ್ನು ನೋಡುವುದಿಲ್ಲ; ನಾವು ಮಾತ್ರ ಪಂಥ, ಜಾತಿ, ಪ್ರಾಂತ, ಭಾಷೆ ಇತ್ಯಾದಿಗಳಲ್ಲಿ ಭೇದಭಾವವನ್ನು ಮಾಡುತ್ತಾ ದೇಶಕ್ಕೆ ಹಾನಿ ಮಾಡುತ್ತಿದ್ದೇವೆ !
ಮಹಮ್ಮದ ಬಿನ್ ಕಾಸಿಮ್, ಮಹಮೂದ ಗಝನೀ, ಮಹಮ್ಮದ ಘೋರಿ, ತೈಮೂರಲಂಗ, ಬಾಬರ ಮುಂತಾದ ಇಸ್ಲಾಮೀ ಆಕ್ರಮಕರು ಭಾರತದ ಮೇಲೆ ಅನೇಕ ಬಾರಿ ದಾಳಿ ಮಾಡಿದರು. ಆಗ ಅವರು ಇವನು ಹಿಂದೂ, ಇವನು ಬೌದ್ಧ, ಇವನು ಜೈನ, ಇವನು ಸಿಕ್ಖ್ ಹೀಗೆ ಧರ್ಮಭೇದ ಅಥವಾ ಇವನು ಬ್ರಾಹ್ಮಣ, ಇವನು ಮರಾಠಾ, ಇವನು ತೇಲಿ, ಇವನು ಕುರುಬ, ಇವನು ದಲಿತ ಹೀಗೆ ಜಾತಿಭೇದ ಅಥವಾ ಇವನು ಮಹಾರಾಷ್ಟ್ರೀಯ, ಇವನು ಗುಜರಾತಿ, ಇವನು ಪಂಜಾಬಿ ಹೀಗೆ ಪ್ರಾಂತಭೇದ ಅಥವಾ ಇವನು ಬಡವ, ಇವನು ಶ್ರೀಮಂತ ಎಂಬ ವರ್ಗಭೇದವಾಗಲಿ ಹೀಗೆ ಯಾವುದೇ ಭೇದವನ್ನು ಮಾಡಲಿಲ್ಲ. ೧೯೪೭ ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿ ಮತಾಂಧರು ಹತ್ಯೆ ಮಾಡುವಾಗ, ೧೯೯೦ ರಲ್ಲಿ ಕಾಶ್ಮೀರದಿಂದ ಮುಸಲ್ಮಾನೇತರರನ್ನು ಹೊರದಬ್ಬುವಾಗ, ಉಗ್ರರು ಭಾರತದಲ್ಲಿ ಬಾಂಬ್‌ಸ್ಫೋಟ ಮಾಡಿ ಜೀವಹಾನಿ ಮಾಡುವಾಗ ಯಾವತ್ತೂ ಧರ್ಮಭೇದ, ಜಾತಿಭೇದ ಅಥವಾ ಪ್ರಾಂತಭೇದಗಳಂತಹ ಯಾವುದೇ ಭೇದಭಾವವನ್ನು ಮಾಡಲಿಲ್ಲ. ‘ಮುಸಲ್ಮಾನನಲ್ಲದವನು ಕಾಫೀರ’, ಇದೊಂದೇ ಒರೆಗಲ್ಲ ಹಚ್ಚಿ ಭಾರತೀಯರನ್ನು ನೇರವಾಗಿ ಹತ್ಯೆ ಮಾಡಿದರು; ಆದರೆ ನಾವು ಮಾತ್ರ ಹಿಂದೂ, ಬೌದ್ಧ, ಜೈನ, ಸಿಕ್ಖ್, ಬ್ರಾಹ್ಮಣ, ಗುಜರಾತಿ, ಬಿಹಾರಿ, ಬಂಗಾಲಿ, ಹಿಂದಿ, ಮರಾಠಿ, ತಮಿಳು, ಇತ್ಯಾದಿ ಧರ್ಮ, ಪಂಥ, ಜಾತಿ, ಪ್ರಾಂತ, ಭಾಷೆ ಇಂತಹ ಅನೇಕ ಭೇದಗಳನ್ನಿಟ್ಟುಕೊಂಡು ತಮ್ಮ ಶಕ್ತಿಯನ್ನು ವಿಭಜಿಸುತ್ತಿದ್ದೇವೆ. ಭಾರತದಲ್ಲಿನ ಅನೇಕ ಪಕ್ಷಗಳ ರಾಜಕೀಯ ವ್ಯಾಪಾರವು ಧರ್ಮ, ಪ್ರಾಂತ, ಜಾತಿ, ಭಾಷೆ ಇತ್ಯಾದಿ ನಾನಾವಿಧ ಭೇದಭಾವದಲ್ಲಿಯೇ ನಡೆಯುತ್ತಿದೆ. ಆದ್ದರಿಂದ ಇವೆಲ್ಲ ಭೇದಭಾವವನ್ನು ಹೆಚ್ಚಿಸುವ ಪ್ರಯತ್ನವು ನಿರಂತರವಾಗಿ ನಡೆಯುತ್ತಿರುತ್ತದೆ. ಈ ಸ್ವಾರ್ಥಿ ನೇತಾರರು ಧಾರ್ಮಿಕ, ಜಾತಿಯತೆ, ಭಾಷೆ ಇತ್ಯಾದಿ ಸ್ವಾಭಿಮಾನವನ್ನು ನಿರಂತರ ಜಾಗೃತವಾಗಿಟ್ಟು ತಮ್ಮ ಸ್ವಾರ್ಥವನ್ನು ಸಾಧಿಸುತ್ತಾರೆ ನಿಜ; ಅದರೊಂದಿಗೆ ದೇಶದ ನಾಗರಿಕರನ್ನು ನಿರಂತರ ವಿಭಜಿಸಿ ಹಾಗೂ ಜಗಳವಾಡಿಸಿ ದೇಶಕ್ಕೆ ಅಪಾರ ಹಾನಿಯುಂಟು ಮಾಡಿದರು.
೪. ಸ್ವಾಭಿಮಾನಶೂನ್ಯ ಹಿಂದೂ ಸಂಘಟಿತರಾಗದಿರುವುದು
ಕೇವಲ ೫-೧೦ ಸಾವಿರ ಆಂಗ್ಲರು ೧೫೦ ವರ್ಷ ಆಳಿದರು. ಏಕೆಂದರೆ ಆಂಗ್ಲರು ‘ಒಡೆದಾಳುವ’ ನೀತಿಯನ್ನು ಅವಲಂಬಿಸಿದ್ದರು ಹಾಗೂ ನಾವು ಕೂಡ ಅದಕ್ಕೆ ಬಲಿಯಾದೆವು. ಅಂದಿನ ಬಂಗಾಲ ಪ್ರಾಂತದ ಮೊದಲ ಗವರ್ನರ್ ರಾಬರ್ಟ್ ಕ್ಲೈವ್ ತನ್ನ ಆತ್ಮಕಥೆಯಲ್ಲಿ ಹೇಳಿದ ಒಂದು ಪ್ರಸಂಗ ಹೀಗಿದೆ – ಅವನು ಹೇಳುತ್ತಾನೆ, ‘ಭಾರತದಲ್ಲಿ ನಾವು ಹಿಂದೂಗಳನ್ನು ದಾಸರನ್ನಾಗಿ ಮಾಡುವ ಮೊದಲ ಯುದ್ಧವನ್ನು ಗೆದ್ದು ವಿಜಯದ ಮೆರವಣಿಗೆಯನ್ನು ತೆಗೆದಾಗ ಮೆರವಣಿಗೆಯನ್ನು ನೋಡಲು ರಸ್ತೆಯ ಎರಡೂ ಪಕ್ಕದಲ್ಲಿ ಸೇರಿದ ಸಾವಿರಾರು ಹಿಂದೂಗಳು ಚಪ್ಪಾಳೆ ತಟ್ಟಿ ಆನಂದವನ್ನು ವ್ಯಕ್ತಪಡಿಸುತ್ತಿದ್ದರು. ‘ಯಾವ ದೇಶದಲ್ಲಿ ತಮ್ಮ ರಾಜ ಸೋತಾಗ ಪ್ರಜೆಗಳಿಂದ ಚಪ್ಪಾಳೆ ತಟ್ಟಲಾಗುತ್ತದೋ ಆ ದೇಶವನ್ನು ದಾಸನನ್ನಾಗಿ ಮಾಡುವುದು ಎಷ್ಟು ಸುಲಭವಾಗಿದೆ’, ಎಂಬುದು ನಮಗೆ ಆಗಲೆ ಅರಿವಾಯಿತು. ಅದೇ ಮೆರವಣಿಗೆಯನ್ನು ನೋಡುವ ಪ್ರತಿಯೊಬ್ಬರೂ ಒಂದೊಂದು ಕಲ್ಲನ್ನೆತ್ತಿ ನಮ್ಮ ಮೇಲೆ ಎಸೆಯುತ್ತಿದ್ದರೆ, ಭಾರತ ೧೭೦೦ ರಲ್ಲಿಯೇ ಸ್ವತಂತ್ರವಾಗುತ್ತಿತು. ಆ ಸಮಯದಲ್ಲಿ ಭಾರತದಲ್ಲಿ ನಾವು ಕೇವಲ ೩ ಸಾವಿರ ಆಂಗ್ಲರಿದ್ದೆವು.” ಸ್ವಾತಂತ್ರ್ಯವೀರ ಸಾವರಕರರು ಕೂಡ ಹೇಳಿದ್ದರು, ‘ಭಾರತದಲ್ಲಿನ ೩೦ ಕೋಟಿ ಹಿಂದೂಗಳು ಒಂದೇ ದಿನ ಒಂದೇ ಸಲ ಒಂದೇ ದಿಕ್ಕಿಗೆ ಉಗುಳಿದರೂ, ಆ ಉಗುಳಿನ ಮಹಾಪ್ರವಾಹದಿಂದ ಭಾರತದಲ್ಲಿರುವ ಆಂಗ್ಲರು ಕೊಚ್ಚಿ ಹೋಗುವರು’; ಆದರೆ ದುರ್ದೈವದಿಂದ ಭಾರತದ ಹಿಂದೂಗಳು ಯಾವತ್ತೂ ಸಂಘಟಿತರಾಗಲಿಲ್ಲ ಹಾಗೂ ಇಂದಿಗೂ ಆಗುತ್ತಿಲ್ಲ.
೫. ಭಾರತದ ಮುಸಲ್ಮಾನರು ಮತ್ತು ಹಿಂದೂಗಳಲ್ಲಿನ ಭೇದ
ಅ. ಭಾರತದಲ್ಲಿ ಒಬ್ಬ ಮುಸಲ್ಮಾನನು ಕೊಲ್ಲಲ್ಪಟ್ಟರೂ ಲಕ್ಷಗಟ್ಟಲೆ ಹಿಂದೂಗಳೇ ಹಿಂದೂಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಜಗತ್ತಿನಾದ್ಯಂತ ಅವರನ್ನು ಅವಮಾನಿಸುತ್ತಾರೆ. ಇಂದಿನವರೆಗೆ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಕಾಶ್ಮೀರ ಇತ್ಯಾದಿ ಸ್ಥಳಗಳಲ್ಲಿ ಸಾವಿರಾರು ಹಿಂದೂಗಳನ್ನು ನಿರ್ದಯವಾಗಿ ಕೊಲ್ಲಲಾಯಿತು, ಆದರೆ ಇದನ್ನು ದೇಶದ ಮುಸಲ್ಮಾನರು ಯಾವತ್ತೂ ಖಂಡಿಸಲಿಲ್ಲ.
ಆ. ಇಂದು ಕೂಡ ಸಿ.ಎ.ಎ. (ಪೌರತ್ವ ತಿದ್ದುಪಡಿ ಕಾನೂನು) ಹಾಗೂ ಎನ್.ಆರ್.ಸಿ. (ರಾಷ್ಟ್ರೀಯ ಪೌರತ್ವ ನೊಂದಣಿ ಪ್ರಕ್ರಿಯೆ) ಯ ವಿಷಯದಲ್ಲಿ ಹಿಂದೂಗಳಿಂದ ಇತಿಹಾಸದ ತಪ್ಪುಗಳ ಪುನರಾವರ್ತನೆಯಾಗುತ್ತಿದೆ. ದೇಶದ ಮುಸಲ್ಮಾನರು.
ಈ ಮೇಲಿನ ಎರಡು ಕಾನೂನುಗಳ ವಿರುದ್ಧ ರಸ್ತೆಗಿಳಿದು ಹಿಂಸಾತ್ಮಕ ಆಂದೋಲನವನ್ನು ಮಾಡುತ್ತಿದ್ದರು.
೬. ಭಾರತದಲ್ಲಿ ಪೂರ್ವಕಾಲದಿಂದಲೂ ದೇಶದ್ರೋಹಿಗಳ ಪರಂಪರೆಯಿದೆ
ಯುದ್ಧಕಾಲದಲ್ಲಿ ಶತ್ರುವಿನ ಸೈನ್ಯ ಎಷ್ಟಿದೆ ಎಂದು ಎಣಿಸುವುದಕ್ಕಿಂತ ನಮ್ಮಲ್ಲಿ ದೇಶದ್ರೋಹಿಗಳು (ಪಿತೂರಿ ನಡೆಸುವವರು) ಎಷ್ಟಿದ್ದಾರೆ ? ಎಂಬುದನ್ನು ಎಣಿಸಿ ಮೊದಲು ಅವರ ಹೆಡೆಮುರಿ ಕಟ್ಟಬೇಕು ಎಂದು ಹೇಳುತ್ತಾರೆ; ಏಕೆಂದರೆ, ಈ ದೇಶದ್ರೋಹಿಗಳೆ ಶತ್ರುಸೈನ್ಯಕ್ಕಿಂತ ಹೆಚ್ಚು ಘಾತಕರಾಗಿರುತ್ತಾರೆ. ದುರ್ಭಾಗ್ಯವೆಂದರೆ, ಭಾರತದಲ್ಲಿ ಪೂರ್ವಕಾಲದಿಂದಲೂ ಅಂಭಿ, ಜಯಚಂದ ರಾಠೋಡ, ಸೂರ್ಯಾಜಿ ಪಿಸಾಳ, ಗಣೋಜಿ ಶಿರ್ಕೆ ಮುಂತಾದ ನೂರಾರು ದೇಶದ್ರೋಹಿಗಳ ಪರಂಪರೆ ನಡೆಯುತ್ತಾ ಬಂದಿದೆ. ಇಂತಹ ದೇಶದ್ರೋಹಿಗಳಿಂದಲೆ ಹಿಂದೂಗಳು ಯಾವಾಗಲೂ ಪರಾಭವಗೊಳ್ಳುತ್ತಾ ಬಂದಿದ್ದಾರೆ.
೭. ಬಂಗಾಲದಲ್ಲಿ ಬಾಂಗ್ಲಾದೇಶಿ ನುಸುಳುಕೋರರ ವಸತಿಗಳನ್ನು ಅಧಿಕೃತಗೊಳಿಸುವ ದೇಶದ್ರೋಹಿ ಮಮತಾ !
ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ”ಬಂಗಾಲದಲ್ಲಿನ ಎಲ್ಲ ಬಾಂಗ್ಲಾದೇಶಿ ನುಸುಳುಕೋರರು ಭಾರತೀಯರಾಗಿದ್ದಾರೆ”, ಎನ್ನುತ್ತಾರೆ. ಅವರು ಇದುವರೆಗೆ ಬಂಗಾಲದಲ್ಲಿನ ನುಸುಳುಕೋರರ ೧೧೯ ವಸತಿಗಳನ್ನು ಅಧಿಕೃತಗೊಳಿಸಿ ೨೦೧೪ ರಿಂದ ೧೫ ಸಾವಿರ ಬಾಂಗ್ಲಾದೇಶಿಗಳಿಗೆ ಭಾರತದ ಪೌರತ್ವವನ್ನು ನೀಡಿ ‘ಬಂಗಾಲದಿಂದ ಒಬ್ಬ ಬಾಂಗ್ಲಾದೇಶಿ ನುಸುಳುಕೋರನೂ ಹೊರಗೆ ಹೋಗುವುದಿಲ್ಲ’, ಎಂದು ಘೋಷಿಸಿದರು. ಪೌರತ್ವ ತಿದ್ದುಪಡಿ ಕಾನೂನಿನಿಂದ ಒಬ್ಬ ಭಾರತೀಯ ಮುಸಲ್ಮಾನನ ಪೌರತ್ವವನ್ನೂ ಅಪಹರಿಸಲು ಸಾಧ್ಯವಿಲ್ಲ. ಈ ವಾಸ್ತವಿಕತೆಯನ್ನು ಪದೇ ಪದೇ ಹೇಳಿ ವಿಪಕ್ಷಗಳಿಂದ ಮುಸಲ್ಮಾನರ ಮನಸ್ಸಿನಲ್ಲಿ ಈ ಕಾನೂನಿನ ವಿಷಯದಲ್ಲಿ ವಿಷದ ಬೀಜವನ್ನು ಬಿತ್ತಲಾಗಿದೆ.
೮. ಪ್ರಸ್ತುತ ಕಾಲದಲ್ಲಿ ಪ್ರತಿಯೊಂದು ವಿಷಯಕ್ಕೂ ಪುರಾವೆ ಬೇಕಾಗಿರುವಾಗ ಪೌರತ್ವಕ್ಕಾಗಿ ವಿರೋಧವೇಕೆ ?
ನಿಜವಾಗಿಯೂ ಭಾರತೀಯರಾದವರಿಗೆ ‘ಎನ್.ಆರ್.ಸಿ.’ಯ ಭಯವೇಕೆ ? ಹಾಗೂ ಇಂತಹ ಭಯವಾಗುವವರಿಗೆ ಭಾರತೀಯರೆಂದು ಏಕೆ ಹೇಳಬೇಕು ? ನಗರಗಳಲ್ಲಿನ ಯಾವುದೇ ಒಂದು ಸಂಕೀರ್ಣದಲ್ಲಿನ ವಿಶಿಷ್ಟ ಬಡಾವಣೆಯ ನಿವಾಸಕ್ಕೆ ಹೋಗಲಿಕ್ಕಿದ್ದರೂ ಮೊದಲು ಅಲ್ಲಿರುವ ಸುರಕ್ಷಾರಕ್ಷಕನಿಗೆ ತಮ್ಮ ಗುರುತು ಚೀಟಿಯನ್ನು ತೋರಿಸಬೇಕಾಗುತ್ತದೆ ಹಾಗೂ ಮನೆಯ ಮಾಲೀಕರಿಗೆ ದೂರವಾಣಿ ಕರೆ ಮಾಡಿ ”ಇಂತಹ ವ್ಯಕ್ತಿಯನ್ನು ನಿಮ್ಮ ಮನೆಗೆ ಬರಲು ಬಿಡಬಹುದೇ ?’, ಎಂದು ಕೇಳಬೇಕಾಗುತ್ತದೆ. ಹಾಗೆ ಅನುಮತಿ ಸಿಕ್ಕಿದ ನಂತರವೇ ಹೋಗಬೇಕಾಗುತ್ತದೆ. ಹಾಗಾದರೆ ಒಂದು ದೇಶದಲ್ಲಿ ವಾಸಿಸಲು ಅಲ್ಲಿನ ಪೌರತ್ವ ಲಾಭವನ್ನು ಪಡೆಯಲು ಗುರುತಿನಚೀಟಿಯನ್ನು ಕೇಳಿದರೆ ಇಷ್ಟು ಆಕಾಂಡತಾಂಡವ ಏಕೆ ? ವಿಶೇಷವೆಂದರೆ ಈ ಪೌರತ್ವದ ಪುರಾವೆಯನ್ನು ನಿರಾಕರಿಸುವವರೇ ಹಿಂದೂಗಳ ಆರಾಧ್ಯ ದೇವತೆಯಾಗಿರುವ ಪ್ರಭು ಶ್ರೀರಾಮನ ಅಸ್ತಿತ್ವದ ಸಾಕ್ಷಿಯನ್ನು ಕೇಳಿದ್ದರು. ಇದೇ ಭಾಜಪ ಹಾಗೂ ಹಿಂದುತ್ವ ಇವುಗಳ ವಿರೋಧಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನದ ಮೇಲೆ ಮಾಡಿದ ‘ಸರ್ಜಿಕಲ್ ಸ್ಟ್ರೈಕ್’ ಮತ್ತು ‘ಎಅರ್ ಸ್ಟ್ರೈಕ್’ನ ಸಾಕ್ಷಿಯನ್ನು ಕೇಳುವ ನಾಚಿಕೆಗೇಡಿನ ವರ್ತನೆ ಮಾಡಿದ್ದರು.
೯. ಭಾರತಕ್ಕೆ ಸ್ವಾರ್ಥಿ ಹಾಗೂ ಗುಲಾಮಗಿರಿ ವೃತ್ತಿಯ ಹಿಂದೂಗಳಿಂದಲೆ ನಿಜವಾದ ಅಪಾಯ !
ಮುಖ್ಯವಾಗಿ, ಹೆಚ್ಚಿನ ಹಿಂದೂಗಳಿಗೆ ‘ದೇಶದ ಆಡಳಿತ ಯಾರು ನಡೆಸಬೇಕು ? ಅವರ ಅರ್ಹತೆ ಏನಿರಬೇಕು ?’, ಎಂಬ ಬಗ್ಗೆ ಯಾವುದೇ ಸಂಬಂಧವಿಲ್ಲ. ಅವರಲ್ಲಿ ರಾಷ್ಟ್ರ ಹಾಗೂ ಸ್ವಧರ್ಮದ ಹಿತದ ವಿಚಾರವು ಇರುವುದೇ ಇಲ್ಲ. ಹಣ ಪಡೆದು ಓಟು ಮಾರುವ ಹಾಗೂ ಜಾತಿ ನೋಡಿ ಮತ ನೀಡುವ ಮತದಾರರ ಸಂಖ್ಯೆ ಭಾರತದಲ್ಲಿ ಕೋಟ್ಯವಧಿಯಲ್ಲಿದೆ. ಭಾರತದಲ್ಲಿ ಮತದಾರರಿಗೆ ವಿದ್ಯುತ್, ನೀರು, ಶಿಕ್ಷಣ, ಸಾರಿಗೆ ವ್ಯವಸ್ಥೆ ಇತ್ಯಾದಿ ಅನೇಕ ಸೌಲಭ್ಯಗಳನ್ನು ಉಚಿತ ಕೊಡುವ ಹಾಗೂ ಪೆಟ್ರೋಲ್, ಡಿಸಲ್, ಆಹಾರಧಾನ್ಯ, ತರಕಾರಿ ಇಂತಹ ಅನೇಕ ವಸ್ತುಗಳನ್ನು ಅಗ್ಗವಾಗಿ ಕೊಡುವ ಸರಕಾರ ಬೇಕಾಗಿರುತ್ತದೆ. ಇತ್ತೀಚೆಗೆ ದೆಹಲಿ ಮತ್ತು ಪಂಜಾಬ್‌ನ ಮತದಾರರು ಇದರ ಅನುಭವವನ್ನು ಮಾಡಿಸಿದ್ದಾರೆ. ಎಲ್ಲ ಸೌಲಭ್ಯಗಳನ್ನು ಉಚಿತ ಹಾಗೂ ಎಲ್ಲ ಜೀವನಾವಶ್ಯಕ ವಸ್ತುಗಳನ್ನು ಅಗ್ಗದಲ್ಲಿ ನೀಡುವ ಕೇಜರಿವಾಲ ಇರಲಿ ಅಥವಾ ಓವೈಸೀ ಇರಲಿ, ಭಾರತೀಯ ಮತದಾರರು ಅವರಿಗೆ ಕೈಯೆತ್ತಿ ಮತದಾನ ಮಾಡುತ್ತಾರೆ. ಈ ದೇಶಕ್ಕೆ ಹಾಗೂ ದೇಶದ ಪ್ರಜಾಪ್ರಭುತ್ವಕ್ಕೆ ನಿಜವಾದ ಅಪಾಯವು ಮತಾಂಧ, ಕಟ್ಟರ್ ಮುಸಲ್ಮಾನರಿಗಿಂತ ಇಂತಹ ಸ್ವಾರ್ಥಿ, ಗುಲಾಮರಿಂದ, ಜಾತೀಯ ಹಾಗೂ ಅಜ್ಞಾನಿ ಹಿಂದೂಗಳಿಂದಲೆ ಹೆಚ್ಚು ಪ್ರಮಾಣದಲ್ಲಿದೆ.
– ಶ್ರೀ. ಶಂಕರ ಗೋ. ಪಾಂಡೆ (ಅಕ್ಟೋಬರ್ ೨೦೨೨)