‘ನೀವು ಇತರ ಸಂತರಂತೆ ಸಮಾಜದಲ್ಲಿ ಯಾರನ್ನು ಏಕೆ ಭೇಟಿಯಾಗುವುದಿಲ್ಲ ?’, ಎಂದು ನನಗೆ ಕೆಲವರು ಪ್ರಶ್ನೆಯನ್ನು ಕೇಳಿದ್ದರು. ಅದಕ್ಕೆ ಉತ್ತರವೆಂದರೆ, ನಾನು ಭೇಟಿಯಾದಾಗ ಸ್ಥಳ-ಕಾಲಕ್ಕನುಸಾರ ಬಹಳ ಸೀಮಿತ ಜನರಿಗೆ ಭೇಟಿಯ ನಿಜವಾದ ಲಾಭವಾಗುತ್ತದೆ. ಇತರರನ್ನು ಭೇಟಿಯಾಗುವ ಬದಲು ನಾನು ಹೆಚ್ಚೆಚ್ಚು ಸಮಯ ಗ್ರಂಥಗಳ ಬರವಣಿಗೆಯ ಸೇವೆಯನ್ನು ಮಾಡುತ್ತಿರುತ್ತೇನೆ. ಆದ್ದರಿಂದ ಇದುವರೆಗೆ ೩೬೦ ಗ್ರಂಥಗಳನ್ನು ೧೭ ಭಾಷೆಗಳಲ್ಲಿ ೯೨ ಲಕ್ಷದ ೧೧ ಸಾವಿರ ಪ್ರತಿಗಳನ್ನು ಪ್ರಕಟಿಸಲಾಗಿವೆ. ಜಗತ್ತಿನಾದ್ಯಂತ ಸಾವಿರಾರು ಜಿಜ್ಞಾಸುಗಳಿಗೆ ಈ ಗ್ರಂಥಗಳಿಂದ ಲಾಭವಾಗುತ್ತಿದೆ. ಮುಂದೆ ನೂರಾರು ವರ್ಷಗಳವರೆಗೆ ಲಕ್ಷಗಟ್ಟಲೆ ಜಿಜ್ಞಾಸುಗಳಿಗೂ ಲಾಭ ಆಗಲಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ