೬ ವರ್ಷಗಳಲ್ಲಿ ಹುಲಿ ಮತ್ತು ಚಿರತೆಗಳ ದಾಳಿಯಿಂದ ೩೩೫ ಜನರ ಸಾವು !

ಮಹಾರಾಷ್ಟ್ರದ ಅರಣ್ಯ ವಿಭಾಗದಿಂದ ಇತರ ರಾಜ್ಯಗಳ ಸಲಹೆ ಕೇಳಿದೆ !

ಮುಂಬಯಿ – ಮಹಾರಾಷ್ಟ್ರದಲ್ಲಿ ಕಳೆದ ೬ ವರ್ಷಗಳಲ್ಲಿ ಹುಲಿ ಮತ್ತು ಚಿರತೆಗಳ ದಾಳಿಯಿಂದ ೩೩೫ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷವನ್ನು ಕಡಿಮೆಗೊಳಿಸಲು ಮಹಾರಾಷ್ಟ್ರವು ದೇಶದ ಇತರ ರಾಜ್ಯಗಳ ಅರಣ್ಯ ವಿಭಾಗದಿಂದ ಸಲಹೆ ಕೇಳಿದೆ. ರಾಜ್ಯದಲ್ಲಿ ಸದ್ಯ ೬ ರಾಷ್ಟ್ರೀಯ ಉದ್ಯಾನಗಳು, ೫೦ ಅಭಯಾರಣ್ಯಗಳು, ೨೩ ಬೆಳವಣಿಗೆಗೆ ಮೀಸಲು ಹೀಗೆ ೭೯ ಸಂರಕ್ಷಿತ ಪ್ರದೇಶಗಳಿವೆ. ಅರಣ್ಯ ಕ್ಷೇತ್ರವು ವಿಸ್ತಾರವಾಗಿದೆ; ಆದರೆ ಜನಸಂಖ್ಯೆ ಹೆಚ್ಚಳವಾದಂತೆ ಅರಣ್ಯಗಳ ಅವಲಂಬನೆಯೂ ಹೆಚ್ಚಾಗಿದೆ. ಆದ್ದರಿಂದ ಚಂದ್ರಪುರ ಜಿಲ್ಲೆಯಲ್ಲಿ ಹುಲಿಗಳ ಸಹಿತ ಸಿಂಧುದುರ್ಗ, ಕೊಲ್ಲಾಪುರ, ಗಡಚಿರೋಲಿ ಮತ್ತು ಗೋಂದಿಯಾ ಈ ಜಿಲ್ಲೆಗಳಲ್ಲಿ ಆನೆಗಳೊಂದಿಗಿನ ಸಂಘರ್ಷ ಹೆಚ್ಚಾಗಿರುವುದು ರಾಜ್ಯದ ಅರಣ್ಯ ವಿಭಾಗಕ್ಕೆ ಅರಿವಾಗಿದೆ.

ಸಂಪಾದಕೀಯ ನಿಲುವು

ಕಾಡುಪ್ರಾಣಿಗಳನ್ನು ರಕ್ಷಿಸಬೇಕು ನಿಜ; ಆದರೆ ಅವುಗಳ ದಾಳಿಗಳಿಂದ ಜನರ ರಕ್ಷಣೆ ಕೂಡ ಆಗಬೇಕು, ಎಂಬುದೂ ಅಷ್ಟೇ ಮಹತ್ವದ್ದಾಗಿದೆ. ಇದಕ್ಕಾಗಿ ಜನರು ಅರಣ್ಯಗಳ ಮೇಲೆ ಅತಿಕ್ರಮಣ ಮಾಡದೇ ಪ್ರಾಣಿಗಳು ಜನವಸತಿಗೆ ಬರದಂತೆ ಅರಣ್ಯ ವಿಭಾಗದವರು ಗಮನಹರಿಸಬೇಕು !