ಕ್ವೆಟ್ಟಾ (ಪಾಕಿಸ್ತಾನ) – ಇಲ್ಲಿನ ರೈಲು ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 14 ಸೈನಿಕರು ಸೇರಿದಂತೆ 24 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸ್ಫೋಟದ ಹೊಣೆಯನ್ನು ‘ಬಲೂಚ್ ಲಿಬರೇಷನ್ ಆರ್ಮಿ’ ಸಂಘಟನೆ ಒಪ್ಪಿಕೊಂಡಿದೆ. ಸ್ಫೋಟದ ಸಮಯದಲ್ಲಿ, ನಿಲ್ದಾಣದಲ್ಲಿ ಭಾರಿ ಜನಸಂದಣಿ ಇತ್ತು; ಏಕೆಂದರೆ ಇಲ್ಲಿಂದ ಒಂದು ಪ್ಯಾಸೆಂಜರ್ ರೈಲು ಹೋಗುತ್ತಿತ್ತು ಮತ್ತು ಒಂದು ಪ್ಯಾಸೆಂಜರ್ ರೈಲು ಬರುತ್ತಿತ್ತು.
ಸಂಪಾದಕೀಯ ನುಳಿವುಈ ರೀತಿಯ ಘಟನೆಗಳಿಂದ, ಪಾಕಿಸ್ತಾನವು ‘ನಾವು ಭಯೋತ್ಪಾದನೆಯಿಂದ ಕಂಗೆಟ್ಟಿದ್ದೇವೆ’ ಎಂದು ಮುಕ್ತವಾಗಿ ಹೇಳಬಹುದು ಮತ್ತು ಇನ್ನೊಂದೆಡೆ, ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸಿದೆ ! |