ಭಯೋತ್ಪಾದನೆಯ ವಿರುದ್ಧ ‘ಆತ್ಮನಿರ್ಭರ’ ಭಾರತದ ಹೋರಾಟ !

ಡಾ. ಶೈಲೇಂದ್ರ ದೇವಳಾಣಕರ್

ಭಯೋತ್ಪಾದನೆಯನ್ನು ಎದುರಿಸಲು ಭಾರತ ಅಂತರರಾಷ್ಟ್ರೀಯ ಸ್ತರದಲ್ಲಿ ಹೇಗೆ ಪ್ರಯತ್ನಿಸಿತು ? ಮತ್ತು ಮುಂದೆ ಯಾವ ಪ್ರಯತ್ನಗಳನ್ನು ಮಾಡುವುದು ಅಪೇಕ್ಷಿತವಿದೆ ? ಈ ವಿಷಯದಲ್ಲಿ ವಿದೇಶಗಳಲ್ಲಿ ಘಟನಾವಳಿಗಳ  ನೀತಿ ಮತ್ತು ಚಟುವಟಿಕೆಗಳ ಅಧ್ಯಯನಕಾರರಾದ ಡಾ. ಶೈಲೇಂದ್ರ ದೇವಳಾಣಕರ ಇವರು ‘ಸಹ್ಯಾದ್ರಿ ವಾಹಿನಿಯಲ್ಲಿ ‘ಆತ್ಮನಿರ್ಭರ ಭಾರತ : ಹೊಸ ಭಾರತದ ನಡುಗೆ ಈ ಕಾರ್ಯಕ್ರಮದಲ್ಲಿ ವಿಸ್ತಾರವಾಗಿ ವಿವೇಚನೆಯನ್ನು ಮಾಡಿದ್ದಾರೆ. ಆ ವಿಷಯದ ಬಗ್ಗೆ ಈ ಲೇಖನದಲ್ಲಿ ನೋಡಲಿದ್ದೇವೆ.

೧. ಭಯೋತ್ಪಾದನೆಯನ್ನು ನಿಯಂತ್ರಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತು ‘ಭಯೋತ್ಪಾದನಾವಿರೋಧಿ ಸಮಿತಿ’ ಸ್ಥಾಪನೆ

‘ಇಂದು ಭಯೋತ್ಪಾದನೆಯು ಒಂದು ಅಂತಾರಾಷ್ಟ್ರೀಯ ಸಮಸ್ಯೆ ಯಾಗಿದೆ. ಅಂತಾರಾಷ್ಟ್ರೀಯ ಸಮುದಾಯದಲ್ಲಿ ೧೯೪ ದೇಶಗಳಿದ್ದು ಅದರಲ್ಲಿನ ೧೫೦ ದೇಶಗಳು ಭಯೋತ್ಪಾದನೆಗೆ ತುತ್ತಾಗಿದೆ. ಆದ್ದರಿಂದ ಈ ಸಮಸ್ಯೆಯು ಈಗ ಯಾವುದಾದರೊಂದು ದೇಶಕ್ಕೆ ಸೀಮಿತವಾಗಿಲ್ಲ, ಈಗ ಅದು ಜಾಗತಿಕ ಸ್ತರದ ಸಮಸ್ಯೆಯಾಗಿದೆ. ಆದ್ದರಿಂದ ಈ ಸಮಸ್ಯೆಯನ್ನು ಎದುರಿಸಲಿಕ್ಕಿದ್ದರೆ ಅಂತಾರಾಷ್ಟ್ರೀಯ ಸ್ತರದಲ್ಲಿ ಪ್ರಯತ್ನಗಳನ್ನು ಮಾಡಬೇಕಾಗುವುದು. ಜಾಗತಿಕ ಭಯೋತ್ಪಾದನೆಯ ವಿಕೃತ ಮಾದರಿಯನ್ನು ೨೦೧೧ ನೇ ಇಸ್ವಿಯಲ್ಲಿ ಅಮೇರಿಕಾದ ಮೇಲಾದ ಭಯೋತ್ಪಾದನಾ ದಾಳಿಯಿಂದ ಇಡೀ ಜಗತ್ತು ನೋಡಿತು. ಈ ದಾಳಿಯ ನಂತರ ಇಡೀ ಜಗತ್ತಿಗೆ ಭಯೋತ್ಪಾದನೆಯ ರೂಪ ಎಷ್ಟು ಭೀಕರವಾಗಿರಬಹುದು, ಎಂಬುದರ ಅನುಭವವಾಯಿತು. ಅನಂತರ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತು ಒಂದು ಮಹತ್ವದ ನಿರ್ಣಯವನ್ನು ತೆಗೆದುಕೊಂಡಿತು. ಅದರಲ್ಲಿ ಪ್ರಾಮುಖ್ಯವಾಗಿ ೩ ಅಂಶಗಳನ್ನು ಚರ್ಚೆಗಾಗಿ ತಂದಿತು. ಮೊದಲ ಅಂಶ ಭಯೋತ್ಪಾದಕರಿಗೆ ಯಾರೂ ರಾಜಾಶ್ರಯ ನೀಡಬಾರದು, ಎರಡನೆಯ ಅಂಶ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಯಾರೂ ಆರ್ಥಿಕ ಸಹಾಯವನ್ನು ಮಾಡಬಾರದು ಮತ್ತು ಮೂರನೇ ಅಂಶವೆಂದರೆ ಅಣ್ವಸ್ತ್ರ, ರಾಸಾಯನಿಕ ಅಥವಾ ಜೈವಿಕ ಶಸ್ತ್ರಗಳು ಭಯೋತ್ಪಾದಕರ ಕೈಗೆ ಸಿಗದಂತೆ ನೋಡಿಕೊಳ್ಳುವುದು. ಈ ನಿರ್ಣಯಗಳನ್ನು ವಿಶ್ವ ಸಂಸ್ಥೆಯ ಎಲ್ಲ ಸದಸ್ಯರು ಪಾಲಿಸುತ್ತಾರೆಯೋ, ಇಲ್ಲವೋ ? ಎಂಬುದನ್ನು ನೋಡಲು ೨೦೧೧ ರಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದ್ದು ಅದನ್ನು ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ‘ಭಯೋತ್ಪಾದನಾವಿರೋಧಿ ಸಮಿತಿ’ ಎಂದು ಗುರುತಿಸಲಾಗುತ್ತದೆ. ಕಳೆದ ೧೦ ವರ್ಷಗಳಿಂದ ಈ ಸಮಿತಿಯು ‘ಭಯೋತ್ಪಾದನೆ’ಯ ವಿಷಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಒಮ್ಮತವನ್ನು ಮೂಡಿಸುವುದು ಮತ್ತು ಜನರಲ್ಲಿ ಭಯೋತ್ಪಾದನೆಯ ವಿಷಯದಲ್ಲಿ ಸಂವೇದನಾಶೀಲತೆಯನ್ನು ಹುಟ್ಟಿಸುವ ಕಾರ್ಯ ಮಾಡುತ್ತಿದೆ.

೨. ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ವಿವಿಧ ವೇದಿಕೆಗಳಲ್ಲಿ ಭಯೋತ್ಪಾದನೆಯ ವಿಷಯ ಮಂಡಿಸುವುದರಲ್ಲಿ ಯಶಸ್ಸು

ಭಯೋತ್ಪಾದನೆಯ ಸಮಸ್ಯೆಯ ಬಗ್ಗೆ ಪಾಕಿಸ್ತಾನದ ನಿಲುವು ದ್ವಿಮುಖವಾಗಿದೆ. ಅದು ಒಂದೆಡೆ ತಾನೇ ಭಯೋತ್ಪಾದನೆಗೆ ತುತ್ತಾದ ದೇಶವಾಗಿದೆ ಎಂದು ತೋರ್ಪಡಿಸಲು ಪ್ರಯತ್ನಿಸುತ್ತಿರುತ್ತದೆ ಮತ್ತು ಇನ್ನೊಂದೆಡೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಯೋತ್ಪಾದಕ ಸಂಘಟನೆಗಳಿಗೆ ಸಹಾಯವನ್ನು ಮಾಡುತ್ತದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುಮಾರು ೪೨ ಭಯೋತ್ಪಾದನಾ ತರಬೇತಿ ಕೇಂದ್ರ ಗಳಿವೆ ಮತ್ತು ಆ ಕೇಂದ್ರಗಳಲ್ಲಿ ಅನೇಕ ಭಯೋತ್ಪಾದಕರಿಗೆ ತರಬೇತಿಯನ್ನು ನೀಡಲಾಗುತ್ತದೆ. ಅದರಲ್ಲಿ ಲಷ್ಕರ-ಎ-ತೊಯಬಾ, ಜೈಶ-ಎ-ಮಹಮ್ಮದನಂತಹ ಅನೇಕ ಸಂಘಟನೆಗಳಿವೆ. ಅವು ಭಾರತದಲ್ಲಿ ಉಗ್ರವಾದಿ ಕೃತ್ಯಗಳನ್ನು ಮಾಡುತ್ತಿರುತ್ತವೆ. ‘ಪಾಕ್ ಬೆಂಬಲಿತ ಭಯೋತ್ಪಾದಕ ಸಂಘಟನೆಗಳನ್ನು ಸ್ಥಳೀಯ ಸಂಘಟನೆಗಳೆಂದು ದುರ್ಲಕ್ಷಿಸಬಾರದು. ಅವುಗಳಿಗೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟಿದೆ’, ಎಂಬುದನ್ನು ಭಾರತ ನಿರಂತರವಾಗಿ ಅಂತಾರಾಷ್ಟ್ರೀಯ ಸ್ತರದಲ್ಲಿ ಮಂಡಿಸಲು ಪ್ರಯತ್ನಿಸಿದೆ. ಅಂದರೆ ನಿಮ್ಮ ಸಂಘರ್ಷವು ಹೇಗೆ ಅಂತಾರಾಷ್ಟ್ರೀಯ ಭಯೋತ್ಪಾದನೆಯ ವಿರುದ್ಧವಿದೆಯೋ, ಹಾಗೆಯೇ ಅದು ಸ್ಥಳೀಯ ಸ್ತರದ ಭಯೋತ್ಪಾದನೆಯ ವಿರುದ್ಧವೂ ಇರಬೇಕು, ಎಂದು ಭಾರತ ಅನೇಕ ಬಾರಿ ಅಮೇರಿಕಾಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆ. ಈ ವಿಷಯದಲ್ಲಿ ದೊಡ್ಡ ರಾಜಕಾರಣವಿದೆ. ಈ ರಾಜಕಾರಣದಿಂದಾಗಿ ಅನೇಕ ಬಾರಿ ಸ್ಥಳೀಯ ಭಯೋತ್ಪಾದನೆಯ ಕಡೆಗೆ ದುರ್ಲಕ್ಷಿಸಲಾಗುತ್ತದೆ. ಸದ್ಯ ಭಾರತವು ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ಅಸ್ಥಾಯೀ ಸದಸ್ಯವಾಗಿದೆ. ಅದು ಅಗಸ್ಟ್ ತಿಂಗಳಲ್ಲಿ ಅಧ್ಯಕ್ಷ ಸ್ಥಾನದಲ್ಲಿಯೂ ಇತ್ತು. ಆಗ ಕೂಡ ಭಾರತ ತನ್ನ ಅಧ್ಯಕ್ಷ ಹುದ್ದೆಯ ಮುಖ್ಯ ವಿಷಯ (ಥೀಮ್) ಭಯೋತ್ಪಾದನೆಯನ್ನೆ ಇಟ್ಟಿತ್ತು. ಆಗ ಭಾರತ ಅಫ್ಘಾನಿಸ್ತಾನದಲ್ಲಿನ ತಾಲೀಬಾನರ ವಿಷಯದಲ್ಲಿ ಒಂದು ಮಹತ್ವದ ತೀರ್ಮಾನವನ್ನು ಅನುಮೋದಿಸಿತ್ತು. ‘ಜಿ-೨೦’, ‘ಶಾಂಘಾಯ ಕೋ-ಅಪರೇಶನ್ ಆರ್ಗನೈಸೇಶನ್’ನಂತಹ ವಿವಿಧ ವೇದಿಕೆಗಳಲ್ಲಿ ಭಾರತವು ನಿರಂತರವಾಗಿ ಭಯೋತ್ಪಾದನೆಯ ಸಮಸ್ಯೆಯನ್ನು ಅತ್ಯಂತ ಆದ್ಯತೆಯಿಂದ ಮಂಡಿಸಿದೆ. ಭಾರತವು ಸ್ವತಃ ಭಯೋತ್ಪಾದನೆಯಿಂದ ಪೀಡಿತ ದೇಶವಾಗಿದೆ. ಆದ್ದರಿಂದ ಭಯೋತ್ಪಾದನೆ ನಿರ್ಮೂಲನೆಗಾಗಿ ಜಾಗತಿಕ ಸ್ತರದಲ್ಲಿ ಒಮ್ಮತ ವನ್ನು ಮೂಡಿಸಲು ಪ್ರಯತ್ನಿಸುವ ಭಾರತವನ್ನು ಪ್ರಶಂಸಿಸಲಾಗುತ್ತಿದೆ.

೩. ವಿದೇಶಸಚಿವ ಡಾ.ಎಸ್. ಜಯಶಂಕರ ಇವರು ಭಯೋತ್ಪಾದನೆಯ ನಿಯಂತ್ರಣಕ್ಕಾಗಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮಹತ್ವದ ಅಂಶಗಳನ್ನು ಮಂಡಿಸುವುದು

‘ಎಫ್.ಎ.ಟಿ.ಎಫ್.’ (ಫೈನಾನ್ಶಿಯಲ್ ಎಕ್ಶನ್ ಟಾಸ್ಕ್ ಫೋರ್ಸ್) ಈ ಸಂಘಟನೆಯು ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಮಾಡುವ ದೇಶಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಅದು ‘ಗ್ರೇ’ ಮತ್ತು ‘ಕಪ್ಪು’ ಸೂಚಿಯನ್ನು ಘೋಷಿಸುತ್ತದೆ. ಈ ಪಟ್ಟಿಯಲ್ಲಿ ಸಮಾವೇಶಗೊಳಿಸಿದ ದೇಶಗಳ ಮೇಲೆ ಪರೋಕ್ಷವಾಗಿ ಆರ್ಥಿಕ ನಿರ್ಬಂಧವನ್ನು ಹೇರಿದಂತಹ ಪರಿಸ್ಥಿತಿ ಇರುತ್ತದೆ. ಇದರಿಂದ ಅವರಿಗೆ ಯಾವುದೇ ಅಂತರರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ಕೊಡುವುದಿಲ್ಲ ಮತ್ತು ಅವರ ದೇಶಗಳಲ್ಲಿ ಹೆಚ್ಚು ವಿದೇಶಿ ಹೂಡಿಕೆ ಆಗುವುದಿಲ್ಲ. ಪಾಕಿಸ್ತಾನ ದೇಶವು ಈ ಹಿಂದೆ ಕಪ್ಪು ಪಟ್ಟಿಯಲ್ಲಿತ್ತು. ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಿಗೆ ಸಮರ್ಥನೆ ನೀಡುವ ವಿಷಯದಲ್ಲಿ ಅದರ ಹೆಸರು ಜಗತ್ತಿನಲ್ಲಿ ಪ್ರಖ್ಯಾತವಿದೆ. ಅಮೇರಿಕಾಗೆ ಬೇಕಾಗಿದ್ದ ಭಯೋತ್ಪಾದಕ ಓಸಾಮಾ ಬಿನ್ ಲಾದೇನ ಕೊನೆಗೆ ಪಾಕಿಸ್ತಾನದಲ್ಲಿಯೆ ಸಿಕ್ಕನು ಮತ್ತು ಅವನನ್ನು ಅಲ್ಲಿಯೇ ಸಾಯಿಸಲಾಯಿತು. ಇಂದು ಕೂಡ ಜಗತ್ತಿನಲ್ಲಿರುವ ದೊಡ್ಡ ಉಗ್ರವಾದಿ ಸಂಘಟನೆಗಳಲ್ಲಿನ ಶೇ. ೮೫ ರಷ್ಟು ಸಂಘಟನೆಗಳ ಕೇಂದ್ರಗಳು ಪಾಕಿಸ್ತಾನದಲ್ಲಿವೆ. ಆದ್ದರಿಂದ ಭಾರತವೂ ಪಾಕಿಸ್ತಾನವನ್ನು ಕಪ್ಪು ಸೂಚಿಯಲ್ಲಿ ಸೇರಿಸಬೇಕು, ಎಂದು ನಿರಂತರ ಬೇಡಿಕೆಗಳು ಬರುತ್ತಿವೆ; ಆದರೆ ಈಗ ಅದು ಕಪ್ಪು ಪಟ್ಟಿಯಿಂದ ‘ಗ್ರೇ’ ಪಟ್ಟಿಗೆ ಬಂದಿದೆ. ಇದರ ಹಿಂದೆಯೂ ಒಂದು ದೊಡ್ಡ ಅಂತಾರಾಷ್ಟ್ರೀಯ ರಾಜಕಾರಣವಿದೆ. ಸದ್ಯ ಚೀನಾವು ಅದರ ಅಧ್ಯಕ್ಷನಾಗಿರುವುದರಿಂದ ಪಾಕಿಸ್ತಾನವು ತನ್ನನ್ನು ಬಿಡಿಸಿಕೊಂಡಿದೆ. ಈ ವಿಷಯದಲ್ಲಿ ಭಾರತ ತೀವ್ರ ಆಕ್ಷೇಪವನ್ನು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ವಿದೇಶ ಮಂತ್ರಿಗಳಾದ ಡಾ. ಎಸ್. ಜಯಶಂಕರ ಇವರು ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ಭಯೋತ್ಪಾದನಾ ವಿರೋಧಿ ಸಮಿತಿ ಮತ್ತು ‘ಎಫ್.ಎ.ಟಿ.ಎಫ್.’ ಇವರಲ್ಲಿ ಸಮನ್ವಯವಿರಬೇಕು, ಹಾಗೆಯೇ ಈ ‘ಎಫ್.ಎ.ಟಿ.ಎಫ್.’ ಭಯೋತ್ಪಾದನಾವಿರೋಧಿ ಸಮಿತಿಯ ಅಂತರ್ಗತ  ಕಾರ್ಯವನ್ನು ಮಾಡಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

೪. ಪಾಕಿಸ್ತಾನಿ ಭಯೋತ್ಪಾದನೆಯ ವಿರುದ್ಧದ ಕಾರ್ಯಾಚರಣೆಯಲ್ಲಿ ರಾಜಕಾರಣ ಮಾಡುವ ಚೀನಾಗೆ ಕೂಡ ಭವಿಷ್ಯದಲ್ಲಿ ಭಯೋತ್ಪಾದನೆಯ ಬಿಸಿ ತಟ್ಟುವ ಸಾಧ್ಯತೆ ಇದೆ

ಭಯೋತ್ಪಾದನೆಯ ವಿಷಯದಲ್ಲಿ ಯಾವ ರೀತಿ ಪಾಕಿಸ್ತಾನದ ದ್ವಿಮುಖ ನಿಲುವಿದೆಯೋ ಹಾಗೆಯೇ ಚೀನಾ ಕೂಡ ಇದರಲ್ಲಿ ರಾಜಕಾರಣ ಮಾಡಲು ಪ್ರಯತ್ನಿಸುತ್ತದೆ. ಡಾ. ಜಯಶಂಕರ ಇವರು ಭಯೋತ್ಪಾದನೆಯ ಸಮಸ್ಯೆಯಿಂದ ಸಂಪೂರ್ಣ ಜಗತ್ತಿಗೆ ತೊಂದರೆಯಾಗುತ್ತಿದೆ, ಆದ್ದರಿಂದ ಇದರಲ್ಲಿ ರಾಜಕಾರಣವನ್ನು ತರದೆ ಅದಕ್ಕೂ ಆಚೆಗೆ ಹೋಗಿ ವಿಚಾರ ಮಾಡಬೇಕು ಎನ್ನುವ ಅತ್ಯಂತ ಮಹತ್ವದ ಅಂಶವನ್ನು ಮಂಡಿಸಿದ್ದಾರೆ. ಚೀನಾ ಪಾಕಿಸ್ತಾನದ ಅತೀ ಸಮೀಪದ ಮಿತ್ರವಾಗಿದೆ. ಆದ್ದರಿಂದ ಪಾಕಿಸ್ತಾನವನ್ನು ಸಂತೋಷಪಡಿಸಲು ಈ ಎಲ್ಲ ವಿಷಯಗಳಲ್ಲಿ ಚೀನಾ ಅಡ್ಡಗಾಲಿಡಲು ಪ್ರಯತ್ನಿಸುತ್ತದೆ. ವರ್ಷ ೨೦೦೮ ರಲ್ಲಿ ಮುಂಬಯಿಯಲ್ಲಾದ ಭಯೋತ್ಪಾದಕ ಆಕ್ರಮಣದ ಸೂತ್ರ ದಾರ ರನ್ನು ‘ಜಾಗತಿಕ ಉಗ್ರವಾದಿ’ಗಳೆಂದು ವಿಶ್ವ ಸಂಸ್ಥೆ ಘೋಷಿಸ ಬೇಕೆಂದು’, ಭಾರತವು ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ೪ ಬಾರಿ ಠರಾವನ್ನು ಮಂಡಿಸಿತು; ಆದರೆ ಪ್ರತಿ ಬಾರಿಯೂ ಚೀನಾ ನಕಾರಾಧಿಕಾರವನ್ನು ಉಪಯೋಗಿಸಿ ಆ ಠರಾವನ್ನು ನಿರಾಕರಿಸಿತು.

‘ಚೀನಾದ ಈ ನಿಲುವಿನಿಂದ ಪಾಕಿಸ್ತಾನಕ್ಕೆ ಮುಕ್ತ ಮಾರ್ಗ ಸಿಗುತ್ತಿದೆ. ಇಂದು ಯಾವ ಭಯೋತ್ಪಾದಕ ಸಂಘಟನೆ ಗಳು ಭಾರತವನ್ನು ಗುರಿಪಡಿಸುತ್ತಿವೆಯೋ, ಆ ಭಯೋತ್ಪಾದಕ ಸಂಘಟನೆಗಳು ನಾಳೆ ಚೀನಾವನ್ನೂ ಗುರಿ ಪಡಿಸಲು ಆರಂಭಿಸಬಹುದು, ಈ ಕಲ್ಪನೆ ಅದಕ್ಕಿಲ್ಲ. ಚೀನಾ ಇಂತಹ ರಾಜಕಾರಣವನ್ನು ನಿಲ್ಲಿಸದಿದ್ದರೆ, ಅಮೇರಿಕಾದಲ್ಲಿ ೧೧ ಸಪ್ಟೆಂಬರ ೨೦೦೧ ರಲ್ಲಿ ಹೇಗೆ ಆಕ್ರಮಣವಾಯಿತೊ, ಅಂತಹ ಆಕ್ರಮಣಗಳು ಬೀಜಿಂಗ್, ಶಾಂಘಾಯ ಇತ್ಯಾದಿ ನಗರಗಳಲ್ಲಿಯೂ ಆಗಬಹುದು. ಆದ್ದರಿಂದ ಭಯೋತ್ಪಾದನೆಯ ಸಮಸ್ಯೆಯ ವಿಷಯದಲ್ಲಿ ಯಾವುದೇ ದೇಶವು ರಾಜಕಾರಣವನ್ನು ಮಾಡಬಾರದು’, ಎಂಬ ಡಾ. ಜಯಶಂಕರ ಇವರು ಮಂಡಿಸಿದ ನಿಲುವು ಅತ್ಯಂತ ಉತ್ಕೃಷ್ಟವಾಗಿದೆ. ವಿಶೇಷವಾಗಿ ಭದ್ರತಾ ಪರಿಷತ್ತಿನ ಮುಖ್ಯ ೫ ಸ್ಥಾಯೀ ಸದಸ್ಯರಂತೂ ಇದರಲ್ಲಿ ಸ್ವಲ್ಪವೂ ರಾಜಕಾರಣ ಮಾಡಬಾರದು. ಭಯೋತ್ಪಾದನೆಯು ಜಾಗತಿಕ ಮಟ್ಟದ ಸಮಸ್ಯೆಯಾಗಿರುವುದರಿಂದ ಅದರ ಮೇಲೆ ಸಾಮೂಹಿಕ ಪ್ರಯತ್ನಗಳಾಗುವ ಅವಶ್ಯಕತೆಯಿದೆ.

೫. ಭಯೋತ್ಪಾದಕ ಸಂಘಟನೆಗಳಿಗೆ ಆಧುನಿಕ ತಂತ್ರಜ್ಞಾನದ ಸಹಾಯ ಸಿಗುತ್ತಿರುವುದರಿಂದ ದೊಡ್ಡ ಅಪಾಯವುಂಟಾಗಬಹುದು

ಭಾರತದಲ್ಲಿ ಇತ್ತೀಚೆಗಷ್ಟೆ ವಿಶ್ವ ಸಂಸ್ಥೆಯ ಭಯೋತ್ಪಾದನಾ ವಿರೋಧಿ ಸಮಿತಿಯ ಸಭೆ ಆಯಿತು. ಈ ಸಭೆಯಲ್ಲಿ ಉಗ್ರ ವಾದಿಗಳು ಹೊಸ ಹೊಸ ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವ ಬಗ್ಗೆ ಬೆಳಕನ್ನು ಚೆಲ್ಲಲಾಗಿತ್ತು. ಅನೇಕ ಬಾರಿ ಹವಾಲಾದ ಮಾಧ್ಯಮದಿಂದ ವಿದೇಶಕ್ಕೆ ಹಣವನ್ನು ಕಳುಹಿಸಲಾಗುತ್ತದೆ. ಅದರಿಂದ ಭಯೋತ್ಪಾದಕರಿಗೆ ಆರ್ಥಿಕ ಸಹಾಯವನ್ನು ಮಾಡ ಲಾಗುತ್ತದೆ.

ರಿಯಲ್ ಎಸ್ಟೇಟ್, ಶಸ್ತ್ರಗಳ ವ್ಯಾಪಾರ ಮತ್ತು ಅಮಲು ಪದಾರ್ಥಗಳ ವ್ಯಾಪಾರದಿಂದ ಹಣವನ್ನು ಸಂಗ್ರಹಿಸಲಾಗುತ್ತದೆ ಮತ್ತು ಈ ಎಲ್ಲ ಹಣವನ್ನು ಭಯೋತ್ಪಾದಕರ ಶಸ್ತ್ರ ಮತ್ತು ಅವುಗಳ ಉಪಯೋಗಕ್ಕಾಗಿ ಮಾಡಲಾಗುತ್ತದೆ. ಈ ಸಮಿತಿಯ ಬೈಠಕ್‌ನಲ್ಲಿ ‘ಕ್ರಿಪ್ಟೋ ಕರನ್ಸಿ’ಯ (ಆಭಾಸಿ ಚಲನ) ಅಂಶವನ್ನು ಮಂಡಿಸಲಾಗಿತ್ತು. ಕ್ರಿಪ್ಟೋ ಕರನ್ಸಿಯ ಮೂಲಕವೂ ಭಯೋತ್ಪಾಧಕರಿಗೆ ಆರ್ಥಿಕ ಸಹಾಯವನ್ನು ಮಾಡಲಾಗುತ್ತದೆ.

ಈ ಸಭೆಯಲ್ಲಿ ಪಾಕಿಸ್ತಾನ ಮತ್ತು ಪಾಕ್‌ಪುರಸ್ಕೃತ ಭಯೋತ್ಪಾದಕರಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಡ್ರೋನ್‌ಗಳ ಉಪಯೋಗವಾಗುತ್ತಿದೆ. ಡ್ರೋನ್‌ಗಳ ಮಾಧ್ಯಮದಿಂದ ಭಾರತದಲ್ಲಿ ಅಮಲು ಪದಾರ್ಥಗಳ ಕಳ್ಳಸಾಗಾಟ ನಡೆಯುತ್ತದೆ. ಇಂತಹ ಅಪಾಯವನ್ನು ತಪ್ಪಿಸಲು ಭಯೋತ್ಪಾದಕರಿಗೆ ಆಧುನಿಕ ತಂತ್ರಜ್ಞಾನ ಸಿಗಬಾರದೆಂದು ಜಾಗತಿಕ ಸ್ತರದಲ್ಲಿ ಪ್ರಯತ್ನಿಸುವುದು ಅತ್ಯಂತ ಆವಶ್ಯಕವಾಗಿದೆ ಎಂದು ಭಾರತ ಹೇಳಿದೆ.

೬. ಭಯೋತ್ಪಾದನೆಯನ್ನು ತಡೆಯಲು ಭಾರತದ ಅಂತರರಾಷ್ಟ್ರೀಯ ಸ್ತರದಲ್ಲಿನ ಮಹತ್ವಪೂರ್ಣ ಯೋಗದಾನ ಮತ್ತು ಮುಂದಿನ ನಿಲುವು !

ಭಯೋತ್ಪಾದನೆಯನ್ನು ತಡೆಯಲು ಜಾಗತಿಕ ಮಟ್ಟದಲ್ಲಿ ಭಾರತದ ಯೋಗದಾನವು ಅತ್ಯಂತ ಮಹತ್ವದ್ದಾಗಿದೆ. ೧೯೮೦ ರ ದಶಕದ ಉತ್ತರಾರ್ಧದಿಂದ ಭಾರತವು ಗಡಿಯಾಚೆಯಿಂದ ಆಗುವ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಪಾಕ್‌ಪುರಸ್ಕೃತ ಭಯೋತ್ಪಾದಕ ಸಂಘಟನೆಗಳಿಗೆ ಅಫ್ಘಾನಿಸ್ತಾನದಲ್ಲಿನ ಅಲ್-ಕಾಯದಾದೊಂದಿಗೆ ಬಹಳ ಸಮೀಪದ ಸಂಬಂಧವಿತ್ತು. ೧೯೯೬ ರಿಂದ ೨೦೦೦ ಈ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿನ ತಾಲಿಬಾನ್‌ನ ಮೊದಲ ಸರಕಾರವಿತ್ತು. ಆ ಕಾಲಾವಧಿಯಲ್ಲಿ ಈ ಎಲ್ಲ ಭಯೋತ್ಪಾದಕರು ಅಲ್ಲಿ ತರಬೇತಿಯನ್ನು ಪಡೆದಿದ್ದರು. ಭಾರತ ಈ ವಿಷಯವನ್ನು ಕೇವಲ ವಿಶ್ವ ಸಂಸ್ಥೆಯಲ್ಲಿ ಮಾತ್ರವಲ್ಲ, ಅನೇಕ ದೊಡ್ಡ ಜಾಗತಿಕ ವೇದಿಕೆಗಳಲ್ಲಿ ಮಂಡಿಸಿದೆ.

ಭಯೋತ್ಪಾದನೆಯ ಸಮಸ್ಯೆಯು ಯಾವುದೇ ಒಂದು ರಾಷ್ಟ್ರಕ್ಕೆ ಸೀಮಿತವಾಗಿಲ್ಲ, ಈಗ ಅದು ಸಂಪೂರ್ಣ ಜಗತ್ತಿನ ಸಮಸ್ಯೆಯಾಗಿದೆ. ಆದುದರಿಂದ ಅದಕ್ಕಾಗಿ ಸಾಮೂಹಿಕವಾಗಿ ಪ್ರಯತ್ನಿಸುವುದು ಆವಶ್ಯಕವಾಗಿದೆ. ಭಾರತಕ್ಕೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶ ಸಿಗಲಿದೆ. ಭಾರತ ೨೦೨೩ ರಲ್ಲಿ ‘ಜಿ ೨೦’ ಈ ಅತ್ಯಂತ ಮಹತ್ವದ ಅಂತಾರಾಷ್ಟ್ರೀಯ ಸಂಘಟನೆಯ ಅಧ್ಯಕ್ಷ ಇರಲಿದೆ. ಈಗ ಈ ವಿಷಯವನ್ನು ‘ಜಿ ೨೦’ಯ ವ್ಯಾಸಪೀಠದಲ್ಲಿ ಮಂಡಿಸಬಹುದು. (ಪ್ರಸ್ತುತ ಅದರ ಅಧ್ಯಕ್ಷತೆಯು ಭಾರತಕ್ಕೆ ಲಭಿಸಿದೆ)

– ಡಾ. ಶೈಲೇಂದ್ರ ದೇವಳಾಣಕರ್, ವಿದೇಶಗಳಲ್ಲಿನ ಘಟನಾ ವಳಿಗಳ ವಿಷಯಗಳ ಅಧ್ಯಯನಕಾರರು  (೩೧.೧೦.೨೦೨೨) (ಆಧಾರ : ಫೇಸ್ ಬುಕ್ ಪೇಜ್)