`ಜಿಹಾದ್ ನಡೆಸುವ ಅಧಿಕಾರ ಕೇವಲ ಇಸ್ಲಾಮಿಕ್ ಸ್ಟೇಟ್‍ಗೆ ಇದೆ !’ – ಅಂತೆ – ಪಾಕಿಸ್ತಾನಿ ಮೌಲ್ವಿಯ ಫತ್ವಾ

`ತಹರಿಕ-ಎ-ತಾಲಿಬಾನ್ ಪಾಕಿಸ್ತಾನ್’ನ ದಾಳಿಯ ನಂತರ ಪಾಕಿಸ್ತಾನಿ ಮೌಲ್ವಿಯಿಂದ ಫತ್ವಾ !

(ಮೌಲ್ವಿ ಎಂದರೆ ಇಸ್ಲಾಂನ ಧಾರ್ಮಿಕ ಮುಖಂಡ)

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಪ್ರಸಿದ್ಧ ಮೌಲ್ವಿಯು ಭಯೋತ್ಪಾದನೆಯ ವಿರುದ್ಧ ೧೪ ಪುಟದ ಫತ್ವಾ ತೆಗೆದು ಅದರಲ್ಲಿ ಭಯೋತ್ಪಾದಕರನ್ನು ನಿಂದಿಸುತ್ತಾ `ಜಿಹಾದ್ ನಡೆಸುವ ಅಧಿಕಾರ ಕೇವಲ ಇಸ್ಲಾಮಿಕ್ ಸ್ಟೇಟ್ ಗೆ ಇದೆ’, ಎಂದು ಹೇಳಲಾಗಿದೆ. ಈ ಫತ್ವಾ `ತಹರೀಕ-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ಈ ಭಯೋತ್ಪಾದಕ ಸಂಘಟನೆಯಿಂದ ಪಾಕಿಸ್ತಾನದ ಖೈಬರ್ ಪಖ್ಟೂನಕ್ವಾ ಮತ್ತು ಬಲುಚಿಸ್ತಾನ್ ಪ್ರಾಂತ್ಯದಲ್ಲಿ ಸುರಕ್ಷಾ ದಳದ ಮೇಲೆ ಬಲವಾಗಿ ದಾಳಿ ಮಾಡಿದ ನಂತರ ಈ ಫತ್ವಾ ತೆಗೆಯಲಾಗಿದೆ.

ಪಾಕಿಸ್ತಾನದ ಖೈಬರ್ ಪಖ್ಟೂನಕ್ವಾ ಪ್ರಾಂತದಲ್ಲಿ ದಾರೂಲ್ ಉಲುಮ್ ಪೇಶಾವರ್ ಮತ್ತು ಜಾಮಿಯಾ ದಾರೂಲ್ ಉಲುಮ್ ಹಕ್ಕಾನಿಯಾ ಸಹಿತ ಅನೇಕ ಮದರಸಾಗಳ ಜೊತೆ ಸಂಬಂಧಿಸಿದ ಮೌಲ್ವಿಗಳು ಫತ್ವಾ ತೆಗೆದಿದ್ದಾರೆ. ಇದರಲ್ಲಿ, ರಾಜ್ಯದಲ್ಲಿನ ಪೊಲೀಸ ಮತ್ತು ಸೈನ್ಯ ಇದರ ವಿರುದ್ಧ ಯಾರೂ ಕೂಡ ಶಸ್ತ್ರ ಕೈಗೆ ಎತ್ತಿಕೊಳ್ಳವುದು, ಇದು ಶರಿಯತ್ ಕಾನೂನಿನ ಮತ್ತು ದೇಶದ ವಿರುದ್ಧವಾಗಿದೆ. ಯಾರಾದರೂ ಪಾಕಿಸ್ತಾನದ ಸಂವಿಧಾನ ಮತ್ತು ಕಾನೂನಿನ ವಿರುದ್ಧ ಬಂಡಾಯ ನಡೆಸರೋ, ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ನೀಡಲಾಗುವುದು.

ಪ್ರತಿಯೊಬ್ಬರಿಗೂ `ಜಿಹಾದ್’ (ಪವಿತ್ರ ಯುದ್ಧ) ಘೋಷಿಸುವ ಅಧಿಕಾರವಿಲ್ಲ. ಈ ವಿಶೇಷ ಅಧಿಕಾರ ಕೇವಲ `ಇಸ್ಲಾಮಿಕ್ ಸ್ಟೇಟ್’ನ ಮುಖಂಡರಿಗೆದೆ ಎಂದು ಹೇಳಿದರು.

ಸಣಪಾದಕೀಯ ನಿಲುವು

ಕಳೆದ ೩ ದಶಕಗಲಿಗಿಂತಲೂ ಹೆಚ್ಚಿನ ಕಾಲ ಪಾಕಿಸ್ತಾನವು ಭಾರತದಲ್ಲಿ ಜಿಹಾದಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಾ ಬಂದರು ಪಾಕಿಸ್ತಾನದ ಈ ಮೌಲ್ವಿಗೆ ಅದು ತಿಳಿದಿರಲಿಲ್ಲವೇ; ಆದರೆ ಈಗ ಇದೇ ಜಿಹಾದಿ ಭಯೋತ್ಪಾದಕರು ಪಾಕಿಸ್ತಾನವನ್ನೇ ನಾಶ ಮಾಡುತ್ತಿರುವಾಗ ಪಾಕಿಸ್ತಾನದ ಮೌಲ್ವಿಗೆ ಎಚ್ಚರ ಆಗಿದೆ ಮತ್ತು ಜಿಹಾದನ ತಥಾ ಕಥಿತದ `ನಿಜವಾದ’ ಅರ್ಥ ತಿಳಿಯುತ್ತಿದೆ, ಎಂಬುದನ್ನು ಗಮನದಲ್ಲುಟ್ಟುಕೊಳ್ಳಿ !

ಇಸ್ಲಾಮಿಕ್ ಸ್ಟೇಟ್ ನಿಂದ ಯಾವ ರೀತಿ ಜನರ ಹತ್ಯೆ ಮಾಡಲಾಯಿತು, ಅದಕ್ಕೆ ಪಾಕಿಸ್ತಾನಿ ಮೌಲ್ವಿ `ಜಿಹಾದ್’, ಎಂದರೆ `ಪವಿತ್ರ ಯುದ್ಧ’ ಅನ್ನುತ್ತಿದ್ದರೆ ಇದು ಇಸ್ಲಾಮಿಗೆ ದ್ರೋಹವಾಗಿದೆ. ಹೀಗೆ ನಿಜವಾದ ಅರ್ಥ ಇಸ್ಲಾಮವಾದಿಗಳು ಹೇಳಬೇಕು !