ಸೋನಿ ಟಿವಿಯ ಹಿಂದೂದ್ವೇಷ ಮತ್ತು ಮುಸ್ಲಿಂ ಪ್ರೀತಿ ತಿಳಿಯಿರಿ !

೧. ಕಾಂಗ್ರೆಸಿನಿಂದ ಶ್ರೀರಾಮನ ಅವಹೇಳನ !

ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ಉತ್ತರಪ್ರದೇಶದ ಮುರಾದಾಬಾದ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭಗವಾನ್ ಶ್ರೀರಾಮನಿಗೆ ಹೋಲಿಸಿ, ಕಾಂಗ್ರೆಸ್ಸಿಗರನ್ನು ‘ಭರತ ‘ಎಂದು ಕರೆದಿದ್ದಾರೆ.

೨. ಭಯೋತ್ಪಾದಕರಿಗೆ ಧರ್ಮ ಇರುತ್ತದೆ !

ಇಸ್ಲಾಮಿಕ್ ರಾಷ್ಟ್ರಗಳಲ್ಲಿ ನೆಲೆಸಿರುವ ಮುಸ್ಲಿಮರು ಅಲ್ಲಿ ವಾಸಿಸುವ ಹಿಂದೂಗಳ ಮತ್ತು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಜಿಹಾದಿ ಭಯೋತ್ಪಾದಕ ಸಂಘಟನೆ ‘ಅಲ್ ಕಾಯದಾ’ ಕರೆ ನೀಡಿದೆ.

೩. ಹಿಂದೂದ್ವೇಷಿ ಕಾಂಗ್ರೆಸ್ಸಿಗೆ ಸೊಪ್ಪು ಹಾಕಬೇಡಿ !

ಅಲ್ಪಸಂಖ್ಯಾತರ ಜೊತೆಗೆ ಹಿಂದೂಗಳನ್ನು ಸಹ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಭಾರತದಲ್ಲಿ ಹೆಚ್ಚಿನ ಜನಸಂಖ್ಯೆ ಹಿಂದೂಗಳದ್ದಿದೆ ಮತ್ತು ನರೇಂದ್ರ ಮೋದಿಯವರ ವಿರುದ್ಧದ ಹೋರಾಟದಲ್ಲಿ ಬಹುಸಂಖ್ಯಾತ ಸಮುದಾಯವನ್ನು ಸಹ ಸೇರಿಸಿಕೊಳ್ಳಬೇಕು ಎಂಬ ಪುಕ್ಕಟೆ ಸಲಹೆಯನ್ನು ಕಾಂಗ್ರೆಸ್ ನಾಯಕ ಎ.ಕೆ. ಆಂಟನಿ ನೀಡಿದರು.

೪. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

ಇನ್ನು ೫೦ ಅಥವಾ ೧೦೦ ವರ್ಷಗಳಲ್ಲಿ ಭಾರತದಲ್ಲಿ ಯಾರಾದರೊಬ್ಬ ಮುಸ್ಲಿಂ ಆಡಳಿತಗಾರ ಇರಬಹುದು. ಆ ಕಾಲಕ್ಕೆ ಇತಿಹಾಸದ ಆಧಾರದಲ್ಲಿ ರಾಮಮಂದಿರವನ್ನು ಕೆಡವಿ ಮಸೀದಿಯನ್ನು ಮರುನಿರ್ಮಾಣ ಮಾಡಬಹುದು, ಎಂದು ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಶನ್ ಇದರ ಅಧ್ಯಕ್ಷ ಮೌಲಾನಾ ಸಾಜಿದ್ ರಶಿದಿ ಹೇಳಿದ್ದಾರೆ.

೫. ಇಸ್ಲಾಮಿಕ್ ರಾಷ್ಟ್ರವಾದಿ ನಾಯಕರನ್ನು ತಿಳಿಯಿರಿ !

ಕೆಲವರು ಛತ್ರಪತಿ ಸಂಭಾಜಿ ಮಹಾರಾಜರನ್ನು ‘ಧರ್ಮವೀರ ಎಂದು ಕರೆಯುತ್ತಾರೆ. ಆದರೆ ಅವರು ಎಂದಿಗೂ ಧರ್ಮವೀರರಾಗಿರಲಿಲ್ಲ. ಅವರು ಎಂದಿಗೂ ಧರ್ಮವನ್ನು ಪ್ರತಿಪಾದಿಸಿಲ್ಲ, ಎಂದು ಮಹಾರಾಷ್ಟ್ರದ ವಿಧಾನಸಭೆಯ ವಿಪಕ್ಷದ ನಾಯಕ ಅಜಿತ್ ಪವಾರ್ ಅವರು ವಿಧಾನಮಂಡಲ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದಾರೆ.

೬. ಸೋನಿ ಟಿವಿಯ ಹಿಂದೂದ್ವೇಷ ಮತ್ತು ಮುಸ್ಲಿಂ ಪ್ರೀತಿ ತಿಳಿಯಿರಿ !

ಸೋನಿ ಟಿವಿಯಲ್ಲಿನ ಕ್ರೈಮ್ ಪೆಟ್ರೋಲ್ ಮಾಲಿಕೆಯಲ್ಲಿ, ಶ್ರದ್ಧಾ ವಾಲಕರ್ ಅವರ ಕೊಲೆ ಮಾಡಿ ಅವರ ೩೫ ತುಂಡುಗಳಾಗಿ ಕತ್ತರಿಸಿದ ಅಫ್ತಾಬ್‌ನನ್ನು ಹಿಂದೂ ಎಂದು ತೋರಿಸಲಾಗಿದೆ. ಹಿಂದೂಗಳು ಸೋನಿ ಟಿವಿಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.

೭. ಹಿಂದೂಗಳ ದೇವಸ್ಥಾನಕ್ಕೆ ನುಗ್ಗಿ ಅದರ ಪಾವಿತ್ರ್ಯಕ್ಕೆ ಧಕ್ಕೆ ತರುವ ಕ್ರೈಸ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಿ !

ತಿರುವನಂತಪುರಂನ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಆಂಧ್ರಪ್ರದೇಶದ ಕ್ರೈಸ್ತರು ನೃತ್ಯ ಪ್ರದರ್ಶಿಸುವುದಾಗಿ ಹೇಳಿ ದೇವಸ್ಥಾನದಲ್ಲಿ ಮೇಣದಬತ್ತಿಗಳನ್ನು ಉರಿಸಿ ಕ್ರಿಸ್‌ಮಸ್ ಆಚರಿಸಿದ ಘಟನೆ ನಡೆದಿದೆ.