ಇಂತಹ ಸಚಿವರು ಎಲ್ಲೆಡೆ ಇರಬೇಕು !

‘ಬಂಗಾಳದಲ್ಲಿ ಇರಲಿಕ್ಕಿದ್ದರೆ ಸರಕಾರದ ನಿಯಮಗಳನ್ನು ಪಾಲಿಸಲೇ ಬೇಕು. ಯಾರಿಗಾದರೂ ಕಾನೂನು ಮತ್ತು ನಿಯಮಗಳ ಬಗ್ಗೆ ಆಕ್ಷೇಪವಿದ್ದರೆ, ಅವರು ಬೇರೆಡೆಗೆ ಅಥವಾ ಇಸ್ಲಾಮಿಕ್ ದೇಶಗಳಿಗೆ ಹೋಗಬಹುದು’, ಎಂದು ಗೋಹತ್ಯೆಯ ಕುರಿತು ಬಂಗಾಳದ ಸಚಿವೆ ಅಗ್ನಿಮಿತ್ರ ಪಾಲ್ ಎಚ್ಚರಿಕೆ ನೀಡಿದ್ದಾರೆ.

೨. ಇದು ಹಿಂದೂಗಳಿಗೆ ನಾಚಿಕೆಗೇಡು !

ಬಕ್ರೀದ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಮಿರಾ ರೋಡ್‌ನ ವಸತಿ ಸಂಕೀರ್ಣವೊಂದಕ್ಕೆ ೨೫ ಕುರಿಗಳನ್ನು ತರುವ ವಿಷಯದಲ್ಲಿ ರಾತ್ರಿ ವಿವಾದ ಉಂಟಾಯಿತು. ಇದು ಹಿಂಸಾಚಾರಕ್ಕೆ ತಿರುಗಿ, ಹಿಂದೂ ಯುವಕನೊಬ್ಬನ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಲಾಯಿತು.

೩. ಮತಾಂತರ ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಮುಂಬೈನ ನರಿಮನ್ ಪಾಯಿಂಟ್ ಪ್ರದೇಶದ ಬ್ಯಾಂಕ್ ಒಂದರಲ್ಲಿ ನೌಕರಿ ಮಾಡುವ ಹಿಂದೂ ಮಹಿಳಾ ಉದ್ಯೋಗಿಯನ್ನು ಇಸ್ಲಾಂಗೆ ಮತಾಂತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಆಕೆಯ  ಪತಿ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಿಗೆ ದೂರು ನೀಡಿದ್ದಾರೆ.

೪. ದೇಶದ್ರೋಹಿ ತೃಣಮೂಲ ಕಾಂಗ್ರೆಸ್ ಅನ್ನು ನಿಷೇಧಿಸಿ !

ಬಾಂಗ್ಲಾದೇಶದ ನುಸುಳುಕೋರರಿಗೆ ಬಂಗಾಳದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಗುರುತಿನ ಚೀಟಿ ಪಡೆಯಲು ಸಹಾಯ ಮಾಡಿದ್ದಾರೆ. ಇದರಿಂದ ತಮಗೆ ಭಾರತೀಯ ಯೋಜನೆಗಳ ಲಾಭ ಸಿಕ್ಕಿದೆ ಮತ್ತು ಮತದಾನವನ್ನೂ ಮಾಡಿದ್ದೇವೆ ಎಂದು ನುಸುಳುಕೋರರು ಒಪ್ಪಿದ್ದಾರೆ.

೫. ಕಾಂಗ್ರೆಸ್‌ಗೆ ಇದು ಸಮ್ಮತವೇ ?

ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಮತ್ತು ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ಎಲ್.ಟಿ.ಟಿ.ಇ. ಮುಖ್ಯಸ್ಥ ವಿ. ಪ್ರಭಾಕರನ್ ಅವರ ಮೃತದಿನ ಮೇ ೧೮ ರಂದಿತ್ತು. ಆ ನಿಮಿತ್ತ ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

೬. ಹಿಂದೂಗಳಿಗೆ ಧರ್ಮಶಿಕ್ಷಣ ಸಿಗದಿರುವುದರ ಪರಿಣಾಮವನ್ನು ತಿಳಿಯಿರಿ !

‘ದೇವಸ್ಥಾನದಲ್ಲಿ ಅಪಮಾನವಾಯಿತು ಎಂಬ ಕಾರಣಕ್ಕೆ ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇನೆ’, ಎಂದು ತಮಿಳು ನಟ ಜಯ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

೭. ಪಾಕಿಸ್ತಾನದಂತೆಯೇ ಆಡಳಿತವಿರುವ ರಾಜ್ಯದಲ್ಲಿ ಇದಕ್ಕಿಂತ ಬೇರೆ ಇನ್ನೇನಾಗುವುದು ?

ಭಟ್ಕಳದಲ್ಲಿನ ‘ಹಿಂದೂ ಜಾಗರಣ ವೇದಿಕೆ’ಯ ಕಾರ್ಯಕರ್ತರು ಮೇ ೨೪ ರ ರಾತ್ರಿ ವೆಂಕಟಾಪುರದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಪುನರ್ನಿರ್ಮಾಣ ಮಾಡಿದ್ದ ಮೂರಿನಕಟ್ಟೆಯನ್ನು ರಾತ್ರಿಯ ವೇಳೆ ಅಲ್ಲಿ ಜಮಾಯಿಸಿದ ಮುಸಲ್ಮಾನ ಯುವಕರು ಕೆಡವಿದರು. ಆದ್ದರಿಂದ ಅಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು.