`ಗೋಬ್ರಾಹ್ಮಣಪ್ರತಿಪಾಲಕ’ ಬಿರುದು ಶಿವಾಜಿ ಮಹಾರಾಜರಿಗೆ ಹಾಗೂ `ಧರ್ಮವೀರ’ ಬಿರುದು ಸಂಭಾಜಿ ಮಹಾರಾಜರನ್ನು ಸೀಮಿತಗೊಳಿಸುತ್ತದೆ !’ (ಅಂತೆ) – ಅಜಿತ ಪವಾರ

ಮುಂಬಯಿ – ಛತ್ರಪತಿ ಸಂಭಾಜಿ ಮಹಾರಾಜ ಇವರನ್ನು `ಸ್ವರಾಜ್ಯ ರಕ್ಷಕ’ ಎನ್ನಬೇಕು, ಇದೇ ನನ್ನ ನಿಲುವಿದೆ. ನಾನು ನನ್ನ ನಿಲುವಿನ ಬಗ್ಗೆ ದೃಢವಾಗಿದ್ದೇನೆ. ಛತ್ರಪತಿ ಶಿವಾಜಿ ಮಹಾರಾಜ ಇವರನ್ನು `ಗೋಬ್ರಾಹ್ಮಣಪ್ರತಿಪಾಲಕ’ ಎನ್ನುತ್ತಾರೆ; ಆದರೆ ಜ್ಯೋತಿಬಾ ಫುಲೆ ಇವರು ಶಿವಾಜಿ ಮಹಾರಾಜರನ್ನು `ಕುಲವಾಡಿ ಭೂಷಣ’ ಎಂದಿದ್ದಾರೆ. `ಗೋಬ್ರಾಹ್ಮಣಪ್ರತಿಪಾಲಕ’ ಯಾವ ರೀತಿ ಶಿವಾಜಿ ಮಹಾರಾಜರನ್ನು ಸೀಮಿತಗೊಳಿಸುತ್ತದೆಯೋ ಅದೇ ರೀತಿ `ಧರ್ಮವೀರ’ ಬಿರುದು ಇದೆ, ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಜಿತ ಪವಾರ ಇವರು ಶಾಸಕಾಂಗದ ವಿರೋಧ ಪಕ್ಷದ ಕಾರ್ಯಾಲಯದಲ್ಲಿ ಡಿಸೆಂಬರ್ ೪ ರಂದು ಪತ್ರಕರ್ತರ ಸಭೆಯಲ್ಲಿ ಈ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

ಅಜಿತ ಪವಾರ ತಮ್ಮ ಮಾತು ಮುಂದುವರೆಸುತ್ತಾ,

೧. ಭಾರತೀಯ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ನೀಡಿದೆ. ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಮತ್ತು ವಿಚಾರ ಸ್ವಾತಂತ್ರ್ಯವಿದೆ. ಸಂಭಾಜಿ ಮಹಾರಾಜರಿಗೆ `ಸ್ವರಾಜ್ಯರಕ್ಷಕ’ ಹೇಳಬೇಕು, ಎಂದು ನನ್ನ ನಿಲುವಾಗಿದೆ.

೨. ಛತ್ರಪತಿ ಶಿವಾಜಿ ಮಹಾರಾಜರು ಇವರು ಹಿಂದವಿ ಸ್ವರಾಜ್ಯದ ಸ್ಥಾಪನೆ ಮಾಡಿದರು. ಆ ಸ್ವರಾಜ್ಯದ ರಕ್ಷಣೆ ಮಾಡುವ ಕಾರ್ಯವನ್ನು ಸಂಭಾಜಿ ಮಹಾರಾಜರು ಮಾಡಿದರು. ಈ ಸ್ವರಾಜ್ಯದಲ್ಲಿ ಎಲ್ಲಾ ಜಾತಿ ಧರ್ಮದ ಜನರ ಸಮಾವೇಶವಿತ್ತು. ಛತ್ರಪತಿ ಸಂಭಾಜಿರಾಜೆ ಇವರ ಕುರಿತು ನಾನು ಯಾವುದೇ ಅಪಶಬ್ದ ಮಾತನಾಡಿಲ್ಲ. ನಾನು ಇತಿಹಾಸ ತಜ್ಞ ಅಲ್ಲ. ನಾನು ಓದಿದ ಪ್ರಕಾರ ನಾನು ನನ್ನ ನಿಲುವನ್ನು ನಿರ್ಧರಿಸಿದ್ದೇನೆ. ನಾನು ಇತಿಹಾಸದ ಸಂಶೋಧಕನಲ್ಲ. ರಾಜಕೀಯ ಉದ್ದೇಶದಿಂದ ದ್ವೇಷದ ರಾಜಕಾರಣ ನಡೆಸುವುದು ಯೋಗ್ಯವಲ್ಲ.

೩. ಇತಿಹಾಸದಲ್ಲಿ ರಾಮದಾಸ ಸ್ವಾಮಿ ಇವರಿಗೆ ಗುರು ಎಂದು ನಂಬಲಾಗುತ್ತದೆ; ಆದರೆ ಅದರ ನಂತರದ ಇತಿಹಾಸದ ಸಂಶೋಧನೆಯಲ್ಲಿ `ರಾಮದಾಸ ಸ್ವಾಮಿ ಮತ್ತು ದಾದೋಜಿ ಕೊಂಡದೇವ ಇವರು ಗುರುಗಳಲ್ಲ’, ಎಂದು ಒಪ್ಪಿದ ನಂತರ ಸರಕಾರದಿಂದ `ದಾದೋಜಿ ಕೊಂಡದೇವ’ ಪುರಸ್ಕಾರ ನಿಲ್ಲಿಸಲಾಯಿತು. ಶರದ ಪವಾರ ಇವರ ಅಭಿಪ್ರಾಯದ ಪ್ರಕಾರ ಸಂಭಾಜಿ ಮಹಾರಾಜ ಇವರಿಗೆ ಕೆಲವರು `ಧರ್ಮವೀರ’ ಎನ್ನುತ್ತಿದ್ದರೇ ಇದು ಅವರವರ ಅಭಿಪ್ರಾಯವಾಗಿದೆ.

೪. ನಾನು ಯಾವುದೇ ವಿವಾದಿತ ಹೇಳಿಕೆ ನೀಡಿಲ್ಲ. ಈ ಹಿಂದೆ ರಾಜ್ಯಪಾಲರು, ಭಾಜಪದ ಸಚಿವರು ಮತ್ತು ವಕ್ತಾರರು ವಿವಾದಾಸ್ಪದ ಹೇಳಿಕೆ ನೀಡಿದರು. ನಾನು ಏನನ್ನು ತಪ್ಪಾಗಿ ಮಾತನಾಡಿಲ್ಲ. ಛತ್ರಪತಿ ಸಂಭಾಜಿ ಮಹಾರಾಜರು ಇವರು ಒಂದು ಧರ್ಮದವರಾಗಿದ್ದರೇ ? `ಸ್ವರಾಜರಕ್ಷಕ’ ಈ ಬಿರುದಿನಲ್ಲಿ `ಶೌರ್ಯ’, `ಧರ್ಮ’, `ಸಂಸ್ಕೃತಿ’ ಇದೆ. ಪ್ರತಿಯೊಬ್ಬರಿಗೆ ವಿಚಾರ ಸ್ವಾತಂತ್ರ್ಯವಿದೆ. ನಾನು ನನ್ನ ನಿಲುವನ್ನು ಮಂಡಿಸಿದ್ದೇನೆ. ಯಾರಿಗೆ ಯೋಗ್ಯ ಅನಿಸುತ್ತದೆ ಅವರು ಸ್ವೀಕರಿಸಬೇಕು ಎಂದು ಹೇಳಿದರು.

ಅಜಿತ್ ಪವಾರ್ ಇವರು ಹೇಳಿಕೆ ಬದಲಾಯಿಸಿದರು !

`ನಾನು ಏನಾದರೂ ತಪ್ಪಾಗಿ ಮಾತನಾಡಿದ್ದರೆ ಹೇಳಿ, ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವೆ’, ಎಂದು ಅಜಿತ ಪವಾರ ಇವರು ಪತ್ರಕರ್ತರ ಸಭೆಯಲ್ಲಿ ಹೇಳಿದರು. ಅದರ ನಂತರ ಪವಾರ ಇವರು ತಕ್ಷಣ ಆ ಪದಗಳನ್ನು ಸುಧಾರಿಸುತ್ತಾ `ನಾನು ತಪ್ಪಾಗಿ ಮಾತನಾಡಿದ್ದರೆ, ಅದನ್ನು ನನಗೆ ನಂಬುವ ಹಾಗೆ ತಿಳಿಸಿ, ಅದರ ನಂತರ ನಾನು ರಾಜೀನಾಮೆ ನೀಡುವೆ’, ಎಂದು ಹೇಳಿದರು.

ಸಂಪಾದಕೀಯ ನಿಲುವು

`ಗೋಬ್ರಾಹ್ಮಣಪ್ರತಿಪಾಲಕ’ ಮತ್ತು `ಧರ್ಮವೀರ’ ಈ ಬಿರುದು ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜ ಇವರನ್ನು ಸೀಮಿತ ಗೊಳಿಸದೆ ಅವರ ವ್ಯಾಪಕ ಹಿಂದೂ ಧರ್ಮ ಕಾರ್ಯ ತೋರಿಸುವುದಾಗಿದೆ !