ನವ ದೆಹಲಿ – ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಇವರು, ‘ಕಾಂಗ್ರೆಸ್ ‘ಈವಿಎಂ’ ಎಂದರೆ ‘ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್’ನ ಅಂಶದ ಕುರಿತು ಮುಂದುವರೆಸುತ್ತಿರುವ ಗೋಳಾಟ ನಿಲ್ಲಿಸಬೇಕು. ಯಾವಾಗ ನೀವು ಚುನಾವಣೆ ಗೆಲ್ಲುತ್ತೀರಾ ಆಗ ನೀವು ಆನಂದ ವ್ಯಕ್ತಪಡಿಸುತ್ತೀರಾ; ಯಾವಾಗ ನೀವು ಸೋಲುತ್ತೀರ, ಆಗ ನೀವು ಈವಿಎಂ ಬಗ್ಗೆ ಪ್ರಶ್ನಿಸುತ್ತೀರಾ, ಇದು ಯೋಗ್ಯವಲ್ಲ. ಕಾಂಗ್ರೆಸ್ಸಿಗೆ ಈವಿಎಂ ಮೇಲೆ ವಿಶ್ವಾಸ ಇಲ್ಲವಾದರೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು’, ಎಂದು ಹೇಳಿದರು.
ಓಮರ್ ಅಬ್ದುಲ್ಲಾ ಇವರು, ಜಮ್ಮು ಕಾಶ್ಮೀರಕ್ಕೆ ಆದಷ್ಟು ಬೇಗನೆ ರಾಜ್ಯದ ಸ್ಥಾನಮಾನ ನೀಡಬೇಕು. ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನ-ಮಾನ ನೀಡುವ ಅಂತಿಮ ನಿರ್ಣಯ ಪ್ರಧಾನಮಂತ್ರಿ ಮತ್ತು ಗೃಹ ಸಚಿವರು ಇವರಿಬ್ಬರೇ ತೆಗೆದು ಕೊಳ್ಳಬೇಕು’, ಎಂದು ಹೇಳಿದರು.