ವಿಧಾನಸಭೆಯಲ್ಲಿ ಪ್ರತಿಪಕ್ಷಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಪ್ರಶ್ನೆ !
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ದೇಶದಲ್ಲಿ ಮುಸ್ಲಿಂ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲಾಗುತ್ತದೆ. ಮುಸ್ಲಿಮರು ದೇವಸ್ಥಾನದ ಮುಂದೆ ಮೆರವಣಿಗೆ ನಡೆಸಬಹುದಾದರೆ, ಮಸೀದಿಯ ಮುಂದೆ ಹಿಂದೂಗಳ ಮೆರವಣಿಗೆ ಏಕೆ ನಡೆಯಬಾರದು ? ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಮಾತ್ರ ಗಲಭೆಗಳು ಏಕೆ ನಡೆಯುತ್ತವೆ ? ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಕೇಸರಿ ಧ್ವಜವನ್ನು ಹಾರಿಸುವಾಗ ಹಿಂದೂ ಯುವಕನನ್ನು ಕೊಲ್ಲಲಾಯಿತು. ಯಾರೂ ತಮ್ಮ ದೇಶದಲ್ಲಿ ಧ್ವಜವನ್ನು ಹಾರಿಸಲು ಏಕೆ ಸಾಧ್ಯವಿಲ್ಲ ? ಕೇಸರಿ ಧ್ವಜವನ್ನು ಏಕೆ ಹಾರಿಸಬಾರದು?’, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂಭಲನಲ್ಲಿ ಡಿಸೆಂಬರ್ 5 ರಂದು ನಡೆದ ಹಿಂಸಾಚಾರದ ಬಗ್ಗೆ ಮಾತನಾಡುವಾಗ ಪ್ರಶ್ನಿಸಿದರು. “ಪುರಾಣಗಳಲ್ಲಿ ಭಗವಾನ್ ವಿಷ್ಣುವಿನ ಹತ್ತನೇ ಅವತಾರ (ಕಲ್ಕಿ ಅವತಾರ) ಕೇವಲ ಸಂಭಲನಲ್ಲಿಯೇ ಆಗಲಿದೆ’, ಎಂದು ಅವರು ಈ ಸಮಯದಲ್ಲಿ ಸ್ಪಷ್ಟ ಪಡಿಸಿದರು.
Why do riots occur only in areas where the Muslims are a majority ?
Uttar Pradesh Chief Minister Yogi Adityanath’s question to the opposition in the assembly!#UPVidhansabha #UttarPradesh pic.twitter.com/QRwhMVyXkX
— Sanatan Prabhat (@SanatanPrabhat) December 16, 2024
ಯೋಗಿ ಆದಿತ್ಯನಾಥ ಮಂಡಿಸಿದ ಸೂತ್ರಗಳು
1. ನೀವು ಪಶ್ಚಿಮ ಉತ್ತರ ಪ್ರದೇಶಕ್ಕೆ ಹೋದರೆ, ಸಾಮಾನ್ಯ ಜನರು ಪರಸ್ಪರ ಮಾತನಾಡುವ ಮೊದಲು ರಾಮ್-ರಾಮ್ ಎಂದು ಹೇಳುತ್ತಾರೆ, ಹೀಗಿರುವಾಗ ‘ಜಯ ಶ್ರೀ ರಾಮ’ ಎಂದು ಹೇಳುವುದು ಮತಾಂಧತೆಯೇ, ಇದು ಹೇಗೆ ? ನಾವು ಪರಸ್ಪರ ಭೇಟಿಯಾದಾಗ ರಾಮ್-ರಾಮ್ ಎಂದು ಹೇಳುತ್ತೇವೆ. ಯಾರಾದರೂ ‘ಜಯ ಶ್ರೀ ರಾಮ’ ಎಂದು ಹೇಳಿದರೆ, ಅದರ ಹಿಂದಿನ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು.
2. ಸಂಭಲ್ ಮತ್ತು ಲಕ್ಷ್ಮಣಪುರಿಯಲ್ಲಿ ಶಿಯಾ ಮತ್ತು ಸುನ್ನಿಗಳ ನಡುವಿನ ಸಂಘರ್ಷ ಬಹಳ ಹಳೆಯದು. ಭಾಜಪ ಸರಕಾರಕ್ಕಿಂತ ಮೊದಲು ಮುಸ್ಲಿಮರ ನಡುವೆ ಪರಸ್ಪರ ಹಿಂಸಾಚಾರ ನಡೆಯುತ್ತಿತ್ತು. ಹಿಂದಿನ ಸರಕಾರಗಳು ‘ಒಡೆದು ಆಳುವ’ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಿದ್ದವು. ಸಧ್ಯ ಸ್ಥಳೀಯ ಮತ್ತು ವಿದೇಶಿ ಮುಸ್ಲಿಮರ ನಡುವಿನ ಸಂಘರ್ಷವನ್ನು ನೀವು (ವಿರೋಧಿಗಳು) ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದೀರಿ, ಇದು ನಿಜವಲ್ಲವೇ ? ಸೂರ್ಯ, ಚಂದ್ರ ಮತ್ತು ಸತ್ಯವನ್ನು ಯಾರೂ ದೀರ್ಘಕಾಲ ಮುಚ್ಚಿಡಲು ಸಾಧ್ಯವಿಲ್ಲ.
3. ಪ್ರತಿಪಕ್ಷದ ನಾಯಕರು ‘ಸಂಭಲ್‌ನಲ್ಲಿ ದೇವಸ್ಥಾನ ಇರುವುದು ಬೆಳಕಿಗೆ ಬಂದರೆ, ದೇವಸ್ಥಾನವನ್ನು ನಿರ್ಮಿಸಲಾಗುತ್ತದೆಯೇ ?’ ಎಂದು ಕೇಳುತ್ತಾರೆ. ಪ್ರತಿಯೊಂದು ಮಸೀದಿಯನ್ನು ದೇವಸ್ಥಾನವನ್ನು ಕೆಡವಿ ನಿರ್ಮಿಸಲಾಗಿದೆಯೆಂದು. ‘ಬಾಬರ್ನಾಮಾ’ ಹೇಳುತ್ತಾನೆ ಈ ವಿಷಯದಲ್ಲಿ ನಿಮಗೆ ಏನು ಹೇಳುವುದಿದೆ ?
4. ನವೆಂಬರ್ 19 ರಂದು ಇಲ್ಲಿ ಸಮೀಕ್ಷೆ ನಡೆಸಲಾಯಿತು. ನವೆಂಬರ 24ರಂದು ಕೂಡ ಸಮೀಕ್ಷೆಯ ಕಾರ್ಯ ಮುಂದುವರಿದಿತ್ತು. ನವೆಂಬರ್ 23 ರಂದು ಶುಕ್ರವಾರದ ನಮಾಜ್ ಮೊದಲು ಮತ್ತು ನಂತರ ಮಾಡಿದ ಭಾಷಣಗಳಿಂದ ವಾತಾವರಣವು ಕದಡಿತು. ‘ನಮ್ಮ ಸರಕಾರ ಈಗಾಗಲೇ ನ್ಯಾಯಾಂಗ ಆಯೋಗ ಸ್ಥಾಪಿಸುವುದಾಗಿ ಹೇಳಿದೆ’, ನಮ್ಮ ಸರಕಾರ ಮೊದಲೇ ಹೇಳಿದೆ. ಸತ್ಯ ಎಲ್ಲರೆದುರಿಗೆ ಹೊರಬರಲಿದೆ.
5. ಇಂದು ಸಂಭಲ್‌ನಲ್ಲಿ ಹನುಮಾನ್ ದೇವಸ್ಥಾನ ಪತ್ತೆಯಾಗಿದೆ. ಬಾವಿಯಲ್ಲಿ ವಿಗ್ರಹಗಳು ಪತ್ತೆಯಾಗುತ್ತಿವೆ. 22 ಬಾವಿಗಳನ್ನು ಮುಚ್ಚಲಾಗಿದೆ. ಮಾಜಿ ಸಂಸದ ಸಫೀಕುರ್ ರೆಹಮಾನ್ ಬರ್ಕ್ ಎಂದಿಗೂ ತನ್ನನ್ನು ಭಾರತೀಯ ಎಂದು ಪರಿಗಣಿಸಲಿಲ್ಲ. ಅವರು ತಾವು ‘ಬಾಬರನ ಮಕ್ಕಳು’ ಎಂದು ಹೇಳುತ್ತಿದ್ದರು. ನಾವು ಭಾರತದಲ್ಲಿ ಶ್ರೀರಾಮನ ಸಂಸ್ಕೃತಿ ಶಾಶ್ವತವಾಗಿ ಮುಂದುವರಿಯುತ್ತದೆ, ಬಾಬರ್ ಸಂಸ್ಕೃತಿ ಮುಂದುವರಿಯುವುದಿಲ್ಲ ಎಂದು ಹೇಳಲು ಬಯಸುತ್ತೇವೆ.
6. ಸಂಭಲ್‌ನಲ್ಲಿ 1976, 1978, 1982, 1986, 1990, 1992, 1996 ಈ ವರ್ಷಗಳಲ್ಲಿ ನಿರಂತರ ಗಲಭೆಗಳು ನಡೆದವು. ಈ ಗಲಭೆಗಳಲ್ಲಿ 209 ಹಿಂದೂಗಳು ಕೊಲ್ಲಲ್ಪಟ್ಟಿದ್ದಾರೆ; ಆದರೆ ಆ ಮುಗ್ಧ ಹಿಂದೂಗಳ ಬಗ್ಗೆ ಯಾರೂ ಎರಡು ಶಬ್ದಗಳನ್ನೂ ಹೇಳಲಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಧಾರ್ಮಿಕ ಗಲಭೆಗಳು ಶೇಕಡಾ 97 ರಷ್ಟು ಕಡಿಮೆಯಾಗಿದೆ. 2012 ರಿಂದ 2017ರ ಕಾಲಾವಧಿಯಲ್ಲಿ ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ 815 ಧಾರ್ಮಿಕ ಗಲಭೆಗಳು ನಡೆದಿವೆ. ಇದರಲ್ಲಿ 192 ಮಂದಿ ಸಾವನ್ನಪ್ಪಿದ್ದಾರೆ. ಹಿಂದಿನ ಅವಧಿಯಲ್ಲಿ 616 ಗಲಭೆಗಳು ನಡೆದಿದ್ದವು. ಇದರಲ್ಲಿ 121 ಮಂದಿ ಸಾವನ್ನಪ್ಪಿದ್ದಾರೆ.
7. ಸಂಭಲ್ ಗಲಭೆಯಲ್ಲಿ ಭಾಗಿಯಾಗಿರುವ ಜನರು ಬಂದೂಕುಗಳನ್ನು ಹಿಡಿದುಕೊಂಡಿರುವುದು, ಕಲ್ಲು ತೂರಾಟ ನಡೆಸುತ್ತಿರುವ ಹಲವು ವಿಡಿಯೋಗಳು ಪ್ರಸಾರವಾಗಿವೆ. ಯಾವುದೇ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗಲಭೆಗಳು ಮತ್ತು ಗಲಭೆಕೋರರ ಬಗ್ಗೆ ಸರಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ. ಯಾರಾದರೂ ಅರಾಜಕತೆಯನ್ನು ಸೃಷ್ಟಿಸಿದರೆ ಅವರನ್ನು ಬಿಡುವುದಿಲ್ಲ.
8. ಭಾರತದಲ್ಲಿ ಬಹುಸಂಖ್ಯಾತ ಸಮಾಜ ಸಮಾನ ನಾಗರಿಕ ಕಾನೂನಿಗೆ ಕೋರುತ್ತಿದ್ದಾರೆ. ಅವರ ಬೇಡಿಕೆಯಲ್ಲಿ ಯಾವುದೇ ತಪ್ಪಿಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಡೆಯುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಅಲಹಾಬಾದ್ ಉಚ್ಚನ್ಯಾಯಾಲಯದ ನ್ಯಾಯಾಧೀಶರು ಸಮಾನ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡಿದಾಗ, ಪ್ರತಿಪಕ್ಷಗಳು ಅವರ ವಿರುದ್ಧ ದೋಷಾರೋಪಣೆಯ ನೋಟಿಸ್ ನೀಡಿತು.
9. ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಸಂವಿಧಾನದಲ್ಲಿ ‘ಜಾತ್ಯತೀತ’ ಅಥವಾ ‘ಸಮಾಜವಾದ’ ಎಂಬ ಒಂದೂ ಶಬ್ದವಿಲ್ಲ. ನೀವು (ವಿರೋಧಿಗಳು) ಜನರಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಅಧಿಕಾರ ಹಿಡಿಯಲು ಬಯಸುತ್ತಿದ್ದೀರಿ. ಎಂದು ಹೇಳಿದರು.