ಬಾಂಗ್ಲಾದೇಶದಲ್ಲಿ ಪೈಗಂಬರರ ಕುರಿತು ತಥಾಕಥಿತ ಅವಮಾನ ಮಾಡಿದರೆಂದು ಹಿಂದೂ ಸಂಘಟನೆಯ ಮುಖಂಡನಿಗೆ ೭ ವರ್ಷ ಜೈಲು ಶಿಕ್ಷೆ !

  • ಹಿಂದೂಗಳ ಮತಾಂತರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು !

  • ನಕಲಿ ಫೇಸ್ ಬುಕ್ ಖಾತೆ ತೆರೆದು ಆ ಮೂಲಕ ಅವಮಾನಕಾರಕ ಲೇಖನ ಪ್ರಸಾರ ಮಾಡಲಾಗಿದೆ ಎಂದು ಹಿಂದೂ ಮುಖಂಡನ ಆರೋಪ !

ಹಿಂದೂ ಸಂಘಟನೆಯ ಮುಖಂಡ ರಾಕೇಶ ರಾಯ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ `ಜಾತಿಯಾ ಹಿಂದೂ ಮಹಾಜೊತೆ’ ಈ ಹಿಂದೂ ಸಂಘಟನೆಯ ಮುಖಂಡ ರಾಕೇಶ ರಾಯ ಇವರಿಗೆ ಮಹಮ್ಮದ್ ಪೈಗಂಬರರ ಕುರಿತು ತಥಾಕಥಿತ ಅವಮಾನ ಮಾಡಿದ್ದಾರೆಂದು ೭ ವರ್ಷದ ಜೈಲು ಶಿಕ್ಷೆ ಮತ್ತು ೧ ಲಕ್ಷ ಟಕಾ (೮೦ ಸಾವಿರ ರೂಪಾಯಿ) ದಂಡ ಈ ರೀತಿಯ ಶಿಕ್ಷೆ ವಿಧಿಸಲಾಗಿದೆ. ೨೦೧೭ ರಲ್ಲಿ ಫೇಸ್ ಬುಕ ಮೂಲಕ ಅವರು ಪೈಗಂಬರರ ಕುರಿತು ಅವಮಾನ ಮಾಡಿರುವುದರ ಬಗ್ಗೆ ಆರೋಪಿಸಲಾಗಿತ್ತು.

ಆ ಸಮಯದಲ್ಲಿ ಅವರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಅದರ ನಂತರ ರಾಯ ಇವರನ್ನು ಬಂಧಿಸಲಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ರಾಯ್ ಅವರ ನ್ಯಾಯವಾದಿ ಇಶ್ತಿಯಾಕ್ ಅಹಮದ ಚೌದರಿ ಇವರು, `ಈ ಶಿಕ್ಷೆಯ ವಿರುದ್ಧ ನಾವು ಉಚ್ಚ ನ್ಯಾಯಾಲಯಕ್ಕೆ ಹೋಗುವೆವು’, ಎಂದು ಹೇಳಿದರು. ರಾಕೇಶ ರಾಯ ಇವರ ಅಭಿಪ್ರಾಯದ ಪ್ರಕಾರ, `೨೦೧೭ ರಲ್ಲಿ ಅಬ್ದುಲ ಅಜೀಜ ಎಂಬ ವ್ಯಕ್ತಿ ಜಾಕಿಗಂಜ ಈ ಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದನು. ಅದಕ್ಕೆ ವಿರೋಧಿಸಿರುವುದರಿಂದ ಕೆಲವು ಜನರ ನನ್ನ ಹೆಸರಿನ ನಕಲಿ ಫೇಸ್ ಬುಕ ಖಾತೆ ತೆರೆದು ಆ ಮೂಲಕ ಪೈಗಂಬರರ ವಿರುದ್ಧ ಆಕ್ಷೇಪಾರ್ಹ ಲೇಖನ ಬರೆದರು ಮತ್ತು ನಂತರ ನನ್ನನ್ನು ಬಂಧಿಸುವಂತೆ ಆಗ್ರಹಿಸಿದರು ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಸ್ಲಾಮಿ ದೇಶದಲ್ಲಿ ಹಿಂದೂಗಳ ಮತಾಂತರಕ್ಕೆ ವಿರೋಧ ಮಾಡುವವರನ್ನು ಹತ್ಯೆ ಮಾಡಲಾಗುತ್ತದೆ ಅಥವಾ ಸುಳ್ಳು ಅಪರಾಧದಲ್ಲಿ ಸಿಲುಕಿಸಲಾಗುತ್ತದೆ, ಇದೇ ಈ ಘಟನೆಯಿಂದ ಸ್ಪಷ್ಟವಾಗುತ್ತದೆ !