ರಾಮರಾಜ್ಯದಲ್ಲಿನ ಪಿತೃಶಾಹಿ ಮತ್ತು ಆಧುನಿಕ ಕಾಲದ ಪ್ರಜಾಪ್ರಭುತ್ವ !

ಶ್ರೀ. ಭರತ ಗುಪ್ತ

ಪ್ರಾ. ಭರತ ಗುಪ್ತ ಇವರು ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಾಚೀನ ಭಾರತೀಯ ಶಾಸ್ತ್ರೀಯ ತತ್ವಜ್ಞಾನ, ಸಂಗೀತತಜ್ಞ, ಸ್ತಂಭಲೇಖಕ ಮತ್ತು ಲೇಖಕರಾಗಿದ್ದಾರೆ. ಅವರೊಂದಿಗೆ ‘ಮಾನುಷೀ ಇಂಡಿಯಾ’ ಈ ಯೂ-ಟ್ಯೂಬ್ ವಾಹಿನಿಯ ಸಂಪಾದಕಿ ಮಧುಪೌರ್ಣಿಮಾ ಕಿಶ್ವರ ಇವರು ಸಂವಾದ ಮಾಡಿದರು. ಈ ಸಂದರ್ಭದಲ್ಲಿ ಅವರು ‘ರಾಮರಾಜ್ಯ ಮತ್ತು ಈಗಿನ ಆಧುನಿಕ ಪ್ರಜಾಪ್ರಭುತ್ವ’ದ ವಿಷಯದಲ್ಲಿ ಮಾಡಿದ ವಿವೇಚನೆಯನ್ನು ನಮ್ಮ ವಾಚಕರಿಗಾಗಿ ಇಲ್ಲಿ ಕೊಡುತ್ತಿದ್ದೇವೆ.

೧. ‘ಮುಂದಿನ ಕಾಲದಲ್ಲಿ ಪ್ರಜಾಪ್ರಭುತ್ವವು ಧನಿಕರ ವಶವಾಗುವುದು’, ಎಂಬ ಪ್ಲೇಟೋನ ಹೇಳಿಕೆಯು ನಿಜವಾಗುವುದು

ಇಡೀ ಜಗತ್ತಿನಲ್ಲಿ ವಿವಿಧ ಕೊರತೆಗಳಿವೆ ಮತ್ತು ಭಯಾನಕ ಯುದ್ಧಗಳಾಗುತ್ತಿವೆ. ಇದನ್ನೆಲ್ಲ ನೋಡಿ ‘ಆಧುನಿಕ ಪ್ರಜಾಪ್ರಭುತ್ವವು ಹೆಚ್ಚು ಸಮಯ ತಾಳಬಹುದು’ ಎಂದೆನಿಸುವುದಿಲ್ಲ. ‘ಪ್ರಜಾಪ್ರಭುತ್ವವು ಕ್ರಮೇಣ ಧನಿಕರ ವಶವಾಗುವುದು’, ಎಂದು ಪ್ಲೊಟೋ ಬಹಳ ಹಿಂದೆಯೇ ಹೇಳಿದ್ದನು. ಸದ್ಯ ಅದರ ಲಕ್ಷಣಗಳನ್ನು ನಾವು ನೋಡುತ್ತಿದ್ದೇವೆ. ಅಮೇಝಾನ್, ಗೂಗಲ್‌ನಂತಹ ದೊಡ್ಡ ದೊಡ್ಡ ಕಂಪನಿಗಳನ್ನು ನಡೆಸುವವರು ಆಧುನಿಕ ರಾಜರೇ ಆಗಿದ್ದಾರೆ. ಕೆಲವರಲ್ಲಿಯಂತೂ ‘ಬಲಾಢ್ಯ ಅಮೇರಿಕಾದ ಅಧ್ಯಕ್ಷ ಯಾರಾಗಬೇಕು ?’, ಎಂಬುದನ್ನು ನಿರ್ಧರಿಸುವ ಕ್ಷಮತೆಯಿದೆ. ಈಗ ಇಂತಹ ಧನಿಕರ ಕೈಯಲ್ಲಿಯೇ ಶಕ್ತಿ, ಸಾಮರ್ಥ್ಯ ಬಂದಿದೆ. ಪ್ಲೋಟೋ ಹೇಳಿರುವ ಹಾಗೆ ‘ಪ್ರಜಾಪ್ರಭುತ್ವವು ಪತನವಾಗಿ ಧನಿಕರ ಧನಶಾಹಿ ಬರುವುದು ಮತ್ತು ಯಾರಲ್ಲಿ ಸಂಪತ್ತು ಇದೆಯೋ, ಅವರಲ್ಲಿ ಸಂಪೂರ್ಣ ಅಧಿಕಾರ ಬರುವುದು’, ಎಂಬ ಅವನ ವಾಕ್ಯ ನಿಜವಾಗುವುದು ಕಾಣಿಸುತ್ತದೆ. ಅವನು ಹೇಳಿದಂತೆ ನಾವು ಸರ್ವಾಧಿಕಾರದ ಕಡೆಗೆ ಹೋಗುತ್ತಿದ್ದೇವೆ. ಭಾರತದಲ್ಲಿನ ಪ್ರಜಾಪ್ರಭುತ್ವವನ್ನು ನೋಡಿದರೆ ಹಿಂದೆಯೂ ಇದೇ ರೀತಿಯ ಪ್ರಜಾಪ್ರಭುತ್ವ ಇದ್ದಿರಬಹುದು, ಎಂದು ಜನರಿಗೆ ಅನಿಸುತ್ತದೆ. ಪಾಶ್ಚಾತ್ಯರು ಪ್ರಾಚೀನ ಗ್ರೀಸ್‌ನಲ್ಲಿನ ಪ್ರಜಾಪ್ರಭುತ್ವದ ಪ್ರಶಂಸೆಯನ್ನು ಮಾಡುತ್ತಾರೆ. ಅವರಿಗೆ ಹಿಂದೆ ಯುನಾನ ಮತ್ತು ಗ್ರೀಸ್‌ನಲ್ಲಿ ಇಂದಿನ ಹಾಗೆ ಪ್ರಜಾಪ್ರಭುತ್ವ ಇರಲಿಲ್ಲ ಎಂಬುದು ಗೊತ್ತಿಲ್ಲ. ಆಗ ನಗರಗಳಲ್ಲಿನ ಕೇವಲ ೨೫ ರಿಂದ ೩೦ ರಷ್ಟು ಜನರಿಂದ ಮಾತ್ರ ಮತದಾನವಾಗುತ್ತಿತ್ತು. ಅದರಲ್ಲಿಯೂ ಒಳ್ಳೆಯ ನಡತೆಯ ಜನರ ಸಮಾವೇಶವಿತ್ತು. ಮಹಿಳೆಯರಿಗೆ ಮತ್ತು ನೌಕರ-ಚಾಕರರಿಗೆ ಮತದಾನದ ಅನುಮತಿ ಇರಲಿಲ್ಲ. ಆ ಪ್ರಜಾಪ್ರಭುತ್ವದ ಸ್ವರೂಪವು ಸಂಪೂರ್ಣ ಬೇರೆಯೇ ಆಗಿದ್ದು ಅದು ಕೆಲವೇ ಜನರ ರಾಜ್ಯವಾಗಿತ್ತು.

೨. ಭಾರತದಲ್ಲಿ ಶ್ರೀರಾಮನನ್ನು ಆದರ್ಶ ರಾಜನೆಂದು ತಿಳಿಯುವುದರ ಹಿಂದಿನ ಕಾರಣ 

ಹಿಂದೆ ಭಾರತದಲ್ಲಿದ್ದ ವರ್ಣವ್ಯವಸ್ಥೆಯನ್ನು ಟೀಕಿಸಲಾಗುತ್ತದೆ; ಆದರೆ ಆಗ ಕ್ಷತ್ರೀಯ ರಾಜರ ಕೈಯಲ್ಲಿ ಅಧಿಕಾರವಿತ್ತು, ಆಗ ಅವರು ಸ್ವತಃ ಕಾನೂನುಗಳನ್ನು ಮಾಡುತ್ತಿರಲಿಲ್ಲ. ಆ ಸಮಯದಲ್ಲಿ ಧರ್ಮಶಾಸ್ತ್ರ ಮತ್ತು ಲೋಕಶಾಸ್ತ್ರಗಳಿದ್ದವು. ಲೋಕಶಾಸ್ತ್ರವನ್ನು ಸಮಾಜದ ಜನ ಸಾಮಾನ್ಯರು ಮತ್ತು ಕೆಲವು ವಿಶೇಷ ಜನರ ಇಚ್ಛೆಯಿಂದ ಮಾಡಲಾಗುತ್ತಿತ್ತು. ರಾಜನು ಜನರ ಅಭಿಪ್ರಾಯಗಳನ್ನು ಗೌರವಿಸುತ್ತಿದ್ದನು. ಅವನಿಗೆ ಜನರ ಇಚ್ಛೆಯ ವಿರುದ್ಧ ಆಡಳಿತ ನಡೆಸಲು ಸಾಧ್ಯವಿರಲಿಲ್ಲ. ವಾಲ್ಮೀಕಿ ಋಷಿಗಳು ಹೇಳಿದಂತೆ ‘ಪ್ರಭು ಶ್ರೀ ರಾಮ ಲೋಕಭಿರೂ ಆಗಿದ್ದರು.’ ಅಂದರೆ ಅವರು ಜನರಿಗೆ ಏನು ಬೇಕು, ಏನು ಬೇಡ ಎಂಬುದನ್ನು ತಿಳಿದುಕೊಂಡು ಆಡಳಿತವನ್ನು ನಡೆಸುತ್ತಿದ್ದರು. ಭಾರತದಲ್ಲಿನ ಆದರ್ಶ ರಾಜ್ಯದ ಸಂಕಲ್ಪನೆಯನ್ನು ಕೌಟಿಲ್ಯನ ಅರ್ಥ ಶಾಸ್ತ್ರದಲ್ಲಿ ನೀಡಲಾಗಿದೆ; ಆದರೆ ‘ಆದರ್ಶ ರಾಜ ಪ್ರಭು ಶ್ರೀರಾಮನ ಹಾಗೆಯೇ ಇರಬೇಕು’, ಎಂದೇ ಹೇಳಲಾಗುತ್ತದೆ.

ಸ್ಮರತಾಂ ಹೃದಿ ವಿನ್ಯಸ್ಯ ವಿದ್ಧಂ ದಂಡಕಕಣ್ಟಕೈಃ |

ಸ್ವಪಾದಪಲ್ಲವಂ ರಾಮ ಆತ್ಮಜ್ಯೋತಿರ್ಗಾತ್ ತತಃ ||

– ಶ್ರೀಮದ್ಭಾಗವತಪುರಾಣ, ಸ್ಕಂದ ೯, ಅಧ್ಯಾಯ ೧೧, ಶ್ಲೋಕ ೧೯

ಅರ್ಥ : ತಮ್ಮನ್ನು ಸ್ಮರಿಸುವ ಭಕ್ತರ ಹೃದಯದಲ್ಲಿ, ದಂಡಕಾರಣ್ಯದಲ್ಲಿನ ಮುಳ್ಳುಗಳು ಚುಚ್ಚಿದ ತಮ್ಮ ಕೋಮಲ ಚರಣವನ್ನಿಟ್ಟು ಶ್ರೀರಾಮರು ಜ್ಯೋತಿರ್ಮಯ ಆತ್ಮರೂಪದಲ್ಲಿ ಅಂತರ್ಧಾನರಾದರು.

ಈ ಶ್ಲೋಕವು ಪ್ರಭು ಶ್ರೀರಾಮರ ಚರಿತ್ರೆಯನ್ನು ನಮ್ಮ ಮುಂದಿಡುತ್ತದೆ. ಶ್ರೀರಾಮರು ಇತರರಿಗಾಗಿ ಕಷ್ಟವನ್ನು ತೆಗೆದುಕೊಳ್ಳುತ್ತಾರೆ. ಅವರಿಗೆ ನಮ್ಮ ಪ್ರಜೆಗಳ ಕಲ್ಯಾಣ ಹೇಗಾಗುವುದು, ಎಂಬುದರ ಚಿಂತೆಯೇ ಇರುತ್ತದೆ; ಆದುದರಿಂದಲೇ ಅವರನ್ನು ಶ್ರೇಷ್ಠ ರಾಜರೆಂದು ಪರಿಗಣಿಸಲಾಗುತ್ತದೆ.

೩. ರಾಜ ಮತ್ತು ಪ್ರಜೆ ಇವರ ಸಂಬಂಧ

ಭಾರತದಲ್ಲಿ ರಾಜ ಮತ್ತು ಪ್ರಜೆ ಇವರ ಸಂಬಂಧವು ಒಂದು ರೀತಿಯಲ್ಲಿ ಪಿತ ಮತ್ತು ಪುತ್ರರ ಹಾಗಿದೆ. ಹೇಗೆ ತಂದೆ ತನ್ನ ಮಕ್ಕಳನ್ನು ಎಲ್ಲ ರೀತಿಯಿಂದ ಜೋಪಾನ ಮಾಡುತ್ತಾನೆಯೋ, ಹಾಗೆ ರಾಜನು ತನ್ನ ಪ್ರಜೆಗಳ ಕಾಳಜಿ ವಹಿಸುತ್ತಾನೆ. ಪ್ರಭು ಶ್ರೀರಾಮ ಮರ್ಯಾದಾ ಪುರುಷೋತ್ತಮರಾಗಿದ್ದರು. ‘ನನಗೆ ಪ್ರಜೆಗಳ ಹಿತದಿಂದ ದೂರ ಹೋಗಲಿಕ್ಕಿಲ್ಲ’, ಇದು ಶ್ರೀರಾಮರ  ಮರ್ಯಾದೆ (ಸಭ್ಯತೆ) ಆಗಿತ್ತು. ಪ್ರಜೆಗಳೆಂದರೆ, ಕೇವಲ ಮನುಷ್ಯರು ಮಾತ್ರ ಅಲ್ಲ, ಅದರಲ್ಲಿ ಪಶು, ಪಕ್ಷಿ, ಜೀವಜಂತು, ವೃಕ್ಷ, ಭೂಮಿ, ಅರಣ್ಯಸಂಪತ್ತು ಇವುಗಳ ಸಮಾವೇಶವಿದೆ ಮತ್ತು ಈ ಪ್ರಜೆಗಳ ಹೊಣೆಯನ್ನು ಹೊತ್ತು ರಕ್ಷಿಸುವುದು, ಸಂವರ್ಧಿಸುವುದು ಮತ್ತು ಅವರ ನಿರ್ವಹಣೆ ಮಾಡುವುದು, ಇದು ರಾಜನ ಕರ್ತವ್ಯವಾಗಿದೆ. ಇದನ್ನು ಮಾಡುವಾಗ ರಾಜನು ತನ್ನ ಹಿತವನ್ನು ನೋಡುವುದಿಲ್ಲ. ಶ್ರೀರಾಮನ ಜೀವನವು ಕೇವಲ ತಮ್ಮ ಸುಖ ಅಥವಾ ದುಃಖಕ್ಕೆ ಸೀಮಿತವಾಗಿರಲಿಲ್ಲ. ಸಂತ ತುಳಸೀದಾಸರು ಹೀಗೆ ಬರೆದಿದ್ದಾರೆ, ಶ್ರೀರಾಮರಿಗೆ ರಾಜ್ಯಾಭಿಷೇಕದ ವಾರ್ತೆ ಸಿಕ್ಕಿದಾಗ ಅವರಿಗೆ ಸಂತೋಷವಾಗಲಿಲ್ಲ ಮತ್ತು ಕೂಡಲೇ ವನವಾಸ ಸಿಕ್ಕಿದಾಗ ದುಃಖವೂ ಆಗಲಿಲ್ಲ. ಯಾವ ರಾಜನು ತನ್ನ ಹಿತಕ್ಕಿಂತ ತನ್ನ ಧರ್ಮ ಯಾವುದರಲ್ಲಿದೆ ಮತ್ತು ಅವನಿಗೆ ಏನು ಮಾಡಬೇಕಾಗಿದೆ, ಎಂಬುದಷ್ಟೆ ನೋಡುತ್ತಾನೆಯೋ, ಅವನಲ್ಲಿಯೇ ಇಂತಹ ಸಮತೋಲನ ಬರಲು ಸಾಧ್ಯ.

೪. ರಾಮರಾಜ್ಯದ ಸಂಕಲ್ಪನೆ !

ಪ್ರಭು ಶ್ರೀರಾಮರು ಹೇಗೆ ರಾಜ್ಯಾಭಿಷೇಕವನ್ನು ಸ್ವೀಕರಿಸಿದರೋ, ಹಾಗೆಯೇ ವನವಾಸವನ್ನೂ ಸ್ವೀಕರಿಸಿದರು; ಆದ್ದರಿಂದ ವಾಲ್ಮಿಕಿ ಋಷಿಗಳು, ಶ್ರೀರಾಮರು ಧರ್ಮಶರೀರ ಅಂದರೆ ಧರ್ಮದ ಮೂರ್ತಿಯಾಗಿದ್ದಾರೆಂದು ಹೇಳಿದ್ದಾರೆ. ಸಾಕ್ಷಾತ್ ಈಶ್ವರನು ಅವತಾರಗಳನ್ನು ತಾಳಿ ಧರ್ಮಾಚರಣೆಯನ್ನು ಮಾಡುತ್ತಾನೆ. ಈ ಅವತಾರಗಳನ್ನೂ ಅವನು ತನಗಾಗಿ ಅಲ್ಲ, ಇತರರಿಗಾಗಿ ತಾಳುತ್ತಾನೆ. ಶ್ರೀರಾಮನಲ್ಲಿ ‘ನಾನು ರಾಜನಾಗಿದ್ದರೂ ಈ ರಾಜ್ಯ ನನಗಾಗಿ, ನನ್ನ ಕುಟುಂಬದವರಿಗಾಗಿ ಅಥವಾ ಕುಲಕ್ಕಾಗಿ ಅಲ್ಲ, ಕೇವಲ ಪ್ರಜೆಗಳ ಹಿತಕ್ಕಾಗಿ ರಾಜ್ಯವನ್ನು ಮಾಡುತ್ತೇನೆ’, ಎಂಬ ಭಾವವಿತ್ತು. ಇದೇ ರಾಮರಾಜ್ಯದ ಸಂಕಲ್ಪನೆಯಾಗಿದೆ. ರಾಮರಾಜ್ಯವು ಒಂದು ಆದರ್ಶ ಉದಾಹರಣೆಯಾಗಿದೆ. ರಾಮರಾಜ್ಯದಲ್ಲಿ ಪ್ರಜೆಗಳಿಗೆ ಎಲ್ಲ ರೀತಿಯ ಸುಖ ಸಿಗುತ್ತಿತ್ತು.

೫. ಶ್ರೀಕೃಷ್ಣನ ರಾಜ್ಯಕ್ಕಿಂತ ರಾಮರಾಜ್ಯ ಹೆಚ್ಚು ಶ್ರೇಷ್ಠವೆಂದು ತಿಳಿಯುವುದರ ಕಾರಣ

ಶ್ರೇಷ್ಠ ರಾಜರಿಗಾಗಿ ಕೇವಲ ಶ್ರೀರಾಮರೇ ಆದರ್ಶವಾಗಬಹುದು. ಅವರು ಭಗವಾನ ಶ್ರೀಕೃಷ್ಣನನ್ನು ಆದರ್ಶವೆಂದು ತಿಳಿದುಕೊಳ್ಳಲಾರರು; ಏಕೆಂದರೆ ಶ್ರೀಕೃಷ್ಣನ ಸಮಯದಲ್ಲಿ ಯುಗ ಮತ್ತು ಪರಿಸ್ಥಿತಿ ಬೇರೆಯೇ ಆಗಿತ್ತು. ಆ ಪರಿಸ್ಥಿತಿಗನುಸಾರ ಅವರ ಲೀಲೆ ಇತ್ತು. ಆದ್ದರಿಂದ ‘ರಾಮರಾಜ್ಯ’ ಎಂದು ಹೇಳಲಾಗುತ್ತದೆ; ‘ಕೃಷ್ಣರಾಜ್ಯ’ಎಂದು ಹೇಳುವುದಿಲ್ಲ. ಮಹಾಭಾರತ ದ್ವಾಪರಯುಗದ ಕೊನೆಗೆ ಮತ್ತು ಕಲಿಯುಗದ ಪ್ರಾರಂಭದಲ್ಲಿ ನಡೆದಿದೆ. ಆದ್ದರಿಂದ ಮಹಾಭಾರತದ ಚರಿತ್ರೆಯಲ್ಲಿ ಆ ಉತ್ಕೃಷ್ಟತೆ ಬರುವುದಿಲ್ಲ. ರಾಮಾಯಣ ಮತ್ತು ಮಹಾಭಾರತ ಇವುಗಳಲ್ಲಿ ಒಂದು ವ್ಯತ್ಯಾಸವಿದೆ, ಅದೇನೆಂದರೆ, ರಾಮಾಯಣದಲ್ಲಿ ಸಹೋದರ ಸಹೋದರನಿಗಾಗಿ ವಿಯೋಗವನ್ನು ಸಹಿಸಿಕೊಳ್ಳುತ್ತಾನೆ ಮತ್ತು ಮಹಾಭಾರತದಲ್ಲಿ ಸಹೋದರನೇ ಸಹೋದರನಿಗೆ ವಿದ್ರೋಹವನ್ನು ಮಾಡುತ್ತಾನೆ. ರಾಮಾಯಣದಲ್ಲಿ ರಾವಣನನ್ನು ದುಷ್ಟನೆಂದು ತಿಳಿಯಲಾಗಿಲ್ಲ. ರಾಮನಿಂದ ಹತನಾದ ಬಳಿಕ ರಾವಣನ ಉದ್ಧಾರವಾಗುತ್ತದೆ ಮತ್ತು ಅವನಿಗೆ ಎಲ್ಲರಿಗೂ ಸಿಗುವ ಹಾಗೆಯೆ ಸದ್ಗತಿ ಸಿಗುತ್ತದೆ. ಹೇಗೆ ಅಗ್ನಿಯ ಸಾನಿಧ್ಯಕ್ಕೆ ಬರುವ ವಸ್ತು ಅಗ್ನಿಸ್ವರೂಪವಾಗುವಂತೆ ಪತಿತ ವ್ಯಕ್ತಿಯೂ ಈಶ್ವರನ ಸಾನಿಧ್ಯಕ್ಕೆ ಬಂದಾಗ ಅದೇ ಪರಮ ಗತಿಯು ಪ್ರಾಪ್ತವಾಗುತ್ತದೆ. ರಾವಣನು ವಿರೋಧಿಭಕ್ತಿಯನ್ನು ಮಾಡಿದ್ದರಿಂದ ಅವನಿಗೆ ಸದ್ಗತಿ ಸಿಕ್ಕಿತು.

೬. ರಾಮರಾಜ್ಯದಲ್ಲಿ ಸಮಾಜದ ಲೋಭವಿರಹಿತ ಸ್ಥಿತಿ ಇದ್ದುದರಿಂದ ಸಂಘರ್ಷವಿರಲಿಲ್ಲ

ಮಧ್ಯಯುಗದ ಕಾಲದಲ್ಲಿ ಆರಂಭವಾದ ಮಂದಿರಗಳ ವಿಧ್ವಂಸದಿಂದ ಅವುಗಳ ಮೇಲೆ ಅವಲಂಬಿಸಿದ್ದ ಅರ್ಥವ್ಯವಸ್ಥೆ ನಾಶವಾಯಿತು. ರಾಜ ಆಡಳಿತಗಾರನಾಗಿದ್ದರೂ ಅವನು ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಜನರು ತಮ್ಮ ಇಚ್ಛೆಗನುಸಾರ ಜೀವನವನ್ನು ನಡೆಸುತ್ತಿದ್ದರು ಮತ್ತು ಅವರ ಧರ್ಮವನ್ನು ಪಾಲಿಸುತ್ತಿದ್ದರು. ವಾಲ್ಮಿಕಿ ಋಷಿಗಳು ಹೇಳಿದಂತೆ ಪ್ರಜೆಗಳು ತಮ್ಮ ಧರ್ಮ ಮತ್ತು ಕರ್ಮಗಳಲ್ಲಿ ಮಗ್ನರಾಗಿದ್ದರು. ಅವರಿಗೆ ಅದರಲ್ಲಿಯೇ ಆನಂದ ಸಿಗುತ್ತಿದ್ದುದರಿಂದ ಅವರು ಸಂತುಷ್ಟರಾಗಿದ್ದರು. ರಾಜನು ಶಿಕ್ಷೆಯನ್ನು ವಿಧಿಸುತ್ತಿದ್ದರೂ ಪ್ರಜೆಗಳು ಯೋಗ್ಯ ಆಚರಣೆಗಳನ್ನು ಮಾಡುತ್ತಿದ್ದರು. ಈ ಆಚರಣೆಯನ್ನು ಆ ರಾಜ್ಯದ ಬ್ರಾಹ್ಮಣರು, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಈ ನಾಲ್ಕೂ ವರ್ಣದ ಜನರು ಮಾಡುತ್ತಿದ್ದರು. ಅವರೆಲ್ಲರೂ ಲೋಭವಿರಹಿತರಾಗಿದ್ದರು. ಯಾರಿಗೂ ಯಾರಿಂದಲೂ ಏನೂ ಕಬಳಿಸುವುದು ಇರಲಿಲ್ಲ. ಇದಕ್ಕೆ ವಾಲ್ಮಿಕಿ ಋಷಿಗಳು ‘ಲೋಭವಿವರ್ಜಿತಾ’ ಎಂದು ಹೇಳುತ್ತಾರೆ. ಬೇರೆಯವರ ಸಂಪತ್ತನ್ನು ಕಬಳಿಸುವ ಇಚ್ಛೆಯೇ ಇಲ್ಲದಿದ್ದರೆ, ಸಮಾಜದಲ್ಲಿ ಸಂಘರ್ಷ ನಡೆಯುವುದೇ ಇಲ್ಲ. ಇದು ರಾಮರಾಜ್ಯದ ಪರಿಣಾಮವಾಗಿತ್ತು.

೭. ಪ್ರಾಚೀನ ಕಾಲದಲ್ಲಿ ಯಜ್ಞಯಾಗಗಳು ದಾನಧರ್ಮದ ಮಾಧ್ಯಮಗಳಾಗಿದ್ದವು

ಯಜ್ಞಯಾಗದ ನಿಮಿತ್ತ ಬಡವರಿಂದ ವಿದ್ವಾಂಸರ ವರೆಗೆ ಎಲ್ಲರಿಗೂ ಸಂಪತ್ತನ್ನು ದಾನ ಮಾಡಲಾಗುತ್ತಿತ್ತು. ಇಂತಹ ದಾನ ಧರ್ಮವನ್ನು ರಾಜಪುತ್ರ ಮತ್ತು ರಾಜಪುತ್ರಿಯ ವಿವಾಹದ ಸಮಯದಲ್ಲಿಯೂ ಮಾಡಲಾಗುತ್ತಿತ್ತು. ಇಷ್ಟು ಮಾತ್ರವಲ್ಲ, ವಿವಾಹದಲ್ಲಿ ಸಂಗೀತ ನೃತ್ಯ ಮಾಡುವವರಿಗೂ ಧನವನ್ನು ಹಂಚಲಾಗುತ್ತಿತ್ತು. ವಾಸ್ತವಿಕದಲ್ಲಿ ಯಜ್ಞವೆಂದರೆ ದಾನಧರ್ಮ ಮಾಡುವ ಮಾಧ್ಯಮವಾಗಿತ್ತು. ಅಶ್ವಮೇಧ ಯಜ್ಞವು ಇತರರ ಮೇಲೆ ರಾಜ್ಯ ನಡೆಸಲಿಕ್ಕಲ್ಲ, ಅದು ಸಂಪತ್ತನ್ನು ಹಂಚಲು ಮಾಡಲಾಗುತ್ತಿತ್ತು. ದಾನ ಕೇವಲ ರಾಜನೇ ಮಾಡುತ್ತಿರಲಿಲ್ಲ, ಸಮಾಜದಲ್ಲಿನ ಜನರೂ ಕೆಲವು ವಿಶೇಷ ಸಮಾರಂಭಗಳ ನಿಮಿತ್ತ ದಾನಧರ್ಮವನ್ನು ಮಾಡುತ್ತಿದ್ದರು. ‘ಮನುಷ್ಯ ಲೋಭಿಯಾಗಿರುವುದರಿಂದ ಅದರ ನಿವಾರಣೆಗಾಗಿ ಅವನು ನಿಯಮಿತವಾಗಿ ದಾನಧರ್ಮ ಮಾಡಬೇಕು’, ಎಂದು ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಭಾರತದ ಇತಿಹಾಸದಲ್ಲಿ ಮಹಾದಾನಿ ಎಂದು ರಾಜಾ ಶಿಬೀ, ಕರ್ಣ, ರಾಜಾ ಹರಿಶ್ಚಂದ್ರ ಮುಂತಾದ ಅನೇಕ ಶ್ರೇಷ್ಠ ಪುರುಷರ ಗಣನೆಯಿದೆ. ದಾನಧರ್ಮವು ಇಂದಿನ ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ವಿರುದ್ಧವಾಗಿದೆ.

೮. ಪ್ರಾಚೀನ ಕಾಲದಲ್ಲಿ ಹಿಂದೂ ರಾಜರು ಪರಾಜಿತ ರಾಜ್ಯದ ಪ್ರಜೆಗಳೊಂದಿಗೆ ಧರ್ಮಶಾಸ್ತ್ರದಂತೆ ವರ್ತಿಸುತ್ತಿದ್ದರು

ಮನುಸ್ಮೃತಿ, ಯಜ್ಞವಲ್ಕ್ಯ ಇತ್ಯಾದಿ ಗ್ರಂಥಗಳಲ್ಲಿ ರಾಜನ ಆಚರಣೆಗಳನ್ನು ಹೇಳಲಾಗಿದೆ. ಅದನ್ನು ಸಂಪೂರ್ಣ ಭಾರತ ದಲ್ಲಿನ ರಾಜರು ಪಾಲಿಸುತ್ತಿದ್ದರು. ಅದಕ್ಕನುಸಾರ ವಿಜಯ ಗಳಿಸಿದ ರಾಜನು ರಾಜಧಾನಿಯೊಳಗೆ ಪ್ರವೇಶಿಸುವಾಗ ಅವನು ಮೊತ್ತಮೊದಲು ಜನರಿಗೆ ಅಭಯದಾನ ನೀಡುತ್ತಿದ್ದನು. ಅವನು ಬಾಲಕರು, ಸ್ತ್ರೀಯರು, ಕಲಾವಿದರು, ಶ್ರಮಿಕರು, ಧನಿಕರು, ವ್ಯಾಪಾರಿಗಳು ಯಾರನ್ನೂ ಸ್ಪರ್ಶ ಮಾಡಲು ಸಾಧ್ಯವಿರಲಿಲ್ಲ. ಅವನಿಗೆ ರಾಜಧಾನಿಯಲ್ಲಿ ಕೇವಲ ರಾಜಕೋಶವನ್ನು ವಶಪಡಿಸಿಕೊಳ್ಳುವ ಅಧಿಕಾರವಿತ್ತು; ಅವನಿಗೆ ರಾಜಕುಮಾರಿಯರನ್ನು ಸ್ಪರ್ಶ ಮಾಡುವ ಅಧಿಕಾರವಿರಲಿಲ್ಲ. ಅವನಿಗೆ ರಾಜಧಾನಿಯ ಪ್ರಮುಖ ಮಂದಿರದ ಮೂರ್ತಿಯನ್ನು ತೆಗೆದುಕೊಂಡು ಹೋಗಲಿಕ್ಕಿದ್ದರೆ, ಅವನು ತನ್ನ ರಾಜ್ಯದಲ್ಲಿನ ಹಳೆಯ ಮಂದಿರಕ್ಕಿಂತ ಭವ್ಯ ಮಂದಿರವನ್ನು ನಿರ್ಮಿಸಬೇಕಾಗುತ್ತಿತ್ತು. ರಾಜನಿಗೆ ಪರಾಜಿತ ರಾಜ್ಯದಿಂದ ದೊಡ್ಡ ದೊಡ್ಡ ಕಲಾವಿದರನ್ನು ಅಥವಾ ವಿದ್ವಾಂಸರನ್ನು ಬಲವಂತದಿಂದ ಕರೆದುಕೊಂಡು ಹೋಗಲು ಬರುತ್ತಿರಲಿಲ್ಲ, ಅವರಿಗೆ ಆಮಂತ್ರಣವನ್ನು ಕೊಡಬೇಕಾಗುತ್ತಿತ್ತು. ಆಮೇಲೆ ಅವರಿಗೆ ಇಚ್ಛೆಯಿದ್ದರೆ, ಅವರು ಆ ರಾಜನ ರಾಜಧಾನಿಗೆ ಹೋಗುತ್ತಿದ್ದರು, ಉದಾಹರಣೆಗೆ ಕಾಶ್ಮೀರಕ್ಕೆ ೭ ನೇ ಶತಮಾನದಲ್ಲಿ ಅನೇಕ ದೊಡ್ಡ ದೊಡ್ಡ ವಿದ್ವಾಂಸರು ಹೋದರು. ಅವರೆಲ್ಲರೂ ಉತ್ತರಪ್ರದೇಶದಿಂದಲೇ ಹೋಗಿದ್ದರು. ಈ ಪ್ರಕ್ರಿಯೆಯು ನಿರಂತರ ನಡೆಯುತ್ತಿತ್ತು. ಪರಾಜಿತ ರಾಜನ ಸಂಪತ್ತನ್ನು ‘ಹಾಲ್ ಎ ಗನಿಮತ್’ ಎಂದು ತಿಳಿಯುತ್ತಿರಲಿಲ್ಲ. (ಹೀಗೆ ಮತಾಂಧ ರಾಜರು ತಿಳಿಯುತ್ತಾರೆ) ಹಿಂದೂ ಸಂಸ್ಕೃತಿಯಲ್ಲಿ ಅದರ ಒಂದು ಉದಾಹರಣೆಯೂ ಸಿಗುವುದಿಲ್ಲ. ಕೆಲವೊಮ್ಮೆ ಕೆಲವು ಬೆರಳೆಣಿಕೆಯಷ್ಟು ಉದಾಹರಣೆಗಳು ಸಿಗುತ್ತಿದ್ದವು; ಆದರೆ ಅವರನ್ನು ದುಷ್ಟರೆಂದು ಪರಿಗಣಿಸಿ ಅವರನ್ನು ಸಂಹರಿಸಲಾಗುತ್ತಿತ್ತು.’

– ಭರತ ಗುಪ್ತ (೨೩.೧೦.೨೦೨೨)