ಗಿಡಗಳ ಉತ್ತಮ ಆರೋಗ್ಯಕ್ಕಾಗಿ ಫಲವತ್ತಾದ ಮಣ್ಣಿನ ಮಹತ್ವ
‘ಸದ್ಯ ಕೊರೊನಾದಿಂದ ರೋಗ ನಿರೋಧಕ ಶಕ್ತಿಯ ಮಹತ್ವವು ಎಲ್ಲರಗೂ ತಿಳಿದಿದೆ. ಹೇಗೆ ನಮ್ಮ ಶರೀರದಲ್ಲಿ ರೋಗವನ್ನು ಎದುರಿಸುವ ವ್ಯವಸ್ಥೆ ಇರುತ್ತದೆಯೋ, ಹಾಗೆಯೇ ನಿಸರ್ಗವು ಗಿಡಗಳಿಗೂ ಹುಟ್ಟಿದಾಗಿನಿಂದಲೇ ರೋಗ ನಿರೋಧಕ ಶಕ್ತಿಯನ್ನು ಕೊಟ್ಟಿರುತ್ತದೆ. ಹುಟ್ಟಿದಾಗಿನಿಂದಲೇ ಗಿಡಗಳಿಗಿರುವ ಈ ಪ್ರತಿಕಾರ ಶಕ್ತಿಯನ್ನು ಕಾರ್ಯ ನಿರತವಾಗಿಡುವ ಕೆಲಸವನ್ನು ಕಸಕಡ್ಡಿ, ಎಲೆ ಇತ್ಯಾದಿಗಳು ಕೊಳೆತು ತಯಾರಾದ ಫಲವತ್ತಾದ ಮಣ್ಣು (ಹ್ಯೂಮಸ) ಮಾಡುತ್ತದೆ. ಆದುದರಿಂದ ಗಿಡಗಳ ಸುತ್ತ ಈ ರೀತಿ ಫಲವತ್ತಾದ ಮಣ್ಣು ತಯಾರಾಗುತ್ತಿರುವ ತನಕ ಗಿಡಗಳಿಗೆ ರೋಗ ಬರುವ ಸಾಧ್ಯತೆ ಕಡಿಮೆಯಿರುತ್ತದೆ. ‘ಸುಭಾಷ ಪಾಳೇಕರ ಕೃಷಿ’ ಈ ಪದ್ದತಿಯಿಂದ ನೈಸರ್ಗಿಕ ಪದ್ಧತಿಯಲ್ಲಿ ಗಿಡಗಳನ್ನು ಬೆಳೆಸುವಾಗ ಗಿಡಗಳ ಅಕ್ಕಪಕ್ಕದಲ್ಲಿ ತಯಾರಾಗುವ ಫಲವತ್ತಾದ ಮಣ್ಣಿನ ನಿರ್ಮಿತಿಯ ಮಹತ್ವವು ಅನನ್ಯಸಾಧಾರಣವಾಗಿದೆ’.
– ಸೌ. ರಾಘವೀ ಕೋನೆಕರ, ಢವಳೀ, ಫೊಂಡಾ, ಗೋವಾ.