ಭಾರತ ಮತ್ತು ಚೀನಾ ನಡುವಿನ ಸಂಬಂಧ ಸಾಮಾನ್ಯವಾಗಿಲ್ಲ ! – ಜಯಶಂಕರ, ವಿದೇಶಾಂಗ ಸಚಿವ

ಭಾರತದ ವಿದೇಶಾಂಗ ಸಚಿವ ಎಸ್‌. ಜಯಶಂಕರ

ನಿಕೊಸಿಯಾ – ಭಾರತದ ಚೀನಾದೊಂದಿಗಿನ ಸಂಬಂಧಗಳು ಸಾಮಾನ್ಯವಾಗಿಲ್ಲ. ವಾಸ್ತವಿಕ ನಿಯಂತ್ರಣರೇಖೆಯ ಪಕ್ಷಪಾತಿ ಬದಲಾವಣೆಯ ಯಾವುದೇ ಪ್ರಯತ್ನಗಳನ್ನು ನಾವು ಒಪ್ಪುವುದಿಲ್ಲ, ಎಂದು ಭಾರತದ ವಿದೇಶಾಂಗ ಸಚಿವ ಎಸ್‌. ಜಯಶಂಕರರವರು ಹೇಳಿದ್ದಾರೆ. ದಕ್ಷಿಣ ಯುರೋಪಿನಲ್ಲಿರುವ ಸಾಯಪ್ರಸ ದೇಶದಲ್ಲಿನ ಭಾರತೀಯರೊಂದಿಗೆ ಸಂವಾದ ಮಾಡುತ್ತಿರುವಾಗ ಅವರು ಈ ಹೇಳಿಕೆ ನೀಡಿದ್ದಾರೆ.

೧. ಜಯಶಂಕರರವರು ಪಾಕಿಸ್ತಾನದ ಹೆಸರನ್ನು ಹೇಳದೇ ಅದರ ಮೇಲೆ ಅಪ್ರತ್ಯಕ್ಷವಾಗಿ ಟೀಕೆ ಮಾಡಿದ್ದಾರೆ. ಅವರು, “ಭಾರತವನ್ನು ಮಾತುಕತೆಗಾಗಿ ಅನಿವಾರ್ಯಗೊಳಿಸಲು ಭಯೋತ್ಪಾದನೆಯನ್ನು ಶಸ್ತ್ರವನ್ನಾಗಿ ಬಳಸಲು ಸಾಧ್ಯವಿಲ್ಲ. ನಮಗೆ ನೆರೆಯವರೊಂದಿಗೆ ಉತ್ತಮ ಸಂಬಂಧಗಳು ಬೇಕಾಗಿದೆ; ಆದರೆ ಸಂಬಂಧಗಳು ಉತ್ತಮವಾಗಿರಬೇಕು ಎಂಬುದರ ಅರ್ಥ ಸಂಬಂಧಪಟ್ಟ ದೇಶಗಳು ಮಾಡಿರುವ ಭಯೋತ್ಪಾದಕ ಕಾರ್ಯಾಚರಣೆಗಳ ಕಡೆಗೆ ಕುರುಡಾಗಿರುವುದು ಅಥವಾ ಭಯೋತ್ಪಾದನೆಗೆ ಬೆಂಬಲ ನೀಡುವುದು ಅಲ್ಲ. ಈ ವಿಷಯದಲ್ಲಿ ನಾವು ಸ್ಪಷ್ಟವಾಗಿದ್ದೇವೆ.

೨. ಇಂದು ವಿಶ್ವ ಮಟ್ಟದಲ್ಲಿ ಭಾರತವನ್ನು ‘ಸಮಸ್ಯೆಗಳನ್ನು ದೂರಗೊಳಿಸುವ ದೇಶ’ ಎಂದು ನೋಡಲಾಗುತ್ತಿದೆ. ಭಾರತವನ್ನು ಬಲಿಷ್ಟ ದೇಶ ಹಾಗೂ ಸ್ವತಂತ್ರ ದೇಶವೆಂದು ನೋಡಲಾಗುತ್ತದೆ. ಭಾರತವು ಸಾಯಪ್ರಸನೊಂದಿಗೆ ೩ ಒಪ್ಪಂದಗಳ ಮೇಲೆ ಮಾತುಕತೆ ನಡೆಸುತ್ತಿದೆ, ಎಂದೂ ಸಹ ಹೇಳಿದರು.

ಸಂಪಾದಕೀಯ ನಿಲುವು

ಭಾರತದ ಮೇಲೆ ನಿರಂತರವಾಗಿ ಕುತಂತ್ರ ಮಾಡುವ ಚೀನಾವನ್ನು ಶಬ್ದಗಳಿಂದ ವಿರೋಧಿಸುವುದರೊಂದಿಗೆ ಅದರ ವಿರುದ್ಧ ಆಕ್ರಮಣಕಾರಿ ಹೆಜ್ಜೆಗಳನ್ನಿಡುವುದು ಆವಶ್ಯಕವಾಗಿದೆ !