೭.೧೨.೨೦೨೨ ರಂದು (ಮಾರ್ಗಶಿರ ಶುಕ್ಲ ಚತುರ್ದಶಿ) ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ೫೨ ನೇಯ ಹುಟ್ಟುಹಬ್ಬವಾಯಿತು. ಆ ನಿಮಿತ್ತವಾಗಿ ಅವರ ಜೊತೆ ಸೇವೆ ಮಾಡುವ ಸಾಧಕ ಶ್ರೀ. ವಾಲ್ಮಿಕ ಭುಕನ ಇವರ ಗಮನಕ್ಕೆ ಬಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರವರ ದೈವೀ ವೈಶಿಷ್ಟ್ಯಗಳನ್ನು ಮುಂದೆ ಕೊಡಲಾಗಿದೆ.
೧. ಕರ್ತೃತ್ವ ಇಲ್ಲದಿರುವುದು
೧ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿದ್ದರೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ತಮ್ಮ ಪರಿಚಯವನ್ನು ‘ಆಶ್ರಮದ ಸೇವಕಿ’, ಎಂದು ಮಾಡಿಕೊಡುವುದು : ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಜೊತೆಗೆ ದೈವೀ ಪ್ರಯಾಣದ ನಿಮಿತ್ತ ಸೇವೆ ಮಾಡುತ್ತಿರುವಾಗ ಈ ಒಂದೂವರೆ ವರ್ಷಗಳಲ್ಲಿ ಅವರಿಂದ ಬಹಳಷ್ಟು ವಿಷಯಗಳು ಕಲಿಯಲು ಸಿಕ್ಕಿತು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಈ ಒಂದೂವರೆ ವರ್ಷಗಳಲ್ಲಿ ‘ಅವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ’, ಎಂದು ತಾವಾಗಿಯೇ ಸಮಾಜಕ್ಕೆ ಪರಿಚಯ ಮಾಡಿಕೊಟ್ಟಿದ್ದನ್ನು ನಾನು ಎಂದೂ ನೋಡಲಿಲ್ಲ. ಅವರು ‘ನಾವು ಆಶ್ರಮದ ಸೇವಕರಾಗಿದ್ದೇವೆ. ಯಾವ ಸೇವೆ ಹೇಳುತ್ತಾರೋ, ಆ ಸೇವೆಯನ್ನು ನಾವು ಮಾಡುತ್ತೇವೆ’, ಎಂದು ಎಲ್ಲರಿಗೂ ತಮ್ಮ ಪರಿಚಯವನ್ನು ಮಾಡಿಕೊಡುತ್ತಾರೆ. ಹೀಗೆ ಹೇಳುವಾಗ ಸಹಜತೆ ಮತ್ತು ಗುರುಗಳ ಬಗ್ಗೆ ನಿರ್ಮಲ ಭಾವವಿರುತ್ತದೆ. ‘ಒಬ್ಬ ಉತ್ತರಾಧಿಕಾರಿಯಾಗಿದ್ದರೂ ‘ನಾನು ಸೇವಕನಾಗಿರುವೆ’, ಎಂದು ಹೇಳುತ್ತಾರೆ’, ಇದರಲ್ಲೇ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಅವತಾರತ್ವವು ಸಿದ್ಧವಾಗುತ್ತದೆ. ಹೊರಗಿನ ಸಮಾಜದ ಉತ್ತರಾಧಿಕಾರಿಗಳನ್ನು ನೋಡಿದರೆ, ತಮ್ಮ ಪರಿಚಯವನ್ನು ಮಾಡಿಕೊಡುವ ಅವರದೊಂದು ಪದ್ಧತಿ ಇರುತ್ತದೆ. ಅದರಂತೆ ಅವರ ಮಾತು ಮತ್ತು ನಡುವಳಿಕೆ ಇರುತ್ತದೆ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕು ಎದುರಿಗಿರುವ ವ್ಯಕ್ತಿಯೊಂದಿಗೆ ಆತ್ಮೀಯವಾಗಿ ಮಾತಾಡುತ್ತಾರೆ. ಆದುದರಿಂದ ಆ ವ್ಯಕ್ತಿಯೂ ಅವರೊಂದಿಗೆ ಬಹಳ ಆತ್ಮೀಯತೆಯಿಂದ ಮಾತನಾಡುತ್ತಾನೆ.
೧ ಆ. ‘ಗುರುಗಳೇ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರೇ) ಎಲ್ಲವನ್ನೂ ಮಾಡುತ್ತಾರೆ’, ಎಂಬ ಭಾವ : ಮಾರ್ಚ್ ೨೦೨೨ ರಲ್ಲಿ ಮಹರ್ಷಿಗಳ ಆಜ್ಞೆಯಂತೆ ನಾವು ಮಣಿಪುರ ರಾಜ್ಯಕ್ಕೆ ಹೋಗಿದ್ದೆವು. ಆಗ ಅಲ್ಲಿ ದೇವಸ್ಥಾನಕ್ಕೆ ಹೋಗುವುದಕ್ಕಾಗಿ ಸ್ಥಳೀಯ ವಾಹನ ಮಾಡಿದ್ದೆವು. ನಾವು ಅಲ್ಲಿ ಬಹಳಷ್ಟು ದೇವಸ್ಥಾನಗಳಿಗೆ ಹಾಗೂ ಭಾರತೀಯ ಸೈನ್ಯದ ‘ಕ್ಯಾಂಪ್’ಗೆ ಭೇಟಿ ನೀಡಿದೆವು. ವಾಹನದ ಚಾಲಕನೂ ನಮ್ಮ ಜೊತೆಗೆ ಇರುತ್ತಿದ್ದನು. ೩ ದಿನಗಳ ನಂತರ ಅವನು ನಮಗೆ ಕೇಳಿದನು, “ಈ ಮಾತಾಜೀ ಯಾರಿದ್ದಾರೆಂದು ನಿಜ ಹೇಳಿರಿ. ನಾನು ೩ ದಿನಗಳಿಂದ ನೋಡುತ್ತಿದ್ದೇನೆ, ಮಾತಾಜೀ ಎಲ್ಲಿ ಹೋಗುತ್ತಾರೆ, ಅಲ್ಲಿ ಎದುರಿಗಿರುವ ಜನರು ಬಹಳ ಗೌರವದಿಂದ ಅವರ ಸನ್ಮಾನ ಮಾಡುತ್ತಾರೆ.” ಅದಕ್ಕೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕು ಇವರು ಆ ಚಾಲಕನಿಗೆ, “ಅದು ನಮ್ಮ ಗುರುಗಳ ದೊಡ್ಡ ಕೃಪೆಯಾಗಿದೆ. ನಾವು ದೇವರ ಸೇವೆ ಮಾಡುತ್ತೇವೆ. ಆದುದರಿಂದ ದೇವರೂ ತನ್ನ ಭಕ್ತರ ಸೇವೆಯನ್ನು ಇಂತಹ ಮಾಧ್ಯಮದಿಂದ ಮಾಡುತ್ತಾನೆ”, ಎಂದರು. ಇದರಿಂದ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕು ಇವರು ತಮ್ಮ ಕಡೆ ಕರ್ತೃತ್ವವನ್ನು ತೆಗೆದುಕೊಳ್ಳದೆ ‘ಗುರುಗಳೇ ಎಲ್ಲ ಮಾಡುತ್ತಾರೆ’, ಎಂಬುದನ್ನು ನಮಗೂ ಕಲಿಸಿದರು.
೨. ಪ್ರೀತಿಸ್ವರೂಪ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !
೨ ಅ. ಕೆಲಸಗಾರರನ್ನು ಪ್ರೇಮದಿಂದ ಕಂಡು ಅವರನ್ನು ಸಹಜವಾಗಿ ತಮ್ಮವರನ್ನಾಗಿ ಮಾಡಿಕೊಳ್ಳುವುದು : ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕು ಸಾಧಕರ ಮನೆಗೆ ಕೆಲಸಕ್ಕೆ ಬರುವ ಕೆಲಸಗಾರರ ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ಅವರು ಬಹಳ ಪ್ರೀತಿಯಿಂದ ಅವರನ್ನು ‘ಊಟ ಆಯಿತಾ ? ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ ?’, ಹೀಗೆ ವಿಚಾರಿಸುತ್ತಾರೆ. ಆದುದರಿಂದ ಆ ಕೆಲಸಗಾರರು ನಾವು ಹೊರಡುವಾಗ ‘ಪುನಃ ಯಾವಾಗ ಬರುತ್ತೀರಿ ?’, ಎಂದು ಕೇಳುತ್ತಾರೆ. ಅಲ್ಲದೇ “ಬೇಗ ಬನ್ನಿರಿ. ನಾವು ನಿಮ್ಮ ದಾರಿ ಕಾಯುತ್ತೇವೆ. ನಮಗೆ ನಿಮ್ಮ ಸೇವೆ ಮಾಡಲು ಇಷ್ಟವಾಗುತ್ತದೆ ಮತ್ತು ಬಹಳ ಒಳ್ಳೆಯದೆನಿಸುತ್ತದೆ”, ಎಂದೂ ಅವರು ಹೇಳುತ್ತಾರೆ. ಇದು ಕೇಳಿದಾಗ ನಮಗೆ ಭಾವಜಾಗೃತಿಯಾಗುತ್ತದೆ. “ಆಯುಷ್ಯದಲ್ಲಿ ಇದೇ ರೀತಿ ಪ್ರೇಮವನ್ನು ಗಳಿಸುವುದಿರುತ್ತದೆ. ಆ ಕೆಲಸಗಾರರಿಗೂ ನಮಗೂ ಏನೂ ಸಂಬಂಧವಿಲ್ಲ, ಆದರೂ ನಾವು ಪ್ರೇಮದಿಂದ ಮಾತನಾಡಿದರೆ ಅವರಿಗೂ ಎಷ್ಟು ಆನಂದವಾಗುತ್ತದೆಯಲ್ಲ ! ಹೀಗೆ ಆನಂದ ಮತ್ತು ಪ್ರೇಮವನ್ನು ಕೊಡುತ್ತಾ ಹೋದರೆ ಎದುರಿನವನು ತನ್ನಷ್ಟಕ್ಕೇ ಈಶ್ವರನ ಜೊತೆಗೆ ಜೋಡಿಸಲ್ಪಡುತ್ತಾನೆ’, ಎಂದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕು ಹೇಳುತ್ತಾರೆ.
೨ ಆ. ಬಡವರಿಂದ ವಸ್ತುಗಳ ಖರೀದಿಸಿ ಅವರಿಗೆ ಆನಂದ ಕೊಡುವುದು : ಪ್ರಯಾಣ ಮಾಡುವಾಗ ಮಾರ್ಗದಲ್ಲಿ ಕೆಲವೆಡೆ ಬಡವರು ಹಣ್ಣು, ಹೂವು ಮತ್ತು ತರಕಾರಿಗಳನ್ನು ಇಟ್ಟುಕೊಂಡು ಕುಳಿತಿರುತ್ತಾರೆ. ಆಗ ಅವರನ್ನು ನೋಡಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳಕಾಕುರವರು, “ನಮಗೇನು ಬೇಕಾಗಿರುವುದನ್ನು ಇವರಿಂದಲೇ ತೆಗೆದುಕೊಳ್ಳೋಣ. ನಾವು ಖರೀದಿಸಿದರೆ ಅವರಿಗೆ ಹಣ ಸಿಗುತ್ತದೆ ಮತ್ತು ಅದರಿಂದ ಅವರ ಮನೆ ನಡೆಯುವುದು”, ಎನ್ನುತ್ತಾರೆ. ಹೀಗೆ ವಿಚಾರ ಮತ್ತು ಪ್ರೇಮ ದೇವರೇ ಮಾಡಬಲ್ಲ, ಇನ್ಯಾರೂ ಇಲ್ಲ.
‘ಗುರುದೇವಾ, ನಾವು ನಿಜವಾಗಲೂ ಭಾಗ್ಯವಂತರಾಗಿದ್ದೇವೆ. ತಾವು (ಪರಾತ್ಪರ ಗುರು ಡಾ. ಆಠವಲೆ) ಯಾವಾಗಲೂ ಶಿಷ್ಯ ಭಾವದಲ್ಲಿರುತ್ತೀರಿ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕು ಇವರೂ ಎಷ್ಟು ಶಿಷ್ಯಭಾವದಲ್ಲಿರುತ್ತಾರೆ. ಇದರಿಂದ ‘ಈ ಕಲಿಯುಗದಲ್ಲಿ ಇಂತಹ ಗುರು-ಶಿಷ್ಯರು ನಮಗೆ ಗುರುಗಳ ರೂಪದಲ್ಲಿ ದೊರಕಿದ್ದಾರೆ’, ಎಂಬುದು ಅರಿವಿಗೆ ಬರುತ್ತದೆ. ‘ನಮ್ಮಿಂದಲೂ ಇದೇ ರೀತಿ ಸೇವೆ ಮಾಡಿಸಿಕೊಳ್ಳಿರಿ’, ಎಂದು ನಿಮ್ಮ ಕೋಮಲ ಚರಣಗಳಲ್ಲಿ ಪ್ರಾರ್ಥನೆ !’
– ಶ್ರೀ. ವಾಲ್ಮೀಕ ಭುಕನ, ಚೆನ್ನೈ, ತಮಿಳುನಾಡು. (೧೨.೧೧.೨೦೨೨)