ಸಂತರು ಸಾಧನೆ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನದ ನಂತರ ಅವರಿಗೆ ‘ಧನ್ಯವಾದ’ (ಥ್ಯಾಂಕ್ಯೂ) ಅನ್ನದೇ ‘ಕೃತಜ್ಞತೆ’ ಎಂದು ಹೇಳಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ವ್ಯವಹಾರದಲ್ಲಿ ಯಾರಾದರೂ ಏನಾದರೂ ಸಹಾಯವನ್ನು ಮಾಡಿದ ನಂತರ ನಾವು ಅವರಿಗೆ ‘ಧನ್ಯವಾದ’ ಎನ್ನುತ್ತೇವೆ. ವ್ಯವಹಾರದಲ್ಲಿ ‘ಧನ್ಯವಾದ’ ಎಂಬ ಶಬ್ದವು ಆಗಾಗ ಬಳಸಲಾಗುತ್ತದೆ; ಆದರೆ ಅಧ್ಯಾತ್ಮದಲ್ಲಿ ‘ಧನ್ಯವಾದ’ ಎನ್ನದೇ ‘ಕೃತಜ್ಞತೆ’, ಎಂದು ಹೇಳಲಾಗುತ್ತದೆ. ಒಮ್ಮೆ ಕೆಲವು ಯುವಕರು ಓರ್ವ ಸಂತರಿಗೆ ಸಾಧನೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಸಂತರು ಸಂದೇಹ ನಿವಾರಣೆ ಮಾಡಿದ ನಂತರ ಯುವಕರು ಆ ಸಂತರಿಗೆ ‘ಧನ್ಯವಾದ’ ಎಂದರು. ಸಂತರು ಈಶ್ವರನ ಸಗುಣ ರೂಪವಾಗಿದ್ದು ಅವರಿಗೆ ‘ಧನ್ಯವಾದಗಳು’ ಎನ್ನುವುದಕ್ಕಿಂತ ಅವರ ಬಗ್ಗೆ ಕೃತಜ್ಞತೆಯನ್ನೇ ವ್ಯಕ್ತಪಡಿಸಬೇಕಾಗುತ್ತದೆ; ಏಕೆಂದರೆ ಸಂತರು ನೀಡಿದ ಜ್ಞಾನವು ಬಹುಮೂಲ್ಯ ಮತ್ತು ಅಮೂಲ್ಯವಾಗಿರುತ್ತದೆ. ಅದಕ್ಕಾಗಿ ಎಷ್ಟು ಬಾರಿ ಕೃತಜ್ಞತೆ ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗುತ್ತದೆ’.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ, (೭.೧೦.೨೦೨೨)