ಸಾಧಕರೇ, ಕಲಿಯುಗದ ಭಗವದ್ಗೀತೆಯಂತಿರುವ ‘ಸನಾತನ ಪ್ರಭಾತ’ದ ವಾಚನ ಮತ್ತು ಅಧ್ಯಯನವನ್ನು ನಿಯಮಿತವಾಗಿ ಮಾಡಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಅನೇಕ ಸಾಧಕರಿಂದ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ವಾಚನ ಆಗುತ್ತಿಲ್ಲವೆಂದು ಗಮನಕ್ಕೆ ಬಂದಿದೆ. ಇಂತಹ ಸಾಧಕರು ‘ತನ್ನಲ್ಲಿ ಕಲಿಯುವ ವೃತ್ತಿಯ ಅಭಾವವಿದೆ’, ಎಂಬುದನ್ನು ಗಮನದಲ್ಲಿರಿಸಿ ಅದನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಈ ನಿಯತಕಾಲಿಕೆಗಳ ಮಾಧ್ಯಮದಿಂದ ರಾಷ್ಟ್ರ, ಧರ್ಮ, ಹಾಗೂ ಅಧ್ಯಾತ್ಮ ಇವುಗಳ ಬಗ್ಗೆ ಅಮೂಲ್ಯ ಮಾರ್ಗದರ್ಶನ ಸಿಗುತ್ತದೆ. ಆದುದರಿಂದ ಸಾಧಕರು ‘ಸನಾತನ ಪ್ರಭಾತ’ದ ವಾಚನ ಮತ್ತು ಅಧ್ಯಯನಕ್ಕಾಗಿ ಪ್ರತಿನಿತ್ಯ ಸಮಯ ಕೊಡುವುದು ಅಪೇಕ್ಷಿತವಾಗಿದೆ.

ಸೇವೆಯಲ್ಲಿ ಬಿಡುವು ಸಿಗದಿರುವುದರಿಂದ ಸಂಪೂರ್ಣ ನಿಯತಕಾಲಿಕೆಯ ವಾಚನವನ್ನು ಮಾಡಲು ಸಾಧ್ಯವಾಗದಿದ್ದರೆ, ರಾಷ್ಟ್ರ ಮತ್ತು ಧರ್ಮ ಇವುಗಳ ಮೇಲೆ ಆಘಾತಗಳಾದ ಘಟನೆ, ಸಾಧನೆ ಮತ್ತು ಗುರುಸೇವೆ ಇವುಗಳ ಸಂದರ್ಭದಲ್ಲಿನ ಮಹತ್ವದ ಸೂಚನೆಗಳು, ಸಂತರ ಮಾರ್ಗದರ್ಶನದಲ್ಲಿನ ಲೇಖನಗಳು ಮುಂತಾದ ವಿಷಯಗಳನ್ನು ಓದಲು ಪ್ರಾಧ್ಯಾನ್ಯತೆ ಕೊಡಬೇಕು. ಇತರ ವಿಷಯಗಳನ್ನು ಲಭ್ಯವಿರುವ ಸಮಯಕ್ಕನುಸಾರ ಓದಬಹುದು. ಸಮಷ್ಟಿ ಸೇವೆ ಮಾಡುವ ಸಾಧಕರಿಗೆ ‘ಪ್ರತಿದಿನ ಸಮಾಜದಲ್ಲಿ ಏನೇನು ಘಟನೆಗಳಾಗುತ್ತವೆ ?’, ಎಂದು ಗೊತ್ತಿರಬೇಕು. ಈ ದೃಷ್ಡಿಯಿಂದ ಅವರು ಪ್ರತಿನಿತ್ಯ ಸಂಚಿಕೆಯನ್ನು ಓದುವುದು ಅನಿವಾರ್ಯವಾಗಿದೆ.

‘ಸಾಧಕರೇ, ಶ್ರೀ ಗುರುಗಳ ಚೈತನ್ಯಯುಕ್ತ ಪತ್ರಿಕೆಯಾಗಿರುವ ‘ಸನಾತನ ಪ್ರಭಾತ’ವನ್ನು ಪ್ರತಿದಿನ ಓದಿ ಮತ್ತು ಅದರಲ್ಲಿನ ಬೋಧನೆಗನುಸಾರ ಆಚರಣೆಯನ್ನು ಮಾಡಿ ಗುರುಕೃಪೆಯನ್ನು ಸಂಪಾದಿಸಿರಿ !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧೦.೨೦೨೨)