ರಾಮಪೂರ(ಉತ್ತರ ಪ್ರದೇಶ)– ಇಲ್ಲಿಯ ಪಟವಯಿ ಮತ್ತು ಮಿಲಕ ಪ್ರದೇಶದಲ್ಲಿ ಕ್ರಿಸ್ ಮಸ್ ಸಮಯದಲ್ಲಿ ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸಿದ ಬಗ್ಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪಟವಾಯಿಯ ಸೋಹನ ಗ್ರಾಮದಲ್ಲಿನ ಪಾದ್ರಿ ಪೋಲೂಮ್ ಮಸೀಹ ಇವನು ಟೆಂಟು ಹಾಕಿ ೧೦೦ ಕೂ ಹೆಚ್ಚು ದಲಿತ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನದಲ್ಲಿದ್ದನು. ಹಿಂದೂ ಸಂಘಟನೆಗಳಿಗೆ ಈ ಮಾಹಿತಿ ಸಿಗುತ್ತಲೆ ಅವರು ಪೊಲೀಸರಿಗೆ ಈ ವಿಷಯ ತಿಳಿಸಿದರು. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪಾದ್ರಿ ಪೋಲುಮನನ್ನು ಬಂಧಿಸಿದ್ದಾರೆ.
Church priest arrested over forced religious conversion in Rampur, Uttar Pradesh https://t.co/xoDa2mQyjl
— OpIndia.com (@OpIndia_com) December 26, 2022
ಮಿಲಕನಲ್ಲಿ ಒಬ್ಬ ಯುವಕ ಮತಾಂತರಗೊಳಿಸಲು 30 ರಿಂದ 40 ಹಿಂದೂಗಳನ್ನು ಬಸ್ಸಿನಲ್ಲಿ ಕುಳ್ಳಿರಿಸಿಕೊಂಡು ದೆಹಲಿಗೆ ಕರೆದುಕೊಂಡು ಹೋಗುತ್ತಿದ್ದನು. ಇದರ ಮಾಹಿತಿ ಹಿಂದೂ ಸಂಘಟನೆಗಳಿಗೆ ದೊರೆತ ನಂತರ ಅವರು ಬಸ್ ನಿಲ್ಲಿಸಿ ವಿಚಾರಿಸಿದಾಗ ಅಲ್ಲಿ ವಾದ ವಿವಾದಗಳಾದವು. ಇದರ ಮಾಹಿತಿಯನ್ನು ಪೊಲೀಸರಿಗೆ ನೀಡಿದಾಗ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಹಿಂದೂಗಳನ್ನು ಮತಾಂತರಕ್ಕಾಗಿ ಕರೆದುಕೊಂಡು ಹೋಗುತ್ತಿದ್ದ ಶಿವದೇಶ ಎಂಬ ಯುವಕನನ್ನು ಬಂಧಿಸಿದ್ದಾರೆ.
* ಉತ್ತರ ಪ್ರದೇಶದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿರುವಾಗಲೂ ಇಂತಹ ಘಟನೆಗಳು ನಡೆಯುತ್ತಿದ್ದರೆ, ಮತಾಂಧ ಕ್ರೈಸ್ತರಿಗೆ ಕಾನೂನಿನ ಭಯ ಇಲ್ಲವೆನ್ನುವುದನ್ನು ಗಮನಿಸಬೇಕು. ಇದನ್ನು ನಿಲ್ಲಿಸಲು ಈ ಶಿಕ್ಷೆಯನ್ನು ಮತ್ತಷ್ಟು ಕಠಿಣಗೊಳಿಸುವ ಅವಶ್ಯಕತೆಯಿದೆ ! -ಸಂಪಾದಕರು |