ಅಮೆರಿಕಾ ಸೇರಿದಂತೆ ಜಗತ್ತಿನ 104 ಪ್ರಜಾಸತ್ತಾತ್ಮಕ ರಾಷ್ಟ್ರಗಳ ನಾಗರಿಕರು ಬಲಿಷ್ಠ ನಾಯಕನನ್ನು ಬಯಸುತ್ತಾರೆ !

* ಪ್ರಜಾಪ್ರಭುತ್ವದ ಬಗ್ಗೆ ಜನರಲ್ಲಿ ಭ್ರಮನಿರಸನ !

* ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವದ ಕುಸಿತ ಶೇ. 50 ರಷ್ಟು !

ಸ್ಟಾಕಹೋಮ (ಸ್ವೀಡನ) – ‘ಇಂಟರ್ನ್ಯಾಷನಲ ಇನ್ಸ್ಟಿಟ್ಯೂಟ ಆಫ್ ಡೆಮಾಕ್ರಸಿ ಅಂಡ್ ಎಲೆಕ್ಟೋರಲ್ ಅಸಿಸ್ಟೆನ್ಸ್’ ನ (‘ಇಂಟರ್‌ನ್ಯಾಷನಲ್ ಐಡಿಎ ದ’) ವಾರ್ಷಿಕ ವರದಿಯುಲ್ಲಿ, ಅಮೇರಿಕಾ ಸೇರಿದಂತೆ ವಿಶ್ವದ 104 ದೇಶಗಳ ರಾಜಕೀಯ ಪರಿಸ್ಥಿತಿಯ ಅಧ್ಯಯನದಿಂದ ಸಿದ್ಧಪಡಿಸಲಾಗಿರುವ ವರದಿಯ ಪ್ರಕಾರ, ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಜನರ ಮೌಲ್ಯಗಳು ಮತ್ತು ಆಲೋಚನಾವಿಧಾನದಲ್ಲಿ ಬದಲಾವಣೆಯಾಗಿದೆ ಎಂದು ಹೇಳಲಾಗಿದೆ. ಅಲ್ಲಿನ ಜನರಿಗೆ ಈಗ ಒಬ್ಬ ಬಲಿಷ್ಠ ನಾಯಕ ಬೇಕಾಗಿದ್ದಾನೆ.

* ಈ ವರದಿಯಲ್ಲಿ ಮುಂದೆ ಹೀಗೆ ಹೇಳಲಾಗಿದೆ,

1. 2009 ರಲ್ಲಿ, ಕೇವಲ ಶೇ. 38 ರಷ್ಟು ಜನರು ಹೆಚ್ಚು ಶಕ್ತಿಶಾಲಿ ನಾಯಕನನ್ನು ಬಯಸಿದ್ದರು. ಈಗ, ವಿಶ್ವದ 77 ಪ್ರಜಾಪ್ರಭುತ್ವಗಳಲ್ಲಿ, ಅರ್ಧಕ್ಕಿಂತ ಹೆಚ್ಚು ಅಂದರೆ ಶೇ. 52 ರಷ್ಟು ಜನರು ದೇಶದ ನಿಯಂತ್ರಣೆಯು ಒಬ್ಬ ಪ್ರಬಲ/ಬಲಿಷ್ಠ ನಾಯಕನ ಕೈಯಲ್ಲಿರಬೇಕೆಂದು ಬಯಸುತ್ತಾರೆ.

2. ಒಂದು ದಶಕದ ಹಿಂದೆ, ಪ್ರಜಾಪ್ರಭುತ್ವದ ಅವನತಿಯ ಪ್ರಮಾಣ ಶೇ. 12 ರಷ್ಟಿತ್ತು; ಆದರೆ ಈಗ ಶೇ. 50 ರಷ್ಟಾಗಿದೆ. ಈ ದೇಶಗಳಲ್ಲಿ ಅಮೆರಿಕಾ, ಬ್ರೆಜಿಲ್, ಫ್ರಾನ್ಸ್, ಬ್ರಿಟನ್ ಮತ್ತು ಭಾರತ ಸೇರಿವೆ. ಅಫ್ಘಾನಿಸ್ತಾನ ಮತ್ತು ಬೆಲಾರಸ್‌ನಂತಹ ಪ್ರಜಾಪ್ರಭುತ್ವವಲ್ಲದ ದೇಶಗಳಲ್ಲಿ ಸರಕಾರದ ದಬ್ಬಾಳಿಕೆ ಹೆಚ್ಚಾಯಿತು. ಪ್ರಜಾಪ್ರಭುತ್ವದ ಬಗ್ಗೆ ಅತಿ ಹೆಚಿನ ಒಲವಿದ್ದ ಅಮೇರಿಕಾ ಮತ್ತು ಬ್ರಿಟನ್ ನಂತಹ ದೇಶಗಳಲ್ಲಿನ ಜನರು ಪ್ರಸ್ತುತ ಆಹಾರದ ಕೊರತೆ, ಹಣದುಬ್ಬರ, ಏರುತ್ತಿರುವ ವಿದ್ಯುತ್ ಬೆಲೆಗಳು ಮತ್ತು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿನ ಅನೇಕ ಸಮಸ್ಯೆಗಳಿಗೆ ಜನರು ಆಡಳಿತಗಾರರನ್ನು ಮಾತ್ರ ಹೊಣೆಗಾರರನ್ನಾಗಿ ಪರಿಗಣಿಸುತ್ತಾರೆ.

3. ಪ್ರಜಾಪ್ರಭುತ್ವವು ದುರ್ಬಲಗೊಳ್ಳಲು ಕಾರಣವಾಗಿರುವ ಜಗತ್ತಿನಲ್ಲಿ ವೇಗದಿಂದ ಹೆಚ್ಚುತ್ತಿರುವ ಅಸಮಾನತೆ, ಚುನಾವಣೆಗಳ ಮೇಲಿನ ನಂಬಿಕೆಯು ಕಡಿಮೆಯಾಗಿರುವುದು, ಈ ಅಂಶಗಳು ಎಲ್ಲ ದೇಶಗಳಲ್ಲಿಯೂ ಬಹುತೇಕ ಸಮಾನವಾಗಿವೆ. ಈ ದೇಶಗಳಲ್ಲಿ ರಾಜಕೀಯ ಧ್ರುವೀಕರಣ ನಡೆಯಿತು. ಇದರಿಂದಾಗಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಜನರ ನಂಬಿಕೆ ಕಡಿಮೆಯಾಯಿತು. ಚುನಾವಣೆಗಳಲ್ಲಿ ಅವ್ಯವಹಾರ ನಡೆಯಿತು. ಎಲ್ಲಿ ಹೀಗಾಗಲಿಲ್ಲವೋ ಅಲ್ಲಿಯೂ ‘ಪ್ರಾಮಾಣಿಕ ಚುನಾವಣೆ ನಡೆದಿದೆ’ ಎಂದು ಜನ ನಂಬುವುದಿಲ್ಲ. ನಾಗರಿಕರ ಸಮಾನತೆಯ ಬಗ್ಗೆ ಮಾತನಾಡುವ ಪ್ರಜಾಪ್ರಭುತ್ವದಲ್ಲಿ ಅಸಮಾನತೆ ವೇಗದಿಂದ ಬೆಳೆದಿದೆ. ಹೀಗಾಗಿ ಜನರು ಪ್ರಜಾಪ್ರಭುತ್ವದ ಬಗ್ಗೆ ಭ್ರಮನಿರಸನಗೊಳ್ಳುತ್ತಿದ್ದಾರೆ.

4. ಈ ವರ್ಷ ಅರ್ಧದಷ್ಟು ವಿಶ್ವದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ರಷ್ಯಾದ ಆಕ್ರಮಣದಿಂದ ಧ್ವಂಸಗೊಂಡ ಉಕ್ರೇನ್ ಇದಕ್ಕೆ ದೊಡ್ಡ ಉದಾಹರಣೆಯಾಗಿದೆ. ಯುದ್ಧ ಇನ್ನೂ ನಡೆಯುತ್ತಿದೆ. ಜಗತ್ತು ಇದನ್ನು ಪ್ರಜಾಪ್ರಭುತ್ವದ ವಿರುದ್ಧ ಸರ್ವಾಧಿಕಾರ ಎಂದು ನೋಡುತ್ತಿದೆ. ‘ಟೈಮ್’ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ನಾವು ನಾಶವಾದರೆ ನಿಮ್ಮ ಆಕಾಶದಲ್ಲಿ ಹೊಳೆಯುವ ಪ್ರಜಾಪ್ರಭುತ್ವವೂ ಮಾಯವಾಗಿ ಹೋಗುವುದು ಎಂದು ಜಗತ್ತಿಗೆ ಎಚ್ಚರಿಕೆ ನೀಡಿದ್ದಾರೆ.