ಹೆಸರಿನಲ್ಲಿ ಎಲ್ಲವೂ ಇದೆ !

ದೇಶಿ ಆಕ್ರಮಣಕಾರರು ಭ್ರಷ್ಟಗೊಳಿಸಿದ ನಗರಗಳ ಹೆಸರನ್ನು ಬದಲಾಯಿಸಿದರೆ, ದೊಡ್ಡ ಗಲಾಟೆ ಆರಂಭವಾಗುತ್ತದೆ. ನಿಜ ನೋಡಿದರೆ ಆಕ್ರಮಣಕಾರರು ನಮ್ಮ ಸಂಸ್ಕೃತಿಗೆ ಎಷ್ಟು ದೊಡ್ಡ ಆಘಾತ ಮಾಡಿದ್ದಾರೆ, ಎಂಬುದರ ವ್ಯಾಪ್ತಿಯು ದಿಗ್ಭ್ರಮೆಗೊಳಿಸುತ್ತದೆ. ದೇವಸ್ಥಾನಗಳನ್ನು ಕೆಡವಿದರು, ಮೂರ್ತಿಭಂಜನ ಮಾಡಿದರು, ನಗರಗಳ ಹೆಸರನ್ನು ಬದಲಾಯಿಸಿದರು, ಅಷ್ಟು ಮಾತ್ರವಲ್ಲ, ದೇವಸ್ಥಾನಗಳಲ್ಲಿ ನಡೆಯುವ ವಿಧಿಗಳ ಹೆಸರನ್ನೂ ಬದಲಾಯಿಸಿದರು, ಇದು ದೇವಸ್ಥಾನಗಳಲ್ಲಿನ ಆಂತರಿಕ ವ್ಯವಸ್ಥೆಯನ್ನು ಭ್ರಷ್ಟ ಹಾಗೂ ನಷ್ಟಗೊಳಿಸುವ ಷಡ್ಯಂತ್ರವೇ ಆಗಿದೆ. ಕರ್ನಾಟಕ ರಾಜ್ಯದ ಚೆಲುವನಾರಾಯಣ ಸ್ವಾಮಿ ಮಂದಿರ ಸಹಿತ ಅನೇಕ ಮಂದಿರಗಳಲ್ಲಿ ಟಿಪ್ಪೂ ಸುಲ್ತಾನನ ಕಾಲದಿಂದ ಸಂಧ್ಯಾ ಸಮಯದಲ್ಲಿ ನಡೆಯುವ ಆರತಿಯನ್ನು ‘ಸಲಾಮ್ ಆರತಿ’ ಎಂದು ಹೇಳಲಾಗುತ್ತಿತ್ತು. ಟಿಪ್ಪೂ ಸುಲ್ತಾನನು ಭೇಟಿಕೊಟ್ಟಿರುವುದರಿಂದ ಅವನ ಕಾಲದಿಂದ ಅಂದರೆ ಸುಮಾರು ೩೦೦ ವರ್ಷಗಳ ಹಿಂದೆಯೆ ಈ ಹೆಸರನ್ನು ನೀಡಲಾಗಿದೆ. ಹಿಂದುತ್ವನಿಷ್ಠ ಸಂಘಟನೆಗಳ ಮತ್ತು ಭಕ್ತರ ಬೇಡಿಕೆಯ ನಂತರ ಈಗ ೬ ತಿಂಗಳಲ್ಲಿ ಸರಕಾರ ಈ ಆರತಿಗೆ ‘ಸಂಧ್ಯಾ ಆರತಿ’ ಎಂದು ಸಂಬೋಧಿಸಬೇಕೆಂದು ಆದೇಶ ನೀಡಿದೆ. ಭಕ್ತರ ಪ್ರಯತ್ನಕ್ಕೆ ಈಗ ಯಶಸ್ಸು ಸಿಕ್ಕಿದ್ದರೂ, ಮಂದಿರಗಳಲ್ಲಿನ ಯಾವುದೇ ವಿಧಿಯ ಹೆಸರನ್ನು ಇಸ್ಲಾಮೀ ಮಾಡಿದರೆ, ಕಾಲಕ್ರಮೇಣ ಆ ಮಂದಿರದ ಮೇಲೆಯೆ ನಿಯಂತ್ರಣವನ್ನು ಸ್ಥಾಪಿಸಬಹುದು ! ಮುಂದೆ ‘ಇಸ್ಲಾಮೀ’ ವಾಸ್ತುವಿನ ಮೇಲೆಯೇ ಆಕ್ರಮಣ ಮಾಡಿ ಈ ಮಂದಿರವನ್ನು ನಿರ್ಮಿಸಲಾಗಿದೆ; ಎಂದು ಉಲ್ಟಾ ಪ್ರಚಾರ ಮಾಡಲು ಇಂತಹ ಇಸ್ಲಾಮೀ ಶೈಲಿಯ ಹೆಸರನ್ನಿಟ್ಟಿರಬಹುದು. ಆದ್ದರಿಂದ ವಿದೇಶಿ ಆಕ್ರಮಣಕಾರರ ಸಂಕೇತಗಳನ್ನು ಅಳಿಸುವುದು ಸಂಸ್ಕೃತಿ ರಕ್ಷಣೆಯ ಒಂದು ಮಹತ್ವದ ಹಂತವಾಗಿದೆ.

ದೇವಸ್ಥಾನಗಳ ಇಸ್ಲಾಮೀಕರಣವೆಂದರೆ ಇದು ದೊಡ್ಡ ತಲೆಶೂಲೆಯೆ ಆಗಿದೆ !

ಚಿಕ್ಕಮಗಳೂರಿನ ದತ್ತಪೀಠವು ಭಗವಾನ ದತ್ತಾತ್ರೆಯನ ಪವಿತ್ರ ಸ್ಥಾನವಾಗಿದೆ; ಆದರೆ ಮುಸಲ್ಮಾನರು ಆ ಸ್ಥಳವನ್ನು ಆಕ್ರಮಿಸಿ ಆ ಸ್ಥಳ ತಮ್ಮದೆಂದು ದಾವೆ ಹೂಡಿದ್ದಾರೆ. ಕರ್ನಾಟಕದಲ್ಲಿ ಇಂತಹ ಅನೇಕ ಸ್ಥಾನಗಳನ್ನು ವಿದೇಶಿ ಆಕ್ರಮಣಕಾರರು ಕಬಳಿಸಿದ್ದಾರೆ. ಅವುಗಳನ್ನು ಪುನಃ ಹಿಂದೂಗಳ ವಶಕ್ಕೆ ಒಪ್ಪಿಸಲು ಇದುವರೆಗೆ ಸರಕಾರಕ್ಕೆ ಸಾಧ್ಯವಾಗಿಲ್ಲ. ಚಿಕ್ಕಮಗಳೂರಿನ ಪ್ರಾಚೀನ ದತ್ತಪೀಠದ ಇಸ್ಲಾಮೀಕರಣವು ಅಲ್ಲಿನ ಹಿಂದೂಗಳಿಗೆ ದೊಡ್ಡ ತಲೆಶೂಲೆಯಾಗಿದೆ. ದತ್ತಜಯಂತಿಯ ನೆಪದಲ್ಲಿ ಅಲ್ಲಿ ಪೂಜೆ ಮಾಡಲು ಹಿಂದುತ್ವನಿಷ್ಠ ಸಂಘಟನೆಗಳಿಗೆ ದೊಡ್ಡ ಹೋರಾಟವನ್ನೆ ಮಾಡಬೇಕಾಯಿತು. ಈಗ ಪೂಜೆ ಆರಂಭವಾಗಿದೆ, ಆದರೂ ಹಿಂದೂ ಪುರೋಹಿತರನ್ನು ಹಿಂದೆ ಕರೆಯಿಸಿಕೊಳ್ಳಬೇಕೆಂದು ಮತಾಂಧರು ಒತ್ತಾಯಿಸುತ್ತಿದ್ದಾರೆ. ‘ಕೋಮು ಸೌಹಾರ್ದವೇದಿಕೆ’ ಈ ಸಂಘಟನೆಯ ಸಚಿವ ಗೌಸೆ ಮೊಹಿಉದ್ದೀನ ಇವರು ಚಿಕ್ಕಮಗಳೂರಿನ ಆಡಳಿತಕ್ಕೆ ವಿನಂತಿ ಮಾಡಿದ್ದಾರೆ, ‘ಇಲ್ಲಿನ ದತ್ತಪೀಠದಲ್ಲಿ ನೇಮಿಸಿರುವ ಇಬ್ಬರು ಹಿಂದೂ ಪುರೋಹಿತರನ್ನು ಹಿಂದೆ ಕರೆಸಬೇಕು. ಇದು ದರ್ಗಾದ ಸಂಪತ್ತನ್ನು ಕಬಳಿಸುವ ಹೊಂಚಾಗಿರಬಹುದು.’ ಮೂಲತಃ ದತ್ತಪೀಠವು ಹಿಂದೂಗಳದ್ದೇ ಆಗಿದೆ ಹಾಗೂ ಮುಸಲ್ಮಾನರು ಅದನ್ನು ಕಬಳಿಸಿದ್ದಾರೆ. ಹೀಗಿರುವಾಗ ಅಲ್ಲಿ ನ್ಯಾಯಮಾರ್ಗದಲ್ಲಿ ನಡೆಯುತ್ತಿರುವ ಪೂಜೆಯನ್ನು ನಿಲ್ಲಿಸಬೇಕೆಂದು ಹೇಳುವುದೆಂದರೆ ಇದು ಕಳ್ಳನೆ ಕಳ್ಳ ಕಳ್ಳ ಎಂದು ಬೊಬ್ಬೆ ಹೊಡೆದಂತಾಗುತ್ತದೆ ! ಕರ್ನಾಟಕದಲ್ಲಿ ಮುಸಲ್ಮಾನರು ಹಿಂದೂಗಳ ಶ್ರದ್ಧಾಸ್ಥಾನಗಳ ಮೇಲೆ ಎಷ್ಟು ಪ್ರಮಾಣದಲ್ಲಿ ಆಘಾತ ಮಾಡಿದ್ದಾರೆ ? ಹಾಗೂ ಹಿಂದುತ್ವನಿಷ್ಠ ಸಂಘಟನೆಗಳು ಎಷ್ಟು ಪ್ರಯತ್ನ ಮಾಡಬೇಕಾಗಿದೆ, ಎಂಬುದು ಇದರಿಂದ ಅರಿವಾಗುತ್ತದೆ.

ಸಂಸ್ಕೃತಿಯನ್ನು ಪುರಸ್ಕರಿಸುವ ಕಾರ್ಯವಾಗಬೇಕು !

ನೂರಾರು ದೇವಸ್ಥಾನಗಳ ಪಾವಿತ್ರ್ಯವನ್ನು ನಷ್ಟಗೊಳಿಸಿದ ಈ ಟಿಪ್ಪು ಸುಲ್ತಾನನ ಜಯಂತಿಯ ಸರಕಾರಿ ಕಾರ್ಯಕ್ರಮವು ಕಾಂಗ್ರೆಸ್ಸಿನ ಕಾಲದಲ್ಲಿ ನಡೆಯುತ್ತಿತ್ತು. ಈಗ ಕರ್ನಾಟಕ ಸರಕಾರವು ಅದಕ್ಕೆ ನಿರ್ಬಂಧ ಹೇರಿದೆ. ಈಗ ಅವನು ಭ್ರಷ್ಟಗೊಳಿಸಿದ ಮಂದಿರಗಳ ಮತ್ತು ಅಲ್ಲಿನ ವಿಧಿಗಳ ಶುದ್ಧೀಕರಣ ನಡೆಯುತ್ತಿದೆ. ಇಷ್ಟರವರೆಗಿನ ಇತಿಹಾಸ ಹೇಗಿತ್ತು ಎಂದರೆ, ಎಲ್ಲೆಲ್ಲಿ ವಿದೇಶಿ ಆಕ್ರಮಣಕಾರರು ಬಂದರೊ, ಅಲ್ಲಲ್ಲಿ ಸಂಸ್ಕೃತಿಯನ್ನು ಕೆಡಿಸಲಾಯಿತು. ಅದರ ಪ್ರತಿಧ್ವನಿಯು ಈ ಘಟನೆಯ ಮೂಲಕ ಇನ್ನೂ ದೊಡ್ಡ ಪ್ರಮಾಣದಲ್ಲಿ ಕಾಣಿಸುತ್ತಿದೆ. ಆದ್ದರಿಂದ ಮಾಡಬೇಕಾದ್ದು ಇನ್ನೂ ತುಂಬಾ ಇದೆ’ ಆದರೆ ಈ ನಿಮಿತ್ತದಲ್ಲಿ ಈಗ ಸಮಾಜವೂ ಜಾಗೃತವಾಗಿದೆ ಹಾಗೂ ಜನರ ಒತ್ತಡಕ್ಕೆ ಮಣಿದು ಸರಕಾರವೂ ಹಿಂದುತ್ವದ ಪರ ನಿರ್ಣಯವನ್ನು ತೆಗೆದುಕೊಳ್ಳಬೇಕಾಗುತ್ತಿದೆ. ಕರ್ನಾಟಕದ ಗೃಹಮಂತ್ರಿ ಅರಗ ಜ್ಞಾನೇಂದ್ರ ಇವರೂ ಈ ವಿಷಯದಲ್ಲಿ ಹೇಳಿದ್ದೇನೆಂದರೆ ‘ದೇವಸ್ಥಾನಗಳಲ್ಲಿಯೇ ನಮ್ಮ ಸಂಸ್ಕೃತಿಯ ರಕ್ಷಣೆಯಾಗದಿದ್ದರೆ, ಇನ್ನೆಲ್ಲಿ ಆಗಬೇಕು ?’ ಎಂದಿದ್ದಾರೆ. ನಿಜವಾಗಿಯೂ ಹಿಂದೂಗಳು ಹಿಂದೂ ಸಂಸ್ಕೃತಿಯನ್ನು ಬಲಗೊಳಿಸುವ ನಿರೀಕ್ಷಣೆಯಲ್ಲಿದ್ದಾರೆ. ಹೇಗೆ ಹಿಜಾಬ್, ಈಗ ಸಲಾಮ್ ಆರತಿ, ಇತ್ಯಾದಿ ಪ್ರಕರಣಗಳಲ್ಲಿ ಸರಕಾರ ಹೇಗೆ ಕಠೋರವಾದ ಹೆಜ್ಜೆಯನ್ನು ಇಟ್ಟಿದೆಯೊ, ಹಾಗೆಯೆ ಎಲ್ಲ ದೇವಸ್ಥಾನಗಳನ್ನು, ಅಲ್ಲಿನ ರೂಢಿಪರಂಪರೆಗಳನ್ನು ಇಸ್ಲಾಮೀ ಅತಿಕ್ರಮಣದಿಂದ ಮುಕ್ತಗೊಳಿಸುವ ಕಾರ್ಯವನ್ನೂ ಅಷ್ಟೆ ಪ್ರಖರವಾಗಿ ನಿರ್ವಹಿಸ ಬೇಕು, ಎಂದು ಈಗ ಹಿಂದೂಗಳು ಆಗ್ರಹಿಸಬೇಕು.

ಹಿಂದೂ ಸಂಸ್ಕೃತಿಯ ಪುನರುಜ್ಜೀವನ ಆಗಬೇಕು !

ಕರ್ನಾಟಕದಲ್ಲಿ ವಿದೇಶಿ ಆಕ್ರಮಣಕಾರರ ಪ್ರಭಾವವೆಷ್ಟಿದೆ ? ಎಂಬುದು ಇಲ್ಲಿನ ಸಾಮಾಜಿಕ ಸ್ಥಿತಿಯಿಂದಲೂ ಅರಿವಾಗುತ್ತದೆ. ಹಿಜಾಬ್ ಪ್ರಕರಣದಲ್ಲಿಯೂ ಅತೀ ಹೆಚ್ಚು ಗಲಾಟೆ ರಾಜ್ಯದಲ್ಲಿಯೆ ಆಗಿತ್ತು. ಕೇಂದ್ರ ಸರಕಾರ ನಿಷೇಧಿಸಿದ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಈ ಸಂಘಟನೆಯೂ ಕರ್ನಾಟಕದ್ದೇ ಆಗಿದೆ ! ಚಿನ್ನ-ಬೆಳ್ಳಿ ಕಳ್ಳಸಾಗಾಟದಲ್ಲೂ ರಾಜ್ಯದ ಮುಸಲ್ಮಾನರ ಪಾಲು ದೊಡ್ಡದಿರುತ್ತದೆ.

ಸಂಕ್ಷಿಪ್ತದಲ್ಲಿ ಹೇಳುವುದಾದರೆ ಕೇವಲ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ವಿದೇಶಿ ಆಕ್ರಮಣಕಾರರ ಪ್ರಭಾವ ಕಾಣಿಸುತ್ತದೆ’, ಎನ್ನುವ ಹಾಗಿಲ್ಲ, ಸಾಮಾಜಿಕ ಮತ್ತು ರಾಷ್ಟ್ರ ವಿರೋಧಿ ಕಾರ್ಯಾಚರಣೆಯಲ್ಲಿಯೂ ಈ ಪ್ರಭಾವ ಕಾಣಿಸುತ್ತದೆ. ಸರಕಾರ ಹೇಗೆ ಧಾರ್ಮಿಕ ಕ್ಷೇತ್ರಗಳಲ್ಲಿನ ನಿರ್ಣಯವನ್ನು ಧೈರ್ಯದಿಂದ ಮಾಡಿದೆಯೊ, ಹಾಗೆಯೆ ಧರ್ಮಾಂಧ ಬಹುಸಂಖ್ಯಾತ ಕ್ಷೇತ್ರಗಳಲ್ಲಿನ ಅಪರಾಧ, ಕಳ್ಳಸಾಗಾಟ, ಹಿಂಸಾಚಾರ, ಇತ್ಯಾದಿಗಳನ್ನು ನಿಯಂತ್ರಿಸುವುದು ಕರ್ನಾಟಕ ಸರಕಾರದ ಆದ್ಯತೆಯಾಗಬೇಕು. ಆಕ್ರಮಣಕಾರರ ಪ್ರಭಾವದಿಂದ ರಾಷ್ಟ್ರೀಯತೆ ನಷ್ಟವಾಗಿರುವವರನ್ನು ರಾಷ್ಟ್ರೀಯ ಪ್ರವಾಹದಲ್ಲಿ ತರುವುದು ಅಥವಾ ಅವರ ಭಯೋತ್ಪಾದಕ ಹಾಗೂ ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕುವುದು, ಇವೆರಡೇ ಪರ್ಯಾಯ ಈಗ ಸರಕಾರದ ಮುಂದೆ ಇದೆ. ಯಾವುದೇ ಪರಿವರ್ತನೆಯನ್ನು ಮಾಡುವಾಗ ವಿರೋಧವಾಗುವುದು ಸಹಜ. ಈ ವಿರೋಧವನ್ನು ಪರಿಗಣಿಸದೆ ಅಲ್ಲಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳನ್ನು ಪರಿವರ್ತಿಸುವುದು ಹಾಗೂ ಹಿಂದೂ ಸಂಸ್ಕೃತಿಯ ಪುನರುಜ್ಜೀವನ ಮಾಡುವುದು ಕರ್ನಾಟಕ ಸರಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಆರತಿ ಒಂದು ನೆಪದ್ದಾಗಿದೆ; ಆದರೆ ಆ ನೆಪದಿಂದ ರಾಜ್ಯದಲ್ಲಿ ದೊಡ್ಡ ಬದಲಾವಣೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಸರಕಾರ ಅವುಗಳನ್ನು ಪೂರ್ಣಗೊಳಿಸುತ್ತದೆಂಬುದು ಹಿಂದೂಗಳ ಅಪೇಕ್ಷೆಯಾಗಿದೆ !