ಸಹಜಸುಲಭವಾದ ಸಾಸಿವೆ ಕೃಷಿ

ಸನಾತನದ ‘ಮನೆಮನೆಯಲ್ಲಿ ಕೈತೋಟ’ ಅಭಿಯಾನ

ಸೌ. ರಾಘವಿ ಕೊನೆಕರ

‘ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಸಾಸಿವೆಕಾಳುಗಳಿರುತ್ತವೆ. ಚಳಿಗಾಲದಲ್ಲಿ ಸಾಸಿವೆಯ ಕೃಷಿಯನ್ನು ತಪ್ಪದೇ ಮಾಡಬೇಕು. ಸಾಸಿವೆಎಲೆಗಳನ್ನು ತೊಪ್ಪಲು ಪಲ್ಯವನ್ನು ಮಾಡಲು ಬಳಸಲಾಗುತ್ತದೆ, ಹಾಗೆಯೇ ಈ ಬೆಳೆಯು ‘ದ್ವಿದಳ’ ಇರುವುದರಿಂದ ಮಣ್ಣಿನಲ್ಲಿ ಸಾರಜನಕವನ್ನು (ನೈಟ್ರೋಜನ್) ಪೂರೈಸುತ್ತದೆ. ಸಾಸಿವೆಯು ‘ಬಲೆ ಬೆಳೆ (ಕೀಟಗಳನ್ನು ತನ್ನತ್ತ ಆಕರ್ಷಿಸಿ ಮುಖ್ಯ ಬೆಳೆಯನ್ನು ಬದುಕಿಸುವ ಬೆಳೆ)’ ಎಂದು ಉಪಯುಕ್ತವಾಗಿದೆ. ಇದರ ಹಳದಿ ಹೂವುಗಳ ಕಡೆಗೆ ಅನೇಕ ಕೀಟಕಗಳು ಆಕರ್ಷಿತಗೊಳ್ಳುತ್ತವೆ. ತೊಪ್ಪಲು ಪಲ್ಯವನ್ನು ಮಾಡಲು ಇದರ ಎಲೆಗಳನ್ನು ಮಾತ್ರ ಕಿತ್ತುಕೊಳ್ಳಬೇಕು ಮತ್ತು ಕೆಲವು ಸಸಿಗಳ ಎಲೆಗಳನ್ನು ತೆಗೆಯದೇ ಬೆಳೆಯಲು ಬಿಡಬೇಕು. ಬೆಳೆದ ಸಸಿಗಳಿಗೆ ಮೊದಲು ಹೂವು ಮತ್ತು ನಂತರ ಶೇಂಗಾ ಬರುತ್ತವೆ. ಈ ಶೇಂಗಾ ಸಂಪೂರ್ಣ ಒಣಗಿದ ನಂತರ ಅದರಿಂದ ಸಾಸಿವೆಯ ಕಾಳುಗಳು ಸಿಗುತ್ತವೆ.’

– ಸೌ. ರಾಘವಿ ಮಯೂರೇಶ ಕೊನೇಕರ, ಢವಳಿ, ಫೊಂಡಾ, ಗೋವಾ. (೨೯.೧೧.೨೦೨೨)