ಕೇರಳದ ಭಾಜಪ ನಾಯಕ ಟಿ.ಜಿ. ಮೋಹನದಾಸ ಆರೋಪ
ಪಂಡಿತ್ ನಾಥೂರಾಮ್ ಗೋಡ್ಸೆ ಇವರು ಸೆರೆಮನೆಯಲ್ಲಿದ್ದಾಗ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರುಸಲು ಪ್ರಯತ್ನಿಸಲಾಗಿತ್ತು ಎಂದು ಕೇರಳ ಭಾಜಪ ನಾಯಕ ಟಿ.ಜಿ. ಮೋಹನದಾಸ್ ಹೇಳಿದ್ದಾರೆ. ದೆಹಲಿಯಲ್ಲಿರುವ ರಾಷ್ಟ್ರೀಯ ದಾಖಲೆಗಳಿಂದ (ಅರ್ಕೈವಲ್) ಅವರು ಈ ಮಾಹಿತಿ ಪಡೆದರು. ಇದಕ್ಕಾಗಿ ೧೧ ಸಾವಿರ ಕಾಗದಪತ್ರಗಳ ಅಧ್ಯಯನ ನಡೆಸಬೇಲಾಯಿತು’ ಎಂದ ಅವರು ಈ ಹಿನ್ನೆಲೆಯಲ್ಲಿ ದಾಖಲೆಯ ಛಾಯಾಚಿತ್ರವೊಂದನ್ನು ಪ್ರಸಾರ ಮಾಡಿದ್ದಾರೆ.
೧. ಮೋಹನದಾಸ್ ಅವರು ಪ್ರಸಾರ ಮಾಡಿದ ದಾಖಲೆಯು ಒಂದು ಪತ್ರವಾಗಿದೆ. ಈ ಪತ್ರವನ್ನು ಆಗಿನ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ವೈ.ಕೆ. ಪುರಿ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಪರ ಕಾರ್ಯದರ್ಶಿ ಪ್ರೇಮ್ ಕಿಶನ್ ಅವರಿಗೆ ಬರೆದಿದ್ದಾರೆ. ಈ ಪತ್ರವನ್ನು ೧೪ ಸೆಪ್ಟೆಂಬರ್ ೧೯೪೯ ರಂದು ಲಾಹೋರ್‌ನಿಂದ ಬರೆಯಲಾಗಿದೆ. ಅದರಲ್ಲಿ, “ಪ್ರಿಯ ಪ್ರೇಮ್ ಕಿಶನ್ ಜೀ, ನಾನು ೨ ಏರ್‌ಮೇಲ್‌ಗಳನ್ನು ಕಳುಹಿಸುತ್ತಿದ್ದೇನೆ. ಇದು ಕ್ರೈಸ್ತ ಧರ್ಮದ ಬಗ್ಗೆ ಉಪದೇಶಗಳನ್ನು ಒಳಗೊಂಡಿದೆ. ಈ ಉಪದೇಶವು ಗಾಂಧಿ ಹತ್ಯೆಯ ಆರೋಪಿಯಾಗಿರುವ ಶ್ರೀ. ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಇವರಿಗಾಗಿ ಬ್ರಿಟನ್‌ನಿಂದ ಬಂದಿದೆ”, ಎಂದಿದೆ.
೨. ಬ್ರಿಟನ್‌ನಿಂದ ಕಳುಹಿಸಲಾದ ಮೂಲ ಪತ್ರ ಲಭ್ಯವಿಲ್ಲ. ಈ ಪತ್ರವನ್ನು ನಾಥೂರಾಮ್ ಗೋಡ್ಸೆಗೆ ನೀಡಲಾಗಿದೆಯೇ? ಅದಕ್ಕೆ ಗೋಡ್ಸೆಯ ಪ್ರತಿಕ್ರಿಯೆ ಹೇಗಿತ್ತು? ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ, ಎಂದು ಮೋಹನದಾಸ್ ಹೇಳಿದ್ದಾರೆ.