ಹೊರಗಿನ ‘ಬೇಕರಿ’ಯಲ್ಲಿ ತಯಾರಿಸಿದ ಮತ್ತು ಆಶ್ರಮದಲ್ಲಿರುವ ‘ಬೇಕರಿ’ಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳ ಬಗ್ಗೆ ಮಾಡಿದ ಸಂಶೋಧನೆ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಸದ್ಯ ಮನೆಮನೆಗಳಲ್ಲಿ ಬೆಳಗ್ಗೆ ಚಹಾದೊಂದಿಗೆ ಬಿಸ್ಕೇಟ್‌ಗಳನ್ನು ತಿನ್ನಲು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತದೆ. ಪೇಟೆಯಲ್ಲಿ ವಿವಿಧ ಕಂಪನಿಗಳ ಬಿಸ್ಕೇಟ್‌ಗಳನ್ನು ಆಕರ್ಷಕ ಹೊದಿಕೆಗಳಲ್ಲಿ ಮಾರಾಟಕ್ಕಾಗಿ ಇಟ್ಟಿರುವುದು ಕಂಡು ಬರುತ್ತದೆ. ಇಂದು ಮಕ್ಕಳಿಗೂ ಹೊರಗಿನ ಪದಾರ್ಥಗಳನ್ನು ತಿನ್ನುವ ಅಭ್ಯಾಸ ಆಗಿರುವುದರಿಂದ ಅವರು ಬಿಸ್ಕೇಟ್‌ಗಳಿಗಾಗಿ ಹಠ ಮಾಡುತ್ತಾರೆ. ಪಾಲಕರೂ ಅವು ಸಹಜವಾಗಿ ಸಿಗುವುದರಿಂದ ಮತ್ತು ಹಣವೂ ಹೆಚ್ಚು ಖರ್ಚಾಗದಿರುವುದರಿಂದ ತಕ್ಷಣ ಮಕ್ಕಳ ಹಠವನ್ನು ಪೂರೈಸುತ್ತಾರೆ. ‘ಬಿಸ್ಕೇಟ್‌ಗಳನ್ನು ತಿನ್ನುವುದರಿಂದ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಯಾವ ಪರಿಣಾಮಗಳಾಗುತ್ತವೆ  ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ಗೋವಾದಲ್ಲಿನ ಸನಾತನ ಆಶ್ರಮದಲ್ಲಿ ‘ಯುನಿವ್ಹರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್) ಎಂಬ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯಲ್ಲಿನ ನಿರೀಕ್ಷಣೆಯ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮ ಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿ, ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಶೇ. ೬೬ ರಷ್ಟು ಮಟ್ಟವಿರುವ ಸಾಧಕಿ, ಆಧ್ಯಾತ್ಮಿಕ ತೊಂದರೆ ಇರದ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆ ಇರದ ಶೇ. ೬೧ ರಷ್ಟು ಮಟ್ಟದ ಸಾಧಕ ಹೀಗೆ ಒಟ್ಟು ೪ ಸಾಧಕರು ಸಹಭಾಗಿಯಾಗಿದ್ದರು. ಈ ಪರೀಕ್ಷಣೆಯಲ್ಲಿ ಒಟ್ಟು ೨ ಪ್ರಯೋಗಗಳನ್ನು ಮಾಡಲಾಯಿತು. ಮೊದಲ ಪ್ರಯೋಗದಲ್ಲಿ ಸಾಧಕರಿಗೆ ಹೊರಗಿನ ‘ಬೇಕರಿ’ಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳನ್ನು (ಪ್ರತಿಯೊಬ್ಬರಿಗೆ ೨ ಬಿಸ್ಕೇಟ್‌ಗಳು) ತಿನ್ನಲು ಕೊಡಲಾಯಿತು ಮತ್ತು ಇನ್ನೊಂದು ಪ್ರಯೋಗದಲ್ಲಿ ಅವರಿಗೆ ಸನಾತನದ ಆಶ್ರಮದ ‘ಬೇಕರಿ’ಯಲ್ಲಿ ತಯಾರಿಸಿದ (ಪ್ರತಿಯೊಬ್ಬರಿಗೆ ೨ ಬಿಸ್ಕೇಟ್‌ಗಳನ್ನು) ತಿನ್ನಲು ಕೊಡಲಾಯಿತು. ಎರಡೂ ಪ್ರಯೋಗಗಳಲ್ಲಿ ಸಾಧಕರು ಬಿಸ್ಕೇಟ್‌ಗಳನ್ನು ತಿನ್ನುವ ಮೊದಲು ಹಾಗೆಯೇ ತಿಂದ ನಂತರ ೨೦ ನಿಮಿಷಗಳ ನಂತರ ಅವರ ನಿರೀಕ್ಷಣೆಯನ್ನು ‘ಯು.ಎ.ಎಸ್. ಉಪಕರಣದ ಮೂಲಕ ಮಾಡಲಾಯಿತು. ಈ ಎಲ್ಲ ನಿರೀಕ್ಷಣೆಗಳ ತುಲನಾತ್ಮಕ ಅಧ್ಯಯನವನ್ನು ಮಾಡಿದ ನಂತರ ಎರಡೂ ಪ್ರಕಾರಗಳ ಬಿಸ್ಕೇಟ್‌ಗಳನ್ನು ತಿಂದ ಸಾಧಕರ ಮೇಲಾದ ಪರಿಣಾಮವನ್ನು ಮುಂದೆ ಕೊಡಲಾಗಿದೆ.

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ಕುರಿತು ನಿರೀಕ್ಷಣೆಗಳ ವಿಶ್ಲೇಷಣೆ – ಹೊರಗಡೆಯ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳನ್ನು ತಿಂದ ನಂತರ ಸಾಧಕರ ಮೇಲಾದ ನಕಾರಾತ್ಮಕ ಪರಿಣಾಮ ಮತ್ತು  ಆಶ್ರಮದ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟಗಳನ್ನು ತಿಂದ ನಂತರ ಅವರ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು : ಹೊರಗಿನ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟಗಳನ್ನು ತಿಂದುದರಿಂದ ಸಾಧಕರ ಮೇಲೆ ನಕಾರಾತ್ಮಕ ಪರಿಣಾಮ ಮತ್ತು ಆಶ್ರಮದಲ್ಲಿನ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳನ್ನು ತಿಂದುದರಿಂದ ಅವರ ಮೇಲೆ ಸಕಾರಾತ್ಮಕ ಪರಿಣಾಮ ಆಗುವುದು ಕೆಳಗಿನ ಕೋಷ್ಟಕದಿಂದ ತಿಳಿಯುತ್ತದೆ.

ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು

೧. ಹೊರಗಿನ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳಲ್ಲಿ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ ಮತ್ತು  ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಇತ್ತು.

೨. ಆಶ್ರಮದ ಬೇಕರಿಯಲ್ಲಿ ತಯಾರಿಸಲಾದ ಬಿಸ್ಕೇಟ್‌ಗಳಲ್ಲಿ ನಕಾರಾತ್ಮಕ ಊರ್ಜೆಯು ಸ್ವಲ್ಪವೂ ಇರಲಿಲ್ಲ ಮತ್ತು ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು.

೩. ಸಾಧಕರು ಹೊರಗಿನ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳನ್ನು ತಿಂದುದರಿಂದ ಅವರಲ್ಲಿ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗಿ ಸಕಾರಾತ್ಮಕ ಊರ್ಜೆ ಕಡಿಮೆಯಾಯಿತು.

೪. ಸಾಧಕರು ಆಶ್ರಮದ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳನ್ನು ತಿಂದುದರಿಂದ ಅವರಲ್ಲಿ ನಕಾರಾತ್ಮಕ ಊರ್ಜೆಯು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿ ಸಕಾರಾತ್ಮಕ ಊರ್ಜೆ ಬಹಳಷ್ಟು ಹೆಚ್ಚಾಯಿತು.

೨. ನಿಷ್ಕರ್ಷ

ಹೊರಗಿನ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳನ್ನು ತಿಂದುದರಿಂದ ಪರೀಕ್ಷಣೆಯಲ್ಲಿ ಎಲ್ಲ ಸಾಧಕರ ಮೇಲೆ ನಕಾರಾತ್ಮಕ ಪರಿಣಾಮ ಮತ್ತು ಆಶ್ರಮದ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟಗಳನ್ನು ತಿಂದುದರಿಂದ ಅವರ ಮೇಲೆ ಬಹಳಷ್ಟು ಸಕಾರಾತ್ಮಕ ಪರಿಣಾಮವಾಯಿತು.

೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಹೊರಗಿನ ಬೇಕರಿಯಲ್ಲಿ ತಯಾರಿಸಲಾದ ಬಿಸ್ಕೇಟ್‌ಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡು ಬಂದವು. ಈ ಬಿಸ್ಕೇಟ್‌ಗಳನ್ನು ತಿಂದುದರಿಂದ ಸಾಧಕರ ಸುತ್ತಲಿನ ನಕಾರಾತ್ಮಕ ಆವರಣದಲ್ಲಿ ಹೆಚ್ಚಳವಾಯಿತು ಮತ್ತು ಅವರ ಸಾತ್ತ್ವಿಕತೆ ಕಡಿಮೆಯಾಯಿತು. ಹೊರಗಿನ ಬೇಕರಿಯಲ್ಲಿ ತಯಾರಿಸಲಾದ ಬಿಸ್ಕೇಟಗಳನ್ನು ತಿಂದುದರಿಂದ ಸಾಧಕರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹಾನಿಯಾಯಿತು. ನಕಾರಾತ್ಮಕ ಸ್ಪಂದನಗಳಿಂದ ತುಂಬಿದ ಬಿಸ್ಕೇಟ್‌ಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದಲೂ ಅಪಾಯಕಾರಿಯಾಗಿದೆ.

೩ ಆ. ಮೂಲದಲ್ಲಿ ಸನಾತನದ ಆಶ್ರಮದಲ್ಲಿ ಸಾತ್ತ್ವಿಕತೆಯ ಪ್ರಮಾಣ ಬಹಳಷ್ಟಿದೆ. ಆಶ್ರಮದಲ್ಲಿ ಪ್ರತಿಯೊಂದು ಕೃತಿಯನ್ನು ‘ಸಾಧನೆ’ ಎಂದು ಮಾಡಲಾಗುತ್ತದೆ. ಆಶ್ರಮದ ಬೇಕರಿಯಲ್ಲಿ ಸಾಧಕರ ಆರೋಗ್ಯದ ದೃಷ್ಟಿಯಿಂದ ಆವಶ್ಯಕವಿರುವ ಎಲ್ಲ ವಿಷಯಗಳ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ, ಉದಾ. ಬೇಕರಿಯನ್ನು ಸ್ವಚ್ಛವಾಗಿಡುವುದು, ಪದಾರ್ಥಗಳನ್ನು ತಯಾರಿಸಲು ಆವಶ್ಯಕವಿರುವ ವಸ್ತುಗಳ ಮತ್ತು ಘಟಕಗಳ ಜೊಡಣೆಯನ್ನು ವ್ಯವಸ್ಥಿತವಾಗಿ ಮಾಡುವುದು, ಯಂತ್ರಗಳನ್ನು ಉಪಯೋಗಿಸುವಾಗ ಅಲ್ಲಿನ ವಾತಾವರಣದಲ್ಲಿ ಸಾತ್ತ್ವಿಕತೆ ಉಳಿದುಕೊಳ್ಳಲು, ಮೆಲುಧ್ವನಿಯಲ್ಲಿ ಸಂತರ ಭಜನೆಗಳನ್ನು ಅಥವಾ ನಾಮಜಪವನ್ನು ಹಚ್ಚಿಡುವುದು, ನಿಯಮಿತವಾಗಿ ಬೇಕರಿಯ ಶುದ್ಧೀಕರಣ ಮಾಡುವುದು ಇತ್ಯಾದಿ ಸೇವೆಗಳನ್ನು ಮಾಡುವಾಗ ಪರಿಪೂರ್ಣ ನಿಯೋಜನೆಯನ್ನು ಮಾಡಿ ಮಾಡುವುದರಿಂದ ಅಲ್ಲಿ ಶಾಂತ ವಾತಾವರಣವಿರುತ್ತದೆ

ಬೇಕರಿಯಲ್ಲಿ ಸೇವೆಯನ್ನು ಮಾಡುವ ಸಾಧಕರು ಪ್ರತಿಯೊಂದು ಕೃತಿಯನ್ನು ಮಾಡುವಾಗ ನಾಮಜಪವನ್ನು ಮಾಡುತ್ತಾ ಸೇವಾಭಾವದಿಂದ ಸೇವೆಯನ್ನು ಮಾಡುತ್ತಾರೆ. ಒಟ್ಟಾರೆ ಬೇಕರಿಯಲ್ಲಿ ವಾತಾವರಣ, ಹಾಗೆಯೇ ಸಂಬಂಧಿತ ಎಲ್ಲ ಘಟಕಗಳು ಸಾತ್ತ್ವಿಕವಾಗಿರುವುದರಿಂದ ಅಲ್ಲಿ ತಯಾರಾಗುವ ಪದಾರ್ಥಗಳು ಸಾತ್ತ್ವಿಕತೆಯಿಂದ ತುಂಬಿಕೊಳ್ಳುತ್ತವೆ. ಇದರಿಂದ ಆಶ್ರಮದ ಬೇಕರಿಯಲ್ಲಿ ತಯಾರಿಸಿದ ಬಿಸ್ಕೇಟ್‌ಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಕಂಡು ಬಂದವು. ಈ ಬಿಸ್ಕೇಟ್‌ಗಳನ್ನು ತಿಂದುದರಿಂದ ಸಾಧಕರಿಗೆ ಅವುಗಳಲ್ಲಿ ಸಾತ್ತ್ವಿಕ ಸ್ಪಂದನಗಳ ಲಾಭವಾಗಿ ಅವರ ಸುತ್ತಲಿನ ನಕಾರಾತ್ಮಕ ಆವರಣವು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿ ಅವರಲ್ಲಿ ಸಕಾರಾತ್ಮಕ ಸ್ಪಂದನಗಳಲ್ಲಿ ಬಹಳ ಹೆಚ್ಚಳವಾಯಿತು.

ಸ್ವಲ್ಪದರಲ್ಲಿ ಹೇಳುವುದಾದರೆ ಹೊರಗಿನ ಬೇಕರಿಯಲ್ಲಿ ತಯಾರಿಸಿದ ಮತ್ತು ಆಶ್ರಮದ ಬೇಕರಿಯಲ್ಲಿ ತಯಾರಿಸಲಾದ ಬಿಸ್ಕೇಟ್‌ಗಳಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಬಹಳ ವ್ಯತ್ಯಾಸವಿದೆ. ವೈಜ್ಞಾನಿಕ ಪರೀಕ್ಷಣೆಯ ನಿಷ್ಕರ್ಷದಿಂದ ‘ಹೊರಗಿನ ಬೇಕರಿಗಳಲ್ಲಿ ತಯಾರಿಸಿದ ಬಿಸ್ಕೇಟ್‌ಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಹಾನಿಕರವಾಗಿದೆ’, ಎಂಬುದು ಸಿದ್ಧವಾಗುತ್ತದೆ.

೪. ಹೊರಗಿನ ಬಿಸ್ಕೇಟ್‌ಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಹಾನಿಕರವಾಗಿರುವುದರಿಂದ ಅವುಗಳನ್ನು ತಿನ್ನದೇ ಇರುವುದು ಒಳ್ಳೆಯದು !

ಬಿಸ್ಕೇಟ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೈದಾ ಹಾಗೂ ಕೃತಕ ಘಟಕಗಳ (ಎಸೆನ್ಸ್/ಅರ್ಕ ಅಥವಾ ಸುಗಂಧಗಳ) ಉಪಯೋಗವನ್ನು ಮಾಡಲಾಗುತ್ತದೆ. ಬಿಸ್ಕೇಟ್‌ಗಳನ್ನು ವಿದ್ಯುತ್ ಚಾಲಿತ ಆಧುನಿಕ ಯಂತ್ರಗಳ ಸಹಾಯದಿಂದ ತಯಾರಿಸಲಾಗುತ್ತದೆ. ಆದುದರಿಂದ ಅವುಗಳ ಮೇಲೆ  ಅಗ್ನಿಯ ಸಂಸ್ಕಾರವಾಗಿರುವುದಿಲ್ಲ. ಇದರಿಂದ ಬಿಸ್ಕೇಟ್‌ಗಳು ಪಚನವಾಗಲು ಜಡವಾಗಿರುತ್ತವೆ. ಆಧುನಿಕಯಂತ್ರಗಳ ಸಹಾಯದಿಂದ ತಯಾರಿಸಲಾದ ಪದಾರ್ಥಗಳಲ್ಲಿ ಸಾತ್ತ್ವಿಕತೆ ನಾಶವಾಗುತ್ತದೆ, ಇದರ ಕಾರಣ ಯಂತ್ರದಿಂದ ನಿರ್ಮಾಣವಾಗುವ ಅಸಾತ್ತ್ವಿಕ ನಾದದ ಕಡೆಗೆ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ಕೂಡಲೇ ಆಕರ್ಷಿತವಾಗುತ್ತವೆ. ಆದುದರಿಂದ ಈ ಪದಾರ್ಥಗಳು ತಕ್ಷಣ ದೂಷಿತವಾಗುತ್ತವೆ. ದೂಷಿತ ಪದಾರ್ಥಗಳನ್ನು ತಿನ್ನುವುದರಿಂದ ತಿನ್ನುವವನಿಗೆ ತೊಂದರೆಯಾಗುತ್ತದೆ. ಸ್ವಲ್ಪದರಲ್ಲಿ ಹೊರಗಿನ ಬಿಸ್ಕೇಟ್‌ಗಳನ್ನು ತಿನ್ನುವುದನ್ನು ತಡೆಗಟ್ಟಿ ಮನೆಯಲ್ಲಿ ತಯಾರಿಸಿದ ತಾಜಾ ಮತ್ತು ಶಕ್ತಿಯುತ (ಸತ್ವಯುತ) ಪದಾರ್ಥಗಳನ್ನು ತಿನ್ನುವುದು ಯಾವಾಗಲೂ ಶ್ರೇಯಸ್ಕರವಾಗಿದೆ !’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೨.೧೨.೨೦೨೦)

ವಿ-ಅಂಚೆ ವಿಳಾಸ : [email protected]