ದೇಶಕ್ಕೆ ಬೇಕು ಅಲ್ಪಸಂಖ್ಯಾತವಾದದಿಂದ ಮುಕ್ತಿ !

ದೇಶದ ಜಾತ್ಯತೀತತೆಯ ಸ್ವರೂಪ ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಕಾಪಾಡಲು ಅಲ್ಪಸಂಖ್ಯಾತ ಆಯೋಗದಂತಹ ಸರಕಾರಿ ಸಂಸ್ಥೆಗಳನ್ನು ತೆಗೆದುಹಾಕಬೇಕು. ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತರ ತುಲನೆಯಲ್ಲಿ ಹೆಚ್ಚು ಅಧಿಕಾರಗಳನ್ನು ನೀಡುವುದು, ಇದು ದೇಶದ ಐಕ್ಯತೆಗೆ ಸವಾಲೊಡ್ಡುವುದರ ಜೊತೆಗೆ ಸಮಾಜದಲ್ಲಿ ಒಡಕುಂಟು ಮಾಡುವುದು ಮತ್ತು ಪರಸ್ಪರರಲ್ಲಿ ದ್ವೇಷವನ್ನು ಹರಡಲು ಕಾರಣವಾಗಿದೆ.

ಶ್ರೀ. ಹೃದಯ ನಾರಾಯಣ ದೀಕ್ಷಿತ

೧. ಅಲ್ಪಸಂಖ್ಯಾತರ ವಿಷಯದಲ್ಲಿ ನ್ಯಾಯಾಲಯಗಳಲ್ಲಿ ವಿವಿಧ ಅರ್ಜಿಗಳನ್ನು ದಾಖಲಿಸುವುದು

‘ಬಡತನ ಮತ್ತು ಶ್ರೀಮಂತಿಕೆಗೆ ಯಾವುದೇ ಧರ್ಮ ಇರುವುದಿಲ್ಲ. ಭಾರತದಲ್ಲಿ ಮಾತ್ರ ಧರ್ಮವನ್ನಾಧರಿಸಿದ ಅಲ್ಪ ಸಂಖ್ಯಾತರಿದ್ದಾರೆ. ಒಂದು ಸಂಸ್ಥೆಯು ‘ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಅಧಿನಿಯಮ, ೧೯೯೨’ ಮತ್ತು ರಾಷ್ಟ್ರೀಯ ಅಲ್ಪ ಸಂಖ್ಯಾತ ಆಯೋಗ ಇವುಗಳನ್ನು ಸಂವಿಧಾನವಿರೋಧಿ ಎಂದು ಘೋಷಿಸಬೇಕು ಎಂದು ವಿನಂತಿಸುವ ಯಾಚಿಕೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದೆ. ನ್ಯಾಯಾಲಯ ಈ ಯಾಚಿಕೆಯನ್ನು ಸ್ವೀಕರಿಸಿದೆ. ಇನ್ನೊಂದೆಡೆ ೭ ರಾಜ್ಯ ಸಹಿತ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದಾರೆ; ಆದರೆ ಅವರಿಗೆ ಅಲ್ಪಸಂಖ್ಯಾತರ ಯಾವುದೇ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ರಾಜ್ಯಕ್ಕನುಸಾರ ಅಲ್ಪ ಸಂಖ್ಯಾತರನ್ನು ನಿರ್ಧರಿಸಬೇಕು, ಎಂಬ ಬೇಡಿಕೆಯ ಯಾಚಿಕೆಯನ್ನು ಭಾಜಪದ ನೇತಾರ ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಇವರು ದಾಖಲಿಸಿದ್ದಾರೆ. ಈ ಯಾಚಿಕೆಯ ಸಂದರ್ಭದಲ್ಲಿ ‘ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಅಧಿನಿಯಮ, ೨೦೦೪’ರ ಕಲಮ್ ೨ ಎಫ್ ಇದರ ಬಗ್ಗೆ ವಿಚಾರ ನಡೆಯುತ್ತಿದೆ. ಈ ಹಿಂದೆಯೂ ಒಂದು ಯಾಚಿಕೆಯನ್ನು ದಾಖಲಿಸಲಾಗಿತ್ತು, ಅದರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ವ್ಯಾಖ್ಯೆಯನ್ನು ಸ್ಪಷ್ಟಪಡಿಸಲು ಬೇಡಿಕೊಳ್ಳಲಾಗಿದೆ.

ಭಾರತದ ಸಂವಿಧಾನದಲ್ಲಿ ‘ಅಲ್ಪಸಂಖ್ಯಾತ’ ಇದರ ವ್ಯಾಖ್ಯೆಯನ್ನು ನೀಡಿಲ್ಲ. ಕೇವಲ ಅನುಚ್ಛೇದ ೨೯ ಮತ್ತು ೩೦ ರ ‘ಅಲ್ಪ ಸಂಖ್ಯಾತ ಸಮುದಾಯದ ಹಿತರಕ್ಷಣೆ ಮತ್ತು ಶಿಕ್ಷಣ ಸಂಸ್ಥೆಗಳ ಸಂಚಾಲನೆ’, ಎಂಬ ಶೀರ್ಷಿಕೆ ಮಾತ್ರ ಇದೆ. ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಜನಸಂಖ್ಯೆಯ ಪ್ರಮಾಣ ಬಹಳ ಹೆಚ್ಚಾದ ನಂತರವೂ ಅಲ್ಪಸಂಖ್ಯಾತರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ. ನ್ಯಾಯಾಲಯವು  ಮೇಲಿನ ಪ್ರಕರಣದಲ್ಲಿ ಕೇಂದ್ರ ಸರಕಾರಕ್ಕೆ ನೋಟಿಸನ್ನು ಕಳುಹಿಸಿತ್ತು. ಅದಕ್ಕೆ ಕೇಂದ್ರ ಸರಕಾರ, ‘ಈ ಸಂವೇದನಾಶೀಲ ಪ್ರಕರಣದ ದೀರ್ಘಕಾಲದ ಪರಿಣಾಮಗಳಾಗಬಹುದು ಎಂದು ಹೇಳಿದೆ. ಈ ವಿಷಯದಲ್ಲಿ ೧೪ ರಾಜ್ಯಗಳು ತಮ್ಮ ಅಭಿಪ್ರಾಯಗಳನ್ನು ನೀಡಿವೆ. ಸರಕಾರ ಎಲ್ಲರ ಅಭಿಪ್ರಾಯಕ್ಕಾಗಿ ಹೆಚ್ಚು ಸಮಯವನ್ನು ಕೇಳಿದೆ.’

೨. ಎಲ್ಲರಿಗೂ ಸಮಾನ ಅಧಿಕಾರವಿರುವ ದೇಶದಲ್ಲಿ ವಿಶಿಷ್ಟ ಸಮುದಾಯಕ್ಕೆ ವಿಶೇಷ ಅಧಿಕಾರಗಳನ್ನು ಕೊಡುವುದು ಸಂವಿಧಾನವಿರೋಧಿ !

ಧರ್ಮದ ಆಧಾರದಲ್ಲಿ ಅಲ್ಪಸಂಖ್ಯಾತರಾಗುವುದರ ಕಾರಣವೇನು? ಯಾವುದಾದರೊಂದು ಸಮೂಹವನ್ನು ಅಲ್ಪ ಸಂಖ್ಯಾತ ಎಂದು ಘೋಷಣೆ ಮಾಡುವುದರ ಹಿಂದಿನ ಕಾರಣ ಏನು ? ಇಲ್ಲಿ ಎಲ್ಲ ನಾಗರಿಕರಿಗೆ ಸಮಾನ ಮೌಲಿಕ ಅಧಿಕಾರವಿದೆ. ಎಲ್ಲ ನಾಗರಿಕರಿಗೆ ಸಮಾನ ಅಧಿಕಾರವಿರುವ ದೇಶದಲ್ಲಿ ಅಲ್ಪ ಸಂಖ್ಯಾತರು ಹೇಗೆ ಇರುತ್ತಾರೆ ? ಇಂತಹ ಅನೇಕ ಪ್ರಶ್ನೆಗಳಿವೆ. ಯಾವುದಾದರೊಂದು ಪಂಥದ ಅಥವಾ ಧಾರ್ಮಿಕ ಸಂಪ್ರದಾಯದ ಜನಸಂಖ್ಯೆ ಕಡಿಮೆ ಇರುವುದು ಅಲ್ಪಸಂಖ್ಯಾತರ ಸೌಲಭ್ಯಗಳನ್ನು ಪಡೆಯಲು ಆಧಾರವಾಗಿದೆಯೇ ? ಪಂಥ ಅಥವಾ ಧರ್ಮವೇ ಅಲ್ಪಸಂಖ್ಯಾತರಾಗಲು ಆಧಾರವಾಗಿದೆಯೇ ? ಸಂವಿಧಾನದ ಉದ್ದೇಶಿಕೆಯಲ್ಲಿ ರಾಷ್ಟ್ರದ ಮೂಲ ಸಂಸ್ಥೆ ‘ನಾವು ಭಾರತದ ಜನರು’ ಎಂದಿದೆ. ರಾಷ್ಟ್ರ ಒಂದಾಗಿದೆ, ಸಂಸ್ಕೃತಿ ಒಂದಾಗಿದೆ ಮತ್ತು ಸಂವಿಧಾನ ಒಂದಾಗಿದೆ. ಆದ್ದರಿಂದ ಅಲ್ಪಸಂಖ್ಯಾತರಿಗಾಗಿ ಬೇರೆ ವಿಚಾರವನ್ನು ಒಪ್ಪಿಕೊಳ್ಳುವಂತಹದಾಗಿಲ್ಲ.

೩. ೭ ರಾಜ್ಯಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗಿದ್ದರೂ ಅವರಿಗೆ ಅಲ್ಪಸಂಖ್ಯಾತರ ಸೌಲಭ್ಯಗಳು ಸಿಗುವುದಿಲ್ಲ 

ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ. ಮುಸಲ್ಮಾನ, ಪಾರ್ಸಿ, ಕ್ರೈಸ್ತ, ಸಿಕ್ಖ್, ಬೌದ್ಧ ಮತ್ತು ಯಹೂದಿ ಇವರೆಲ್ಲರೂ ಅಲ್ಪಸಂಖ್ಯಾತರಾಗಿದ್ದಾರೆ. ಪಂಜಾಬ್‌ನಲ್ಲಿ ಹಿಂದೂಗಳು ಶೇ. ೩೮.೪೦, ಅರುಣಾಚಲದಲ್ಲಿ ಶೇ. ೨೯, ಮಣಿಪುರದಲ್ಲಿ ಶೇ. ೩೧.೩೯, ಜಮ್ಮೂ- ಕಾಶ್ಮೀರದಲ್ಲಿ ಶೇ. ೨೮.೪೪, ನಾಗಾ ಲ್ಯಾಂಡ್‌ನಲ್ಲಿ ಶೇ. ೮.೭೫, ಮಿಝೋರಾಂನಲ್ಲಿ ಶೇ. ೨.೭೫ ರಷ್ಟು ಹಿಂದೂಗಳಿದ್ದಾರೆ. ಅಲ್ಲಿ ಅವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವುದಿಲ್ಲ. ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ, ಅವರಿಗೆ ಅಲ್ಪಸಂಖ್ಯಾತರ ಸೌಲಭ್ಯಗಳು ಸಿಗುವುದಿಲ್ಲ.

೪. ಬಹುಸಂಖ್ಯಾತರು ತಮ್ಮ ದೇಶದಲ್ಲಿಯೇ ದ್ವಿತೀಯ ದರ್ಜೆಯ ನಾಗರಿಕರಾಗಿರಬೇಕಾಗುವುದು

ಅಲ್ಪಸಂಖ್ಯಾತರ ವಿಶೇಷಾಧಿಕಾರಗಳಿಂದ ಮೂಲಭೂತ ಅಧಿಕಾರದ ಉಲ್ಲಂಘನೆಯಾಗುತ್ತದೆ. ಅನುಚ್ಛೇದ ೧೫ ರಲ್ಲಿ ‘ಧರ್ಮ, ಮೂಲ, ವಂಶ, ಜಾತಿ, ಲಿಂಗ ಅಥವಾ ಜನ್ಮದ ಆಧಾರದಲ್ಲಿ ತಾರತಮ್ಯ ಮಾಡುವುದು ಖಂಡನೀಯವಾಗಿದೆ; ಆದರೆ ಅಲ್ಪಸಂಖ್ಯಾತರ ಹಿತವನ್ನು ಕಾಪಾಡುವ ಈ ಕಾನೂನು ಮೌಲಿಕ ಅಧಿಕಾರದ ಉಲ್ಲಂಘನೆಯಾಗಿದೆ. ಎಲ್ಲರಿಗೂ ಸಮಾನ ಅಧಿಕಾರ ನೀಡಿರುವಾಗ ಅಲ್ಪಸಂಖ್ಯಾತರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ. ಅವರ ಶಿಕ್ಷಣಸಂಸ್ಥೆಗಳೂ ಅವರ ಆಧೀನದಲ್ಲಿವೆ. ಮೌಲಿಕ ಅಧಿಕಾರವು ಸಂವಿಧಾನದ ಮೂಲ ರಚನೆಯಾಗಿದೆ. ಹೀಗಿರುವಾಗಲೂ ಧಾರ್ಮಿಕ ಗುರುತಿರುವ ಅಲ್ಪಸಂಖ್ಯಾತರು ಅನೇಕ ಸೌಲಭ್ಯಗಳನ್ನು ಪಡೆಯುತ್ತಾರೆ. ರಾಷ್ಟ್ರೀಯ ಸ್ತರದಲ್ಲಿ ಅನೇಕ ಸಮುದಾಯದವರು ಅಲ್ಪಸಂಖ್ಯಾತರಾಗಿದ್ದಾರೆ. ಯಾವುದಾದರೊಂದು ರಾಜ್ಯದಲ್ಲಿ ಅವರು ಬಹುಸಂಖ್ಯಾತರಾಗಿದ್ದರೂ ಕೆಲವು ರಾಜ್ಯಗಳಲ್ಲಿ ಅವರು ಅಲ್ಪಸಂಖ್ಯಾತರಾಗಿದ್ದಾರೆ. ಈ ತಾರತಮ್ಯದ ವರ್ತನೆಯಲ್ಲಿ ನಮ್ಮನ್ನು ಅನೇಕ ಅಧಿಕಾರಗಳಿಂದ ವಂಚಿತರನ್ನಾಗಿ ಮಾಡಲಾಗಿದೆ, ಎಂಬ ಭಾವನೆ ಬಹುಸಂಖ್ಯಾತರ ಮನಸ್ಸಿನಲ್ಲಿ ನಿರ್ಮಾಣವಾಗುವುದು ಸ್ವಾಭಾವಿಕವಾಗಿದೆ. ಹಾಗೆಯೇ ಅವರಿಗೆ ತಮ್ಮ ದೇಶದಲ್ಲಿ ಎರಡನೆಯ ಸ್ಥಾನಮಾನದ ನಾಗರಿಕರಾಗಿ ಇರಬೇಕಾಗುತ್ತಿದೆ. ಇದರಿಂದ ಅವರಲ್ಲಿ ಒತ್ತಡ ನಿರ್ಮಾಣವಾಗುತ್ತದೆ.

೫. ಅಲ್ಪಸಂಖ್ಯಾತರಿಗೆ ಧರ್ಮದ ಹೆಸರಿನಲ್ಲಿ ಬೇರೆ ಸ್ವತಂತ್ರ ದೇಶ ಸಿಕ್ಕಿದ ನಂತರವೂ ಅವರಿಂದ ಸೌಲಭ್ಯಗಳ ಬೇಡಿಕೆ

ಅಲ್ಪಸಂಖ್ಯಾತರು ತಮ್ಮನ್ನು ವಿಶೇಷರೆಂದು ತಿಳಿಯುತ್ತಾರೆ. ಅವರಿಗೆ ಹೆಚ್ಚು ಅಧಿಕಾರಗಳು ಬೇಕಾಗಿವೆ. ಅಲ್ಪಸಂಖ್ಯಾತರ ಪಕ್ಷಗಳು ಮತ್ತು ಮುಖಂಡರು ಅವರಿಗೆ ಸತತವಾಗಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುತ್ತಾರೆ. ಅಲ್ಪಸಂಖ್ಯಾತವಾದವು ರಾಷ್ಟ್ರೀಯ ಐಕ್ಯತೆಗೆ ಬಾಧಕವಾಗಿದೆ. ಅದರ ಸ್ರೋತವು ಮೂಲಭೂತವಾದಿ ಸಾಂಪ್ರದಾಯಿಕತೆಯಲ್ಲಿದೆ. ಬ್ರಿಟಿಷ ಸರಕಾರ ಮತ್ತು ಕಟ್ಟರಪಂಥೀ ತತ್ತ್ವದ ಷಡ್ಯಂತ್ರದಿಂದ ದೇಶದ ವಿಭಜನೆ ಆಯಿತು. ಸಾಂಪ್ರದಾಯಿಕ ತತ್ತ್ವಗಳಿಗೆ ಬೇರೆ ದೇಶ ಸಿಕ್ಕಿತು, ಆದರೂ ಅಲ್ಪಸಂಖ್ಯಾತರು ಈಗಲೂ ವಿಶೇಷ ಸೌಲಭ್ಯಗಳನ್ನು ಬೇಡುತ್ತಾರೆ. ಸಂವಿಧಾನ ಸಭೆಯು ಅಲ್ಪಸಂಖ್ಯಾತರ ಅಧಿಕಾರಕ್ಕಾಗಿ ಸಮಿತಿಯನ್ನು ನಿರ್ಮಿಸಿತು. ಸರದಾರ ಪಟೇಲರು ಈ ಸಮಿತಿಯ ಸಭಾಪತಿಗಳಾಗಿದ್ದರು. ಅದರಲ್ಲಿ ಪಿ.ಸಿ.ದೇಶಮುಖ ಇವರು, “ಅಲ್ಪಸಂಖ್ಯಾತರಿಗಿಂತ ಹೆಚ್ಚು ಕ್ರೂರ ಶಬ್ದ ಬೇರೆ ಇಲ್ಲ, ಆದುದರಿಂದಲೇ  ದೇಶದ ವಿಭಜನೆಯಾಯಿತು” ಎಂದು ಹೇಳಿದರು. ಎಚ್.ಸಿ.ಮುಖರ್ಜಿಯವರು, ‘ಒಂದು ವೇಳೆ ನಮಗೆ ಒಂದು ರಾಷ್ಟ್ರ ಬೇಕಾಗಿದ್ದರೆ, ಧರ್ಮದ ಆಧಾರದಲ್ಲಿ ಅಲ್ಪಸಂಖ್ಯಾತರಿಗೆ ಮಾನ್ಯತೆಯನ್ನು ಕೊಡಲು ಬರುವುದಿಲ್ಲ”, ಎಂದು ಹೇಳಿದರು. ತಜಮ್ಮುಲ ಹುಸೇನ ಇವರು, “ನಾವು ಅಲ್ಪಸಂಖ್ಯಾತರಾಗಿಲ್ಲ, ಈ ಶಬ್ದವನ್ನು ಆಂಗ್ಲರು ತಂದಿದ್ದರು ಮತ್ತು ಅವರು ಈಗ ಇಲ್ಲಿಂದ ಹೋಗಿದ್ದಾರೆ. ಈಗ ಈ ಶಬ್ದವನ್ನು ಶಬ್ದಕೋಶದಿಂದ ತೆಗೆದು ಹಾಕಬೇಕು”ಎಂದು ಹೇಳಿದರು. ಪಂ. ನೆಹರುವರು, “ಎಲ್ಲ ಸಮುದಾಯದವರು ಅವರ ವಿಚಾರಶೈಲಿಗನುಸಾರ ಸಮೂಹಗಳನ್ನು ಮಾಡಿಕೊಳ್ಳಬಹುದು. ಧರ್ಮ ಅಥವಾ ಮಜಹಬದ ಆಧಾರದಲ್ಲಿ ವರ್ಗೀಕರಣವನ್ನು ಮಾಡಲು ಬರುವುದಿಲ್ಲ” ಎಂದು ಹೇಳಿದರು. ಪಟೇಲರು ಅಲ್ಪಸಂಖ್ಯಾತರಿಗೆ, ‘ನೀವು ನಿಮ್ಮನ್ನು ಅಲ್ಪ ಸಂಖ್ಯಾತರೆಂದು ಏಕೆ ತಿಳಿದುಕೊಳ್ಳುತ್ತೀರಿ ?’ ಎಂದು ಕೇಳಿದ್ದರು.

೬. ದೇಶಕ್ಕೆ ಅಲ್ಪಸಂಖ್ಯಾವಾದದಿಂದ ಮುಕ್ತಿ ಆವಶ್ಕಕ !

ಪಂಥ ಮತ್ತು ಧರ್ಮದ ಮೇಲೆ ಆಧರಿಸಿದ ಅಲ್ಪಸಂಖ್ಯಾತರ ವಿಶೇಷಾಧಿಕಾರಗಳು ಅಲ್ಪಸಂಖ್ಯಾತರಲ್ಲಿ ಪ್ರತ್ಯೇಕವಾದವನ್ನು ಮೂಡಿಸಿ ಮತ್ತು ಸೌಲಭ್ಯಗಳಿಂದ ವಂಚಿತರಾಗಿರುವ ಬಹುಸಂಖ್ಯಾತರನ್ನು ನಿರಾಶಗೊಳಿಸುತ್ತವೆ. ಆದ್ದರಿಂದ ಅಲ್ಪಸಂಖ್ಯಾವಾದವು ರಾಷ್ಟ್ರೀಯ ಐಕ್ಯತೆಗೆ ಅಪಾಯವಾಗಿದೆ. ದೇಶವನ್ನು ಅಲ್ಪಸಂಖ್ಯಾತವಾದದಿಂದ ಮುಕ್ತಗೊಳಿಸುವ ಆವಶ್ಯಕತೆಯಿದೆ. ಬಡತನ ಮತ್ತು ಶ್ರೀಮಂತಿಕೆಯ ಆಧಾರದಲ್ಲಿ ಸಮುದಾಯಗಳ ವಿಚಾರವಾಗಬೇಕು. ಜಾತಿ, ಪಂಥ ಮತ್ತು ಸಂಪ್ರದಾಯ ಇವುಗಳ ಸ್ವಾಭಿಮಾನವು ಎಲ್ಲ ವೈಭವಗಳ ಧ್ಯೇಯಕ್ಕೆ ಬಾಧಕವಾಗಿವೆ. ಶಿಕ್ಷಣ ಮತ್ತು ಸಂಪತ್ತು ಇವುಗಳಲ್ಲಿ ಕೆಲವು ಸಮುದಾಯಗಳು ಹಿಂದುಳಿದ ಮತ್ತು ವಂಚಿತವಾಗಿರಬಹುದು. ಆ ಸಮುದಾಯಗಳಿಗೆ ಅವಕಾಶವನ್ನು ನೀಡಿ ಮುಂದೆ ಒಯ್ಯುವುದು ರಾಷ್ಟ್ರೀಯ ಕರ್ತವ್ಯವಾಗಿದೆ. ಸಂವಿಧಾನದ ಉದ್ದೇಶದಲ್ಲಿ ‘ಎಲ್ಲರಿಗೂ ಪ್ರತಿಷ್ಠೆ  ಮತ್ತು ಅವಕಾಶ ಇವುಗಳ ಸಮಾನತೆ ಪ್ರಾಪ್ತಿ ಮಾಡಿಕೊಡುವ’ ಪ್ರತಿಜ್ಞೆಯಿದೆ.  ಎಲ್ಲ ಭಾರತೀಯರಲ್ಲಿ ಸಮರಸತೆ ಮತ್ತು ಬಂಧುಭಾವದ ಭಾವನೆಯನ್ನು ಮೂಡಿಸುವುದು ಆವಶ್ಯಕವಾಗಿದೆ. ಈ ಭಾವನೆಯು ಭಾಷೆ, ಪಂಥ, ಧರ್ಮ ಮತ್ತು ಕ್ಷೇತ್ರಗಳ ಭೇದಭಾವದ ಆಚೆಗಿರಬೇಕು.’

ಈಗ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಇದರ ಚರ್ಚೆ ಮಾಡುವ ಸಮಯ ಮುಗಿದು ಹೋಗಿದೆ. ಯುದ್ಧ ಅಥವಾ ಅಂತರರಾಷ್ಟ್ರೀಯ ಒಪ್ಪಂದದಿಂದ ಯಾವುದಾದರೊಂದು ರಾಜ್ಯದ ಯಾವುದಾದರೊಂದು ಕ್ಷೇತ್ರದಲ್ಲಿನ ನಾಗರಿಕರು ತಮ್ಮ ಮನೆಯಲ್ಲಿರುವಾಗಲೂ ಬೇರೆ ದೇಶದ ನಿವಾಸಿಗಳೆಂದು ಘೋಷಣೆಯಾಗಬಹುದಾಗಿತ್ತು ಎಂದು ಹೇಳಲಾಗಿತ್ತು. ರಾಜ್ಯಕ್ಷೇತ್ರದ ಪರಿವರ್ತನೆಯಿಂದ ಸಭ್ಯತೆ ಮತ್ತು ಸಂಸ್ಕೃತಿಯ ಮೇಲೆ ಪರಿಣಾಮವಾಗುತ್ತದೆ. ಆದ್ದರಿಂದ ಅವರಿಗೆ ವಿಶೇಷ ಸುರಕ್ಷೆಯನ್ನು ನೀಡುವ ಅವಶ್ಯಕತೆ ಇರುತ್ತದೆ. ಭಾರತದಲ್ಲಿ ಅಂತಹ ಸ್ಥಿತಿಯಿಲ್ಲ. ಭಾರತದ ವಿಭಜನೆಯ ಸಮಯದಲ್ಲಿ ಮುಸ್ಲಿಮ್ ಲೀಗ್ ಬೇರೆ ದೇಶವನ್ನು ಕೇಳಿತು. ಇಲ್ಲಿ ಉಳಿದುಕೊಂಡ ಮುಸಲ್ಮಾನರು ಸ್ವೇಚ್ಛೆಯಿಂದ ಭಾರತವನ್ನು ಆಯ್ದುಕೊಂಡಿದ್ದರು. ಅಂತರರಾಷ್ಟ್ರೀಯ ದೃಷ್ಟಿಯಲ್ಲಿ ಭಾರತದಲ್ಲಿ ಯಾರೂ ಅಲ್ಪಸಂಖ್ಯಾತರಿಲ್ಲ. ಅಂದರೆ ಭಾರತವನ್ನು ಅಲ್ಪಸಂಖ್ಯಾತವಾದದಿಂದ ಮುಕ್ತಗೊಳಿಸುವುದು ಆವಶ್ಯಕವಾಗಿದೆ.’

– ಶ್ರೀ. ಹೃದಯನಾರಾಯಣ ದೀಕ್ಷಿತ, ಮಾಜಿ ಅಧ್ಯಕ್ಷರು, ಉತ್ತರಪ್ರದೇಶ ವಿಧಾನಸಭೆ (ಆಧಾರ : ದೈನಿಕ ‘ಜಾಗರಣ’, ನವೆಂಬರ್ ೨೦೨೨)