ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಹುಟ್ಟುಹಬ್ಬದ ನಿಮಿತ್ತ ನೆರವೇರಿದ ಭಾವಸಮಾರಂಭದಲ್ಲಿ ಬೆಳಕಿಗೆ ಬಂದ ಅವರ ಅಲೌಕಿಕ ಗುಣವೈಶಿಷ್ಟ್ಯಗಳು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಉಡುಗೊರೆಯನ್ನು ನೀಡಿ ಸನ್ಮಾನ ಮಾಡುತ್ತಿರುವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಸಪ್ತರ್ಷಿಗಳು ‘ಶ್ರೀ ಮಹಾ ಲಕ್ಷ್ಮೀಯ ಅವತಾರ’ವೆಂದು ಗೌರವಿಸಿದಂತಹ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ  ಗಾಡಗೀಳ !

ಅವರ ಆಗಮನದಿಂದಲೇ ಆಶ್ರಮದಲ್ಲಿ ಉತ್ಸವದ ವಾತಾವರಣ ನಿರ್ಮಾಣವಾಗುತ್ತದೆ ! ಸಾಧಕರ ಮುಖದ ಮೇಲೆ ಆನಂದ ಕಾಣಿಸುತ್ತದೆ ಮತ್ತು ಅವರ ಸಹವಾಸ ಸ್ವಲ್ಪವಾದರೂ ಸಿಗಬೇಕೆಂದು ಎಲ್ಲ ಸಾಧಕರು ತಳಮಳಿಸುತ್ತಿರುತ್ತಾರೆ ! ದೇವತೆಗಳು, ಸಪ್ತರ್ಷಿಗಳು ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆಯನ್ನು ಸಂಪಾದಿಸಿದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹುಟ್ಟುಹಬ್ಬವು ಒಂದು ಆಧ್ಯಾತ್ಮಿಕ ಉತ್ಸವವೇ ಆಯಿತು. ೭.೧೨.೨೦೨೨ ಈ ದತ್ತಜಯಂತಿಯ ದಿನ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹುಟ್ಟುಹಬ್ಬದ ನಿಮಿತ್ತ ಭಾವಸಮಾರಂಭ ನೆರವೇರಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ, ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಕುಟುಂಬದವರು ಮತ್ತು ಕೆಲವು ಸಾಧಕರ ಉಪಸ್ಥಿತಿಯಲ್ಲಿ ಈ ಭಾವಸಮಾರಂಭವು ನೆರವೇರಿತು.

ಈ ಶುಭಪ್ರಸಂಗದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಉಡುಗೊರೆಯನ್ನು ನೀಡಿದರು. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶವನ್ನು ಓದಿದರು, ಹಾಗೆಯೇ ಸಪ್ತರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಬಗ್ಗೆ ತೆಗೆದ ಗೌರವೋದ್ಗಾರದ ಬಗ್ಗೆ ಉಪಸ್ಥಿತರಿಗೆ ತಿಳಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ಸಮನ್ವಯಕರಾದ ಸುಶ್ರೀ (ಕು.) ತೇಜಲ ಪಾತ್ರೀಕರ (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರು ಈ ಸಮಯದಲ್ಲಿ ‘ಜಯ ಶಾರದೆ ವಾಗೀಶ್ವರಿ’ ಎಂಬ ಹಾಡನ್ನು ಹಾಡಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಲ್ಲಿನ ದೇವಿತತ್ವದ ಆರಾಧನೆಯನ್ನು ಮಾಡಿದರು !

ಸಪ್ತರ್ಷಿಗಳ ಆಜ್ಞೆಯಿಂದ ಸನಾತನದ ಸಂತರು ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ತಾಯಿ-ತಂದೆಯರಾದ ಪೂ. (ಸೌ.) ಶೈಲಜಾ ಪರಾಂಜಪೆ ಮತ್ತು ಪೂ. ಸದಾಶಿವ ಪರಾಂಜಪೆ ಇವರು ಸನಾತನದ ಮೂವರು ಗುರುಗಳಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ವೇದಮಂತ್ರೋಚ್ಚಾರಗಳೊಂದಿಗೆ ಆರತಿಯನ್ನು ಮಾಡಿದರು. ಈ ಸಮಯದಲ್ಲಿ ಸನಾತನದ ಪುರೋಹಿತರು ವೇದಮಂತ್ರೋಚ್ಚಾರಣೆಯನ್ನು ಮಾಡಿದರು. ಸಪ್ತರ್ಷಿಗಳ ಆಜ್ಞೆಯಿಂದ ಸಾಮವೇದದ ಗಾಯನವನ್ನೂ ಮಾಡಲಾಯಿತು.


ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕುಟುಂಬದವರು ಹೇಳಿದ ಗುಣವೈಶಿಷ್ಟ್ಯಗಳು

ಸೌ. ಶೀತಲ ಗೊಗಟೆ, ೨ ಸೌ. ಮಧುರಾ ಸಹಸ್ರಬುದ್ಧೆ, ೩ ಸೌ. ಸಾಯ್ಲಿ ಕರಂದಿಕರ, ೪ ಶ್ರೀ. ಮನೋಜ ಸಹಸ್ರಬುದ್ಧೆ, ೫ ಶ್ರೀ ಸಿದ್ಧೇಶ ಕರಂದಿಕರ, ೬ ಸದ್ಗುರು ಮುಕುಲ ಗಾಡಗೀಳ, ೭ ಪೂ. (ಸೌ.) ಶೈಲಜಾ ಪರಾಂಜಪೆ ೮ ಪೂ. ಸದಾಶಿವ ಪರಾಂಜಪೆ ಹಾಗೂ ಕುಟುಂಬೀಯರು

೧. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವಳಲ್ಲಿ, ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡಿ ಎಲ್ಲರನ್ನು ತಮ್ಮವರನ್ನಾಗಿ ಮಾಡಿಕೊಳ್ಳುವ ಕಲೆ ಚಿಕ್ಕಂದಿನಿಂದಲೇ ಇದೆ ! – ಪೂ. ಸದಾಶಿವ ಪರಾಂಜಪೆ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ತಂದೆ)

ಭಕ್ತಳೆದುರು ಶ್ರೀ ಮಹಾಲಕ್ಷ್ಮೀದೇವಿಯೇ ಪ್ರಕಟವಾದರೆ, ಅವಳ ಸ್ಥಿತಿ ಹೇಗಾಗಬಹುದು ? ಹಾಗೆ ನನ್ನ ಸ್ಥಿತಿ ಆಗಿದೆ; ಆದರೆ ನನ್ನ ಮಗಳ ಸ್ತುತಿ ಮಾಡಬೇಕೆಂಬ ಭಾವನೆಯಿಂದ ನಾನು ೪ ಶಬ್ದಗಳನ್ನು ಹೇಳುತ್ತಿದ್ದೇನೆ.

ವರ್ಷ ೨೦೨೧ ರಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯೊಂದಿಗೆ ನಾವು ಕೆಲವು ತೀರ್ಥಕ್ಷೇತ್ರಗಳಿಗೆ ಹೋಗಿದ್ದೆವು. ಆ ಸಮಯದಲ್ಲಿ ಅಲ್ಲಿನ ಅನೇಕರೊಂದಿಗೆ ಅವಳಿಗೆ ಪರಿಚಯವಿದೆ ಎಂಬುದು ನಮ್ಮ ಗಮನಕ್ಕೆ ಬಂದಿತು. ದೇವಸ್ಥಾನಗಳಿಗೆ ಹೋದಾಗ ಅನೇಕ ಜನರು ತಾವಾಗಿಯೇ ಅವಳೊಂದಿಗೆ ಮಾತನಾಡಲು ಬಂದರು. ನಾವು ವಾಸ್ತವ್ಯ ಮಾಡಿದ ಎಲ್ಲ ಹೊಟೇಲ್‌ಗಳಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರು ಬಂದಿದ್ದಾರೆ ಎಂದು ತಿಳಿದಾಗ ಹೊಟೇಲ್‌ನ ಮಾಲಿಕರು ಅವಳನ್ನು ಭೇಟಿಯಾಗಲು ಕೋಣೆಗೆ ಬಂದು ‘ಮಾತಾಜಿ’ ಎಂದು ಸಂಬೋಧಿಸಿ ಅವರು ಅತ್ಯಂತ ಗೌರವದಿಂದ ಅವಳ ಕುಶಲೋಪರಿಯನ್ನು ಕೇಳುತ್ತಿದ್ದರು. ಅವಳಿಗೆ ಏನು ಬೇಕು ಏನು ಬೇಡ, ಅವೆಲ್ಲವನ್ನು ಅವರು ತಾವಾಗಿಯೇ ತಂದು ಕೊಡುತ್ತಿದ್ದರು. ಈ ರೀತಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡಿ ಅವರನ್ನು ತಮ್ಮವರನ್ನಾಗಿ ಮಾಡಿಕೊಳ್ಳುವ ಕಲೆ ಅವಳಲ್ಲಿ  ಚಿಕ್ಕಂದಿನಿಂದಲೇ ಇದೆ.

೨. ‘ಶ್ರೀ ಗುರುಗಳು ಶಿಷ್ಯಳ ಜನ್ಮೋತ್ಸವವನ್ನು ಆಚರಿಸುವುದು, ಇದು ನ ಭೂತೋ ನ ಭವಿಷ್ಯತಿ !’ – ಪೂ. (ಸೌ.) ಶೈಲಜಾ ಪರಾಂಜಪೆ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ತಾಯಿ)

ಅನೇಕ ಸ್ಥಳಗಳಲ್ಲಿ ಶಿಷ್ಯರು ಗುರುಗಳ ಜನ್ಮೋತ್ಸವವನ್ನು ಆಚರಿಸುತ್ತಾರೆ; ಆದರೆ ಸಾಕ್ಷಾತ್ ಶ್ರೀ ಗುರುಗಳು, ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಶಿಷ್ಯಳ ಜನ್ಮೋತ್ಸವವನ್ನು ಆಚರಿಸುವುದು, ಇದು ‘ನ ಭೂತೋ ನ ಭವಿಷ್ಯತಿ|’ ಆಗಿದೆ. ಪ್ರತ್ಯಕ್ಷ ಪರಮಾತ್ಮ ಭಕ್ತಳ ಹುಟ್ಟುಹಬ್ಬವನ್ನು ಆಚರಿಸುತ್ತಾನೆ ಮತ್ತು ಆಶೀರ್ವಾದವನ್ನು ಕೊಡುತ್ತಾನೆ, ಇದನ್ನು ನಾನು ಕಲಿಯುಗದಲ್ಲಿ ಮೊದಲ ಬಾರಿಗೆ ಅನುಭವಿಸುತ್ತಿದ್ದೇನೆ. ಯಾವ ರೀತಿ ನಾವು ದತ್ತಜಯಂತಿ, ಶ್ರೀಕೃಷ್ಣಜಯಂತಿಯನ್ನು ಆಚರಿಸುತ್ತೇವೆಯೋ, ಅದೇ ರೀತಿ ಇನ್ನು ಮುಂದೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಈ ಸನಾತನದ ೩ ಗುರುಗಳ ಜಯಂತಿಯನ್ನು ಆಚರಿಸಬೇಕೆಂದು ನನಗೆ ಅನಿಸುತ್ತದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕಾರ್ಯ ಬೇರೆ, ಬೇರೆಯಾಗಿದ್ದರೂ ಕಾರ್ಯಕಾರಣಭಾವ ಒಂದೇ ಆಗಿದೆ.

ಅಂಜಲಿ, ಯಶೋದೆಯ ಮೇಲಿರುವ ಯೋಗಮಾಯೆಯ ಆವರಣದಿಂದ ಅವಳಿಗೆ ‘ಕಾನ್ಹಾ ಯಾರು’ ಎಂಬುದು ತಿಳಿಯುತ್ತಲೇ ಇರಲಿಲ್ಲ, ಅದರಂತೆಯೇ ನನ್ನ ಮೇಲಿರುವ ಮಾಯೆಯ ಆವರಣದಿಂದ ‘ನೀನು ಯಾರು’ ಎಂಬುದು ನನ್ನ ಗಮನಕ್ಕೆ ಬರುವುದೇ ಇಲ್ಲ. ನನ್ನ ದೃಷ್ಟಿಯಲ್ಲಿ ನೀನು ಇನ್ನೂ ಚಿಕ್ಕವಳೇ ಆಗಿರುವಿ. ನೀನು ನಮಗೆ ನಿನ್ನ ಪ್ರವಾಸದಲ್ಲಿನ ಅನುಭವ ಮತ್ತು ಅನುಭೂತಿಗಳನ್ನು ಹೇಳುತ್ತೀ, ಆದರೆ ಪ್ರವಾಸದಲ್ಲಿ ನಿನಗಾಗುವ ತೊಂದರೆಗಳ ಬಗ್ಗೆ ನಮಗೆ ಸ್ವಲ್ಪವೂ ತಿಳಿಯಗೊಡುವುದಿಲ್ಲ. ಅವುಗಳನ್ನು ಮಾತ್ರ ನೀನೇ ಸಹಿಸಿಕೊಳ್ಳುತ್ತಿ. ನಿನಗೆ ಮುಂದಿನ ಕಾರ್ಯಕ್ಕಾಗಿ ಆಶೀರ್ವಾದ ! ಹಿಂದಿನ ಎಲ್ಲ ಯುಗಗಳಲ್ಲಿ ಅಸುರರನ್ನು ನಾಶಮಾಡುವ ಕಾರ್ಯವನ್ನು ಶಕ್ತಿಯೇ ಮಾಡಿದ್ದಾಳೆ. ಅದರಂತೆಯೇ ಕಲಿಯುಗದಲ್ಲಿನ ರಜ-ತಮದ ನಿರ್ಮೂಲನೆಯನ್ನು ಮಾಡುವ ಕಾರ್ಯ ನಿನ್ನಿಂದ ಆಗಲಿ.

೩. ಅನೇಕ ಕ್ಷೇತ್ರಗಳಲ್ಲಿ ಪರಿಪೂರ್ಣ ಕಾರ್ಯವನ್ನು ಮಾಡಿ ಶ್ರೀಗುರುಗಳ ಕೃಪೆಯನ್ನು ಸಂಪಾದಿಸಿದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ! – ಸದ್ಗುರು ಡಾ. ಮುಕುಲ ಗಾಡಗೀಳ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಪತಿ)

ಅ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಒಂದು ವಾಕ್ಯದಲ್ಲಿ ವರ್ಣಿಸುವುದಾದರೆ ‘ಎಲ್ಲರಿಗೂ ಇಷ್ಟವಾಗುವ ವ್ಯಕ್ತಿ !’ ಎಂದು ಹೇಳಬಹುದು! ಎಲ್ಲರನ್ನು ತಮ್ಮವರನ್ನಾಗಿ ಮಾಡಿಕೊಳ್ಳುವ ಗುಣ ಅವರಲ್ಲಿ ಜನ್ಮದಿಂದಲೇ ಇದೆ. ಆ ಗುಣವನ್ನು ಅವರು ಸಾಧನೆಗಾಗಿ ಲಾಭ ಮಾಡಿಕೊಂಡರು. ಸಾಧನೆಗೆ ಬಂದ ನಂತರ ಮೊದಲು ಅವರು ಎಲ್ಲ ಸಾಧಕರೊಂದಿಗೆ ಮನಮುಕ್ತತೆಯಿಂದ ಮಾತನಾಡಿ ಎಲ್ಲರನ್ನು ತಮ್ಮವರನ್ನಾಗಿ ಮಾಡಿಕೊಂಡರು. ಯಾವಾಗ ಅವರಿಗೆ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿನ ಅಮೂಲ್ಯ ಆಧ್ಯಾತ್ಮಿಕ ಸಂಪತ್ತನ್ನು ಸಂರಕ್ಷಣೆಯ ಸೇವೆ ದೊರಕಿತೋ, ಆಗ ಅವರು ದೇವಸ್ಥಾನಗಳ ವಿಶ್ವಸ್ಥರು, ಆರ್ಚಕರು ಮತ್ತು ಅಲ್ಲಿನ ಸ್ಥಳೀಯ ಸಾಧಕರು ಹೀಗೆ ಎಲ್ಲರನ್ನು ಅವರು ತಮ್ಮ ಈ ಹುಟ್ಟುಗುಣದಿಂದ ತಮ್ಮವರನ್ನಾಗಿ ಮಾಡಿಕೊಂಡರು.

ಆ. ಎಲ್ಲರಿಗೂ ಮನಮುಕ್ತದಿಂದ ಮತ್ತು ಸಹಜವಾಗಿ ಜ್ಞಾನವನ್ನು ನೀಡಿದರು. ನಾವು ಯಾವ ಯಾವ ದೇವಸ್ಥಾನಗಳ ಚಿತ್ರೀಕರಣವನ್ನು ಮಾಡಿದ್ದೆವೋ, ಅವರಿಗೆ ಅವರ ದೇವಸ್ಥಾನದ ಮಾಹಿತಿ ಇರುವ ಧ್ವನಿಚಿತ್ರಮುದ್ರಿಕೆಯನ್ನು(ವಿಡಿಯೋ ಸಿ.ಡಿ.) ನೀಡಿದರು. ಇವೆಲ್ಲವುಗಳಿಂದ ಆನಂದಿತರಾಗಿ ಅವರೆಲ್ಲರೂ ಎಷ್ಟು ಒಳ್ಳೆಯ ರೀತಿಯಲ್ಲಿ ಜೋಡಿಸಲ್ಪಟ್ಪಿದ್ದಾರೆಂದರೆ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅಲ್ಲಿಗೆ ಬರುವವರಿದ್ದಾರೆ ಎಂದು ಕೇವಲ ಒಂದು ಸಂಚಾರವಾಣಿ ಕರೆ ಮಾಡಿದರೂ ಅವರು ಆನಂದದಿಂದ ಅಲ್ಲಿನ ಎಲ್ಲ ವ್ಯವಸ್ಥೆಯನ್ನು ಮಾಡುತ್ತಾರೆ.

ಇ. ಸಂಗೀತ, ಕಲೆ, ವಾಸ್ತುಶಿಲ್ಪ, ವಾಸ್ತುಶಾಸ್ತ್ರ, ವಿಜ್ಞಾನ ಮುಂತಾದ ಅನೇಕ ಕ್ಷೇತ್ರಗಳಲ್ಲಿನ ಗಣ್ಯರನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಶ್ರೀ ಗುರುಗಳ ಕಾರ್ಯದೊಂದಿಗೆ ಜೋಡಿಸಿದ್ದಾರೆ.

ಈ. ಹಿಂದೆ ಆಶ್ರಮದಲ್ಲಿ ವಿವಿಧ ಸಮಾರಂಭಗಳು ಆಗುತ್ತಿದ್ದವು. ಆ ಸಮಾರಂಭಗಳಲ್ಲಿ ಭಾವನಿರ್ಮಿತಿಗಾಗಿ ಅವರು ಯಾವ ಕಾವ್ಯ ಪಂಕ್ತಿಗಳನ್ನು ತಯಾರಿಸುತ್ತಿದ್ದರೋ, ಅವು ಗುರುದೇವರಿಗೆ ಬಹಳ ಇಷ್ಟವಾಗುತ್ತಿದ್ದವು.

ಉ. ಅಮೂಲ್ಯ ಆಧ್ಯಾತ್ಮಿಕ ವಸ್ತುಗಳನ್ನು ಜೋಪಾನ ಮಾಡುವುದು, ಜ್ಞಾನಪ್ರಾಪ್ತಿ ಮಾಡಿಕೊಳ್ಳುವುದು, ಸಾಧಕರ, ಸಂತರ ಮತ್ತು ಗಣ್ಯರ ಸಂದರ್ಶನ ತೆಗೆದುಕೊಳ್ಳುವುದು, ಈ ರೀತಿ ಎಲ್ಲ ಕ್ಷೇತ್ರಗಳಲ್ಲಿ ಅತ್ಯಂತ ಪರಿಪೂರ್ಣತೆಯಿಂದ ಕಾರ್ಯವನ್ನು ಮಾಡಿ ಅವರು ಶ್ರೀ ಗುರುಗಳ ಮನಸ್ಸನ್ನು ಗೆದ್ದಿದ್ದಾರೆ.

ಊ. ನಾವು ಸಾಧನೆಯನ್ನು ಆರಂಭಿಸಿದಾಗ ಗುರುದೇವರು ಎಲ್ಲರ ಛಾಯಾಚಿತ್ರಗಳ ಪರೀಕ್ಷಣೆಯನ್ನು ಮಾಡುತ್ತಿದ್ದರು. ಆಗ ಸಾಧಕರಲ್ಲಿ ಸಕಾರಾತ್ಮಕ ಸ್ಪಂದನಗಳಿವೆಯೋ ಅಥವಾ ನಕಾರಾತ್ಮಕ ಸ್ಪಂದನಗಳಿವೆಯೋ ಎಂಬುದನ್ನು ಅವರು ಅಧಿಕ (+) ಅಥವಾ ಉಣೆ (-) ೧ ರಿಂದ ೧೦ ಅಂಕಗಳಲ್ಲಿ ಹೇಳುತ್ತಿದ್ದರು. ಅದರಲ್ಲಿ ‘+೧’ ಹೀಗಿದ್ದರೆ, ಆ ಸಾಧಕನಲ್ಲಿ ಸಕಾರಾತ್ಮಕ ಸ್ಪಂದನಗಳಿವೆ ಮತ್ತು ‘-೧’ ಹೀಗಿದ್ದರೆ ಆ ಸಾಧಕನಲ್ಲಿ ನಕಾರಾತ್ಮಕ ಮತ್ತು ತೊಂದರೆದಾಯಕ ಸ್ಪಂದನಗಳಿವೆ ಎಂದು ತಿಳಿಯಲಾಗುತ್ತಿತ್ತು. ಆ ಸಮಯದಲ್ಲಿ ಗುರುದೇವರು ನನ್ನ ಪರೀಕ್ಷಣೆಯನ್ನು ಮಾಡಿ +೧ ಸಕಾರಾತ್ಮಕ ಸ್ಪಂದನಗಳಿವೆ ಎಂದು ಹೇಳಿದ್ದರು. ಅದೇ ಸಮಯದಲ್ಲಿ ಅವರು ನನ್ನ ಛಾಯಾಚಿತ್ರದ ಪರೀಕ್ಷಣೆಯನ್ನು ಮಾಡಿ ‘ಸಕಾರಾತ್ಮಕ ಒಂದು’ ಎಂದು ಹೇಳಿದ್ದರು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಆ ಸಮಯದಲ್ಲಿನ ಪರೀಕ್ಷಣೆ -೫ ಆಗಿತ್ತು. ಇದರಿಂದ, ಇಷ್ಟು ತೊಂದರೆಗಳಿರುವಾಗ ಸಾಧನೆಯನ್ನು ಆರಂಭಿಸಿ ಇಂದು ಅವರು ‘ಶ್ರೀಚಿತ್‌ಶಕ್ತಿ’ ಈ ಪದವಿಯವರೆಗೆ ತಲುಪಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಅವರು ಇದನ್ನು ಸಾಧ್ಯಮಾಡಿಕೊಳ್ಳಲು ಎಷ್ಟು ಸಾಧನೆಯನ್ನು ಮಾಡಿರಬಹುದು ಎಂಬುದರ ಕಲ್ಪನೆ ಬರಬಹುದು.

‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನನಗೆ ಸಾಧನೆಯ ಯಾವ ಪ್ರಕಾಶವನ್ನು ತೋರಿಸುತ್ತಾರೆಯೋ, ಅದರ ಆಧಾರದ ಮೇಲೆ ನಾನು ಮಾರ್ಗಕ್ರಮಿಸುತ್ತಿದ್ದೇನೆ. ನನಗೆ ಯಾವುದೇ ಸೇವೆಯಲ್ಲಿ ಏನೇ ಸಂದೇಹ ಬಂದರೂ ನಾನು ಅವರಲ್ಲಿ ಕೇಳುತ್ತೇನೆ. ಇನ್ನು ಮುಂದೆಯೂ ಅವರ ಮಾರ್ಗದರ್ಶನ ಸಿಗುತ್ತಿರಲಿ ಎಂದು ಈಶ್ವರನಲ್ಲಿ ಪ್ರಾರ್ಥಿಸುತ್ತೇನೆ !

೪. ಸಾಕ್ಷಾತ್ ಮಹಾಲಕ್ಷ್ಮೀಯ ಉದರದಲ್ಲಿ ಜನ್ಮ ಪಡೆಯುವುದು ನನ್ನ ಪೂರ್ವಜನ್ಮದ ಪುಣ್ಯ ! – ಸೌ. ಸಾಯಲಿ ಸಿದ್ಧೇಶ ಕರಂದೀಕರ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮಗಳು)

ನನಗೆ ಸಾಕ್ಷಾತ್ ಶ್ರೀ ಮಹಾಲಕ್ಷ್ಮೀಯ ಉದರದಲ್ಲಿ ಜನ್ಮ ಸಿಕ್ಕಿದೆ. ನನಗೆ ಇದು ನನ್ನ ಪೂರ್ವಜನ್ಮದ ಪುಣ್ಯವೇ ಆಗಿದೆ ಎಂದು ಅನಿಸುತ್ತದೆ. ಹಿಂದೆ ನನಗೆ, ತಾಯಿ ನನಗೂ ಸಮಯವನ್ನು ಕೊಡಬೇಕು ಎಂದು ಅನಿಸುತ್ತಿತ್ತು. ಈಗ ಅವಳು ಜಗನ್ಮಾತೆಯಾಗಿದ್ದಾಳೆ, ಅವಳು ನನಗೆ ಹೇಗೆ ಸಮಯವನ್ನು ಕೊಡಬಹುದು. ತಾಯಿಯೇ ನನಗೆ ಸಾಧನೆಯ ಮಾರ್ಗದಲ್ಲಿಯೇ ಜೀವನವನ್ನು ನಡೆಸಲು ಹೇಳಿದ್ದಾಳೆ. ಈಗ ನನಗೂ ಸಾಧನೆಯನ್ನು ಹೆಚ್ಚಿಸಿ ತಾಯಿಯಂತೆ ಆಗಬೇಕು ಎಂದು ಒಳಗಿನಿಂದ ಅನಿಸುತ್ತದೆ.

೫. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನನ್ನ ಗುರುಗಳಾಗಿದ್ದಾರೆ ಎಂದೇ ಅನಿಸುತ್ತದೆ ! – ಶ್ರೀ. ಸಿದ್ದೇಶ ಕರಂದೀಕರ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಅಳಿಯ)

ಕಳೆದ ೬ ವರ್ಷಗಳಲ್ಲಿ ನನಗೆ ಅವರು ನನ್ನ ಅತ್ತೆ ಮತ್ತು ನಾನು ಅವರ ಅಳಿಯ ಎಂದೂ ಯಾವಾಗಲೂ ಅನಿಸಲೇ ಇಲ್ಲ. ಅವರು ನನ್ನ ಮಾವುಲಿ (ದೇವರು) ಮತ್ತು ಗುರುಗಳಾಗಿದ್ದಾರೆ ಎಂದು ನನಗೆ ಅನಿಸುತ್ತದೆ. ಎಲ್ಲ ಸಾಧಕರಿಗೆ ನಿಮ್ಮ ಭಕ್ತಿಯನ್ನು ಮಾಡಲು ಬರಲಿ ಎಂದು ನಾನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡುತ್ತೇನೆ.

೬. ವಿವಿಧ ಪ್ರಸಂಗಗಳಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿನ ದೇವಿತತ್ತ್ವದ ಅನುಭೂತಿ ಬರುತ್ತದೆ ! – ಸೌ. ಮಧುರಾ ಮನೋಜ ಸಹಸ್ರಬುದ್ಧೆ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕಿರಿಯ ಸಹೋದರಿ, ಆಧ್ಯಾತ್ಮಿಕ ಮಟ್ಟ ಶೇ. ೬೧)

ಒಂದು ಸಲ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಅಕ್ಕ ತನ್ನ ಕಾಲು ಗೆಜ್ಜೆಗಳನ್ನು ತೆಗೆದು ನನ್ನ ಕೈಯಲ್ಲಿ ಕೊಟ್ಟರು. ಆಗ ನನಗೆ ಕೊಲ್ಹಾಪುರದ ಶ್ರೀಮಹಾಲಕ್ಷ್ಮೀಯ ಚರಣಗಳ ದರ್ಶನವಾಯಿತು. ನನಗೆ ಯಾವಾಗಲೂ ಶ್ರೀಚಿತ್‌ಶಕ್ತಿ ಅಕ್ಕಳಲ್ಲಿ ದೇವಿತತ್ತ್ವದ ಅನುಭೂತಿ ಬರುತ್ತದೆ. ನಾನು ಅಕ್ಕಳನ್ನು ಅಪ್ಪಿಕೊಂಡರೆ, ಅವಳಲ್ಲಿನ ದೇವಿತತ್ತ್ವವನ್ನು ನನ್ನಲ್ಲಿ ಸಮಾವೇಶಗೊಳಿಸಿಕೊಳ್ಳಲು ಬರುವುದಿಲ್ಲ, ಎಂದು ಅನಿಸುತ್ತದೆ, ಅದು ಅಷ್ಟೊಂದು ಪ್ರಮಾಣದಲ್ಲಿ ಪ್ರಕ್ಷೇಪಿತವಾಗುತ್ತಿರುತ್ತದೆ. ಅಕ್ಕ ಮಲಗಿದಾಗ ಅವರ ಒಂದು ಕಾಲು ಯಾವಾಗಲೂ ಹೊದಿಕೆಯ ಹೊರಗೆ ಇರುತ್ತದೆ. ಆ ಸಮಯದಲ್ಲಿ ಆ ಕಾಲಿನ ಮಾಧ್ಯಮದಿಂದ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳೊಂದಿಗೆ ಅವರ ಯುದ್ಧ ನಡೆದಿದೆ ಎಂದು ನನಗೆ ಅನಿಸುತ್ತದೆ.

೭. ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಅಕ್ಕಳಲ್ಲಿ ಅನೇಕ ದೇವತೆಗಳ ತತ್ತ್ವಗಳು ಅರಿವಾಗುತ್ತವೆ ! – ಸೌ. ಶೀತಲ್ ಅಭಯ ಗೋಗಟೆ (ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಎಲ್ಲರಿಗಿಂತ ಕಿರಿಯ ಸಹೋದರಿ, ಆಧ್ಯಾತ್ಮಿಕ ಮಟ್ಟ ಶೇ. ೬೫)

ಶ್ರೀಚಿತ್‍ಶಕ್ತಿ ಅಕ್ಕ ಪಕ್ಕದಲ್ಲಿ ಕುಳಿತರೂ ನನಗೆ ಅವರಿಂದ ಚೈತನ್ಯದ ಸ್ರೋತ ಬರುವುದರ ಅರಿವಾಗುತ್ತದೆ. ಅವರ ಸುತ್ತಮುತ್ತಲೂ ಅಖಂಡವಾಗಿ ಶೇಷನಾಗನ ಅಸ್ತಿತ್ವದ ಅರಿವಾಗುತ್ತದೆ. ‘ಶ್ರೀ ಸರಸ್ವತಿ’, ‘ಶ್ರೀ ಲಕ್ಷ್ಮೀ’ ಮುಂತಾದ ಅನೇಕ ದೇವತೆಗಳ ತತ್ತ್ವಗಳು ಅಕ್ಕಳಲ್ಲಿ ಅರಿವಾಗುತ್ತವೆ.

೮. ದತ್ತತತ್ತ್ವ ಮತ್ತು ದೇವಿತತ್ತ್ವಇವುಗಳ ಆಗಮನವಾದಾಗ ಆಶ್ರಮದಲ್ಲಿ ನಿರ್ಮಾಣವಾದ ದೈವೀ ವಾತಾವರಣ !

೭.೧೨.೨೦೨೨ ಈ ದಿನ ದತ್ತಜಯಂತಿ ಇತ್ತು. ಈ ವರ್ಷದ ಗುರುಪೂರ್ಣಿಮೆಗೆ ಸಪ್ತರ್ಷಿಗಳು ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಶ್ರೀ ದತ್ತಗುರುಗಳ ರೂಪದಲ್ಲಿ ನೋಡಬೇಕು ಎಂದು ಹೇಳಿದ್ದರು. ಆದುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಕಾರ್ಯನಿರತವಾದ ದತ್ತತತ್ತ್ವ ಮತ್ತು ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹುಟ್ಟುಹಬ್ಬದ ನಿಮಿತ್ತ ಕಾರ್ಯನಿರತವಾದ ದೇವಿತತ್ತ್ವಇವುಗಳಿಂದ ಆಶ್ರಮದಲ್ಲಿ ದೈವೀ ವಾತಾವರಣ ನಿರ್ಮಾಣವಾಗಿತ್ತು. ಸಾಮಾನ್ಯವಾಗಿ ಆಶ್ರಮದಲ್ಲಿ ಆಧ್ಯಾತ್ಮಿಕ ಸಮಾರಂಭಗಳಿರುವಾಗ ವಾತಾವರಣವು ಈ ರೀತಿ ದೈವೀ ಊರ್ಜೆಯಿಂದ ತುಂಬಿಕೊಂಡಿರುತ್ತದೆ. ಸಾಧಕರೂ ಈ ಅವಕಾಶದ ಲಾಭ ಪಡೆದು ವಿವಿಧ ಮಾಧ್ಯಮಗಳಿಂದ ಶ್ರೀಗುರುಗಳ ಸೇವೆಯನ್ನು ಮಾಡಿದರು. ಸ್ವಾಗತಕಕ್ಷೆ, ಧ್ಯಾನಮಂದಿರ ಮತ್ತು ಸಂತರ ಕೋಣೆಗಳಿಗೆ ಹಾಕಿದ ತೋರಣ, ಪ್ರವೇಶದ್ವಾರದ ಬಳಿ ಮತ್ತು ಶ್ರೀಚಿತ್‍ಶಕ್ತಿ ಇವರ ನಿವಾಸ ಕೋಣೆಯ ಎದುರು ಬಿಡಿಸಿದ ರಂಗೋಲಿ, ಸಾಧಕರು ಧರಿಸಿದ ಪಾರಂಪರಿಕ ಉಡುಪು ಇವುಗಳಿಂದ ಆಶ್ರಮದಲ್ಲಿ ಉತ್ಸವದ ವಾತಾವರಣ ಅರಿವಾಗುತ್ತಿತ್ತು. ಸಾಯಂಕಾಲ ಧ್ಯಾನಮಂದಿರ ಪರಿಸರ, ಶ್ರೀಚಿತ್‍ಶಕ್ತಿ ಇವರ ನಿವಾಸದ ಕೋಣೆಯ ಹೊರಗೆ ಮತ್ತು ಸ್ವಾಗತಕಕ್ಷೆಯ ಎದುರು ಹಣತೆಗಳನ್ನು ಬೆಳಗಿಸಿ ದೇವತೆಯ ತತ್ತ್ವಗಳ ಆರಾಧನೆಯನ್ನು ಮಾಡಲಾಯಿತು.

ದೈನಿಕ ‘ಸನಾತನ ಪ್ರಭಾತ’ದ ವಿಶೇಷ ಪುರವಣಿಯನ್ನು ನೋಡಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಭಾವಜಾಗೃತ ಆಗುವುದು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹುಟ್ಟುಹಬ್ಬದ ನಿಮಿತ್ತ ದೈನಿಕ ‘ಸನಾತನ ಪ್ರಭಾತ’ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಗೌರವ ವಿಶೇಷ ಪುರವಣಿಯನ್ನು ಪ್ರಕಾಶಿಸಿತ್ತು. ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರು ಈ ಪುರವಣಿಯನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಭಾವಪೂರ್ಣವಾಗಿ ಅಲಂಕರಿಸಿ ಅರ್ಪಿಸಿದರು. ಪುರವಣಿಯನ್ನು ನೋಡಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಭಾವಜಾಗೃತವಾಯಿತು. ಸಾಧಕರು ಇದಕ್ಕಾಗಿ ಬಹಳ ಶ್ರಮ ಪಟ್ಟಿದ್ದರು. ಪುರವಣಿಯನ್ನು ಕೈಯಲ್ಲಿ ತೆಗೆದುಕೊಂಡಾಗ ಶಾಂತಿಯ ಅನುಭೂತಿ ಬರುತ್ತಿದೆ. ಶ್ರೀ ದತ್ತಗುರುಗಳೊಂದಿಗೆ ಇಂದು ನನ್ನ ಪಾಲಕಿಯೂ ಹೊರಟಿದೆ ! ನಾನು ದೇವರ ಪುರವಣಿಯೇ ಆಗಿದ್ದೇನೆ ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈ ಸಮಯದಲ್ಲಿ ಭಾವೋದ್ಗಾರವನ್ನು ತೆಗೆದರು. ವಿಶೇಷವೆಂದರೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ದೈನಿಕವನ್ನು ಕೈಯಲ್ಲಿ ತೆಗೆದುಕೊಂಡ ತಕ್ಷಣವೇ ಹತ್ತಿರದ ಶ್ರೀ ದತ್ತಮಂದಿರದಲ್ಲಿ ‘ಅಧಿಕ ದೇಖಣೇ ತರಿ ನಿರಂಜನ ಪಾಹಣೇ | ಯೋಗಿರಾಜ ವಿನವಿಣೇ ಮನಾ ಆಲೇ ವೊ ಮಾಯೆ ||’ ಈ ಭಕ್ತಿಗೀತೆ ಆರಂಭವಾಯಿತು. ಆ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸ್ಮರಣೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಇವರ ಕಣ್ಣಾಲಿಗಳು ತುಂಬಿ ಬಂದವು !

ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

ಅನುಭೂತಿ : ಇಲ್ಲಿ ನೀಡಿದ ಸಾಧಕರ/ಸಂತರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕ/ಸಂತರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು