ಪ್ರಯಾಗರಾಜ್ (ಉತ್ತರ ಪ್ರದೇಶ), ಜನವರಿ 15 (ಸುದ್ದಿ.) – ಅಯೋಧ್ಯೆಯಲ್ಲಿ ಶ್ರೀ ರಾಮ ಲಲ್ಲಾನ (ಶ್ರೀರಾಮನ ಬಾಲ್ಯದ ರೂಪ) ಪ್ರಾಣಪ್ರತಿಷ್ಠಪನೆಯ ಮೊದಲ ವರ್ಧಂತ್ಯುತ್ಸವವು ಜನವರಿ 11 ರಂದು ಆಚರಿಸಲಾಯಿತು. ಅದೇ ದಿನ, ಪ್ರಯಾಗರಾಜ್‌ನ ಮಹಾಕುಂಭ ಮೇಳತದ ಸೆಕ್ಟರ್ 19 ರಲ್ಲಿರುವ ಮೋರಿ ಮುಕ್ತಿ ಮಾರ್ಗ ಚೌಕದಲ್ಲಿ ಸನಾತನ ಸಂಸ್ಥೆಯ ಗ್ರಂಥಗಳು ಮತ್ತು ಫಲಕಗಳ ಪ್ರದರ್ಶನವನ್ನು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ್ ಆಠವಲೆ ಅವರ ಪ್ರತಿಮೆಗೆ ಪೂಜೆ ಮಾಡಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರ ಹಸ್ತದಿಂದ ಪೂಜೆ ಮಾಡಲಾಯಿತು. ವಿಶೇಷವೆಂದರೆ, ಶ್ರೀ ರಾಮಲಲ್ಲಾನ ಮೊದಲ ವರ್ಧಂತ್ಯುತ್ಸವದಂದು, ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಪ್ರತಿಮೆಯ ಪೂಜೆಯು ಅದೇ ಸಮಯದಲ್ಲಿ ಆಯಿತು. ಈ ಸಂದರ್ಭದಲ್ಲಿ, ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಾಧಕರು ಉಪಸ್ಥಿತರಿದ್ದರು.