‘ಸತ್ಪಾತ್ರೆ ದಾನ’, ಅಂದರೆ ‘ಸತ್ ಕಾರ್ಯಕ್ಕಾಗಿ ದಾನ’ ಮಾಡಿ ಪುಣ್ಯದೊಂದಿಗೆ ಆಧ್ಯಾತ್ಮಿಕ ಲಾಭವನ್ನೂ ಪಡೆದುಕೊಳ್ಳಿರಿ !

ಹಿಂದೂ ಸಂಸ್ಕೃತಿಯಲ್ಲಿ ಹೇಳಲಾದ ದಾನದ ಮಹತ್ವ !

ಭಾರತೀಯ ಸಂಸ್ಕೃತಿಯಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ದಾನದಲ್ಲಿ ಧನದಾನ, ಅನ್ನದಾನ, ವಸ್ತ್ರದಾನ, ಜ್ಞಾನದಾನ ಮುಂತಾದ ವಿವಿಧ ಪ್ರಕಾರಗಳಿವೆ. ದಾನವು ಪಾಪನಾಶಕವಾಗಿದ್ದು ಅದು ಪುಣ್ಯವನ್ನು ಪ್ರಾಪ್ತಮಾಡಿಕೊಡುತ್ತದೆ. ‘ಈ ಪೃಥ್ವಿಯ ಮೇಲೆ ದಾನದಂತಹ ಬೇರೆ ನಿಧಿ (ಕೊಡುಗೆ) ಬೇರೊಂದಿಲ್ಲ’ವೆಂದು ಮಹಾಭಾರತದಲ್ಲಿ ಹೇಳಲಾಗಿದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

೧. ಸಮಾಜದಲ್ಲಿ ದಾನವನ್ನು ಮಾಡುವ ಉದ್ಯಮಿಯೊಬ್ಬರು ‘ದಾನ ಪಡೆದವರು ಅದರ ಯೋಗ್ಯ ಬಳಕೆ ಮಾಡಲಿಲ್ಲ’ ಎಂದು, ಖೇದ ವ್ಯಕ್ತಪಡಿಸಿದಾಗ ‘ಸತ್ಪಾತ್ರೆ ದಾನ’ ಮಾಡುವುದರ ಮಹತ್ವ ತಿಳಿಯುವುದು

ದಾನದ ಈ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಸಮಾಜದಲ್ಲಿನ ಅನೇಕ ಜನರಿಗೆ, ವಿವಿಧ ವ್ಯಕ್ತಿಗಳಿಗೆ, ಸಂಪ್ರದಾಯ, ಸಂಘಟನೆ ಮುಂತಾದವುಗಳಿಗೆ ಧನರೂಪದಲ್ಲಿ ದಾನವನ್ನು (ಅರ್ಪಣೆ) ಮಾಡುತ್ತಾರೆ. ಒಂದು ರಾಜ್ಯದ ಓರ್ವ ಉದ್ಯಮಿಗಳು ಸಮಾಜದಲ್ಲಿ ಕೆಲವು ವ್ಯಕ್ತಿಗಳಿಗೆ, ಸಂಘಟನೆಗಳಿಗೆ ದಾನವನ್ನು ಮಾಡುತ್ತಿದ್ದರು. ಒಂದು ಸಲ ಅವರು, ಇಂದಿನವರೆಗೆ ನಾವು ಕೇವಲ ಭಾವನೆಗಳಲ್ಲಿ ಸಿಲುಕಿ ಅರ್ಪಣೆಯನ್ನು (ದಾನ) ಮಾಡಿದೆವು; ಆದರೆ ಆ ಅರ್ಪಣೆ ಸ್ವೀಕರಿಸಿದವರು ಅದರ ಬಳಕೆಯನ್ನು ಯಥಾಯೋಗ್ಯ ರೀತಿಯಲ್ಲಿ ಮಾಡಲಿಲ್ಲ. ಇದಕ್ಕಾಗಿ ಅವರು ಖೇದವನ್ನು ವ್ಯಕ್ತಪಡಿಸಿದರು ಮತ್ತು ಇನ್ನು ಮುಂದೆ ನಾನು ಕೇವಲ ‘ಸತ್ಪಾತ್ರೆ ದಾನ’ವನ್ನೇ ಮಾಡುವೆನು ಎಂದು ಹೇಳಿದರು. ಈ ಉದಾಹರಣೆಯಿಂದ ಧರ್ಮಶಾಸ್ತ್ರದಲ್ಲಿ ಹೇಳಿದ ‘ಸತ್ಪಾತ್ರೆ ದಾನ’ ಮಾಡುವುದರ ಮಹತ್ವವು ಗಮನಕ್ಕೆ ಬರುತ್ತದೆ.

೨. ‘ಸತ್ಪಾತ್ರೆ ದಾನ’ ಯಾರಿಗೆ ಮಾಡಬೇಕು ?

ಸಂತರು, ಧರ್ಮಕಾರ್ಯವನ್ನು ಮಾಡುವ ವ್ಯಕ್ತಿಗಳು, ಸಮಾಜದಲ್ಲಿ ಧರ್ಮದ ಪ್ರಸಾರ ಮಾಡುವ ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ರಾಷ್ಟ್ರ-ಧರ್ಮದ ಜಾಗೃತಿಗಾಗಿ ಕಾರ್ಯವನ್ನು ಮಾಡುವ ಧರ್ಮಪ್ರೇಮಿಗಳಿಗೆ ಅರ್ಪಣೆಯನ್ನು ನೀಡುವುದು, ನಿಜವಾದ ‘ಸತ್ಪಾತ್ರೆ  ದಾನ’ವಾಗಿದೆ. ಇಂತಹವರಿಗೆ ಅರ್ಪಣೆಯನ್ನು ಮಾಡುವುದರಿಂದ ಅದರ ಯಥಾಯೋಗ್ಯ ಬಳಕೆಯಾಗುವುದರಿಂದ ದಾನ ಮಾಡುವವರಿಗೆ ದಾನದ ಫಲ ಪ್ರಾಪ್ತವಾಗುತ್ತದೆ. ದಾನ ಮಾಡುವವರು ಯಾವುದಾದರೊಂದು ಸಂಸ್ಥೆ ಅಥವಾ ಸಂಘಟನೆಗೆ ದಾನಧರ್ಮ ಮಾಡುವಾಗ ಅದರ ಕಾರ್ಯ, ಉದ್ದೇಶ ಮತ್ತು ಅರ್ಪಿಸಲಾದ ಧನ ಯಾವ ರೀತಿಯಲ್ಲಿ ಬಳಕೆಯಾಗುತ್ತದೆ ಎಂಬುದರ ಬಗ್ಗೆ ಚಿಕಿತ್ಸಕ ಬುದ್ಧಿಯಿಂದ ವಿಚಾರಿಸಿಕೊಳ್ಳಬೇಕು ಮತ್ತು ಅವರ ಕಾರ್ಯವು ಈಶ್ವರನಿಗೆ ಅಪೇಕ್ಷಿತ ರೀತಿಯಲ್ಲಿ ಆಗುತ್ತಿದೆಯಲ್ಲ ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ರೀತಿ ‘ಸತ್ಪಾತ್ರೆ ದಾನ’ ಮಾಡಿದರೆ ದಾನ ಮಾಡುವವರ ಪುಣ್ಯ ಹೆಚ್ಚಾಗುವುದು, ಹಾಗೆಯೇ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿಯೂ ಲಾಭವಾಗುವುದು.’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೯.೧೦.೨೦೨೨)