ಸಾಧಕರು ಪಡೆಯುವರು ಅನುಭೂತಿ | ಅವರಲ್ಲಿ ನೀವು ಮೂಡಿಸಿದಿರಿ ಭಾವಭಕ್ತಿ ||
ವಾತ್ಸಲ್ಯ ಭಾವದಿಂದ ರೂಪಿಸುವಿರಿ ಸಾಧಕರನ್ನು |
ಹೇಗೆ ವರ್ಣಿಸಲಿ ಗುಣ ಅಲೌಕಿಕತೆಯನ್ನು ||
ಗುರುಗಳು ನುಡಿವರು ನಿಮ್ಮ ಗುಣ ವರ್ಣನಾತೀತ |
ಅದರಲ್ಲೊಂದು ವಾತ್ಸಲ್ಯಭಾವವಿದೆ ತುಂಬಿ ತುಳುಕುತ |
ಪ್ರೀತಿಯ ಸೆಳೆತ ಸಾಧಕರತ್ತ ಸೀಮಾತೀತ |
ಬಾಲಕ, ಯುವ ಮತ್ತು ವೃದ್ಧ ಹೀಗೆ ಎಲ್ಲರತ್ತ |
ಎಲ್ಲ ಮಕ್ಕಳನ್ನು ಸಮಾನವಾಗಿ ಪ್ರೀತಿಸುವರು ಮಾತೆ |
ಸಾಧಕರು ನಾವು ಅನುಭವಿಸುವರು ಆ ಮಮತೆ ||
ನಿರಪೇಕ್ಷ ಪ್ರೀತಿಯ ಸಾಗರ |
ಸಾಧಕರ ಪ್ರಗತಿಯ ಧ್ಯೇಯ ನಿರಂತರ |
ಸಾಧಕರ ಸಾಧನೆಗಾಗಿ ಪಡುತ್ತೀರಿ ಪರಿಶ್ರಮ |
ಮಾಡುತ್ತೀರಿ ಸಹಾಯ ಪಡೆಯದೇ ವಿಶ್ರಾಮ |
ನೋಡಿದಾಕ್ಷಣ ಸಾಧಕರ ಸ್ಥಿತಿ ತಿಳಿಯುತ |
ಯೋಗ್ಯ ಮಾರ್ಗದರ್ಶನದಿಂದ ಬದಲಾವಣೆ ತರುತ |
ಹೆಜ್ಜೆ ಹೆಜ್ಜೆಗೂ ಅನುಭವಿಸುತ ಪ್ರೀತಿ |
ಕೋಟಿ ಕೋಟಿ ನಮನ ಶ್ರೀಸತ್ಶಕ್ತಿ ||