ಗುರುಕಾರ್ಯಕ್ಕಾಗಿ ಸಾಧಕರು ತೆಗೆದುಕೊಂಡ ಧ್ಯೇಯವನ್ನು ಪೂರ್ಣಗೊಳಿಸುವಾಗ ಅವರು ಎದುರಿಸುವ ಅಡಚಣೆಗಳ ಬಗ್ಗೆ ಜವಾಬ್ದಾರ ಸಾಧಕರು ವಿಚಾರ ಮಾಡಬೇಕು !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

“ಪ್ರಸಾರದ ಸಾಧಕರು ’ಸನಾತನ ವಹಿ’, ಜೊತೆಗೆ ’ಸನಾತನ ಪಂಚಾಂಗ’ದ ವಿತರಣೆ ಮಾಡುವುದು, ಜಾಹೀರಾತುಗಳನ್ನು ಪಡೆಯುವುದು’ ಇತ್ಯಾದಿ ಸೇವೆಗಳನ್ನು ಧ್ಯೇಯವಿಟ್ಟು ತಳಮಳದಿಂದ ಮಾಡುತ್ತಿರುತ್ತಾರೆ.  ಸೇವೆಯ ಧ್ಯೇಯವನ್ನು ನಿರ್ಧರಿಸಿದ ನಂತರ, ಸಾಧಕರು ಅದರಲ್ಲಿ ಎದುರಾಗುವ ಅಡಚಣೆಗಳು, ಬದಲಾಗುತ್ತಿರುವ ಪರಿಸ್ಥಿತಿಗಳು ಮತ್ತು ಅನಾರೋಗ್ಯ ಇತ್ಯಾದಿಗಳನ್ನು ಎದುರಿಸುತ್ತಾ ಧ್ಯೇಯವನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಸಮಯಮಿತಿಯೊಳಗೆ ಧ್ಯೇಯವನ್ನು ಪೂರ್ಣಗೊಳಿಸುವಂತೆ, ಜವಾಬ್ದಾರ ಸಾಧಕರು ಆ ನಿಟ್ಟಿನಲ್ಲಿಯೂ ಬೆಂಬತ್ತುತ್ತಿರುತ್ತಾರೆ. ‘ಕೆಲವೊಮ್ಮೆ ಸಾಧಕರಿಗೆ ಅನಾರೋಗ್ಯವಿರುವಾಗ ಅಥವಾ ಅವರಿಗೆ ಇತರ ಅಡಚಣೆಗಳಿರುವಾಗಲೂ ಜವಾಬ್ದಾರ ಸಾಧಕರು ಧ್ಯೇಯವನ್ನು ಪೂರ್ತಿಗೊಳಿಸಲು ಅವರ ವರದಿಯನ್ನು ತೆಗೆದುಕೊಳ್ಳುತ್ತಾರೆ’ ಎಂಬುದು ಗಮನಕ್ಕೆ ಬಂದಿದೆ. ಅಂತಹ ಸಮಯದಲ್ಲಿ ಜವಾಬ್ದಾರ ಸಾಧಕರು ಪರಿಸ್ಥಿತಿಯನ್ನು ತಾರತಮ್ಯದಿಂದ ನಿಭಾಯಿಸಬೇಕು ಮತ್ತು ಸಾಧಕರ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಇನ್ನು ಮುಂದೆ, ಧ್ಯೇಯವನ್ನು ಪೂರ್ಣ ಮಾಡುವಾಗ ಸಾಧಕರಿಗೆ ಏನಾದರೂ ಅಡಚಣೆಗಳು ಬಂದರೆ, ಅವರು ತಮ್ಮ ಜವಾಬ್ದಾರ ಸಾಧಕರಿಗೆ ಮನಮುಕ್ತವಾಗಿ ಹೇಳಬೇಕು ಮತ್ತು ಧ್ಯೇಯವನ್ನು ಪೂರೈಸುವಾಗ ಸಾಧಕರಿಂದ ಪರಿಹರಿಸಲಾಗದ ಅಡಚಣೆಯಿದ್ದರೆ, ಜವಾಬ್ದಾರ ಸಾಧಕರು ಸಾಧಕರ ಸ್ಥಿತಿಗನುರೂಪವಾಗಿ ಸೇವೆಗಳ ಮರುಯೋಜನೆ ಮಾಡಬೇಕು.

‘ಸಾಧಕರೇ, ಕಾರ್ಯದ ಜೊತೆಗೆ ಸಾಧಕರ ಬಗ್ಗೆಯೂ ವಿಚಾರ ಮಾಡಿ ’ಪ್ರೀತಿ’ ಎಂಬ ಆಧ್ಯಾತ್ಮಿಕ ಗುಣವನ್ನು ಬೆಳೆಸಿದರೆ ಶೀಘ್ರ ಗುರುಕೃಪೆಯಾಗುತ್ತದೆ !’ ಎಂಬುದನ್ನು ಗಮನದಲ್ಲಿಡಿ !’.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ , ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೧೧.೨೦೨೨)