ಭಾರತಕ್ಕೆ ಬರುವ ಅಂತರಾಷ್ಟ್ರೀಯ ಪ್ರವಾಸಿಗಳಿಗಾಗಿ ಕೊರೊನಾ ನಿಯಮಾವಳಿಯ ಘೋಷಣೆ

ನವದೆಹಲಿ – ಚೀನಾದಲ್ಲಿ ಕೊರೋನಾ ರೋಗಿಗಳ ಸಂಖ್ಯೆಯು ಹೆಚ್ಚುತ್ತಿರುವುದರಿಂದ ಭಾರತದಲ್ಲಿ ಜಾಗೃತೆ ಎಂದು ಕೇಂದ್ರ ಸರಕಾರದಿಂದ ಭಾರತಕ್ಕೆ ಬರುವ ಅಂತರಾಷ್ಟ್ರೀಯ ಪ್ರವಾಸಿಗಳಿಗಾಗಿ ಹೊಸ ನಿಯಮಾವಳಿಗಳನ್ನು ಘೋಷಿಸಲಾಗಿದೆ.

ಹೊಸ ನಿಯಮಾವಳಿಯ ಅನುಸಾರ ಭಾರತಕ್ಕೆ ಬರುವ ಪ್ರವಾಸಿಗಳಿಗೆ ಲಸಿಕಾಕರಣದ ಪ್ರಮಾಣಪತ್ರವನ್ನು ತೋರಿಸುವುದು ಅನಿವಾರ್ಯವಾಗಿದೆ. ಹಾಗೆಯೇ ಪ್ರತಿಯೊಬ್ಬ ಪ್ರವಾಸಿಗೆ ಮುಖಪಟ್ಟಿ (ಮಾಸ್ಕ) ಧರಿಸುವುದು ಖಡ್ಡಾಯಗೊಳಿಸಲಾಗಿದೆ. ಯಾವುದೇ ಪ್ರವಾಸಿಯಲ್ಲಿ ಕೊರೋನಾದ ಲಕ್ಷಣಗಳು ಕಂಡುಬಂದರೆ ಅವರನ್ನು ವಿಮಾನನಿಲ್ದಾಣದಲ್ಲಿಯೇ ಬೇರ‍್ಪಡಿಕಾ ಕೇಂದ್ರಗಳಲ್ಲಿ ಇರಿಸಲಾಗುವುದು. ಪ್ರತಿಯೊಂದು ಪ್ರವೇಶ ಕೇಂದ್ರದಲ್ಲಿ ಪ್ರವಾಸಿಗಳ ತಾಪಮಾನವನ್ನು ಅಳೆಯಲಾಗುವುದು. ಹಾಗೆಯೇ ಪ್ರವಾಸಿಗಳ ‘ಆರ‍್ಟಿ-ಪಿಸಿಆರ್‌’ ತಪಾಸಣೆಯನ್ನೂ ಮಾಡಲಾಗುವುದು. ಈ ತಪಾಸಣೆಯಲ್ಲಿ ೧೨ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ರಿಯಾಯ್ತಿ ನೀಡಲಾಗಿದೆ. ಹಾಗೆಯೇ ಯಾವುದೇ ಪ್ರವಾಸಿಯಲ್ಲಿ ಕೊರೋನಾದ ಲಕ್ಷಣಗಳು ಕಂಡು ಬಂದರೆ ಅವರು ಸಮೀಪದ ಆರೋಗ್ಯ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು ಅಥವಾ ಕೊರೋನಾ ಹೆಲ್ಪಲಾಯಿನನ ಕ್ರಮಾಂಕವನ್ನು ಸಂಪರ್ಕಿಸಬೇಕು, ಎಂದು ಇದರಲ್ಲಿ ಹೇಳಲಾಗಿದೆ.