‘ಬೆಳಗ್ಗೆ ಎದ್ದಕೂಡಲೇ ವ್ಯಾಯಾಮ ಮಾಡದೇ ಚಹಾ ಕುಡಿಯುವುದು ಅಥವಾ ಉಪಹಾರ ಮಾಡುವುದು’, ಇದು ನಮ್ಮ ಸಂಸ್ಕೃತಿ ಅಲ್ಲ. ತಿಂದಿರುವ ಆಹಾರ ಸರಿಯಾಗಿ ಪಚನವಾಗಲು ಹೊಟ್ಟೆಯಲ್ಲಿನ ಅಗ್ನಿ (ಪಚನಶಕ್ತಿ) ಒಳ್ಳೆಯ ರೀತಿಯಲ್ಲಿ ಹೊತ್ತಿಕೊಂಡಿರಬೇಕು. ಕೇವಲ ಹಸಿವು ಆಗುವುದು, ಎಂದರೆ ಅಗ್ನಿ ಹೊತ್ತಿಕೊಂಡಿದೆ, ಎಂದು ತಿಳಿಯಬಾರದು. ಸೂರ್ಯನು ಮೇಲೆ ಬಂದು ಅಕ್ಕಪಕ್ಕದ ಮಂಜು ಹೋದ ನಂತರವೇ ಯಾವರೀತಿ ಕಸಕಡ್ಡಿಗಳನ್ನು ಸಹಜವಾಗಿ ಸುಡಬಹುದೋ, ಅದೇ ರೀತಿ ಸೂರ್ಯನು ಮೇಲೆ ಬಂದನಂತರ ಆಹಾರವೂ ಸರಿಯಾರಿ ಪಚನವಾಗುತ್ತದೆ. ಆದುದರಿಂದ ಉಪಹಾರವನ್ನು (ಬೆಳಗಿನ ತಿಂಡಿಯನ್ನು) ಮಾಡದೇ ಬೆಳಗ್ಗೆ ೧೧ ಗಂಟೆಯ ನಂತರ ಚನ್ನಾಗಿ ಹಸಿವಾದಾಗ ನೇರವಾಗಿ ಊಟವನ್ನು ಮಾಡುವುದೇ ಉತ್ತಮ.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧೨.೨೦೨೨)