ಬರೆಲಿ (ಉತ್ತರಪ್ರದೇಶ)ಯ ಸರಕಾರಿ ಶಾಲೆಯಲ್ಲಿನ ಹಿಂದೂ ವಿದ್ಯಾರ್ಥಿಗಳಿಂದ `ಮೇರೆ ಅಲ್ಲ’ ಎಂಬ ಪ್ರಾರ್ಥನೆ ಮಾಡಿಸಿಕೊಳ್ಳಲಾಗುತ್ತಿತ್ತು !

ಪೊಲೀಸರಲ್ಲಿ ದೂರ ದಾಖಲು

ಮುಖ್ಯೋಪಾಧ್ಯಾಯ ಅಮಾನತು

ಬರೆಲಿ (ಉತ್ತರಪ್ರದೇಶ) – ಬರೆಲಿ ಜಿಲ್ಲೆಯ ಫರೀದಪುರದಲ್ಲಿನ ಮೊಹಲ್ಲಾ ಪರಾ ಪ್ರದೇಶದಲ್ಲಿರುವ ಕಮಲಾ ನೆಹರು ಪೂರ್ವ ಮಾಧ್ಯಮಿಕ ವಿದ್ಯಾಲಯವು ಸರಕಾರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಂದ `ಮೇರೆ ಅಲ್ಲ’ ಎಂದು ಮದರಸಗಳಲ್ಲಿನ ಪ್ರಾರ್ಥನೆ ಮಾಡಿಸಲಾಗುತ್ತಿರುವುರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿತು. ಈ ಕುರಿತು ಶಿಕ್ಷಣ ಇಲಾಖೆಯ ಬಳಿ ದೂರು ನೀಡಲಾಗಿತ್ತು. ಇದರ ನಂತರ ಶಾಲೆಯ ಮುಖ್ಯೋಪಾಧ್ಯಾಯ ನಾಹಿದ ಸಿದ್ಧಕಿ ಇವರನ್ನು ಅಮಾನತುಗೊಳಿಸಲಾಯಿತು ಹಾಗೂ ಶಿಕ್ಷಣ ಮಿತ್ರ ವಜರುದ್ದೀನ್ ಇವರನ್ನು ವಿಚಾರಣೆ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್ತಿನಿಂದ ಈ ಸಿದ್ದಿಕಿ ಮತ್ತು ವಜರುದ್ದೀನ್ ಇವರ ವಿರುದ್ಧ ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವ ಮತ್ತು ವಾತಾವರಣ ಹಾಳು ಮಾಡುವುದು ಈ ಪ್ರಕರಣದಲ್ಲಿ ದೂರು ನೀಡಿದ ನಂತರ ಅವರ ಮೇಲೆ ಅಪರಾಧ ದಾಖಲಿಸಲಾಯಿತು. ವಿಶ್ವ ಹಿಂದೂ ಪರಿಷತ್ತು ಇದರ ಹಿಂದೆ ಮತಾಂತರದ ಷಡ್ಯಂತ್ರ ಇರುವ ಬಗ್ಗೆ ಆರೋಪ ಮಾಡಿದೆ.

ವಿಶ್ವ ಹಿಂದೂ ಪರಿಷತ್ತಿನ ನಗರ ಅಧ್ಯಕ್ಷ ಸೋಮಪಾಲ ರಾಥೋರ್ ಇವರು, ಸಿದ್ದಿಕಿ ಮತ್ತು ವಜರುದ್ದೀನ್ ಅನೇಕ ದಿನಗಳಿಂದ ಮಕ್ಕಳಿಂದ ಪ್ರಾರ್ಥನೆ ಹೇಳಿಸುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸುವ ಮಕ್ಕಳಿಗೆ ಬೆದರಿಕೆ ನೀಡಲಾಗುತ್ತಿತ್ತು. (ಇದು ಅನೇಕ ದಿನಗಳಿಂದ ನಡೆಯುತ್ತಿದ್ದರೆ, ಶಿಕ್ಷಣ ಇಲಾಖೆ ನಿದ್ರೆ ಮಾಡುತ್ತಿತ್ತೆ ? ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದೆಂದು ಹಿಂದುಗಳಿಗೆ ಅನಿಸುತ್ತದೆ. ! – ಸಂಪಾದಕರು)

ಮದರಸಗಳು ಅಥವಾ ಚರ್ಚನಲ್ಲಿ `ಹೇ ಶ್ರೀ ಕೃಷ್ಣ’ ಈ ರೀತಿಯ ಪ್ರಾರ್ಥನೆ ಎಂದಾದರೂ ಮಾಡಿಸಲಾಗುತ್ತದೆಯೇ ? – ಸಂಪಾದಕರು