Kirpan Ban: ದೇಶದ ವಿಮಾನ ನಿಲ್ದಾಣಗಳಲ್ಲಿ ಸಿಖ್ ಉದ್ಯೋಗಿಗಳು ಕೃಪಾಣಗಳನ್ನು ಇಟ್ಟುಕೊಳ್ಳಲು ನಿಷೇಧ

‘ಸಿಖ್ಖರು ಎಚ್ಚೆತ್ತುಕೊಳ್ಳದಿದ್ದರೆ, ಸರಕಾರವು ಶ್ರೀ ಗಣೇಶನನ್ನು ಸ್ಥಾಪಿಸುತ್ತದೆಯಂತೆ!’

ನ್ಯೂಯಾರ್ಕ್ (ಅಮೇರಿಕಾ) – ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ನ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ನವೆಂಬರ್ 17 ರಂದು ಅಮೃತಸರ ಮತ್ತು ಚಂಡೀಗಢ ವಿಮಾನ ನಿಲ್ದಾಣಗಳನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ. ‘ಭಾರತ ಸರಕಾರವು ಕೃಪಾಣಗಳನ್ನು ಇಟ್ಟುಕೊಳ್ಳುವುದನ್ನು ನಿಷೇಧಿಸಿದೆ. ಮತ್ತಷ್ಟು ನಿರ್ಬಂಧಗಳನ್ನು ಹೇರುವ ಸಾಧ್ಯತೆ ಇದೆ. ಹಾಗಿದ್ದರೆ ಶ್ರೀ ಗ್ರಂಥ ಸಾಹಿಬ್ (ಧರ್ಮ ಗ್ರಂಥ) ಇಡಲು ಬಿಡುವುದಿಲ್ಲ. ಈ ಭಾರತ ಸರಕಾರವು ಎಲ್ಲಾ ಸಿಖ್ಖರನ್ನು ಪವಿತ್ರ ದಾರವನ್ನು ಧರಿಸುವಂತೆ ಅನಿವಾರ್ಯಗೊಳಿಸುತ್ತದೆ. ಸಿಖ್ ಸಹೋದರರು ತಮ್ಮ ಜೀವ ಉಳಿಸಲು ತಮ್ಮ ಮನೆಯ ಹೊರಗೆ ಗಣೇಶನನ್ನು ಪ್ರತಿಷ್ಠಾಪಿಸಬೇಕು ಎಂದು ಪನ್ನು ಆರೋಪಿಸಿದ್ದಾರೆ. ಪನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ. ಇದರಲ್ಲಿ ಅವರು ಭಾರತ ಸರಕಾರಕ್ಕೆ ಬೆದರಿಕೆ ಹಾಕಿದ್ದಾನೆ.

ಅಕ್ಟೋಬರ್ 30 ರಂದು ನಾಗರಿಕ ವಿಮಾನಯಾನ ಇಲಾಖೆಯು ‘ಭಾರತದ ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡುವ ಸಿಖ್ ಉದ್ಯೋಗಿಗಳು ಭದ್ರತಾ ಕಾರಣಗಳಿಗಾಗಿ ಕೃಪಾಣಗಳನ್ನು ಇಟ್ಟುಕೊಳ್ಳುವಂತಿಲ್ಲ’, ಎಂದು ಆದೇಶ ಹೊರಡಿಸಿದೆ. ಈ ಆದೇಶದ ಮೇರೆಗೆ ಪನ್ನು ಬೆದರಿಕೆ ಹಾಕಿದ್ದಾನೆ.

ಪನ್ನು ನೀಡಿದ ಬೆದರಿಕೆಗಳು

1. ಆಯುಧಗಳನ್ನು ಬೀಸುವ ಅಭ್ಯಾಸ ಮಾಡಿ !

ಭಾರತೀಯ ಸಂವಿಧಾನವು ಸಿಖ್ ಧರ್ಮವನ್ನು ಹಿಂದೂ ಧರ್ಮದ ಭಾಗವೆಂದು ಪರಿಗಣಿಸುತ್ತದೆ. ಭಾರತೀಯ ಸಂವಿಧಾನದ ಅನುಸಾರವಾಗಿ, ಸ್ವರ್ಣ ಮಂದಿರ ಅನ್ನು ಆಕ್ರಮಿಸಲಾಯಿತು ಮತ್ತು ಸಿಖ್ಖರ ಕಗ್ಗೊಲೆ ಮಾಡಲಾಯಿತು. ಪಂಜಾಬ್‌ನಲ್ಲಿ ಪ್ರತಿ ತಿಂಗಳು 15 ರಿಂದ 20 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೇಡಿದರೇ ಸ್ವಾತಂತ್ರ್ಯವು ಎಂದಿಗೂ ಸಿಗುವುದಿಲ್ಲ ಮತ್ತು ಕಾನೂನುಗಳನ್ನು ಎಂದಿಗೂ ಹಿಂಪಡೆಯುವುದಿಲ್ಲ. ದೈಹಿಕ ಶಕ್ತಿಗಾಗಿ ಆಯುಧಗಳನ್ನು ಅಭ್ಯಾಸ ಮಾಡಿ.

2. ‘ಸಿಖ್ಖರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಂತೆ !’

ನವೆಂಬರ್ 17 ರಂದು ವಿಮಾನ ನಿಲ್ದಾಣದಲ್ಲಿ ಟ್ರ್ಯಾಕ್ಟರ್‌ಗಳು ಮತ್ತು ಡ್ರೋನ್‌ಗಳೊಂದಿಗೆ ರಸ್ತೆಗಳನ್ನು ತಡೆಹಿಡಿಯಿರಿ. ಈ ಪ್ರತಿಭಟನೆಯು ಸಿಖ್ ಸಮುದಾಯದ ಅಸ್ತಿತ್ವಕ್ಕೆ ಅಪಾಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವ ಮಾರ್ಗವಾಗಿದೆ. ಸಿಖ್ಖರು ತಮ್ಮ ಪೂರ್ವಜರು ಹೋರಾಡಿದಂತೆ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಗುತ್ತದೆ.

ಸಂಪಾದಕೀಯ ನಿಲುವು

  • ಅಮೆರಿಕದಲ್ಲಿ ಟ್ರಂಪ್ ಸರಕಾರ ಸ್ಥಾಪನೆಯಾಗಲಿದೆ. ಆದ್ದರಿಂದ ಭಾರತವು ಪನ್ನು ವಿರುದ್ಧ ಕ್ರಮ ಕೈಗೊಂಡು ಈಗಿನಿಂದಲೇ ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಬೇಕು !
  • ಉದ್ದೇಶಪೂರ್ವಕವಾಗಿ ಸಿಖ್ಖರಲ್ಲಿ ಹಿಂದೂಗಳ ವಿರುದ್ಧ ದ್ವೇಷವನ್ನು ಹರಡುವ ಈ ಪ್ರಯತ್ನವನ್ನು ಸಿಖ್ ಸಂಘಟನೆಗಳು ಮತ್ತು ಅವರ ನಾಯಕರು ವಿಫಲಗೊಳಿಸಬೇಕು !